ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಬೀದರ್-‌ನಾಂದೇಡ್‌ ರೈಲ್ವೆ ಮಾರ್ಗ ವಿಳಂಬ

ಮಾರ್ಗ ನಿರ್ಮಾಣಕ್ಕೆ ಉಚಿತವಾಗಿ ಜಮೀನು ಕೊಡುವುದರ ಜತೆಗೆ ಒಟ್ಟು ವೆಚ್ಚದಲ್ಲಿ ಅರ್ಧದಷ್ಟು ಶೇ 50 ರಷ್ಟು ಪಾಲು ಭರಿಸುವಂತೆ ಕರ್ನಾಟಕ ಮತ್ತು ಮಹಾರಾಷ್ಟ್ರ ಸರಕಾರಗಳನ್ನು ಕೋರಿತ್ತು. ಎರಡು ರಾಜ್ಯಗಳ ಮುಖ್ಯಮಂತ್ರಿಗಳು ಹಲವು ಬಾರಿ ಈ ಕುರಿತು ಭರವಸೆ ನೀಡಿದರು. ಆದರೆ ಇಲ್ಲಿಯವರೆಗೆ ರಾಜ್ಯ ಸರಕಾರ ಆರ್ಥಿಕ ಪಾಲು ನೀಡಲು ಹಿಂದೇಟು ಹಾಕಿದ್ದರಿಂದ ಯೋಜನೆ ನನೆಗುದಿಗೆ ಬಿದ್ದಿದೆ. ಒಟ್ಟು 157 ಕಿಮೀ ಮಾರ್ಗದಲ್ಲಿ 101 ಕಿಮೀ ಮಹಾರಾಷ್ಟ್ರದಲ್ಲಿ ಮತ್ತು 56 ಕಿಮೀ ಕರ್ನಾಟಕದಲ್ಲಿ ಬರುತ್ತದೆ.

ಬೀದರ್-‌ನಾಂದೇಡ್‌ ರೈಲ್ವೆ ಮಾರ್ಗ ವಿಳಂಬ

-

Profile
Ashok Nayak Aug 17, 2026 4:23 PM

ಚನ್ನಬಸವ ಮೋಕ್ತೆದಾರ

2019ರಲ್ಲಿ ಕೇಂದ್ರ ಅನುಮೋದನೆ

ರಾಜ್ಯ ಸರಕಾರದ ಹಿತಾಸಕ್ತಿ ಕೊರತೆ, ಕಾಗದದಲ್ಲೇ ಬೇಡಿಕೆ

ಬೀದರ್ ಉತ್ತರ ಹಾಗೂ ದಕ್ಷಿಣ ಭಾರತದ ನಡುವಿನ ಸಂಪರ್ಕ ಇನ್ನಷ್ಟು ಗಟಿಗೊಳಿಸುವ ಮಹತ್ವಾ ಕಾಂಕ್ಷಿ ಬೀದರ್-ನಾಂದೇಡ್ (ವಾಯಾ ಔರಾದ್ ದೇಗಲೂರು) ಹೊಸ ರೈಲ್ವೆ ಮಾರ್ಗಕ್ಕೆ ರಾಜ್ಯ ಸರಕಾರ ವಿಳಂಬ ವಹಿಸುತ್ತಿದೆ. ಹೀಗಾಗಿ ಡಿಪಿಆರ್ ಹಂತದಲ್ಲೇ ಈ ಯೋಜನೆ ದಶಕದಷ್ಟು ಹಳೆಯ ದಾದ ಬೇಡಿಕೆ ಈಗಲೂ ಕಾಗದದಲ್ಲೇ ಉಳಿದಿದೆ. ಈ ಭಾಗದ ಜನರ ದಶಕದ ಬೇಡಿಕೆ ಮನ್ನಿಸಿ ಕೇಂದ್ರ ರೈಲ್ವೆ ಇಲಾಖೆಯು 2019ರಲ್ಲಿ ಯೋಜನೆಗೆ ಮಂಜೂರು ನೀಡಿದೆ. 2354 ಕೋಟಿ ರು.ಅಂದಾಜು ವೆಚ್ಚ ನಿಗದಿಪಡಿಸಲಾಗಿದೆ.

