ಗಂಟಾಘೋಷ
ಇಪ್ಪತ್ತೊಂದನೇ ಶತಮಾನವನ್ನು ಜಾಗತಿಕವಾಗಿ ಮಾನವ ಸಂಪತ್ತಿನ ಶತಮಾನ ಎಂದು ಕರೆಯ ಲಾಗುತ್ತಿದೆ. ರಾಷ್ಟ್ರಗಳ ಆರ್ಥಿಕ ಶಕ್ತಿ ನೈಸರ್ಗಿಕ ಸಂಪತ್ತಿನಿಂದಲ್ಲ, ಬದಲಾಗಿ ಮಾನವ ಸಂಪತ್ತಿನ ಗುಣಮಟ್ಟದಿಂದ ನಿರ್ಧಾರಗೊಳ್ಳುತ್ತಿದೆ. ವಿಶ್ವದ ಎಲ್ಲಾ ರಾಷ್ಟ್ರಗಳು ಈ ಸಂದರ್ಭದಲ್ಲಿ ಜನ ಸಂಖ್ಯಾ ಲಾಭ (Demographic Dividend) ಎಂಬ ಅಮೂಲ್ಯ ಅವಕಾಶವನ್ನು ಚರ್ಚಿಸುತ್ತಿವೆ.
ಭಾರತವೂ ಅದರಲ್ಲಿ ಅತ್ಯಂತ ಮಹತ್ವದ ಸ್ಥಾನವನ್ನು ಹೊಂದಿದೆ. ದೇಶದ ಶೇ.65ಕ್ಕಿಂತ ಹೆಚ್ಚು ಜನಸಂಖ್ಯೆ 35 ವರ್ಷಕ್ಕಿಂತ ಕೆಳಗಿದೆ, ಇದು ಅಭೂತಪೂರ್ವ ಶಕ್ತಿ. ಈ ಶಕ್ತಿಯನ್ನು ಸಮರ್ಪಕವಾಗಿ ಬಳಸದೆ ಹೋದರೆ ಅದು ಕೇವಲ ನಷ್ಟವಲ್ಲ, ಬೌದ್ಧಿಕ ದಿವಾಳಿಯೂ ಹೌದು.
ಭಾರತದಲ್ಲಿಯೂ, ಹಾಗೆಯೇ ಅನೇಕ ಅಭಿವೃದ್ಧಿ ಹಾಗೂ ವಿಕಾಸಶೀಲ ರಾಷ್ಟ್ರಗಳಲ್ಲಿಯೂ ಯುವಕರು ಕೆಲಸಕ್ಕೆ ತಯಾರಾಗಿಲ್ಲ ಎಂಬುದೇ ಒಂದು ಚಿಂತೆಯಾಗಿದೆ. ಪದವಿಗಳು, ಪ್ರಮಾಣ ಪತ್ರಗಳು, Pಎ ಪದವಿಗಳು ಇವೆ. ಆದರೆ ಕೈಯಲ್ಲಿ ಕೆಲಸ? ಉದ್ಯೋಗಕ್ಕೆ ಬೇಕಾದ ನೈಪುಣ್ಯ? ಹೊಣೆ ಗಾರಿಕೆಯ ಮನೋಭಾವ? ಪ್ರಾಯೋಗಿಕ ಜ್ಞಾನ? ಇವು ಸಾಕಷ್ಟು ವಿದ್ಯಾರ್ಥಿಗಳಲ್ಲಿ ಕಾಣುವುದಿಲ್ಲ.
