Gururaj Gantihole Column: ಚುನಾವಣೆ: ಮತಗಟ್ಟೆ ವಶದಿಂದ ಎಸ್ʼಐಆರ್ʼವರೆಗೆ !
1990ರಲ್ಲಿ 10ನೇ ಮುಖ್ಯ ಚುನಾವಣಾ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡ ಶೇಷನ್, ಭಾರತದ ಚುನಾವಣಾ ವ್ಯವಸ್ಥೆಯ ಇತಿಹಾಸವನ್ನು ಎರಡು ಯುಗಗಳಿಗೆ ವಿಭಜಿಸಿದಂತೆಯೇ ಸುಧಾರಣೆಗಳನ್ನು ಜಾರಿಗೊಳಿಸಿದರು. ನಕಲಿ ಮತದಾನ, ಹಣ-ಮದ್ಯದ ಪ್ರಭಾವ, ಜಾತಿ-ಮತ ಪ್ರಚೋದನೆ, ಅಶಿಸ್ತಿನ ರ‍್ಯಾಲಿಗಳು, ಅನಿಯಂತ್ರಿತ ಖರ್ಚುಗಳನ್ನು ಶೇಷನ್ ಅವರು ಪ್ರಶ್ನಿಸದೇ ಬಿಡುತ್ತಿರಲಿಲ್ಲ, ಲೆಕ್ಕ ಕೇಳಲಾಗುತ್ತಿತ್ತು, ಕಠಿಣಕ್ರಮಕ್ಕೆ ಶಿಫಾರಸ್ಸು ಮಾಡಲಾಗುತ್ತಿತ್ತು.
-
ಗಂಟಾಘೋಷ
ಭಾರತವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವೆಂದು ಹೆಮ್ಮೆಪಡುತ್ತದೆ. ನಿಜವಾದ ಪ್ರಜಾ ಪ್ರಭುತ್ವವು ರಾಜಕೀಯ ಪಕ್ಷಗಳು, ನಾಯಕರು ಅಥವಾ ಸರ್ಕಾರಗಳ ಬಲದಿಂದಲ್ಲ; ಬದಲಾಗಿ ಚುನಾವಣಾ ಪ್ರಕ್ರಿಯೆ ಸ್ವತಂತ್ರ, ನ್ಯಾಯಸಮ್ಮತ ಮತ್ತು ಪಾರದರ್ಶಕವಾಗಿ ನಡೆಯುವುದರಿಂದ ಮಾತ್ರ ಸಾಧ್ಯ. ಈ ಜವಾಬ್ದಾರಿಯನ್ನು ಶಿರಸ್ತೆ ಹಾಕಿಕೊಂಡಿರುವ ಸಂಸ್ಥೆಯೆಂದರೆ ಭಾರತೀಯ ಚುನಾವಣಾ ಆಯೋಗ.
ಇದು ಯಾವುದೋ ಸರ್ಕಾರದ ಅಡಿಪಾಯದಲ್ಲಿರುವ ಅಂಗವಲ್ಲ; ಬದಲಾಗಿ ಸಂವಿಧಾನ ಸ್ಥಾಪಿಸಿದ ಸಂವಿಧಾನಿಕ ಪ್ರಾಧಿಕಾರ. ಈ ತಾತ್ವಿಕ ಸ್ವಾಯತ್ತತೆಯನ್ನು ಅತ್ಯಂತ ಬಿಗಿಯಾಗಿ ಪಾಲಿಸಿದವರಲ್ಲಿ ಟಿ.ಎನ್.ಶೇಷನ್ ಪ್ರಮುಖರು. ಪ್ರಜಾಪ್ರಭುತ್ವದ ನೈತಿಕ ಮೌಲ್ಯಗಳನ್ನು ರಕ್ಷಿಸುವ ಹಾದಿಯಲ್ಲಿ I'm not part of a government system; I'm a part of the Indian Constitution ಎಂದು ಘೋಷಿಸಿದ ಅವರ ನಿಲುವು, ಚುನಾವಣಾ ವ್ಯವಸ್ಥೆಗೆ ಹೊಸ ಶಕ್ತಿ ನೀಡಿತು.
