ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸಂಪುಟ ಸಂಕಟ: ಕೈ ನಾಯಕರ ಪರದಾಟ

20 ಸ್ಥಾನಗಳಿಗೆ ಸುಮಾರು 42ಕ್ಕೂ ಹೆಚ್ಚು ಮಂದಿ ಪ್ರಬಲ ಆಕಾಂಕ್ಷಿಗಳಿದ್ದಾರೆ. ಇವರಲ್ಲಿ ಯಾರಿಗೆ ನೀಡಬೇಕು. ಯಾರನ್ನು ಕೈಬಿಡಬೇಕೆನ್ನುವ ಗೊಂದಲ ಪಕ್ಷದ ವರಿಷ್ಠರದ್ದಾಗಿದೆ. ಈ ಮಧ್ಯೆ ಪಕ್ಷದ ವರಿಷ್ಠರಾದ ರಾಹುಲ್ ಗಾಂಧಿ ಅವರು ವಿದೇಶ ಪ್ರವಾಸದಿಂದ ಬಂದ ನಂತರ ರಾಜ್ಯ ನಾಯಕ ರನ್ನು ಕರೆಸಿ ಮಾತುಕತೆ ನಡೆಸಿ ನಂತರವಷ್ಟೇ ಸಂಪುಟ ವಿಸ್ತರಣೆ ಮಾಡುವ ಸಾಧ್ಯತೆ ಇದೆ.

ಸಂಪುಟ ಸಂಕಟ: ಕೈ ನಾಯಕರ ಪರದಾಟ

-

Profile
Ashok Nayak Jun 29, 2026 7:37 AM

ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು

ಜಾತಿ, ಧರ್ಮ, ಜಿಲ್ಲಾ ಪ್ರಾತಿನಿಧ್ಯಗಳ ಒತ್ತಡ

ಸಿಎಂ ಡಿಕೆಶಿಗೆ ಸಾಲುಸಾಲು ಸವಾಲು

ಸಿಎಂ ಡಿ.ಕೆ. ಶಿವಕುಮಾರ್ ನಾಯಕತ್ವದ ಸರಕಾರ ಅಸ್ತಿತ್ವಕ್ಕೆ ಬಂದು ತಿಂಗಳು ಸಮೀಪಿಸುತ್ತಿದ್ದು, ಬಹು ನಿರೀಕ್ಷಿತ ಸಂಪುಟ ವಿಸ್ತರಣೆ ಬಗ್ಗೆ ತೀವ್ರ ಒತ್ತಡ ಶುರುವಾಗಿದೆ. ಮುಖ್ಯಮಂತ್ರಿ ಡಿಕೆಶಿ ಸೇರಿದಂತೆ ಸದ್ಯ 13 ಮಂತ್ರಿ ಗಳು ಸರಕಾರವನ್ನು ಮುನ್ನಡೆಸುತ್ತಿದ್ದು, ಉಳಿದ 20 ಮಂತ್ರಿಸ್ಥಾನಕ್ಕಾಗಿ ಸಂಪುಟ ವಿಸ್ತರಣೆ ಅನಿವಾರ್ಯವಾಗಿದೆ. ಇದರ ಒತ್ತಡದಲ್ಲಿ ಪಕ್ಷದ ವರಿಷ್ಠರು ಹಾಗೂ ರಾಜ್ಯ ನಾಯಕರು ಪರದಾಡುತ್ತಿದ್ದು, ಸವಾಲುಗಳನ್ನೂ ಅವರು ಎದುರಿಸುತ್ತಿದ್ದಾರೆ.

