ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Zameer Ahmed Khan: ಕಾಂಗ್ರೆಸ್‌ನಲ್ಲಿ ಬದಲಾದ ಅಲ್ಪಸಂಖ್ಯಾತ ಆದ್ಯತೆ

ದಾವಣಗೆರೆ ಚುನಾವಣೆಗೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ಆಡಿಯೋ ಬಿಡುಗಡೆಯಾಗಿದ್ದು ಮತ್ತು ಅದಕ್ಕೆ ಸಂಬಂಧಿಸಿದ ಚರ್ಚೆಗಳ ಹಿನ್ನೆಲೆಯಲ್ಲಿ ಜಮೀರ್ ಹಾದಿ ದುರ್ಗಮ ಎನ್ನುವಂತಾ ಗಿದೆ. ಈ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇತ್ತೀಚೆಗೆ ಜಮೀರ್ ಅಹಮ್ಮದ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದು, ಪಕ್ಷದ ಹೈಕಮಾಂಡ್ ಕೂಡ ಜಮೀರ್ ವಿರುದ್ಧ ಆಕ್ರೋಶ ಗೊಂಡಿದೆ ಎನ್ನಲಾಗಿದೆ.

Zameer Ahmed Khan: ಕಾಂಗ್ರೆಸ್‌ನಲ್ಲಿ ಬದಲಾದ ಅಲ್ಪಸಂಖ್ಯಾತ ಆದ್ಯತೆ

-

Profile
Ashok Nayak Jun 15, 2026 7:00 AM

ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು

ಸಚಿವ ಸಂಪುಟ ಸೇರ್ಪಡೆ: ಜಮೀರ್‌ಗೆ ಕಷ್ಟ, ಹ್ಯಾರೀಸ್ ಇಷ್ಟ, ತನ್ವೀರ್ ಸೇಠ್ ಬಲಿಷ್ಠ

ದಾವಣಗೆರೆ ಉಪಚುನಾವಣೆ ಮುಗಿದು ಅದರ ಫಲಿತಾಂಶದ ಬಗ್ಗೆ ಜನತೆ ಮಾತನಾಡಿ, ಮರತೇ ಹೋಗಿದ್ದಾರೆ. ಆದರೂ ಅದರ ಎಫೆಕ್ಟ್ ಮಾತ್ರ ರಾಜಕಾರಣದಲ್ಲಿ ನಿಲ್ಲುತ್ತಲೇ ಇಲ್ಲ. ಅಷ್ಟೇ ಅಲ್ಲ, ರಾಜ್ಯದಲ್ಲಿ ಆಗಿರುವ ಅನೇಕ ರಾಜಕೀಯ ಬದಲಾವಣೆಗಳಿಗೆ ಈ ಉಪಚುನಾವಣೆಯ ಫಲಿತಾಂಶ ವೇ ಕಾರಣ ಎನ್ನುವಂತೆ ಕೂಡ ಚರ್ಚೆ ನಡೆಯಲಾಗುತ್ತಿದೆ. ಜತೆಗೆ ಇದರ ಪರಿಣಾಮದಿಂದಲೇ ಅಲ್ಪಸಂಖ್ಯಾತರಿಗೆ ಸಿಗಬೇಕಾದ ರಾಜಕೀಯ ಪ್ರಾತಿನಿಧ್ಯದಲ್ಲಿಯೂ ಏರುಪೇರಾಗುವ ಎಲ್ಲ ಸಾಧ್ಯತೆ ಕಾಣುತ್ತಿದೆ.