1990ರಲ್ಲಿ 10ನೇ ಮುಖ್ಯ ಚುನಾವಣಾ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡ ಶೇಷನ್, ಭಾರತದ ಚುನಾವಣಾ ವ್ಯವಸ್ಥೆಯ ಇತಿಹಾಸವನ್ನು ಎರಡು ಯುಗಗಳಿಗೆ ವಿಭಜಿಸಿ ದಂತೆಯೇ ಸುಧಾರಣೆಗಳನ್ನು ಜಾರಿಗೊಳಿಸಿದರು. ನಕಲಿ ಮತದಾನ, ಹಣ-ಮದ್ಯದ ಪ್ರಭಾವ, ಜಾತಿ-ಮತ ಪ್ರಚೋದನೆ, ಅಶಿಸ್ತಿನ ರ‍್ಯಾಲಿಗಳು, ಅನಿಯಂತ್ರಿತ ಖರ್ಚುಗಳನ್ನು ಶೇಷನ್ ಅವರು ಪ್ರಶ್ನಿಸದೇ ಬಿಡುತ್ತಿರಲಿಲ್ಲ, ಲೆಕ್ಕ ಕೇಳಲಾಗುತ್ತಿತ್ತು, ಕಠಿಣ ಕ್ರಮಕ್ಕೆ ಶಿಫಾರಸ್ಸು ಮಾಡಲಾಗುತ್ತಿತ್ತು.
ಮಾದರಿ ನೀತಿಸಂಹಿತೆಯ ಕಟ್ಟುನಿಟ್ಟಿನ ಜಾರಿ, ಮತದಾರರ EPIC ಗುರುತಿನ ಚೀಟಿ, ಬೂತ್‌ಗಳ ಪುನರ್ ನಿರ್ದಿಷ್ಟೀಕರಣ, ಪ್ರಚಾರ ಖರ್ಚಿನ ಮೇಲಿನ ಕಟ್ಟುನಿಟ್ಟಿನ ನಿಗಾವಹಿಕೆ ಇತ್ಯಾದಿ ಕ್ರಮಗಳಿಂದ ಅವರು ರಾಷ್ಟ್ರದೆಡೆ ಜನಪ್ರಿಯರಾದರು.
ಇದನ್ನೂ ಓದಿ: Gururaj Gantihole Column: ಮಂದಿರಗಳ ಮೇಲೆ ಸರಕಾರದ ಹಿಡಿತಕ್ಕೆ ನ್ಯಾಯವೇನು ?
ರಾಜಕಾರಣಿಗಳು ಅವರನ್ನು ಅಲ್-ಶೇಷನ್ ಎಂದು ಟೀಕಿಸಿದರೆ, ನಾಗರಿಕ ಸಮಾಜ ಮತ್ತು ಮಧ್ಯಮ ವರ್ಗ ಅವರನ್ನು ಸೇನ್-ಶೇಷನ್ ಎಂದು ಕೊಂಡಾಡಿತು. ಸಂವಿಧಾನದ Article 324 ರ ಅಡಿಯಲ್ಲಿ ಸ್ಥಾಪಿತವಾದ ಭಾರತೀಯ ಚುನಾವಣಾ ಆಯೋಗವು ಲೋಕಸಭೆ, ರಾಜ್ಯ ವಿಧಾನಸಭೆಗಳು, ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಚುನಾವಣೆಗಳ ಸಂಪೂರ್ಣ ಜವಾಬ್ದಾರಿಯನ್ನು ಹೊಂದಿರುತ್ತದೆ.
ಪಕ್ಷಗಳ ನೋಂದಣಿ, ಚುನಾವಣಾ ಚಿಹ್ನೆ ವಿತರಣೆ, ಮತದಾರರ ಪಟ್ಟಿಗಳ ಸಿದ್ಧತೆ, ಮತ ಗಟ್ಟೆಗಳ ವ್ಯವಸ್ಥೆ, ಮತದಾರರ ಫೋಟೋ ಗುರುತಿನ ಚೀಟಿ ಸೇರಿದಂತೆ ಇವೆಲ್ಲವನ್ನೂ ಸ್ವತಂತ್ರವಾಗಿ ನಿರ್ವಹಿಸುವ ಶಕ್ತಿಯನ್ನು ಒಂದು ಸಂವಿಧಾನದತ್ತ ಸ್ವತಂತ್ರ ಸಂಸ್ಥೆಯಾಗಿ ಚುನಾವಣಾ ಆಯೋಗವು ಹೊಂದಿದೆ.