ಇಂದು ಭಾರತದಲ್ಲಿ ಉದ್ಯೋಗವಿಲ್ಲದವರ ಬಹುಪಾಲು ಜನರು ಅನಕ್ಷರಸ್ಥರು ಅಲ್ಲ, ಬದಲಾಗಿ ಪದವೀಧರರು ಎಂಬುದು ಅತಿದೊಡ್ಡ ವ್ಯಂಗ್ಯ. BA, BSc, BCom, BE, MBA, MSc, PhD ಪಡೆದರೂ ಉದ್ಯೋಗವಿಲ್ಲದ ಯುವಕರು ಹೆಚ್ಚಾಗುತ್ತಿದ್ದಾರೆ. ಇದು ಕೇವಲ ನಿರುದ್ಯೋಗದ ಸಮಸ್ಯೆಯಲ್ಲ; ಶಿಕ್ಷಣ ವ್ಯವಸ್ಥೆಯ ದೌರ್ಬಲ್ಯದ ಸ್ಪಷ್ಟ ಸೂಚನೆ.
ಇದನ್ನೂ ಓದಿ: Gururaj Gantihole Column: ಚುನಾವಣೆ: ಮತಗಟ್ಟೆ ವಶದಿಂದ ಎಸ್ʼಐಆರ್ʼವರೆಗೆ !
ಶಿಕ್ಷಣವು ಜೀವನೋಪಯೋಗಿಯಾಗದೇ, ಕೇವಲ ಪ್ರಮಾಣಪತ್ರ ಸಂಗ್ರಹಣೆಯ ಯಂತ್ರವಾಗಿ ಬಿಟ್ಟಿದೆ. ವಿದ್ಯಾರ್ಥಿ ಕಲಿಯುವುದಕ್ಕಿಂತ, ಪಾಸ್ ಆಗುವುದು ಮುಖ್ಯವೆಂದು ಭಾವಿಸುತ್ತಿದ್ದಾನೆ. ಇದರ ಫಲವಾಗಿ, ಪದವಿ ಇದ್ದರೂ ಕೆಲಸ ಮಾಡಲು ಬೇಕಾದ ಸಾಮರ್ಥ್ಯ (Employability) ಇಲ್ಲ. ಇದು ಕೇವಲ ವಿರೋಧಾಭಾಸವಲ್ಲ; ಇದು ವ್ಯವಸ್ಥಾತ್ಮಕ ವೈಫಲ್ಯದ ಸ್ಪಷ್ಟ ಲಕ್ಷಣ. ಅರ್ಹರಿಗೆ ಉದ್ಯೋಗವಿಲ್ಲ; ಉದ್ಯೋಗಗಳಿಗೆ ಯೋಗ್ಯ ದುಡಿಮೆಗಾರರಿಲ್ಲ ಎಂಬ ಈ ವಾಕ್ಯ, ಇಂದು ಅತಿ ದೊಡ್ಡ ಸಾಮಾಜಿಕ-ಆರ್ಥಿಕ ಸಂಕಟವನ್ನು ಪ್ರತಿಬಿಂಬಿಸುತ್ತದೆ.
ಈ ವೈಪರೀತ್ಯ ಏಕೆ ಬಂದಿತು? ಯಾರ ತಪ್ಪು? ವ್ಯವಸ್ಥೆಯದು? ಶಿಕ್ಷಣದ್ದು? ಸರ್ಕಾರದ್ದು? ಪೋಷಕರದು? ಸಮಾಜದ್ದು? ಇಲ್ಲವೇ ಯುವಕರದೇ? ಎಂಬುದನ್ನು ನೀತಿ ರೂಪಿಸುವವರು, ವ್ಯವಸ್ಥೆಯನ್ನು ಮುನ್ನಡೆಸುವವರು ಗಂಭೀರವಾಗಿ ಯೋಚಿಸಬೇಕಿದೆ. ಇಲ್ಲದೇ ಹೋದರೆ, ಮುಂದಿನ ತಲೆಮಾರು, ನಿರುಪಯೋಗ ವಸ್ತು ( Useless Device) ಎಂಬಂತೆ ಬದುಕು ಕಳೆಯ ಬೇಕಾದೀತು.
