Vishweshwar Bhat Column: ಪಾವೆಂ ಪದಪ್ರೀತಿ
ಒಮ್ಮೆ ಅವರು ಕನ್ನಡ-ತಮಿಳು ಭಾಷೆಗಳಲ್ಲಿನ ಹಲವು ಪದಗಳ ಸಾಮ್ಯವನ್ನು ಅರಿಯು ವುದಕ್ಕಾಗಿ ವಿಶ್ವವಿದ್ಯಾಲಯವೊಂದರ ಪ್ರಾಧ್ಯಾಪಕರನ್ನು ಭೇಟಿ ಮಾಡಿ ಚರ್ಚಿಸಲು ಹುಬ್ಬಳ್ಳಿ ಯಿಂದ ಮದರಾಸಿಗೆ ಹೋದ ಪ್ರಸಂಗವನ್ನು ಹೇಳಿದ್ದರು. ಯಾರಾದರೂ ಒಂದು ಪದವನ್ನು ಹೇಳಿದರೆ, ಆಚಾರ್ಯರು ಅದರ ಹಿಂದೆ ಬೀಳುತ್ತಿದ್ದರು.
-
ಸಂಪಾದಕರ ಸದ್ಯಶೋಧನೆ
ನಾನು ‘ಸಂಯುಕ್ತ ಕರ್ನಾಟಕ’ ಪತ್ರಿಕೆಯನ್ನು ಸೇರುವ ಹೊತ್ತಿಗೆ, ‘ಕಸ್ತೂರಿ’ ಮಾಸಿಕದ ಸಂಪಾದಕರಾಗಿದ್ದ ಪಾ.ವೆಂ.ಆಚಾರ್ಯರು ನಿವೃತ್ತರಾಗಿದ್ದರು. ಆದರೆ ‘ಕಸ್ತೂರಿ’ಯಲ್ಲಿ ಅವರು ಪದಗಳ ಬಗ್ಗೆ ಬರೆಯುತ್ತಿದ್ದ ’ಪದಾರ್ಥ ಚಿಂತಾಮಣಿ’ ಅಂಕಣ ಪ್ರಕಟವಾಗುತ್ತಿತ್ತು.
ಒಮ್ಮೆ ‘ಸಂಯುಕ್ತ ಕರ್ನಾಟಕ’ ಪತ್ರಿಕೆಯಲ್ಲಿ ಅಂದಿನ ವ್ಯವಸ್ಥಾಪಕ ಸಂಪಾದಕರಾಗಿದ್ದ ಕೆ.ಶಾಮರಾಯರು ಸಂಪಾದಕೀಯ ಸಿಬ್ಬಂದಿ ಸೇರಿದಂತೆ ನೂರಕ್ಕೂ ಹೆಚ್ಚು ಸಿಬ್ಬಂದಿ ಯನ್ನು ಒಂದೇ ದಿನ ಕೆಲಸದಿಂದ ತೆಗೆದು ಹಾಕಿದ್ದರಿಂದ ಬೆಂಗಳೂರು ಕಚೇರಿಯಿಂದ ಕೆಲವರನ್ನು ಕರೆಯಿಸಿಕೊಂಡಿದ್ದರು.
ಹಾಗೆ ಕರೆಯಿಸಿಕೊಂಡವರಲ್ಲಿ ನಾನೂ ಇದ್ದೆ. ಹುಬ್ಬಳ್ಳಿ ಆಫೀಸಿನಲ್ಲಿ ಸುಮಾರು ಐದು ತಿಂಗಳು ಕೆಲಸ ಮಾಡುವ ಅವಕಾಶ ನನಗೆ ಲಭಿಸಿತ್ತು. ಆ ಅವಧಿಯಲ್ಲಿ ಪಾ.ವೆಂ. ಆಚಾರ್ಯರನ್ನು ಭೇಟಿ ಮಾಡುವ ಅವಕಾಶ ಸಿಕ್ಕಿತ್ತು. ಅವರು ‘ಸಂಯುಕ್ತ ಕರ್ನಾಟಕ’ ಪತ್ರಿಕೆಯ ಅಂದಿನ ಸಂಪಾದಕರಾಗಿದ್ದ ಆರ್.ಎ.ಉಪಾಧ್ಯರನ್ನು ಭೇಟಿ ಮಾಡಲು ಬರುತ್ತಿದ್ದರು.