1971ರಲ್ಲಿ ಮೊದಲ ಬಾರಿಗೆ ರೂಪುಗೊಂಡ ಮಾದರಿ ನೀತಿಸಂಹಿತೆ ಇಂದು ಭಾರತೀಯ ರಾಜಕೀಯದ ಮೂಲಸ್ತಂಭವಾಗಿದೆ. ಚುನಾವಣಾ ಪ್ರಕ್ರಿಯೆಯಲ್ಲಿನ ನೀತಿ-ನೈತಿಕತೆ ಕಾಪಾಡುವಲ್ಲಿ ಇದರ ಪಾತ್ರ ಅಗಾಧ. ರಾಜ್ಯ ಚುನಾವಣಾ ಆಯೋಗಗಳು ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ನಿರ್ವಹಿಸುವಂತೆಯೇ, ಕೇಂದ್ರ ಚುನಾವಣಾ ಆಯೋಗವು ರಾಷ್ಟ್ರವ್ಯಾಪಿ ಚುನಾವಣೆಗಳ ಮೇಲೆ ಅಧಿಕಾರ ಹೊಂದಿದೆ.
Electoral Cleaning ಅಂದರೆ ಮತದಾನ ವ್ಯವಸ್ಥೆಯನ್ನು ಹಂತ ಹಂತವಾಗಿ ಶುದ್ಧೀಕರಿ ಸುವ ಪ್ರಯತ್ನವು ಸಂಸ್ಥೆಯ ಆರಂಭದಿಂದಲೇ ಹೊಂದಿದ್ದು, 1950-51ರಲ್ಲಿ Representation of the People Act ಮೂಲಕ, ಮತದಾರರ ಪಟ್ಟಿ ತಯಾರಿಕೆಗೆ ಕಾನೂನು ಆಧಾರ, ಅರ್ಹತೆ, ಆಕ್ಷೇಪಣೆ, ತಿದ್ದುಪಡಿ ಪ್ರಕ್ರಿಯೆ ಆರಂಭಿಸಿ, Electoral cleaning ನ ಮೂಲ ಅಡಿಪಾಯ ಹಾಕಲಾಯಿತು.
1960-70 ದಶಕದಲ್ಲಿ Booth-level Verification ಆರಂಭವಾಗಿ, ಸ್ಥಳೀಯ ಮಟ್ಟದ ಪರಿಶೀ ಲನೆ ಮತ್ತು ನೇರವಾಗಿ ಮತದಾರರನ್ನು ಗುರುತಿಸುವ ಪ್ರಯತ್ನದ ಮೂಲಕ ಮೊದಲ Ground-level checking ಆರಂಭಿಸಲಾಯಿತು.
1971ರಲ್ಲಿ Model Code of Conduct (MCC ), 1989ರಲ್ಲಿ ರಾಜಕೀಯ ಪಕ್ಷಗಳ ನೋಂದಣಿ ಕಡ್ಡಾಯ ಮತ್ತು ಚಿಹ್ನೆ ನಿಯಂತ್ರಣ ನಿಯಮ ತರಲಾಯಿತು. 1993ರಲ್ಲಿ ( EPIC- Photo Voter ID) ಪ್ರತಿಯೊಬ್ಬ ಮತದಾರನಿಗೆ ಫೋಟೋ ಗುರುತಿನ ಚೀಟಿ ಕಡ್ಡಾಯಗೊಲಿಸುವ ಮೂಲಕ ಬೋಗಸ್ ಮತದಾನಕ್ಕೆ ಕಡಿವಾಣ ಹಾಕಲಾಯಿತು.
2003ರಲ್ಲಿ Continuous Updating of Electoral Rolls ಅಂದರೆ, ವರ್ಷಕ್ಕೆ ಒಮ್ಮೆ ಮಾತ್ರ ಅಲ್ಲ. ನಿರಂತರ ತಿದ್ದುಪಡಿ ವ್ಯವಸ್ಥೆ ಜಾರಿಗೆ ತರಲಾಯಿತು. 2010-2014ರಲ್ಲಿ ( Digital Electoral Rolls ) ಆನ್‌ಲೈನ್ ಮತದಾರರ ಪಟ್ಟಿ ರೂಪಿಸಿದ್ದಲ್ಲದೇ ಸಾರ್ವಜನಿಕ ಪರಿಶೀಲ ನೆಗೆ ಅವಕಾಶ ನೀಡಲಾಯಿತು.