ಪದವಿ ಇದ್ದರೂ ಕೆಲಸ ಇಲ್ಲ ಅಥವಾ Skill Gap ಏನು ಹೇಳುತ್ತದೆ? ಎಂಬುದನ್ನು ವಿವೇಚಿಸಿದಾಗ, ಭಾರತದಲ್ಲಿ ಪ್ರತಿವರ್ಷ 1 ಕೋಟಿಗಿಂತ ಅಧಿಕ ಯುವಕರು ಉದ್ಯೋಗ ಮಾರುಕಟ್ಟೆಗೆ ಪ್ರವೇಶಿಸು ತ್ತಾರೆ. ಆದರೆ, ಉದ್ಯಮ ವಲಯದ ಹತ್ತಾರು ವರದಿಗಳು ಒಂದು ಕಠಿಣ ಸತ್ಯ ಹೇಳುತ್ತವೆ.
ಪದವೀಧರರಲ್ಲಿ ಕೇವಲ 25% ಮಾತ್ರ ಉದ್ಯೋಗಕ್ಕೆ ತಕ್ಕ ನೈಪುಣ್ಯ ಹೊಂದಿದ್ದಾರೆ. ಇಂಜಿನಿಯ ರಿಂಗ್ ಪದವೀಧರರಲ್ಲಿ ಕೇವಲ 20% ಮಾತ್ರ ಉದ್ಯಮಗಳಿಗೆ ಬೇಕಾದ ತಾಂತ್ರಿಕ ನೈಪುಣ್ಯ ಹೊಂದಿ ದ್ದಾರೆ. ಉದ್ಯೋಗ ಪಡೆಯಲು ಅತ್ಯಗತ್ಯವಾದ communication skills ಸುಮಾರು 60-70% ವಿದ್ಯಾರ್ಥಿಗಳಲ್ಲಿ ಕೊರತೆಯಿದ್ದು, Digital competency ಅಗತ್ಯವಾದ ಮಟ್ಟದಲ್ಲಿ ಇಲ್ಲ. Industry exposure ಶೂನ್ಯ ಅಥವಾ ಅತೀ ಕಡಿಮೆ. ಉದ್ಯೋಗಕ್ಕೆ ಬೇಕಾದ ಬೇಡಿಕೆ-ಪೂರೈಕೆ ಅಂತರ ( Skill Gap) ಅತಿದೊಡ್ಡ ಸವಾಲಾಗಿದೆ.
ಏಕೆ ಈ ಅಂತರ? ಎಂದು ಪ್ರಮುಖ ಕಾರಣಗಳನ್ನು ಹುಡುಕಿದಾಗ, ಶಿಕ್ಷಣ-ಉದ್ಯಮದ ನಡುವೆ ಸಂಪರ್ಕ ಇಲ್ಲದಿರುವುದು, ಪಠ್ಯಕ್ರಮವು ವಾಸ್ತವ ಉದ್ಯೋಗಗಳಿಗೆ ಸಂಬಂಧಿಸದಿರುವುದು. ಪಠ್ಯ ಪುಸ್ತಕ ಕೇಂದ್ರಿತ ಶಿಕ್ಷಣ ಸಂಸ್ಕೃತಿ, Project based learning, internship, apprenticeship ಕೊರತೆ ಹೆಚ್ಚಾಗಿರುವುದು. ಪ್ರಾಯೊಗಿಕ ಜ್ಞಾನವನ್ನು ಬಿಟ್ಟು marks-centric ಪೈಪೋಟಿಗೆ ನಿಂತಿರುವುದು.
ವಿದ್ಯಾರ್ಥಿಗಳು ಅಂಕಗಳಿಗೆ ಮಾತ್ರ ಓದುತ್ತಿದ್ದು, Digital skills, coding, data literacy ಗಳ ಕೊರತೆಯೇ ಇಂದಿನ ಉದ್ಯೋಗಾಕಾಂಕ್ಷಿಗಳ ವಿಫಲತೆಗೆ ಮುಖ್ಯ ಕಾರಣವಾಗಿರುವುದು.