ಇದರ ಮೊದಲ ಭಾಗವಾಗಿ ಮಾಜಿ ಸಚಿವ ಜಮೀರ್ ಅಹಮ್ಮದ್ ಖಾನ್ ಅವರಿಗೆ ಬದಲಾದ ಸರಕಾರದ ನಾಯಕತ್ವದಲ್ಲಿ ಸಚಿವ ಸ್ಥಾನ ಕೈತಪ್ಪಿದೆ ಎನ್ನಲಾಗಿದೆ. ಮುಂದುವರಿದು ಮುಂಬರುವ ಸಚಿವ ಸಂಪುಟ ವಿಸ್ತರಣೆಯಲ್ಲಿಯೂ ಅವರಿಗೆ ಅವಕಾಶ ಸಿಗುವುದು ಕಷ್ಟ ಸಾಧ್ಯ ಎನ್ನಲಾಗುತ್ತಿದೆ.

ದಾವಣಗೆರೆ ಚುನಾವಣೆಗೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ಆಡಿಯೋ ಬಿಡುಗಡೆಯಾಗಿದ್ದು ಮತ್ತು ಅದಕ್ಕೆ ಸಂಬಂಧಿಸಿದ ಚರ್ಚೆಗಳ ಹಿನ್ನೆಲೆಯಲ್ಲಿ ಜಮೀರ್ ಹಾದಿ ದುರ್ಗಮ ಎನ್ನುವಂತಾ ಗಿದೆ. ಈ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇತ್ತೀಚೆಗೆ ಜಮೀರ್ ಅಹಮ್ಮದ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದು, ಪಕ್ಷದ ಹೈಕಮಾಂಡ್ ಕೂಡ ಜಮೀರ್ ವಿರುದ್ಧ ಆಕ್ರೋಶಗೊಂಡಿದೆ ಎನ್ನಲಾಗಿದೆ.

ಇದನ್ನೂ ಓದಿ: Zameer Ahmed Khan: ಜಮೀರ್ ಅಹಮದ್ ಖಾನ್ʼಗೆ ಡಿಸಿಎಂ ನೀಡದಿದ್ದರೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ನಷ್ಟ

ಪರಿಣಾಮವಾಗಿ ಮುಂದೆ ನಡೆಯುವ ಸಚಿವ ಸಂಪುಟ ವಿಸ್ತರಣೆಯಲ್ಲಿ ಜಮೀರ್ ಬದಲಾಗಿ ಮೈಸೂರು ನರಸಿಂಹರಾಜ ಕ್ಷೇತ್ರದ ಶಾಸಕ, ಮಾಜಿ ಸಚಿವ ತನ್ವೀರ್ ಸೇಠ್ ಅವರಿಗೆ ಅವಕಾಶ ಸಿಗುವ ಸಾಧ್ಯತೆ ಹೆಚ್ಚು. ಇದಲ್ಲದೆ ಬಿಡಿಎ ಅಧ್ಯಕ್ಷರೂ ಆಗಿರುವ ಶಾಂತಿನಗರ ಕ್ಷೇತ್ರದ ಶಾಸಕ ಎನ್.ಎ.ಹ್ಯಾರೀಸ್ ಅಥವಾ ಶಿವಾಜಿನಗರ ಶಾಸಕ ರಿಜ್ವಾನ್ ಅರ್ಷದ್ ಅವರನ್ನು ಮಂತ್ರಿ ಮಾಡುವ ಸಾಧ್ಯತೆ ಇದೆ ಎಂದೂ ಹೇಳಲಾಗಿದೆ. ಇದರೊಂದಿಗೆ ಹಿಂದೆ ಇದ್ದಂತೆಯೇ ಮೂವರು ಅಲ್ಪ ಸಂಖ್ಯಾತ ಶಾಸಕರಿಗೆ ಮಂತ್ರಿ ಸ್ಥಾನ ನೀಡದಂತಾಗುತ್ತದೆ (ಕರಾವಳಿ ಭಾಗದ ಶಾಸಕ ಯು.ಟಿ. ಖಾದರ್‌ಗೆ ಮಂತ್ರಿ ಸ್ಥಾನ ನೀಡಿರುವುದು).