2015ರಲ್ಲಿ National Electoral Roll Purifi cation (NERPAP P) ಪ್ರಯತ್ನವಾಗಿ, Aadhaar-Voter ID linkage ಪ್ರಯತ್ನ ಮತ್ತು Duplicate names ತೆಗೆದು ಹಾಕುವ ಗುರಿ ಹೊಂದಲಾ ಯಿತು. 2018ರಲ್ಲಿ -EPIC Online Corrections ಮೂಲಕ, ಡಿಜಿಟಲ್ ಮತದಾರಚೀಟಿ ಹಾಗೂ ಸ್ವಯಂ ತಿದ್ದುಪಡಿ ವ್ಯವಸ್ಥೆ ಹೊಂದಲಾಯಿತು.
2019-2022ರಲ್ಲಿ BLO Strengt-hening Training ಅಂದರೆ, Booth Level Officers ಗೆ ತರಬೇತಿ ಹಾಗೂ Field verification ಗಟ್ಟಿಗೊಳಿಸಲಾಯಿತು. 2023-24ರಲ್ಲಿ Cross-Data-base Verification ಮೂಲಕ, Death registry, Migration data, Utility databases ಗಳನ್ನು ಸ್ವಚ್ಛಗೊ ಳಿಸುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.
ಸದ್ಯಕ್ಕೆ ಸುದ್ದಿಯಲ್ಲಿರುವ, 2025ರಲ್ಲಿ SIR-Special Intensive Revision ಅಂದರೆ, Electoral Cleaning Program ಮೂಲಕ ಒಂದು ಪ್ರಮುಖ ಘಟ್ಟಕ್ಕೆ ನಮ್ಮ ಚುನಾವಣಾ ಆಯೋಗ ಬಂದು ನಿಂತಿದೆ. ಹಾಗಾಗಿಯೇ, ಇಂದಿನ ಆಯೋಗದ ಮುಖ್ಯಸ್ಥರು ಹಲವು ಆರೋಪ- ಆಪಾದನೆಗಳಿಗೆ ಈಡಾಗುತ್ತಿದ್ದಾರೆ.
ಭಾರತೀಯ ಚುನಾವಣಾ ಆಯೋಗದ 26ನೇ ಮುಖ್ಯ ಆಯುಕ್ತರಾಗಿ 2025ರಲ್ಲಿ ಅಧಿಕಾರ ವಹಿಸಿಕೊಂಡ ಜ್ಞಾನೇಶ್ ಕುಮಾರ್, ಈಗಷ್ಟೇ ಮುಗಿದ ಬಿಹಾರ ವಿಧಾನಸಭಾ ಚುನಾ ವಣೆಗೂ ಪೂರ್ವದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ರಮಕ್ಕೆ ಇವರು ಪ್ರಾಮುಖ್ಯತೆ ಕೊಟ್ಟರು. ಜ್ಞಾನೇಶ್ ಕುಮಾರ್ ದೇಶಾದ್ಯಂತ ಅಕ್ರಮ ನುಸುಳುವಿಕೆ, ನಕಲಿ ಮತದಾರರು ಹಾಗೂ ಮತದಾರರ ಪಟ್ಟಿಗಳಲ್ಲಿರುವ ಗೊಂದಲಗಳ ವಿರುದ್ಧ ತೆರೆದ ಹೋರಾಟ ಘೋಷಿಸಿದ್ದಾರೆ.