Communication, teamwork, problem solving ಕುಂದಿರುವುದು, Soft skills ಅನ್ನು ಶಿಕ್ಷಣದಲ್ಲಿ ಕಲಿಸುವ ಸಂಸ್ಕೃತಿ ಇಲ್ಲದಿರುವುದು. ಕೃತಕ ಉದ್ಯೋಗದ ಆಸೆ (Unrealistic job expectations), ದೊಡ್ಡ ಸಂಬಳ, AC office ಎನ್ನುವ ಭ್ರಮೆಯಲ್ಲಿರುವುದು. ಪೋಷಕರಲ್ಲಿ, ಸಮಾಜದಲ್ಲಿ ಉದ್ಯೋ ಗದ ಬಗ್ಗೆ Degree means job ಎನ್ನುವ ಹಳೆಯ ನಂಬಿಕೆ ಹೊಂದಿರುವುದು.
ಉಚಿತ ಭತ್ಯೆಗಳು, ಗುತ್ತಿಗೆ ಕೆಲಸಗಳ ವಿರುದ್ಧ ಅಸಹನೆ, Responsibility ಕಡಿಮೆ ಯಾಗುತ್ತಿದ್ದು, job readiness ಕುಸಿತವಾಗುತ್ತಿರುವುದು. ಉದ್ಯಮಗಳು ವಿದ್ಯಾರ್ಥಿಗಳಿಗೆ training ಕೊಡಲು ಹಿಂಜರಿಯು ವುದು, ತಕ್ಷಣ ಕೆಲಸಕ್ಕೆ ಬರುವ workforce ಬೇಕು ಎನ್ನುವುದು. ಯುವಕರಲ್ಲಿ ಹೈ-ಕಂಫರ್ಟ್ ಜೀವನದ ಆಸಕ್ತಿ ಮತ್ತು Hard Work ವಿರೋಧ, ದುಡಿಮೆಯನ್ನು ಗಂಭೀರವಾಗಿ ನೋಡುವ ಮನೋಭಾವ ಕಡಿಮೆಯಾಗುತ್ತಿರುವ ಕಾರಣಗಳು ಕಂಡುಬರುತ್ತವೆ.
ಭಾರತ ಮತ್ತು ಜಾಗತಿಕ Skill Gap ಅಂತರದ ಹೋಲಿಕೆಯು ಭಾರತದಲ್ಲಿ ಮಾತ್ರವಲ್ಲ, ಜಾಗತಿಕ ಮಟ್ಟದಲ್ಲಿಯೂ ಇದು ದೊಡ್ಡ ಚಿಂತೆಯಾಗಿದೆ. ಅಮೇರಿಕಾದಲ್ಲಿ, College graduate ಗಳಲ್ಲಿ ಕೇವಲ 34% ಮಾತ್ರ job-ready ಎನ್ನುವ ಮೂಲಕ Communication, writing, applied skills ಕೊರತೆ ಕಾಡುತ್ತಿದ್ದರೆ, ಯೂರೋಪ್‌ನಲ್ಲಿ, ಜರ್ಮನಿ ಮತ್ತು ಫಿನ್‌ಲ್ಯಾಂಡ್ ಹೊರತುಪಡಿಸಿ ಬಾಕಿ ದೇಶಗಳಲ್ಲಿ vocational training ಕೊರತೆ ಎದುರಾಗಿದೆ.
ಇಷ್ಟೆಲ್ಲದರ ನಡುವೆ, ಚೀನಾದಲ್ಲಿ 1990ರ ನಂತರ Skills based technical education ಗೆ ಬೃಹತ್ ಹೂಡಿಕೆ. Apprentice ಮಾದರಿಯಲ್ಲಿ ವರ್ಷಕ್ಕೆ 1.2 ಕೋಟಿ ಯುವಕರು ತರಬೇತಿ ಪಡೆಯು ತ್ತಿದ್ದಾರೆ. ಭಾರತದಲ್ಲಿರುವ ವೈರುಧ್ಯವೆಂದರೆ, ಯುವಕರು ಕೆಲಸವಿಲ್ಲ ಎಂದು ಅಲೆಯುತ್ತಿದ್ದರೆ, ಉದ್ಯಮಗಳು ಕೆಲಸಗಾರರಿಲ್ಲ ಎಂದು ನಿರೀಕ್ಷಿಸುತ್ತಿವೆ. ಇದಕ್ಕೆ ಪ್ರಮುಖ ಕಾರಣ, Degree Inflation ಪದವಿ ಇದ್ದರೆ ಸಾಕು’ ಎಂಬ ಭ್ರಮೆ.
