ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Karnataka cabinet: ಸಂಕ್ರಾಂತಿ ನಂತರ ಸಂಪುಟ ಸರ್ಜರಿಗೆ ಸಿಎಂ ಸಿದ್ಧತೆ

ನಾಯಕತ್ವ ಬದಲಾವಣೆ ಆಗುವುದೋ, ಇಲ್ಲವೋ ನಮಗೆ ಮಾತ್ರ ಸಂಪುಟದಲ್ಲಿ ಅವಕಾಶ ಕೊಡಿಸ ಬೇಕು, ಈ ನಿಟ್ಟಿನಲ್ಲಿ ಕೂಡಲೇ ಪಕ್ಷದ ವರಿಷ್ಠರ ಒಪ್ಪಿಗೆ ಪಡೆಯಿರಿ ಎಂದು ಸಿಎಂ ಸಿದ್ದರಾಮಯ್ಯ ಮೇಲೆ ಸಚಿವ ಆಕಾಂಕ್ಷಿಗಳು ತೀವ್ರ ಒತ್ತಡ ಹೇರಿದ್ದಾರೆ. ಇದರಿಂದ ಅನಿವಾರ್ಯ ಸ್ಥಿತಿಗೆ ಸಿಲುಕಿರುವ ಸಿಎಂ ಸಿದ್ದರಾಮಯ್ಯ ಈಗಾಗಲೇ ಪಕ್ಷದ ವರಿಷ್ಠರ ಭೇಟಿಗೆ ಸಮಯ ಕೇಳಿದ್ದಾರೆ.

ಸಂಕ್ರಾಂತಿ ನಂತರ ಸಂಪುಟ ಸರ್ಜರಿಗೆ ಸಿಎಂ ಸಿದ್ಧತೆ

-

Ashok Nayak
Ashok Nayak Jan 12, 2026 7:25 AM

ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು

ಸಿಎಂ ಮೇಲೆ ಹೆಚ್ಚಿದ ಸಚಿವ ಸಂಪುಟ ಪುನಾರಚನೆ ಒತ್ತಡ

ಅವಕಾಶ ಕೈತಪ್ಪುವ ಆತಂಕದಲ್ಲಿ ಆಕಾಂಕ್ಷಿಗಳು

ರಾಜ್ಯ ಸಚಿವ ಸಂಪುಟ ಪುನಾರಚನೆಗೆ ಸಕಲ ಸಿದ್ಧತೆ ನಡೆಯುತ್ತಿದ್ದು, ಸುಗ್ಗಿಯ ಹಬ್ಬ ಸಂಕ್ರಾಂತಿಯ ನಂತರ ಪುನಾರಚನೆ ಚಟುವಟಿಕೆಗಳು ತೀವ್ರಗೊಳ್ಳುವ ಸಾಧ್ಯತೆ ದಟ್ಟವಾಗಿದೆ.

ಪಕ್ಷದ ಹೈಕಮಾಂಡ್ ಒಪ್ಪಿಗೆ ಸೂಚಿಸಿದರೆ ಸಂಕ್ರಾಂತಿ ಮುಗಿದ ವಾರದೊಳಗೆ 10 ರಿಂದ 12 ಮಂದಿ ಶಾಸಕರು ಸಂಪುಟಕ್ಕೆ ಸೇರುವ ಸಾಧ್ಯತೆ ಹೆಚ್ಚಾಗಿದೆ. ಹೀಗಾಗಿ ಈಗಿನಿಂದಲೇ ಆಕಾಂಕ್ಷಿಗಳ ಲಾಬಿಯ ಕಣ ರಂಗೇರಲಿದೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ. ಹಾಲಿ ಸಚಿವರು ಎರಡೂ ವರೆ ವರ್ಷ ಪೂರೈಸಿ ಸಾಕಷ್ಟು ಸಮಯ ಆಗಿರುವ ಕಾರಣ ಸಂಪುಟ ಸೇರಬಯಸುವ ಸುಮಾರು 100ಕ್ಕೂ ಹೆಚ್ಚು ಆಕಾಂಕ್ಷಿಗಳು, ಅದರೊಳಗೆ 25ಕ್ಕೂ ಅಧಿಕ ಪ್ರಬಲ ಆಕಾಂಕ್ಷಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯರ ಮೇಲೆ ಇನ್ನಿಲ್ಲದ ಒತ್ತಡ ಹೇರಿದ್ದಾರೆ.