ಅವರ ನೋಟದಲ್ಲಿ ಪಾರದರ್ಶಕ ಚುನಾವಣೆ ಕೇವಲ ಗುರಿಯಲ್ಲ; ಅದು ಪ್ರಜಾಪ್ರಭುತ್ವದ ಅಸ್ತಿತ್ವದ ಅಡಿಯಾಳು. ಜ್ಞಾನೇಶ್ ಕುಮಾರ್ ಅತ್ಯಂತ ಚರ್ಚಿತ ಕ್ರಮವಾಗಿರುವ SIR (Special Intensive Revision) ಯೋಜನೆಯು, ಕೇವಲ ಸಾಮಾನ್ಯ ನವೀಕರಣ ವಲ್ಲ; ಬದಲಾಗಿ ಮನೆ-ಮನೆಗೆ ತೆರಳಿ ಮತದಾರರ ಪಟ್ಟಿಯನ್ನು ಸಂಪೂರ್ಣ ಮರುಪರಿಶೀಲಿಸುವ ವಿಶೇಷ ಅಭಿಯಾನವಾಗಿದೆ. ಇದನ್ನು, ಚುನಾವಣಾ ಆಯೋಗದ SIR ಕ್ರಮವು ಪ್ರಜಾ ಸತ್ತೆಯ ಶುದ್ಧೀಕರಣದ ನವ ಅಧ್ಯಾಯವೆಂದೇ ನಾವು ಪರಿಗಣಿಸಬಹುದು.
ಖಐ ಕ್ರಮದ ಮುಖ್ಯ ಉದ್ದೇಶಗಳೆಂದರೆ, ಮತದಾರರ ಪಟ್ಟಿಯ ಶುದ್ಧೀಕರಣ, ಡೂಪ್ಲಿಕೇಟ್ ಎಂಟ್ರಿಗಳ ನಿವಾರಣೆ, ಅಕ್ರಮವಾಗಿ ಸೇರಿಸಲಾದ ಹೆಸರಿನ ಪತ್ತೆ, ಬೋಗಸ್ ಮತ ದಾರರ ದಾಖಲಾತಿ ತಡೆಯುವುದು, ಜನಸಂಖ್ಯಾ ಚಲನೆಯ ಆಧಾರದ ಮೇಲೆ ಪಟ್ಟಿನ ನವೀಕರಣ, ಸೇರಿಂತೆ ವಿವಿಧ ಕ್ರಮಗಳು ಚುನಾವಣಾ ಸುಸ್ಥಿರತೆಗೆ ಅತ್ಯಂತ ಮೂಲಭೂತವಾಗಿವೆ.
SIR ಕ್ರಮ ಜಾರಿಗೆ ತರಲು, ಚುನಾವಣಾ ಆಯೋಗವು ವಿವರವಾದ ಮಾರ್ಗಸೂಚಿ ನೀಡು ತ್ತದೆ. ಅದರ ಮುಖ್ಯ ಹಂತಗಳು ಹೀಗಿದ್ದು, ಬೂತ್ ಲೆವೆಲ್ ಅಧಿಕಾರಿಗಳು ( BLO) ಪ್ರತೀ ಮನೆಯಿಗೂ ತೆರಳಿ, ವಾಸ್ತವಿಕವಾಗಿ ನಿವಾಸಿಗಳು ಇದ್ದಾರೆಯೇ? ಹೊಸದಾಗಿ ಬಂದಿರುವ ವರೇ? ಯಾರಾದರೂ ಹೊರಗುಳಿದವರೇ? ಮೃತಪಟ್ಟವರ ಮಾಹಿತಿ ಏನು? ಎಂಬುದನ್ನು ದಾಖಲಿಸುತ್ತಾರೆ.
Aadhaar, ration card, property records, death registry, electricity bill ಮುಂತಾದ ಸಾರ್ವಜನಿಕ ಡೇಟಾಬೇಸ್‌ಗಳೊಂದಿಗೆ ಹೋಲಿಕೆ ನಡೆಸಲಾಗುತ್ತದೆ. ಒಬ್ಬರ ಹೆಸರು ಒಂದೇ ಕ್ಷೇತ್ರದಲ್ಲಿ ಅಥವಾ ಬೇರೆ ಜಿಲ್ಲೆಯಲ್ಲಿ ಹಲವು ಭಾರಿ ಬಂದಿದೆ ಎಂದರೆ ಸ್ವಯಂ-ಪರಿಶೀಲನಾ ವ್ಯವಸ್ಥೆಯ ಅದು ಫ್ಲ್ಯಾಗ್ ಆಗುತ್ತದೆ.