ಭಾರತದಲ್ಲಿ ಪದವಿಗಳ ಲವಲವಿಕೆ ಹೆಚ್ಚಾಗಿದೆ, ಆದರೆ ಗುಣಮಟ್ಟ ಕಡಿಮೆ. ಇದನ್ನು Degree Inflation ಎನ್ನಲಾಗುತ್ತದೆ. Artificially educated population ಉದ್ಯೋಗ ಮಾರುಕಟ್ಟೆಗೆ ಬರು ತ್ತಿದ್ದು, ನೈಪುಣ್ಯತೆಯಿಲ್ಲದ PG Degree ಕೂಡ ಸಾಮಾನ್ಯವೆನಿಸಿ ಬಿಡುತ್ತವೆ.
ಕೇವಲ ಉದ್ಯೋಗಕ್ಕಾಗಿಯೇ 3-4 ಪ್ರಮಾಣಪತ್ರಗಳನ್ನು ಹೊಂದಬೇಕಾದ ಪರಿಸ್ಥಿತಿ ಈಗಿನದಾಗಿದೆ. ಎಲ್ಲಕ್ಕಿಂತ ಮಹತ್ವದ್ದಾಗಿರುವುದು, ಶಿಕ್ಷಣ ಪದ್ಧತಿ ಹಾಗೂ ಪಠ್ಯಕ್ರಮಗಳಲ್ಲಿ Structural Problem ಇರುವುದಾಗಿದೆ. 15-20 ವರ್ಷಗಳ ಶಿಕ್ಷಣ ಪದ್ಧತಿಯೇ ಇಂದಿಗೂ ಮುಂದುವರಿಯುತ್ತಿದ್ದರೆ, ಉದ್ಯಮ-ಉದ್ಯೋಗ ಕ್ಷೇತ್ರಗಳಲ್ಲಿ ಪ್ರತಿನಿತ್ಯ ಸ್ಪರ್ಧಾತ್ಮಕ ಬೆಳವಣಿಗೆ ಮತ್ತು ಬದಲಾವಣೆಗಳು ಕಂಡುಬರುತ್ತಿವೆ. ಇಂದಿನ ಯುವಜನತೆಯಲ್ಲಿ ಇದು ಎರಡು ನಕರಾತ್ಮಕ ಪರಿಣಾಮಗಳನ್ನು ತಂದಿದ್ದು, ಕೆಲಸಕ್ಕೆ ಪ್ರೇರಣೆ ಕಡಿಮೆಯಾಗುವ ಮೂಲಕ ಕೆಲಸ ಮಾಡದೇ ಬದುಕಬಹುದು ಎಂಬ ಮೃದು ಮನೋಭಾವ ಹೆಚ್ಚಾಗಿದೆ.
ಪ್ರಸ್ತುತ ಯುವಜನತೆಯಲ್ಲಿ ನೈಪುಣ್ಯತೆ ಪಡೆಯುವ ಹಂಬಲ ಕುಸಿತವಾಗಿದೆ. Free benefits ನಿಂದಾಗಿ Risk-taking capacity ಕಡಿಮೆಯಾಗುತ್ತಿದ್ದು, Skill building ಕಡೆಗೆ ಗಮನ ಕಡಿಮೆ ಯಾಗಿದೆ ಎಂದು ಅಂತರಾಷ್ಟ್ರೀಯ ಮಟ್ಟದ ಆರ್ಥಿಕ ತಜ್ಞರು ಹಲವು ವರದಿಗಳ ಅಧ್ಯಯನದ ಸಾರಾಂಶ ಮತ್ತು ಫಲಿತಾಂಶವನ್ನು ಜನರ ಮುಂದಿಡುತ್ತಿದ್ದಾರೆ.