ಮಾರ್ಗ ನಿರ್ಮಾಣಕ್ಕೆ ಉಚಿತವಾಗಿ ಜಮೀನು ಕೊಡುವುದರ ಜತೆಗೆ ಒಟ್ಟು ವೆಚ್ಚದಲ್ಲಿ ಅರ್ಧದಷ್ಟು ಶೇ 50 ರಷ್ಟು ಪಾಲು ಭರಿಸುವಂತೆ ಕರ್ನಾಟಕ ಮತ್ತು ಮಹಾರಾಷ್ಟ್ರ ಸರಕಾರಗಳನ್ನು ಕೋರಿತ್ತು. ಎರಡು ರಾಜ್ಯಗಳ ಮುಖ್ಯಮಂತ್ರಿಗಳು ಹಲವು ಬಾರಿ ಈ ಕುರಿತು ಭರವಸೆ ನೀಡಿದರು. ಆದರೆ ಇಲ್ಲಿಯವರೆಗೆ ರಾಜ್ಯ ಸರಕಾರ ಆರ್ಥಿಕ ಪಾಲು ನೀಡಲು ಹಿಂದೇಟು ಹಾಕಿದ್ದರಿಂದ ಯೋಜನೆ ನನೆಗುದಿಗೆ ಬಿದ್ದಿದೆ.

ಇದನ್ನೂ ಓದಿ: Railway Minister V.Somanna: ಕೇಂದ್ರ ಮತ್ತು ರಾಜ್ಯ ಸರ್ಕಾರ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ: ರೈಲ್ವೆ ಸಚಿವ ವಿ.ಸೋಮಣ್ಣ

ಒಟ್ಟು 157 ಕಿಮೀ ಮಾರ್ಗದಲ್ಲಿ 101 ಕಿಮೀ ಮಹಾರಾಷ್ಟ್ರದಲ್ಲಿ ಮತ್ತು 56 ಕಿಮೀ ಕರ್ನಾಟಕದಲ್ಲಿ ಬರುತ್ತದೆ. ಈ ಮಾರ್ಗದಲ್ಲಿ ಸಂಚಾರ ದಟ್ಟಣೆ ಕಮ್ಮಿಯಿದ್ದು. ಕಾರ್ಯ ಸಾಧ್ಯತೆ (ಫಿಜಿಬಲಿಟಿ) ಸಮರ್ಪಕವಿಲ್ಲ ಎಂದು ರೈಲ್ವೆ ಇಲಾಖೆ ನಡೆಸಿದ ಸಮೀಕ್ಷೆಯಲ್ಲಿ ಹೇಳಿತ್ತು.

ಮಹಾರಾಷ್ಟ್ರ ಹಾಗೂ ಕರ್ನಾಟಕ ಸರಕಾರಗಳು ತಮ್ಮ ತಮ್ಮ ರಾಜ್ಯದಲ್ಲಿ ನಿರ್ಮಾಣ ವೆಚ್ಚದ ಅರ್ಧದಷ್ಟು ಪಾಲು ಹಂಚಿಕೊಂಡರೆ ಯೋಜನೆ ಕಾರ್ಯಗತಗೊಳಿಸುವುದಾಗಿ ಹೇಳಿದೆ. ಮಹಾರಾಷ್ಟ್ರ ಸರಕಾರ ತನ್ನ ಶೇ.50 ರಷ್ಟು ಆರ್ಥಿಕ ಪಾಲು ನೀಡಲು ಕಳೆದ ಬಜೆಟ್ ನಲ್ಲಿ ಒಪ್ಪಿಗೆ ನೀಡಿದೆ.ಆದರೆ ರಾಜ್ಯ ಸರಕಾರ ಇನ್ನೂ ನಿರ್ಧಾರ ಕೈಗೊಳ್ಳದ ಕಾರಣ ಯೋಜನೆ ಅತಂತ್ರಕ್ಕೆ ಸಿಲುಕಿದೆ. ಈ ಮಾರ್ಗ ಮಹಾರಾಷ್ಟ್ರದಲ್ಲಿ ಹೆಚ್ಚು ವಿಸ್ತೀರ್ಣ ಹೊಂದಿದೆ.

ಬೀದರ್ ಜಿಲ್ಲೆಯಲ್ಲಿ ಜನವಾಡಾ.ಸಂತಪೂರ. ಔರಾದ್‌ನಿಂದ ಹಣೆಗಾಂವ ವರೆಗೆ 56 ಕಿಮೀ ಬರುತ್ತದೆ. ಭೂಸ್ವಾಧೀನ ಸೇರಿದಂತೆ ಕಾಮಗಾರಿ ವೆಚ್ಚದಲ್ಲಿ ಅರ್ಧಪಾಲು ವೆಚ್ಚ ಕಲ್ಪಿಸಿದರೆ ಈ ಹೊಸ ಮಾರ್ಗದ ಕಾರ್ಯ ಶುರುವಾಗಲಿದೆ. ಮಹಾರಾಷ್ಟ್ರ ಒಪ್ಪಿದರೂ ಕರ್ನಾಟಕದ ಒಪ್ಪಿಗೆ ಇನ್ನೂ ಸಿಕ್ಕಿಲ್ಲ. ಹೀಗಾಗಿ ಕೆಲಸ ಆರಂಭವಾಗಿಲ್ಲ ಎಂದು ರೈಲ್ವೆ ಇಲಾಖೆಯ ಮೂಲಗಳು ತಿಳಿಸಿವೆ.

