ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಇಂದಿನಿಂದ ಹಾಕಿ ವಿಶ್ವಕಪ್‌ ಸಮರ; ಭಾರತಕ್ಕೆ ವೇಲ್ಸ್‌ ಸವಾಲು

16 ತಂಡಗಳನ್ನು ತಲಾ 4 ತಂಡಗಳ 4 ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. ಗುಂಪಿನಲ್ಲಿ ಪ್ರತಿ ತಂಡಗಳು ಒಮ್ಮೆ ಮುಖಾಮುಖಿಯಾಗಲಿವೆ. ಅಂದರೆ ಪ್ರತಿ ತಂಡಕ್ಕೆ ತಲಾ 3 ಪಂದ್ಯಗಳು. ಗುಂಪು ಹಂತದ ಮುಕ್ತಾಯಕ್ಕೆ ಅಗ್ರ-2 ಸ್ಥಾನ ಪಡೆಯುವ ತಂಡಗಳು ಕ್ವಾರ್ಟರ್‌ ಫೈನಲ್‌(ಒಟ್ಟು 8 ತಂಡ) ಪ್ರವೇಶಿಸಲಿವೆ. ಅಲ್ಲಿ ಗೆದ್ದರೆ ಸೆಮಿಫೈನಲ್‌ ಪ್ರವೇಶಿಸಲಿದ್ದು, ಬಳಿಕ ಫೈನಲ್‌ ಪಂದ್ಯ ನಡೆಯಲಿದೆ.

ಇಂದಿನಿಂದ ಹಾಕಿ ವಿಶ್ವಕಪ್‌ ಸಮರ; ಭಾರತಕ್ಕೆ ವೇಲ್ಸ್‌ ಸವಾಲು

Harmanpreet Singh -

Abhilash BC
Abhilash BC Aug 15, 2026 8:47 AM

ಆಮ್ಸ್‌ಟೆಲ್ವೀನ್‌(ನೆದರ್‌ಲೆಂಡ್ಸ್‌), ಆ.15: 16ನೇ ಆವೃತ್ತಿಯ ಪುರುಷ ಹಾಗೂ ಮಹಿಳಾ ಹಾಕಿ ವಿಶ್ವಕಪ್‌ ಟೂರ್ನಿಗೆ ಇಂದು(ಆ.15) ಚಾಲನೆ ಸಿಗಲಿದೆ. ಮೊದಲನೇ ದಿನವೇ ಭಾರತ ಕಣಕ್ಕಿಳಿಯಲಿದ್ದು, ವೇಲ್ಸ್ ವಿರುದ್ಧ ಸೆಣಸಾಡಲಿದೆ. ಇದು ಕೂಟದ ಉದ್ಘಾಟನಾ ಪಂದ್ಯವೂ ಹೌದು. 4 ವರ್ಷಗಳಿಗೊಮ್ಮೆ ನಡೆಯುವ ಹಾಕಿ ವಿಶ್ವಕಪ್‌ಗೆ ಈ ಬಾರಿ ನೆದರ್‌ಲೆಂಡ್ಸ್‌ ಹಾಗೂ ಬೆಲ್ಜಿಯಂ ಜಂಟಿ ಆತಿಥ್ಯ ವಹಿಸಿದೆ.

ಕಳೆದೆರಡು ಬಾರಿ ತವರಿನಲ್ಲಿ ವಿಶ್ವಕಪ್‌ ನಡೆದಾಗಲೂ ಭಾರತ ಪುರುಷರ ತಂಡ ನಿರೀಕ್ಷಿತ ಪ್ರದರ್ಶನ ನೀಡಿರಲಿಲ್ಲ. ಹೀಗಾಗಿಯೇ ಈ ಬಾರಿಯೂ ತಂಡಕ್ಕೆ ಕಠಿಣ ಸವಾಲು ಎದುರಾಗುವುದು ಖಚಿತ.

ಟೂರ್ನಿ ಮಾದರಿ ಹೇಗೆ?