ಇಂತಹ ವಿಚಾರದಲ್ಲಿ, ದಕ್ಷಿಣ ಕೊರಿಯಾ, ಜಪಾನ್, ಜರ್ಮನಿಯಂತಹ ದೇಶಗಳಲ್ಲಿ welfare ಇದ್ದರೂ ಉತ್ಸಾಹ ಮತ್ತು ದುಡಿಮೆ ಸಂಸ್ಕೃತಿ ಹೆಚ್ಚಿದೆ. ಇದನ್ನು ನಮ್ಮ ಯುವಜನತೆ ಗಮನಿಸ ಬೇಕಾದ ಜರೂರತ್ತಿದೆ. ಭಾರತದ ಯುವ ಜನತೆಗೆ ಈಗಿರುವ ಸವಾಲು ಏನೆಂದರೆ, work ethics ಕುಸಿಯುತ್ತಿರುವುದನ್ನು ತಡೆಯುವುದಾಗಿದ್ದು, ಇದಕ್ಕೆ ಉಚಿತಗಳ ನಿಲ್ಲಿಸುವಿಕೆಯೇ ಪ್ರಮುಖ ಪರಿಹಾರವಾಗಿದೆ ಎನ್ನಬಹುದು.
ಕೆಲಸ ಇಲ್ಲದಿರುವದು ಮತ್ತು ಕೆಲಸ ಮಾಡದಿರುವದು ಇವೆರಡು ಬೇರೆ ಬೇರೆ ಸಮಸ್ಯೆಗಳಾಗಿವೆ. ಕೆಲಸ ಇಲ್ಲದಿರುವುದು (Unemployment) ಎಂದಾದರೆ, Manufacturing ವಲಯ ವೇಗವಾಗಿ ಬೆಳೆಯುತ್ತಿಲ್ಲ, Automation ಕೆಲವು ಹುದ್ದೆಗಳನ್ನು ಕಡಿಮೆ ಮಾಡುತ್ತಿದೆ, Rural economy ಯಲ್ಲಿ ಅವಕಾಶಗಳ ಕೊರತೆ ಎಂದು ವಿವೇಚಿಸಬಹುದು.
ಕೆಲಸ ಮಾಡದಿರುವುದು (Unwillingness to work) ಎಂದರೆ, Hard work, ದಿನಕ್ಕೆ 8 ಗಂಟೆ ಕೆಲಸಕ್ಕೆ ವಿರೋಧ, Comfort zone, ಗುತ್ತಿಗೆ ಕೆಲಸಕ್ಕೆ ಅಸಹನೆ, Starting salary ಕಡಿಮೆ ಎಂದರೆ ತಿರಸ್ಕಾರ ಸೇರಿದಂತೆ ಈ ಎರಡೂ ಸಮಸ್ಯೆಗಳು ಭಾರತದ ಯುವಜನತೆಗೆ ಒಂದೇ ಸಮಯದಲ್ಲಿ ಹೊಡೆತ ನೀಡುತ್ತಿವೆ. ಇದಕ್ಕೆ ಮಾನಸಿಕ, ಸಾಮಾಜಿಕ ವರ್ತನಾ ವಿಶೇಷ ತಜ್ಞರು, ದುಡಿಯುವ ಹಂತದಲ್ಲಿ ಸೋಮಾರಿಗಳನ್ನಾಗಿ ಮಾಡುವ ಹಲವು ಆಮಿಷಗಳು, ಉಚಿತವಾಗಿ ದೊರಕು ಕ್ಷಣಿಕ ಸೌಲಭ್ಯಗಳು ಕೂಡ ಕಾರಣವೆಂದು ಹೇಳುತ್ತಾರೆ.