ಯಾವುದೇ ಅನುಮಾನಾಸ್ಪದ ಹೆಸರು ಕಂಡರೆ ಮತದಾರರಿಗೆ ನೋಟಿಸ್ ನೀಡಿ, ಇದರಂತೆ - ನಿಮ್ಮ ವಿಳಾಸ ದೃಢಪಡಿಸಿ, ಬೇಕಾದ ದಾಖಲೆಗಳನ್ನು ನೀಡಿ, BLO ಕಚೇರಿಗೆ ಭೇಟಿ ನೀಡಿ ಎಂದು ತಿಳಿಸಲಾಗುತ್ತದೆ. ಪುನಃಪರಿಶೀಲಿಸಿದ ಮತದಾರರ ಪಟ್ಟಿಯನ್ನು ಸಾರ್ವಜನಿಕವಾಗಿ ಪ್ರಕಟಿಸಲಾಗುತ್ತದೆ. 12-15 ದಿನಗಳೊಳಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗುತ್ತದೆ.
ಪರಿಶೀಲನೆ, ತನಿಖೆ ಮತ್ತು ಸಾರ್ವಜನಿಕ ಪರಿಗಣನೆ ನಂತರ ಅಂತಿಮಪಟ್ಟಿ ಪ್ರಕಟವಾಗು ತ್ತದೆ. ಈ ಒಂದು ಕ್ರಮದಿಂದಾಗಿ, ಚುನಾವಣೆಗಳ ನೈತಿಕತೆಯನ್ನು ಹೆಚ್ಚಿಸಿ, ಬೋಗಸ್ ಮತದಾರಿಕೆ ಕಡಿಮೆಯಾಗುವ ಮೂಲಕ ನಿಜವಾದ ಮತದಾರರ ಮತವೇ ಮಹತ್ವ ಹೊಂದುತ್ತದೆ.
ಕೆಲವು ರಾಜಕೀಯ ಪಕ್ಷಗಳು ಸ್ಥಳೀಯವಾಗಿ ಹೊರಗಿನ ಜನರನ್ನು ತಾತ್ಕಾಲಿಕವಾಗಿ ತರಿಸಿ ಮತದಾನ ಮಾಡಿಸಿದ ಪ್ರಕರಣಗಳು ಹಿಂದೊಮ್ಮೆ ಕಂಡುಬಂದಿದ್ದು ಈ ಕ್ರಮದಿಂದ ಆ ದುರ್ಬಳಕೆಗಳು ತಡೆಗಟ್ಟಲ್ಪಡುವ ಸಾಧ್ಯತೆ ಹೆಚ್ಚುತ್ತದೆ. ಆಧಾರ್-ಲಿಂಕ್ ಸೌಲಭ್ಯ, e-EPIC, ಆನ್ಲೈನ್ ತಿದ್ದುಪಡಿಗಳೆಲ್ಲವೂ ಶುದ್ಧಾತಿ ಶುದ್ಧ ಮತದಾರರ ಅಧಿಕೃತ ಡಾಟಾಗಳ ಮೇಲೆಯೇ ನಡೆಯುತ್ತದೆ.
ವರ್ಷದೊಳಗೆ ಸ್ಥಳಾಂತರ ಹೆಚ್ಚಿರುವ ನಗರ- ಪ್ರವಾಹ ಪ್ರದೇಶಗಳಲ್ಲಿ ನಿಖರ ಪಟ್ಟಿಯು ಸಮಾಜಬದ್ಧ ನಿರ್ಧಾರಗಳಿಗೆ ಸಹ ಸಹಾಯಕವಾಗಬಲ್ಲದು. ಇಷ್ಟೆಲ್ಲ ಉಪಯೋಗ ಗಳಿದ್ದೂ, SIR ಕ್ರಮಕ್ಕೆ ಹಲವಾರು ರಾಜಕೀಯ ನಾಯಕರು ವಿರೋಧ ವ್ಯಕ್ತಪಡಿಸಿದ್ದು, ಅವುಗಳಲ್ಲಿ; ಮತದಾರರ ಹೆಸರನ್ನು ಇದ್ದಕ್ಕಿದ್ದಂತೆ ಅಳಿಸುತ್ತಿದ್ದಾರೆ ಎಂಬ ಆರೋಪವು ಕೇಳಿಬಂತು.