20 ಸ್ಥಾನಗಳಿಗೆ ಸುಮಾರು 42ಕ್ಕೂ ಹೆಚ್ಚು ಮಂದಿ ಪ್ರಬಲ ಆಕಾಂಕ್ಷಿಗಳಿದ್ದಾರೆ. ಇವರಲ್ಲಿ ಯಾರಿಗೆ ನೀಡಬೇಕು. ಯಾರನ್ನು ಕೈಬಿಡಬೇಕೆನ್ನುವ ಗೊಂದಲ ಪಕ್ಷದ ವರಿಷ್ಠರದ್ದಾಗಿದೆ. ಈ ಮಧ್ಯೆ ಪಕ್ಷದ ವರಿಷ್ಠರಾದ ರಾಹುಲ್ ಗಾಂಧಿ ಅವರು ವಿದೇಶ ಪ್ರವಾಸದಿಂದ ಬಂದ ನಂತರ ರಾಜ್ಯ ನಾಯಕ ರನ್ನು ಕರೆಸಿ ಮಾತುಕತೆ ನಡೆಸಿ ನಂತರವಷ್ಟೇ ಸಂಪುಟ ವಿಸ್ತರಣೆ ಮಾಡುವ ಸಾಧ್ಯತೆ ಇದೆ. ಆದರೆ ಅದಕ್ಕೆ ಯಾವುದೇ ದಿನವಾಗಲಿ, ಸಮಯವಾಗಲಿ ನಿಗದಿಯಾಗದಿರುವ ಕಾರಣ ಅನೇಕ ಆಕಾಂಕ್ಷಿ ಗಳಲ್ಲಿ ಆತಂಕ ಶುರುವಾಗಿದೆ, ಜತೆಗೆ ಕೆಲವರಲ್ಲಿ ಮಂತ್ರಿಯಾಗುವ ಆಸೆಯೇ ಕಮರಿ ಹೋಗುತ್ತಿದೆ. ಸಂಪುಟ ವಿಸ್ತರಣೆ ಮಾಡಿ ಪೂರ್ಣ ಪ್ರಮಾಣದ ಆಡಳಿತ ಮುನ್ನಡೆಸಬೇಕಾದ ಮುಖ್ಯಮಂತ್ರಿ ಹಾಗೂ ಪಕ್ಷದ ವರಿಷ್ಠರು ಈ ವಿಚಾರದಲ್ಲಿ ಎದುರಾಗುವ ಸವಾಲುಗಳಿಂದ ಮಂಕಾಗಿದ್ದಾರೆ.

ಸಂಪುಟ ವಿಸ್ತರಣೆ ಎಂದಾಗ ಪಕ್ಷದಲ್ಲಿ 45 ವರ್ಷಕ್ಕೂ ಹೆಚ್ಚು ಕಾಲ ದುಡಿದ ಪಕ್ಷ ನಿಷ್ಠರಿಗೆ ಆದ್ಯತೆ ನೀಡಬೇಕು. ಜಾತಿ, ಧರ್ಮಗಳ ಲೆಕ್ಕಾಚಾರದಲ್ಲಿ ಅವಕಾಶ ಕೊಡಬೇಕು. ಹಿರಿಯರು, ಕಿರಿಯರು ಹಾಗೂ ಪ್ರಾದೇಶಿಕತೆ ಮತ್ತು ಜಿಲ್ಲಾವಾರು ಪ್ರಾತಿನಿಧ್ಯಗಳನ್ನು ನೀಡಬೇಕಾದ ಪೀಕಲಾಟ ವರಿಷ್ಠರಿಗೆ ಶುರುವಾಗಿದೆ. ಇದೆಲ್ಲದರ ಮಧ್ಯೆ ತಮ್ಮ ಬೆಂಬಲಿಗರಿಗೆ ಮಂತ್ರಿ ಸ್ಥಾನ ದೊರಕಿಸುವ ನಿಟ್ಟಿನಲ್ಲಿ ರಾಜ್ಯ ಹಾಗೂ ಕೆಲವು ಕೇಂದ್ರ ನಾಯಕರೂ ತೀವ್ರ ಒತ್ತಡಕ್ಕೆ ಸಿಲುಕಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: CM DK Shivakumar: 2028ಕ್ಕೆ ನಾನು ಮತ್ತೆ ಮುಖ್ಯಮಂತ್ರಿಯಾಗಲು ಶಕ್ತಿ ತುಂಬಿ: ಕ್ಷೇತ್ರದ ಜನರಿಗೆ ಸಿಎಂ ಡಿ.ಕೆ. ಶಿವಕುಮಾರ್ ಮನವಿ