ಭವಿಷ್ಯದ ಉದ್ಯೋಗಗಳು ಸ್ಕಿಲ್ ಮೇಲೆ ನಿಂತಿದ್ದು, AI Machine Learning literacy, Robotics operation, Data analytics, Digital design, Advanced manufacturing, Cloud computing, Cyber security, Business communication, Entrepreneurial skills, financial literacy ಮುಂತಾ ದವು ಪ್ರಮುಖವಾಗಿವೆ.
ಬಹುಶಃ 70% ನಮ್ಮ ಕಾಲೇಜುಗಳಲ್ಲಿ ಈ 10 skills ಮೂಲಭೂತ ಅಧ್ಯಾಯವೂ ಇಲ್ಲದಿರುವುದು ನಮ್ಮ ವ್ಯವಸ್ಥೆಯ ಆಳಗಲವನ್ನು ತೆರೆದಿಡುತ್ತದೆ. ಕೆಲಸದ ಶಿಸ್ತುಬದ್ಧತೆಯಲ್ಲಿ ( Work Discipline ) ಭಾರತದ ಯುವಕರ ನಿಜವಾದ ಪರೀಕ್ಷೆಯಿರುವುದು. ಬಹುತೇಕ ಉದ್ಯಮ ಮಾಲೀಕರಿಂದಾಗಿದ್ದು, On-time reporting ಕೊರತೆ, ಗಮನಕೇಂದ್ರಿಕತೆ ಕಡಿಮೆ, ಮೊಬೈಲ್ ವ್ಯಸನ, Teamwork ಅಭಾವ, Skill update ಮಾಡಲು ಮನಸ್ಸಿಲ್ಲ, Frequent job hopping, ಕಡಿಮೆ ಹೊಣೆಗಾರಿಕೆ ಮುಂತಾದ ನೈಜ ಅನುಭವಗಳು job-readiness ಕುಸಿದಿರುವುದಕ್ಕೆ ಸಾಕ್ಷಿಗಳು ಎನ್ನುತ್ತ ಕೆಲವು ನ್ಯೂನತೆಗಳನ್ನು ಮುಂದಿಡುತ್ತಿದ್ದಾರೆ.
ಭಾರತದ ಯುವಜನತೆ job-ready ಆಗದಿರುವುದು ಒಂದು ಏಕಮಾತ್ರ ಕಾರಣದಿಂದ ಬಂದಿಲ್ಲ. ಇದು ಶಿಕ್ಷಣ ವ್ಯವಸ್ಥೆ, ಸಮಾಜದ ಮೌಲ್ಯಗಳು, ಉದ್ಯಮಗಳ ಬೇಡಿಕೆ, ಡಿಜಿಟಲ್ ಕ್ರಾಂತಿ, ಮತ್ತು ಯುವಕರ ಸ್ವಭಾವ ಬದಲಾವಣೆ ಸೇರಿದಂತೆ ಈ ಆರು ಅಂಶಗಳ ಸಂಕೀರ್ಣ ಮಿಶ್ರಣ ಎನ್ನಬಹುದು.
ಇದಕ್ಕೆ ಪರಿಹಾರಾರ್ಥವಾಗಿ, ದೇಶ ಮಟ್ಟದಲ್ಲಿ, NEP-2020 ಅನ್ನು ground level ನಲ್ಲಿ ಸರಿಯಾಗಿ ಜಾರಿಗೆ ತರಬೇಕು. Vocational Academic Integration ಹಾಗೂ Mandatory Internship ಮತ್ತು Apprenticeship culture ರೂಢಿಸಬೇಕು.
ಜರ್ಮನಿ ಮಾದರಿಯಲ್ಲಿ, Colleges-Industry MoU ಗಳು real-time ಆಗಿರಬೇಕು. 10ನೇ ತರಗತಿಯಿಂದಲೇ Digital Skills compulsory ಮಾಡಬೇಕು. Government welfare ಯೋಜನೆ ಗಳು Skill linked welfare ಆಗಬೇಕು. ದೇಶದ ಪ್ರಮುಖ ಆರ್ಥಿಕ ತಜ್ಞರು ಹೇಳುವಂತೆ, ಮುಖ್ಯವಾಗಿ ಕೊಡಬೇಕಿರುವುದು ಉಚಿತ rice ಅಲ್ಲ, ಉಚಿತ Skill Training ಜೊತೆಗೆ Internships¼. ಯುವ ಜನತೆಯಲ್ಲಿ ಪರಿಶ್ರಮಪಡುವಂತಹ ಔದ್ಯೋಗಿಕ ತತ್ವಗಳು ಬೆಳೆಯಬೇಕು.