ನಾಯಕತ್ವ ಬದಲಾವಣೆ ಆಗುವುದೋ, ಇಲ್ಲವೋ ನಮಗೆ ಮಾತ್ರ ಸಂಪುಟದಲ್ಲಿ ಅವಕಾಶ ಕೊಡಿಸ ಬೇಕು, ಈ ನಿಟ್ಟಿನಲ್ಲಿ ಕೂಡಲೇ ಪಕ್ಷದ ವರಿಷ್ಠರ ಒಪ್ಪಿಗೆ ಪಡೆಯಿರಿ ಎಂದು ಸಿಎಂ ಸಿದ್ದರಾಮಯ್ಯ ಮೇಲೆ ಸಚಿವ ಆಕಾಂಕ್ಷಿಗಳು ತೀವ್ರ ಒತ್ತಡ ಹೇರಿದ್ದಾರೆ. ಇದರಿಂದ ಅನಿವಾರ್ಯ ಸ್ಥಿತಿಗೆ ಸಿಲುಕಿರುವ ಸಿಎಂ ಸಿದ್ದರಾಮಯ್ಯ ಈಗಾಗಲೇ ಪಕ್ಷದ ವರಿಷ್ಠರ ಭೇಟಿಗೆ ಸಮಯ ಕೇಳಿದ್ದಾರೆ.

ಇದನ್ನೂ ಓದಿ: Cabinet Meeting: ರಾಜ್ಯದ ಆಸ್ತಿ ಮಾಲೀಕರಿಗೆ ಗುಡ್‌ ನ್ಯೂಸ್‌; ಬಿ-ಖಾತಾಗಳಿಗೆ ಎ-ಖಾತಾ ನೀಡಲು ಸಚಿವ ಸಂಪುಟ ಒಪ್ಪಿಗೆ

ಇದಕ್ಕೆ ಸ್ಪಂದನೆ ಸಿಗದ ಕಾರಣ ಈಗ ಮತ್ತೆ ಹೈಕಮಾಂಡ್ ಕದವನ್ನು ಕೊಂಚ ಜೋರಾಗಿಯೇ ತಟ್ಟಿದ್ದಾರೆ ಎಂದು ತಿಳಿದುಬಂದಿದೆ. ಇದು ಫಲ ನೀಡಿದ್ದೇ ಆದರೆ, ಸಂಕಾಂತ್ರಿ ಬಳಿಕ ಸಿದ್ದರಾಮಯ್ಯ ಅವರು ದೆಹಲಿ ಪ್ರವಾಸ ಕೈಗೊಂಡು ಸಂಪುಟ ಪುನಾರಚನೆ ಕುರಿತು ಚರ್ಚಿಸಲಿದ್ದಾರೆ. ಈ ಸಂದರ್ಭದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೂಡ ಹಾಜರಿರುತ್ತಾರೆ ಎನ್ನಲಾಗಿದೆ.

ಇವರ ಪ್ರಸ್ತಾಪದ ನಂತರ ಪಕ್ಷದ ವರಿಷ್ಠರು ಸಂಪುಟ ಪುನಾರಚನೆಗೆ ಒಪ್ಪಿಕೊಂಡರೆ 10 ರಿಂದ 15 ಮಂದಿ ಸಚಿವರಿಗೆ ಕೊಕ್ ನೀಡಿ, ಆ ಸ್ಥಾನಗಳಿಗೆ ಜಾತಿ ಜನಾಂಗದ ಹಾಗೂ ಪ್ರಾದೇಶಿಕವಾರು ಮತ್ತು ಯುವನಾಯಕರನ್ನು ಸಚಿವ ಸಂಪುಟಕ್ಕೆ ಸೇರಿಸುವ ಸಾಧ್ಯತೆ ಇದೆ. ಮತ್ತೊಂದು ಮೂಲಗಳು ಪ್ರಕಾರ, ಈ ಬಾರಿ ಸರ್ಜರಿಯ ಬಳಿಕ ಮುಂದಿನ 6 ತಿಂಗಳಲ್ಲಿ ಮತ್ತೊಂದು ಸುತ್ತಿನ ಸರ್ಜರಿ ಯಾಗುವ ಬಗ್ಗೆಯೂ ಹೈಕಮಾಂಡ್ ಚಿಂತಿಸಿದೆ ಎನ್ನಲಾಗಿದೆ.