ಈಗಾಗಲೇ ಸಂಪುಟದಲ್ಲಿರುವ ಪ್ರಬಲ ಸಮುದಾಯಗಳಿಗೆ ಅವಕಾಶ ಸಿಕ್ಕಿದ್ದು, ಬಹುತೇಕ ಹಿಂದು ಳಿದ ಜಾತಿ, ಧರ್ಮ ಹಾಗೂ ಜಿಲ್ಲೆಗಳಿಗೆ ಆದ್ಯತೆ ಸಿಕ್ಕಿಲ್ಲ, ಜತೆಗೆ ಸರಕಾರದ ಅವಧಿ ಕೂಡ ಕಡಿಮೆ ಇರುವ ಕಾರಣ ಆಕಾಂಕ್ಷಿಗಳಲ್ಲಿ ಒಳಗೊಳಗೇ ಅಸಮಾಧಾನ ಹೊಗೆಯಾಡುತ್ತಿದ್ದು,. ಇದನ್ನು ಅವರು ತಮ್ಮ ಸಮುದಾಯದ ಸಂಘಟನೆಗಳು ಮತ್ತು ಸ್ವಾಮೀಜಿಗಳ ಮೂಲಕ ವ್ಯಕ್ತವಾಗುವಂತೆ ಮಾಡುತ್ತಿದ್ದಾರೆ ಎನ್ನಲಾಗಿದೆ.

ಈ ಮಧ್ಯೆ ರಾಜ್ಯದಲ್ಲಿ ಎದುರಾಗಿರುವ ಮಳೆ ಕೊರತೆ, ಗ್ಯಾರಂಟಿ ಯೋಜನೆಗಳಿಗೆ ಕಡಿವಾಣ, ವರ್ಗಾವಣೆ ಹಾಗೂ ಬಿಡದಿ ಹೋರಾಟ ಸೇರಿದಂತೆ ಅನೇಕ ಸಮಸ್ಯೆಗಳಿಗೆ ಸಚಿವರ ಉಪಸ್ಥಿತಿ ಅನಿವಾರ್ಯತೆ ಎದ್ದು ಕಾಣುತ್ತಿದ್ದು, ಸಂಪುಟ ವಿಸ್ತರಣೆ ಒತ್ತಡ ದಿನದಿನಕ್ಕೂ ಹೆಚ್ಚಾಗಿದೆ ಎಂದು ಪಕ್ಷದ ಹಿರಿಯ ನಾಯಕರು ಹೇಳಿದ್ದಾರೆ.