16 ತಂಡಗಳನ್ನು ತಲಾ 4 ತಂಡಗಳ 4 ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. ಗುಂಪಿನಲ್ಲಿ ಪ್ರತಿ ತಂಡಗಳು ಒಮ್ಮೆ ಮುಖಾಮುಖಿಯಾಗಲಿವೆ. ಅಂದರೆ ಪ್ರತಿ ತಂಡಕ್ಕೆ ತಲಾ 3 ಪಂದ್ಯಗಳು. ಗುಂಪು ಹಂತದ ಮುಕ್ತಾಯಕ್ಕೆ ಅಗ್ರ-2 ಸ್ಥಾನ ಪಡೆಯುವ ತಂಡಗಳು ಕ್ವಾರ್ಟರ್‌ ಫೈನಲ್‌(ಒಟ್ಟು 8 ತಂಡ) ಪ್ರವೇಶಿಸಲಿವೆ. ಅಲ್ಲಿ ಗೆದ್ದರೆ ಸೆಮಿಫೈನಲ್‌ ಪ್ರವೇಶಿಸಲಿದ್ದು, ಬಳಿಕ ಫೈನಲ್‌ ಪಂದ್ಯ ನಡೆಯಲಿದೆ.

ಇಂದಿನಿಂದ ಲಂಕಾ ವಿರುದ್ಧ ಮೊದಲ ಟೆಸ್ಟ್‌; ಭಾರತದ ದಾಖಲೆ ಹೇಗಿದೆ?

ಪಾಕ್‌ಗೆ ಗರಿಷ್ಠ

1971ರಿಂದ 2023ರ ವರೆಗೆ ನಡೆದ ಒಟ್ಟು 15 ಆವೃತ್ತಿಗಳ ಪುರುಷರ ವಿಶ್ವಕಪ್‌ಗಳಲ್ಲಿ ಪಾಕಿಸ್ತಾನ ಗರಿಷ್ಠ ಬಾರಿ ಚಾಂಪಿಯನ್‌ ಆಗಿದೆ. ತಂಡ 1971, 1978, 1982 ಹಾಗೂ 1994ರಲ್ಲಿ ಚಾಂಪಿಯನ್‌ ಆಗಿದೆ. ನೆದರ್‌ಲೆಂಡ್ಸ್‌, ಆಸ್ಟ್ರೇಲಿಯಾ, ಜರ್ಮನಿ ತಲಾ 3 ಬಾರಿ ಟ್ರೋಫಿ ಗೆದ್ದಿದ್ದು, ಭಾರತ ಹಾಗೂ ಬೆಲ್ಜಿಯಂ ತಲಾ ಒಮ್ಮೆ ಚಾಂಪಿಯನ್‌ ಆಗಿವೆ. ಇನ್ನು, ಮಹಿಳಾ ವಿಭಾಗದಲ್ಲಿ ನೆದರ್‌ಲೆಂಡ್ಸ್‌ 9 ಬಾರಿ ಕಪ್‌ ಗೆದ್ದಿದೆ. ಅರ್ಜೆಂಟೀನಾ, ಆಸ್ಟ್ರೇಲಿಯಾ, ಜರ್ಮನಿ ತಲಾ 2 ಬಾರಿ ಚಾಂಪಿಯನ್‌ ಆಗಿವೆ.

ಭಾರತ ಪುರುಷರ ವೇಳಾಪಟ್ಟಿ

ವೇಲ್ಸ್‌ ಆ.15 ಸಂಜೆ 4.30

ಇಂಗ್ಲೆಂಡ್‌ ಆ.17 ಸಂಜೆ 6.30

ಪಾಕಿಸ್ತಾನ ಆ.19 ಸಂಜೆ 6.30

ಭಾರತ ಮಹಿಳೆಯರ ವೇಳಾಪಟ್ಟಿ

ಎದುರಾಳಿ ದಿನಾಂಕ ಸಮಯ

ಚೀನಾ ಆ.16 ಸಂಜೆ 4.30

ದ.ಆಫ್ರಿಕಾ ಆ.18 ಸಂಜೆ 6.30

ಇಂಗ್ಲೆಂಡ್‌ ಆ.20 ಸಂಜೆ 6.30

ಪ್ರಸಾರ

ವಿಶ್ವಕಪ್‌ ಪಂದ್ಯಗಳು ಭಾರತದಲ್ಲಿ ಸ್ಟಾರ್‌ಸ್ಪೋರ್ಟ್ಸ್‌ ಹಾಗೂ ಜಿಯೋ ಹಾಟ್‌ಸ್ಟಾರ್‌ನಲ್ಲಿ ಪ್ರಸಾರವಾಗುತ್ತದೆ.