ಪ್ರಪಂಚದಲ್ಲಿ ಸಂಘರ್ಷವಿಲ್ಲದ ದೇಶವೇ ಇಲ್ಲ: ಸದ್ಗುರು ಶ್ರೀ ಮಧುಸೂದನ ಸಾಯಿ
ಸಂಘರ್ಷಗಳಿಂದ ಸಂತ್ರಸ್ತರಾದವರನ್ನು ಮೇಲೆತ್ತಿ, ಅವರ ಬದುಕು ಸುಧಾರಿಸುವಂತೆ ಮಾಡುವುದು ಮಹತ್ವದ ಕೆಲಸ. ಇದು ಬಹಳ ಮುಖ್ಯವಾದ ಸೇವೆ. ಪ್ರಪಂಚದಲ್ಲಿ ಸಂಘರ್ಷವಿಲ್ಲದ ದೇಶವೇ ಇಲ್ಲ. ಅಧಿಕಾರವನ್ನು ನಿಯಂತ್ರಿಸುವ ದೊಡ್ಡ ಜನರ ಸಂಘರ್ಷಗಳ ಪರಿಣಾಮವಾಗಿ ಸಾಮಾನ್ಯ ಜನರು ಬಳಲುತ್ತಾರೆ. ಇದರಲ್ಲಿ ಮಹಿಳೆಯರು ಮತ್ತು ಮಕ್ಕಳು ಹೆಚ್ಚು ದುರ್ಬಲ ಸ್ಥಿತಿಗೆ ತಲುಪುವಂತಾಗಿದೆ ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ ವಿಷಾದಿಸಿದರು.