ಕೆಲವು ಪ್ರದೇಶಗಳಲ್ಲಿ ಸಮೂಹವಾಗಿ 500-2000 ಹೆಸರುಗಳು ಅಳಿಸಲ್ಪಟ್ಟಿದ್ದರಿಂದ ರಾಜಕೀಯ ಚರ್ಚೆಗೆ ಕಾರಣವಾಯಿತು. ಆದರೆ ಆಯೋಗದ ಪ್ರಕಾರ, ಇದು ತಾತ್ಕಾಲಿಕ ವಾಗಿ ವಿವರ ಪರಿಶೀಲನೆಗಾಗಿ ಫ್ಲ್ಯಾಗ್ ಮಾಡಲ್ಪಟ್ಟ ಪಟ್ಟಿಯೇ ಹೊರತು ಅಂತಿಮ ಅಳಿಕೆ ಅಲ್ಲ. ನಗರದ ಬಡ ಪ್ರದೇಶಗಳು, ಅಸಂಘಟಿತ ಕಾರ್ಮಿಕ ವರ್ಗ, ಬಾಡಿಗೆ ಮನೆಗಳಲ್ಲಿ ವಾಸಿಸುವವರು-ಇವರಲ್ಲಿ ವಿಳಾಸದ ಬದಲಾವಣೆ ಸಾಮಾನ್ಯ. ಇವರ ಹೆಸರುಗಳು ಸಂದೇಹಕ್ಕೆ ಒಳಪಡುವ ಸಾಧ್ಯತೆ ಅಧಿಕ.
ಚುನಾವಣೆ ಮೊದಲು ದೊಡ್ಡ ಮಟ್ಟದಲ್ಲಿ ಪರಿಶೀಲನೆ ನಡೆಸುವುದರಿಂದ ರಾಜಕೀಯ ಪಕ್ಷಗಳು ಜನಪ್ರಭಾವ ಕಡಿಮೆ ಮಾಡುವ ಉದ್ದೇಶ ಎಂದು ಆರೋಪಿಸುತ್ತವೆ. ಕಾರ್ಯಕರ್ತ ರಿಂದ ಒದಗಿಸುವ ಸಂಖ್ಯೆ-ದತ್ತಾಂಶಕ್ಕಿಂತ ಆಯೋಗದ ಡಿಜಿಟಲ್ ದತ್ತಾಂಶ ಬಲವಾಗಿರುವು ದರಿಂದ ರಾಜಕೀಯಪಕ್ಷಗಳಿಗೆ ಪಕ್ಷಗಳ ಬೂತ್ ( ground ) ನೆಟ್ವರ್ಕ್ ದುರ್ಬಲವಾಗುವ ಸಾಧ್ಯತೆ.
ಇವೆಲ್ಲದರ ಜೊತೆಗೆ, ಬಹಳಷ್ಟು ಸವಾಲುಗಳು SIR ಕ್ರಮದ ಸಂದರ್ಭದಲ್ಲಿ ಒದಗಿ ಬರುತ್ತಿವೆ. ಅವುಗಳಲ್ಲಿ, ಬೃಹತ್ ನಗರಗಳಲ್ಲಿ ವಿಳಾಸ ನಿಜತೆ ಪರಿಶೀಲನೆ ಅತ್ಯಂತ ಕಷ್ಟ, ಕಡಿಮೆ ಸಿಬ್ಬಂದಿ ಮತ್ತು BLO ಗಳ ಮೇಲಿನ ಒತ್ತಡ, ಆಧಾರ್ -ಗೌಪ್ಯತಾ ಚರ್ಚೆಗಳು, ತಪ್ಪಾದ ನೋಟಿಸ್‌ಗಳಿಂದ ನಿರ್ದೋಷಿ ಮತದಾರರಿಗೆ ತೊಂದರೆ, ಡಿಜಿಟಲ್ ಗ್ಯಾಪ್ ತಿದ್ದು ಪಡಿ ಕ್ರಮಗಳನ್ನು ಅನೇಕರು ತಿಳಿಯದಿರುವುದು ಸೇರಿದಂತೆ ಏನೇ ಅಡೆತಡೆಗಳುಂಟಾ ದರೂ ಈ ಕ್ರಮವು ಅತ್ಯಗತ್ಯವಾಗಿದ್ದು, ಭಾರತದ ಪ್ರಜಾಪ್ರಭುತ್ವದ ಮೂಲಾಧಾರವಾದ ಚುನಾವಣೆಯನ್ನು ಶುದ್ಧ, ಪಾರದರ್ಶಕ ಮತ್ತು ನೈತಿಕವಾಗಿಡಲು ಇದು ಅತ್ಯಂತ ಮಹತ್ವದ ಪಾತ್ರವಹಿಸುತ್ತದೆ.