ಸಮಗ್ರ ಅಭಿವೃದ್ಧಿಗೆ ಪೂರಕ

ಬೀದರ್-ನಾಂದೇಡ್ ಹೊಸ ರೈಲ್ವೆ ಮಾರ್ಗ ಈ ಭಾಗದ ಸಮಗ್ರ ಅಭಿವ್ರದ್ದಿಗೆ ಪೂರಕವಾಗಲಿದೆ. ಸಿಖ್ಖರ್ ಕೊನೇ ಗುರು ಶ್ರೀ ಗುರುಗೋವಿಂದ್ ಸಿಂಗ್ ಅವರು ಗುರುಗ್ರಂಥ ಸಾಹೀಬ್‌ಗೆ ಧರ್ಮಗ್ರಂಥ ಎಂದು ಪಟ್ಟಕಟ್ಟಿದ ಶ್ರೀ ಹಜೂರ್ ಸಾಹೇಬ್ ಗುರುದ್ವಾರ ನಾಂದೇಡ್ ನಲ್ಲಿದೆ.

ಸಿಖ್ಖರ ಮೊದಲ ಗುರು ಶ್ರೀ ಗುರುನಾನಕ ದೇವ್ ಮಹಾರಾಜರು ಭೇಟಿ ನೀಡಿದ ಪುಣ್ಯಕ್ಷೇತ್ರ ಬೀದರ ಗುರುನಾನಕ್ ಝೀರಾ ಇದೆ. ಎರಡು ಕಡೆಗೆ ಸಿಖ್ಖರು ಸೇರಿ ದೇಶಾದ್ಯಂತದ ಪ್ರವಾಸಿಗರು ಬರುತ್ತಾರೆ. ಎರಡು ನಗರಕ್ಕೆ ನೇರ ಸಂಪರ್ಕ ರೈಲ್ವೆಯಿಂದ ಪ್ರಯಾಣಿಕರಿಗೆ ಸಾಕಷ್ಟು ಅನುಕೂಲವಾಗಿ ವ್ಯಾಪಾರ ವಹಿವಾಟು ಬಲಪಡಿಸಲಿದೆ. ಕರ್ನಾಟಕ ಮಹಾರಾಷ್ಟ್ರ ಡಿಭಾಗದ ಜನರಿಗೆ ಉತ್ತರ ಭಾರತದ ಸಂಪರ್ಕ ಸರಳವಾಗಲಿದೆ. ಇದು ಮಹತ್ವದ ಯೋಜನೆಯಾಗಿದ್ದರೂ ರಾಜ್ಯ ಸರಕಾರ ಕಡೆಗಣಿಸುತ್ತಿರುವುದು ಬೇಸರದ ಸಂಗತಿ ಎನ್ನುತ್ತಾರೆ ಸಾರ್ವಜನಿಕರು.

image

ರಾಜ್ಯ ಸರಕಾರ ಪಾಲು ನೀಡದಿದ್ದಕ್ಕೆ ಬೀದರ್ ನಾಂದೇಡ್ ಹೊಸ ರೈಲ್ವೆ ಮಾರ್ಗ ನನೆಗುದಿಗೆ ಬಿದ್ದಿದೆ. ಇತ್ತೀಚೆಗೆ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ. ವಿ.ಸೋಮಣ್ಣ ಅವರಿಗೆ ಭೇಟಿಯಾಗಿ ಬೇಗ ಕೆಲಸ ಆರಂಭಿಸಲು ಕೋರಿದ್ದೇನೆ. ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ. ಈ ರೈಲ್ವೆ ಮಾರ್ಗಕ್ಕಾಗಿ ಎರಡು ದಶಕಗಳಿಂದ ಹೋರಾಟ ಮಾಡುತ್ತಿದ್ದೆನೆ. ಮಹಾರಾಷ್ಟ್ರ ರಾಜ್ಯವು ತನ್ನ ವ್ಯಾಪ್ತಿಯ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಅಗತ್ಯ ಅನುದಾನ ಹಾಗೂ ಭೂಮಿಯನ್ನು ಒದಗಿಸಲು ಮುಂದಾಗಿದೆ. ಡಿಪಿಆರ್ ಆಗುತ್ತಿದೆ. ರಾಜ್ಯ ಸರಕಾರ ಅಗತ್ಯ ಸಹಕಾರ ನೀಡಿದಲ್ಲಿ ಯೋಜನೆ ಆರಂಭಿಸಬಹುದು. ಸಚಿವರಿಗೆ ಮನವರಿಕೆ ಮಾಡಲಾಗಿದೆ.

-ಪ್ರಭು ಚವ್ಹಾಣ, ಔರಾದ್ ಶಾಸಕ