ಜೊತೆಗೆ, Start-up, MSME, Manufacturing ಬೃಹತ್ ಹೂಡಿಕೆ ಮಾಡುವ ಮೂಲಕ, ಉದ್ಯೋಗ ಸೃಷ್ಟಿಗೆ ಒತ್ತುಕೊಟ್ಟು, ಯುವಜನರಿಗೆ ನೈಜಕೆಲಸ ನೀಡುವಂತಾಗಬೇಕು.ಅರ್ಹರಿಗೆ ಉದ್ಯೋಗ ವಿಲ್ಲ; ಉದ್ಯೋಗಗಳಿಗೆ ಯೋಗ್ಯ ದುಡಿಮೆಗಾರರಿಲ್ಲ ಎಂಬುದು ಭಾರತದ ಭವಿಷ್ಯವನ್ನು ಎಚ್ಚರಿಸುವ ಗಂಭೀರ ಮಾತಾಗಿದೆ. ಈ ಸಮಸ್ಯೆಯನ್ನು ಇಂದು ಪರಿಹರಿಸದಿದ್ದರೆ, ಜನಸಂಖ್ಯಾ ಲಾಭವು ಜನಸಂಖ್ಯಾ ಬಾಧ್ಯತೆಯಾಗಿ ಬದಲಾಗುತ್ತದೆ.
ಅಸ್ಪಷ್ಟತೆಯಿಂದ ಕೂಡಿದ ಇಂದಿನ ಯುವಶಕ್ತಿ ಸಮಸ್ಯೆಯಲ್ಲ; ಅದನ್ನು ಸರಿಯಾಗಿ ರೂಪಿಸಲು ಸಾಧ್ಯವಾದರೆ ಪ್ರತಿಯೊಂದಕ್ಕೂ ಪರಿಹಾರವಾಗಿಯೇ ಕಾಣತೊಡಗುತ್ತದೆ. ಉದ್ಯೋಗ ಸೃಷ್ಟಿ ಕೇವಲ ಸರ್ಕಾರದ ಜವಾಬ್ದಾರಿ ಅಲ್ಲ. ಯುವಕರನ್ನು ಉದ್ಯೋಗ ಹುಡುಕುವವರಾಗಿಯೇ ಅಲ್ಲ, ಉದ್ಯೋಗ ಸೃಷ್ಟಿಕರ್ತರಾಗಿ ರೂಪಿಸಬೇಕು.
ಶಿಕ್ಷಣ, ಉದ್ಯಮ, ಸರ್ಕಾರ - ಈ ಮೂರೂ ವಲಯಗಳು ಪರಸ್ಪರ ಕೈಜೋಡಿಸಬೇಕು. ನೀತಿ ರೂಪಿಸುವವರು ಕೇವಲ ಅಂಕಿ ಅಂಶಗಳನ್ನು ನೋಡದೇ, ಯುವಕರ ಕಣ್ಣಲ್ಲಿ ಇರುವ ನಿರಾಶೆ ಮತ್ತು ನಿರೀಕ್ಷೆಗಳನ್ನು ನೋಡಬೇಕು. ದೂರದೃಷ್ಟಿಯ ಜೊತೆಗೆ, ಆಯಾ ಕಾಲಘಟ್ಟದ ಸ್ಪರ್ಧಾತ್ಮಕ ಅಡೆತಡೆಗಳನ್ನು ಎದುರಿಸುವಂತಹ ಅಗತ್ಯ ಯೋಜನೆಗಳನ್ನು ಜಾರಿಗೆ ತರಬೇಕು.