ಚುನಾವಣಾ ಆಯೋಗವು ಸದಾ ಚಲನೆಯಲ್ಲಿರುವ, ನವೀನತೆಗಳನ್ನು ಅಳವಡಿಸಿಕೊಂಡು ಮುನ್ನಡೆಯುವ, ಸಂವಿಧಾನದ ಬಲವಾದ ಶಕ್ತಿಕೇಂದ್ರವಾಗಿ ಮುನ್ನಡೆಯುತ್ತಲೇ ಇದೆ. SIR ಮಾದರಿಯ ಕ್ರಮಗಳು ಚುನಾವಣಾ ವ್ಯವಸ್ಥೆಯನ್ನು ವಂಚನೆಮುಕ್ತ ಮತ್ತು ನಂಬಿಕೆ ಮೂಡುವಂತಾಗಿಸುತ್ತಿವೆ.
ಪ್ರಜಾಪ್ರಭುತ್ವದ ನೈಜಬಲ ಮತದಾರರಲ್ಲಿದೆ. ಮತದಾರರ ಪಟ್ಟಿಗಳು ನಿಖರವಾಗಿದ್ದಷ್ಟೂ, ಚುನಾವಣೆಯ ಶುದ್ಧತೆ ಗಟ್ಟಿಯಾಗುತ್ತದೆ. ಇಂದು ಭಾರತವು ಎದುರಿಸುತ್ತಿರುವ ಅತ್ಯಂತ ದೊಡ್ಡ ಸವಾಲು ರಾಜಕೀಯ ಧ್ರುವೀಕರಣವಲ್ಲ; ಬದಲಾಗಿ ವಿಶ್ವಾಸಾರ್ಹ ಮತದಾರರ ಪಟ್ಟಿಯನ್ನು ನಿರ್ಮಿಸುವುದು. SIR ಅಭಿಯಾನ, ಕಟ್ಟುನಿಟ್ಟಿನ ನೀತಿಸಂಹಿತೆ, ನಿಷ್ಪಕ್ಷ ಪಾತ ಆಡಳಿತಾತ್ಮಕ ಕ್ರಮಗಳು ಸರಿಯಾದ ಸಂವಿಧಾನಾತ್ಮಕ ದಿಸೆಯಲ್ಲಿಯೇ ಸಾಗುತ್ತಿರುವುದು ಜನಸಾಮಾನ್ಯರಲ್ಲಿ ನೆಮ್ಮದಿ, ಖುಷಿ ತರುವ ವಿಚಾರವೆಂದೇ ಹೇಳಬಹುದು.
ಭಾರತೀಯ ಚುನಾವಣಾ ಆಯೋಗವು ಶೇಷನ್‌ರ ಕಾಲದಲ್ಲಿ ಹೊಸ ಮುಖ ಪಡೆದಂತೆ, ಇಂದು eನೇಶ್ ಕುಮಾರ್ ನೇತೃತ್ವದಲ್ಲಿ ಪಾರದರ್ಶ ಕತೆ-ಮಾಹಿತಿ-ತಂತ್ರಜ್ಞಾನ-ನೈತಿಕತೆ ಎಂಬ ನಾಲ್ಕು ಆಧಾರಸ್ತಂಭಗಳ ಮೇಲೆ ಮತ್ತೊಮ್ಮೆ ಮರುನಿರ್ಮಾಣಗೊಳ್ಳುತ್ತಿದೆ. ಪ್ರಜಾ ಪ್ರಭುತ್ವವನ್ನು ಬಲಪಡಿಸುವುದು ಕೇವಲ ಸಂವಿಧಾನದ ಆದೇಶವಲ್ಲ; ಅದು ಜನರ ಆಸೆಯೂ ಹೌದು. SIR ಮಾದರಿಯ ಧೈರ್ಯಶಾಲಿ ಕ್ರಮಗಳು ಈ ದಿಶೆಯಲ್ಲಿ ಭಾರತಕ್ಕೆ ಅಗತ್ಯವಾದ ಮಾರ್ಗಸೂಚಿಯಾಗಿದೆ.