444 ok

ಪರಿಶಿಷ್ಠ ಪಂಗಡದಲ್ಲಿ ಬೇಸರ

ಪರಿಶಿಷ್ಟ ಪಂಗಡದಲ್ಲಿ ಪಕ್ಷದ ಅಧ್ಯಕ್ಷ ಸ್ಥಾನ ಕೈ ತಪ್ಪಿರುವ ಕಾರಣ ಆ ಸಮುದಾಯದ ನಾಯಕರು ಬೇಸರದಲ್ಲಿದ್ದಾರೆ ಎಂದು ಹೇಳಲಾಗಿದೆ, ಅಲ್ಲದೆ ಈ ಹಿಂದೆ ರಾಜೀನಾಮೆ ಸಲ್ಲಿಸಿದ್ದ ಕೆ.ಎನ್. ರಾಜಣ್ಣ ಹಾಗೂ ನಾಗೇಂದ್ರ ಅವರ ಸ್ಥಾನಗಳು ಖಾಲಿ ಇರುವ ಕಾರಣ ಸಂಸದ ತುಕಾರಾಮ್ ಪತ್ನಿ ಅನ್ನಪೂರ್ಣ ಹಾಗೂ ಚಳ್ಳಕೆರೆಯ ರಘುಮೂರ್ತಿ ಅವರಿಗೆ ಅವಕಾಶ ನೀಡುವ ಸಾಧ್ಯತೆ ಇದೆ. ಇದೆಲ್ಲದರ ಜತೆಗೆ ಹಿಂದುಳಿದ ವರ್ಗದ ಪೈಕಿ ಯತೀಂದ್ರ ಸಿದ್ದರಾಮಯ್ಯ ಹಾಗೂ ಬೈರತಿ ಸುರೇಶ್ ಅವರು ಮಂತ್ರಿಯಾಗಿರುವ ಕಾರಣ ಇತರ ಆ ಸಮುದಾಯದವರ ಪೈಕಿ ಪುಟ್ಟರಂಗ ಶೆಟ್ಟಿ, ಮಧು ಬಂಗಾರಪ್ಪ, ಸಂತೋಷ್ ಲಾಡ್ (ಮರಾಠ), ಬಿ.ಜಿ. ಗೋವಿಂದಪ್ಪ ಮೊಗೇರ ಸಮುದಾಯದ ಮಂಕಾಳ ವೈದ್ಯ ಅವರಿಗೆ ಅವಕಾಶ ಲಭಿಸುವ ಸಂಭವ ಹೆಚ್ಚು ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ. ಸಂಪುಟದಲ್ಲಿ ಅಲ್ಪಸಂಖ್ಯಾತರ ಪೈಕಿ ಒಬ್ಬರಿಗೆ ಅವಕಾಶ ನೀಡುವ ಸಾಧ್ಯತೆ ಕಾಣುತ್ತಿದ್ದು, ಇದಕ್ಕಾಗಿ ತನ್ವೀರ್ ಸೇಠ್ ಹಾಗೂ ಎನ್.ಎ.ಹ್ಯಾರೀಸ್ ಅವರಲ್ಲಿ ಯಾರಿಗಾದರೂ ಅವಕಾಶ ನೀಡಬಹುದು ಎನ್ನಲಾಗುತ್ತಿದೆ.

ಸಂಪುಟದಲ್ಲಿ ಯಾರಿಗೆಲ್ಲಾ ಅದ್ಯತೆ ಏಕೆ ?

ಪಕ್ಷದ ಮೂಲಗಳ ಪ್ರಕಾರ, ಈಗಾಗಲೇ ಮಂತ್ರಿಯಾಗಿರುವವರಿಗೆ ವಿಸ್ತರಣೆ ವೇಳೆ ಅವಕಾಶ ನೀಡುವ ಸಾಧ್ಯತೆ ಇದೆ. ಆದರೆ ಜಾತಿ, ಧರ್ಮದ ಪ್ರಾತಿನಿಧ್ಯದಲ್ಲಿ ಅವರಿಗೆ ಮತ್ತೆ ಅವಕಾಶ ಸಿಗಬಹುದು ಎನ್ನಲಾಗಿದೆ. ಜಾತಿ ಲೆಕ್ಕದಲ್ಲಿ ಹೇಳುವುದಾದರೆ ವಿಸ್ತರಣೆ ವೇಳೆ, ಲಿಂಗಾಯತರಿಗೆ ಹೆಚ್ಚಿನ ಅವಕಾಶ ನೀಡಿ ಮುಂದಿನ ಚುನಾವಣೆಯಲ್ಲಿ ಲಿಂಗಾಯತರನ್ನು ಸೆಳೆಯುವ ಪ್ರಯತ್ನ ಮಾಡುವ ಸಾಧ್ಯತೆ ಇದೆ. ಸಂಪುಟದಲ್ಲಿ ಈಗಾಗಲೇ ಎಂ.ಬಿ.ಪಾಟೀಲ್, ಶರಣಪ್ರಕಾಶ್ ಪಾಟೀಲ್ ಹಾಗೂ ಈಶ್ವರ್ ಖಂಡ್ರೆ ಇದ್ದಾರೆ. ಈಗ ಪ್ರದೇಶ ಹಾಗೂ ಉಪ ಪಂಗಡಗಳ ಲೆಕ್ಕದಲ್ಲಿ ಇನ್ನೂ ಮೂರರಿಂದ ನಾಲ್ಕು ಮಂದಿಗೆ ಅವಕಾಶ ಸಿಗುವ ಸಾಧ್ಯತೆ ಇದೆ. ಹೀಗಾಗಿ ಶಾಸಕರಾದ ಅಶೋಕ್ ಪಟ್ಟಣ್, ಎಸ್.ಎಸ್. ಮಲ್ಲಿಕಾರ್ಜುನ್, ಷಡಕ್ಷರಿ ಕೆ., ವಿಜಯನಂದ ಕಾಶಪ್ಪನವರ್, ಅಪ್ಪಾಜಿ ನಾಡಗೌಡ ಹಾಗೂ ಜಿ.ಎಸ್.ಪಾಟೀಲ್ ಅವರಲ್ಲಿ ನಾಲ್ವರಿಗೆ ಅವಕಾಶ ಲಭಿಸಬಹುದೆನ್ನಲಾಗಿದೆ.