ಹಳೇ ಮೈಸೂರು ಭಾಗ ಮತ್ತು ಬೆಂಗಳೂರು ಮಹಾನಗರ ವ್ಯಾಪ್ತಿಗೆ ಸಂಬಂಧಿಸಿದಂತೆ ಸೂಕ್ತ ಪ್ರಾತಿನಿಧ್ಯ ನೀಡಿದಂತಾಗಲಿದೆ ಎಂದು ಕಾಂಗ್ರೆಸ್‌ನ ಹಿರಿಯ ಮುಖಂಡರು ತಿಳಿಸಿದ್ದಾರೆ. ಈ ವಾಸ್ತವ ಮನವರಿಕೆ ಆಗುತ್ತಿದ್ದಂತೆ ಜಮೀರ್ ಇತ್ತೀಚೆಗೆ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷರನ್ನು ನಿರಂತರವಾಗಿ ಭೇಟಿಯಾಗಿ ಮಂತ್ರಿ ಸ್ಥಾನಕ್ಕಾಗಿ ಒತ್ತಡ ಹೇರುತ್ತಿದ್ದಾರೆ ಎನ್ನಲಾಗಿದೆ.

ಸಿದ್ದು ಸಿಟ್ಟಾಗಿದ್ದೇಕೆ?

ದಾವಣಗೆರೆ ಚುನಾವಣೆ ಸಂದರ್ಭದಲ್ಲಿ ಜಮೀರ್ ಪ್ರಚಾರಕ್ಕೆ ಹೋಗದಿರುವುದು, ಕೇರಳದಲ್ಲಿ ನಡೆಸುತ್ತಿದ್ದ ಚಟುವಟಿಕೆಗಳ ಬಗ್ಗೆ ಪಕ್ಷದ ವರಿಷ್ಠರು ಮಾಹಿತಿ ಪಡೆದು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರವಾನಿಸಿದ್ದರು. ಜಮೀರ್ ಅವರಿಗೆ ಎಚ್ಚರಿಕೆ ನೀಡುವಂತೆಯೂ ಸೂಚಿಸಿದ್ದರು. ಇದನ್ನಾಧರಿಸಿ ಸಿದ್ದರಾಮಯ್ಯ ಅವರು ಜಮೀರ್ ಅವರನ್ನು ಕರೆಸಿ ಪಕ್ಷದ ಗೆಲುವಿಗೆ ಶ್ರಮಿಸಬೇಕು. ಅನ್ಯ ಚಟುವಟಿಕೆಗಳು ಬೇಡ ಎಂದು ಎಚ್ಚರಿಸಿದ್ದರು ಎನ್ನಲಾಗಿದೆ. ಆದರೆ ಅನೇಕ ವಿಚಾರಗಳಲ್ಲೂ ಸಿದ್ದರಾಮಯ್ಯ ಅವರ ಮಾತುಗಳನ್ನು ಜಮೀರ್ ಧಿಕ್ಕರಿಸಿದ್ದರು ಎನ್ನಲಾಗಿದೆ. ಇದರಿಂದಾಗಿ ಪಕ್ಷವಿರೋಧಿ ಚಟುವಟಿಕೆಗೆ ರಾಜ್ಯದ ನಾಯಕರ ಬೆಂಬಲವೂ ಇದೆ ಎನ್ನುವ ತಪ್ಪು ಸಂದೇಶ ರವಾನೆಯಾಗಿತ್ತು. ಇದರಿಂದ ಕೆಂಡಮಂಡಲವಾಗಿದ್ದ ಸಿದ್ದರಾಮಯ್ಯ ಅವರು ಜಮೀರ್ ವಿರುದ್ಧ ಕಿಡಿಕಾರಿದ್ದರು. ಇದನ್ನು ಗಮನಿಸಿದ್ದ ಪಕ್ಷದ ಹೈಕಮಾಂಡ್, ಜಮೀರ್‌ಗೆ ಸಂಪುಟದಿಂದ ಕೊಕ್ ನೀಡಿತ್ತು. ಇದನ್ನು ವಿಚಾರಿಸಲು ಸಿದ್ದರಾಮಯ್ಯ ಬಳಿ ಹೋಗಿದ್ದ ಜಮೀರ್‌ಗೆ ಸೊಪ್ಪು ಹಾಕದೆ ಅಲಕ್ಷ್ಯ ಮಾಡಿದ್ದಾರೆ ಎನ್ನಲಾಗಿದೆ.