ಇದನ್ನೂ ಓದಿ: Vishweshwar Bhat Column: ಜಪಾನಿನ ಸಮೂಹ ಪ್ರಜ್ಞೆ
ನಾನು ಮತ್ತು ರವಿ ಬೆಳಗೆರೆ, ಆಚಾರ್ಯರನ್ನು ಮಾತಿಗೆ ಕರೆಯುತ್ತಿದ್ದೆವು. ಒಮ್ಮೆ ಮಾತಾಡು ವಾಗ ಆಚಾರ್ಯರು ತಾವು ಒಂದು ಪದದ ಅರ್ಥವನ್ನು ಹುಡುಕಿಕೊಂಡು ಬಸ್ಸಿನಲ್ಲಿ ಹಿರಿಯೂರ ತನಕ ಪ್ರಯಾಣಿಸಿ, ನಂತರ ಆರು ಕಿ.ಮೀ. ಕಾಲ್ನಡಿಗೆಯಲ್ಲಿ ಕ್ರಮಿಸಿ ಆ ಕಾಲದ ಪ್ರಸಿದ್ಧ ಸಂಸ್ಕೃತ ಪಂಡಿತರೊಬ್ಬರನ್ನು ಭೇಟಿ ಮಾಡಿ, ಅವರಿಂದ ಒಂದು ಪದದ ಅರ್ಥ ತಿಳಿದುಕೊಂಡು ಬಂದ ಪ್ರಸಂಗವನ್ನು ವಿವರಿಸಿದ್ದರು.
ಹುಬ್ಬಳ್ಳಿಯಿಂದ ಅಲ್ಲಿಗೆ ಹೋಗಿ ಬಂದಿದ್ದಕ್ಕೆ ಆಚಾರ್ಯರಿಗೆ 18 ರುಪಾಯಿ ಖರ್ಚಾಗಿತ್ತು. ಬಸ್ ಟಿಕೆಟ್ ಸಹಿತ ಆಫೀಸಿಗೆ ಖರ್ಚಿನ ಬಾಬತ್ತು (18 ರುಪಾಯಿ) ಬಿಲ್ ಕೊಟ್ಟರೆ, ಅದನ್ನು ಆಡಳಿತ ಮಂಡಳಿ ತಿರಸ್ಕರಿಸಿತ್ತು. ಆದರೆ ಆಚಾರ್ಯರು ಪದಶೋಧ ನೆಪ ಮಾಡಿಕೊಂಡು ಅಲೆಯುವುದನ್ನು ನಿಲ್ಲಿಸಲಿಲ್ಲ.
ಒಮ್ಮೆ ಅವರು ಕನ್ನಡ-ತಮಿಳು ಭಾಷೆಗಳಲ್ಲಿನ ಹಲವು ಪದಗಳ ಸಾಮ್ಯವನ್ನು ಅರಿಯು ವುದಕ್ಕಾಗಿ ವಿಶ್ವವಿದ್ಯಾಲಯವೊಂದರ ಪ್ರಾಧ್ಯಾಪಕರನ್ನು ಭೇಟಿ ಮಾಡಿ ಚರ್ಚಿಸಲು ಹುಬ್ಬಳ್ಳಿಯಿಂದ ಮದರಾಸಿಗೆ ಹೋದ ಪ್ರಸಂಗವನ್ನು ಹೇಳಿದ್ದರು. ಯಾರಾದರೂ ಒಂದು ಪದವನ್ನು ಹೇಳಿದರೆ, ಆಚಾರ್ಯರು ಅದರ ಹಿಂದೆ ಬೀಳುತ್ತಿದ್ದರು.
ಆ ಪದದ ಮೂಲ, ವ್ಯುತ್ಪತ್ತಿ, ಬಳಕೆ, ವಿರೂಪ, ವಿಸ್ತಾರಗಳ ಬಗ್ಗೆ ತಲಸ್ಪರ್ಶಿ ಅಧ್ಯಯನ ಮಾಡುತ್ತಿದ್ದರು. ಅವರ ಜೇಬಿನಲ್ಲಿ ಸುರುಳಿಯಾಕಾರದ ಸಣ್ಣ ಸಣ್ಣ ಚೀಟಿಗಳಿರುತ್ತಿದ್ದವು. ಅವು ಅವರ ಯೋಚನೆಯಲ್ಲಿ ಬಂದಿಯಾದ ಪದಗಳ ಕುರಿತ ಪುಟ್ಟ ಪುಟ್ಟ ಟಿಪ್ಪಣಿ ಗಳಾಗಿರುತ್ತಿದ್ದವು.