ಇನ್ನು ಒಕ್ಕಲಿಗರ ಪ್ರಾತಿನಿಧ್ಯ ವಿಚಾರಕ್ಕೆ ಬಂದರೆ ಮುಖ್ಯಮಂತ್ರಿ ಅದೇ ಸಮುದಾಯದರಿದ್ದಾರೆ. ಕೃಷ್ಣಬೈರೇಗೌಡ ಹಾಗೂ ರಾಮಲಿಂಗಾ ರೆಡ್ಡಿ ಅವರು ಈಗಾಗಲೇ ಸಂಪುಟ ಸೇರಿರುವ ಕಾರಣ ಇನ್ನು ಇಬ್ಬರಿಗೆ ಅವಕಾಶ ಸಿಗುವ ಸಾಧ್ಯತೆ ಇದೆ. ಅದರಂತೆ ಶಾಸಕರಾದ ಎಚ್.ಸಿ.ಬಾಲಕೃಷ್ಣ, ಶಿವಲಿಂಗೇ ಗೌಡ ಹಾಗೂ ಶರತ್ ಬಚ್ಚೇಗೌಡ ಅವರಲ್ಲಿ ಯಾರಿಗೆ ಲಾಟರಿ ಹೊಡೆಯುವುದು ಎಂದು ಹೇಳಲಾಗದು.

ಪರಿಶಿಷ್ಟ ಜಾತಿ ಪ್ರಾತಿನಿಧ್ಯ ನೋಡುವುದಾದರೇ, ಪರಿಶಿಷ್ಟಜಾತಿ ಬಲಗೈ ಸಮುದಾಯದಿಂದ ಡಾ.ಜಿ. ಪರಮೇಶ್ವರ್ ಮತ್ತು ಪ್ರಿಯಾಂಕ ಖರ್ಗೆ ಈಗಾಗಲೇ ಸಂಪುಟದಲ್ಲಿದ್ದಾರೆ. ಈ ಸಮುದಾಯದಲ್ಲಿ ಇನ್ನೂ ಒಬ್ಬರಿಗೆ ಅಥವಾ ಇಬ್ಬರಿಗೆ ಅವಕಾಶ ಸಿಗಬಹುದು ಎನ್ನಲಾಗಿದೆ. ಉಳಿದಂತೆ ಪರಿಶಿಷ್ಟರಲ್ಲೇ ಎಗಡೈ ಸಮಾಜದ ಕೆ.ಎಚ್. ಮುನಿಯಪ್ಪ ಒಬ್ಬರೇ ಮಂತ್ರಿಯಾಗಿರುವ ಕಾರಣ ಇಲ್ಲಿಯೂ ಮತ್ತೆ ಒಂದು ಅಥವಾ ಎರಡು ಮಂದಿಗೆ ಅವಕಾಶ ಸಿಗಬಹುದು ಎನ್ನಲಾಗಿದೆ.

ಹಾಗೆಯೇ ಪರಿಶಿಷ್ಟರಲ್ಲಿ ಬೋವಿ ಸಮುದಾಯದಲ್ಲಿ ಶಿವರಾಜ್ ತಂಗಡಗಿ ಹಾಗೂ ಲಂಬಾಣಿ ಜನಾಂಗದ ರುದ್ರಪ್ಪ ಲಮಾಣಿ ಅವರು ಒಬ್ಬರೇ ಶಾಸಕ ಇರುವ ಕಾರಣ ಈ ಇಬ್ಬರಿಗೂ ಅವಕಾಶ ಸಿಗುವ ಸಾಧ್ಯತೆ ಹೆಚ್ಚಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.