ದಾವಣಗೆರೆ ಚುನಾವಣೆ ಎಫೆಕ್ಟ್ ಇನ್ನೂ ಇದೆಯೇ?

ದಾವಣಗೆರೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ನ ಸಮರ್ಥ್ ಶಾಮನೂರು ಕೇವಲ 5708 ಮತಗಳ ಲೀಡ್‌ನಲ್ಲಿ ಗೆದ್ದಿದ್ದು, ಕಳೆದ ಮೂರು ವರ್ಷಗಳ ಹಿಂದಿನ ಚುನಾವಣೆಗೆ ಹೋಲಿಸಿದರೆ ಕಾಂಗ್ರೆಸ್ 25,000 ಮತಗಳನ್ನು ಕಳೆದುಕೊಂಡಿದೆ. ಜತೆಗೆ 22,000 ಮತಗಳ ಲೀಡ್ ಅನ್ನು ಕಳೆದುಕೊಂಡಿದೆ. ಇದಕ್ಕೆ ಕಾರಣ ಜಮೀರ್ ಎನ್ನುವ ರೀತಿಯಲ್ಲಿ ಕಾಂಗ್ರೆಸ್‌ನ ಅನೇಕ ಮುಖಂಡರು ಮಾತನಾಡಿ ದ್ದರು. ನೂತನ ಕಾಂಗ್ರೆಸ್‌ನ ಶಾಸಕ ಸಮರ್ಥ್ ಕೂಡ ಆಡಿಯೋದಲ್ಲಿ ಸತ್ಯಾಂಶವಿದೆ ಎಂದು ಬಹರಂಗವಾಗಿಯೇ ಹೇಳಿದ್ದಾರೆ. ಇದನ್ನು ಪಕ್ಷದ ಹೈಕಮಾಂಡ್ ಕೂಡ ಗಂಭೀರವಾಗಿ ಪರಿಗಣಿಸಿದೆ. ಅದರಲ್ಲೂ ಮುಖ್ಯವಾಗಿ ಚುನಾವಣೆಯಲ್ಲಿ ಜಮೀರ್ ಕಾಂಗ್ರೆಸ್ ಮತಗಳು ದಿಕ್ಕು ತಪ್ಪುವಂತೆ ಮಾಡಿ, ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದರು ಎಂಬ ದೂರು ಹಾಗೂ ಅದಕ್ಕೆ ಸಂಬಂಧಿಸಿದ ಆಡಿಯೋಗಳು ಬಹಿರಂಗವಾಗಿದ್ದರಿಂದ ಪಕ್ಷದ ನಾಯಕರು ಜಮೀರ್ ವಿರುದ್ಧ ಕಿಡಿ ಕಾರು ವಂತಾಗಿದೆ. ಇದನ್ನು ಪಕ್ಷದ ನಾಯಕರು ಜಮೀರ್ ಅವರನ್ನು ಪ್ರಶ್ನಿಸಿದ್ದು, ಈ ಸಂದರ್ಭದಲ್ಲಿ ಅವರು ನೀಡಿದ್ದ ಮಾಹಿತಿಗಳನ್ನಾಧರಿಸಿ ಪಕ್ಷದ ವರಿಷ್ಠರು ಅನೇಕ ಕಠಿಣ ಕ್ರಮಗಳಿಗೆ ಮುಂದಾಗಿ ದ್ದಾರೆ.