‘ಆಣೆ’ ಎಂಬ ಪದವನ್ನೇ ತೆಗೆದುಕೊಳ್ಳಿ. ಆಚಾರ್ಯರು ಆ ಪದದ ಬಗ್ಗೆ ನೀಡಿದ ವಿವರಣೆ ಯನ್ನು ಗಮನಿಸಬೇಕು- ಅನೇಕ ವೇಳೆ ಸಂಸ್ಕೃತದಿಂದ ನೇರವಾಗಿ ತೆಗೆದುಕೊಳ್ಳದೆ ಪ್ರಾಕೃತ ಮೂಲಕ ಪದಗಳನ್ನು ಕನ್ನಡಕ್ಕೆ ತೆಗೆದುಕೊಂಡದ್ದು ಹಿಂದಿನ ಕಾಲದ ಸಾಹಿತ್ಯದಲ್ಲಿ ಕಾಣುತ್ತದೆ. ಹೀಗಾದಾಗ ಅರ್ಥಗಳು ಮೂಲಕ್ಕಿಂತ ಬಹುದೂರ ಹೋಗಿಬಿಟ್ಟಿವೆ. ನಮ್ಮ ಆಣೆಯನ್ನೇ ತೆಗೆದುಕೊಳ್ಳಿ. ಇದು ಆಜ್ಞೆಯ (ಆಜ್ಞೆ) ತದ್ಭವ ಎಂದು ವೈಯಾಕರಣಿಗಳು ಹೇಳಿದ್ದಾರೆ. ಆದರೆ ಅದು ಪ್ರಾಕೃತ ಮೂಲಕ ಆ ರೂಪದಲ್ಲಿ ಬಂದದ್ದು.
ಆಜ್ಞೆಯೆಂದರೇನೆಂದು ಎಲ್ಲರಿಗೂ ಗೊತ್ತಿದೆ. ಆಣೆಯೆಂದರೇನೆಂಬುದೂ ಸರ್ವವಿದಿತ. ಆಣೆ ಹಾಕು ಅಂದರೆ ಯಾವುದಾದರೂ ದೇವತೆ, ಹಿರಿಯ ಅಥವಾ ಪ್ರೀತಿಪಾತ್ರ ವ್ಯಕ್ತಿಯ ಹೆಸರು ಹೇಳಿ ಏನನ್ನಾದರೂ ಸತ್ಯವೆಂದು ಪ್ರತಿe ಮಾಡುವುದು ಅಥವಾ ಏನನ್ನಾದರೂ ಮಾಡದಿ ರುವಂತೆ ಯಾರನ್ನಾದರೂ ನಿರ್ಬಂಧಿಸುವುದು ಆಣೆ. ದೇವರಾಣೆ, ನನ್ನ ಮಗುವಿನಾಣೆ ಇತ್ಯಾದಿ. ಹಳೆಯ ಸಾಹಿತ್ಯದಲ್ಲಿ ಈ ಪದವನ್ನು ಆಜ್ಞೆ (ಅಪ್ಪಣೆ-ತಾಕೀತು) ಎಂಬರ್ಥ ದಲ್ಲಿಯೂ ಬಳಸಿದ್ದುಂಟು. ಆದರೆ ಈಗ ಅದು ಉಳಿದಿರುವುದು ಮೇಲೆ ಹೇಳಿದ ಅರ್ಥದಲ್ಲಿ ಮಾತ್ರ. ಗಮನಿಸಬೇಕಾದ್ದೆಂದರೆ ಸಂಸ್ಕೃತದಲ್ಲಿ ‘ಆಜ್ಞೆ’ ಶಬ್ದಕ್ಕೆ ಒಂದಕ್ಕಿಂತ ಹೆಚ್ಚು ಅರ್ಥ ಗಳಿದ್ದರೂ ಅವುಗಳಲ್ಲಿ ‘ಆಣೆ’ಗೆ ಈಗ ಪ್ರಚಲಿತವಾಗಿರುವ ಅರ್ಥ ಸೇರಿಲ್ಲ.
ಅಲ್ಲಿ ‘ಆಣೆ’ಗೆ ಶಪಥ ಎಂಬ ಬೇರೆಯೇ ಶಬ್ದ ಇದೆ. ಆಣೆಗೆ ಆಜ್ಞೆಗಿಲ್ಲದ ಅರ್ಥ ಹೇಗೆ ಬಂತು? ದೇವತೆ ಅಥವಾ ಲೋಕೋತ್ತರ ವಸ್ತುವಿನ ಅಪ್ಪಣೆ ಇದು ಎಂದು ಭಾವಿಸಿ ನಡೆಸಬೇಕು ಎಂಬಭಿಪ್ರಾಯದಿಂದ ತೊಡಗಿ ಕಡೆಗೆ ಈಗಿರುವ ಶಪಥ ಎಂಬರ್ಥ ಮಾತ್ರ ಉಳಿದು ಕೊಂಡಿರಬೇಕು.