ಆ ಸಂದರ್ಭದಲ್ಲಿ ಪ್ರಥಮ ಸರ್ಜರಿಯಲ್ಲಿ ಬಚಾವ್ ಆದವರಿಗೆ ಕೊಕ್ ನೀಡಿ ಯುವಕರಿಗೆ ಅವಕಾಶ ನೀಡಿದರೂ ಅಚ್ಚರಿ ಇಲ್ಲ ಎಂದು ಕಾಂಗ್ರೆಸ್ ಉನ್ನತ ಮೂಲಗಳು ತಿಳಿಸಿವೆ.

ಸಂಕ್ರಾಂತಿಗೇ ಏಕೆ ಸಚಿವರಾಗಬೇಕು?

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದು ಬರುವ ಮೇ ತಿಂಗಳಿಗೆ 3 ವರ್ಷ ಪೂರೈಸಲಿದೆ. ಮಾರ್ಚ್‌ನಲ್ಲಿ ಸಿದ್ಧರಾಮಯ್ಯ ಅವರು ಬಜೆಟ್ ನಡೆಸಲು ಸಿದ್ಧತೆಯನ್ನೂ ನಡೆಸಿ ದ್ದಾರೆ. ಹೀಗಾಗಿ ಸರಕಾರ ಯಾವುದೇ ಅಡ್ಡಿ ಇಲ್ಲದೆ ಮುನ್ನಡೆದರೆ ಇನ್ನು ಎರಡು ಬಜೆಟ್ ಮಾತ್ರ ಉಳಿಯಲಿದೆ. ಆದ್ದರಿಂದ ಸಂಕ್ರಾಂತಿ ವೇಳೆಗೆ ಸಂಪುಟ ಸೇರಿ ಸಚಿವರಾದವವರಿಗೆ ಮೂರು ಬಜೆಟ್ ಅವಧಿ ಸಿಗಲಿದೆ. ಒಂದೊಮ್ಮೆ ಮಾರ್ಚ್ ನಂತರ, ಅಂದರೆ ಮುಂಬರುವ ಬಜೆಟ್ ನಂತರ ಸಚಿವ ರಾದರೆ ಅವರಿಗೆ ಬರೀ ಎರಡೂ ಬಜೆಟ್ ಮಾತ್ರ ಸಿಗಲಿದೆ. ಇದರಲ್ಲಿ ಕೊನೆಯ ಬಜೆಟ್‌ನಲ್ಲಿ ನಿರೀಕ್ಷೆ ಯಂತೆ ಅನುದಾನ ಸಿಗುವುದಿಲ್ಲ, ಕೆಲಸಗಳೂ ನಡೆಯುವುದಿಲ್ಲ. ಹೀಗಾಗಿ ಮಂತ್ರಿಯಾಗುವು ದಾದರೆ ಸಂಕ್ರಾಂತಿ ಒಳಗೆ ಆಗಬೇಕೆಂದು ಪ್ರಬಲ ಆಕಾಂಕ್ಷಿಗಳು ಸಿಎಂ ಮತ್ತು ಡಿಸಿಎಂ ಇಬ್ಬರಲ್ಲೂ ತೀವ್ರ ಒತ್ತಡ ಹೇರಿದ್ದಾರೆ.

ಆದರೆ ರಾಜಕೀಯ ಕ್ರಾಂತಿ ಹೆಸರಿನಲ್ಲಿ ಸಾಕಷ್ಟು ಸಮಯ ಕಳೆದಿರುವುದರಿಂದ ಮತ್ತೆ ಸಂಪುಟ ಪುನಾರಚನೆಯನ್ನು ಮುಂದೆ ಹಾಕಲು ಸಿದ್ದರಾಮಯ್ಯ ಅವರಿಗೆ ಕಷ್ಟ ಸಾಧ್ಯವಾಗಿದೆ. ಹೀಗಾಗಿ ಸಿದ್ದರಾಮಯ್ಯ ಅವರ ಪುನಾರಚನೆ ವಿಚಾರಕ್ಕಾಗಿ ಪಕ್ಷದ ಹೈಕಮಾಂಡ್ ಆಹ್ವಾನವನ್ನು ಎದುರು ನೋಡುತ್ತಿದ್ದಾರೆ.

ಇವರಿಗೆ ಅಪಾಯ, ಅವರಿಗೆ ಅವಕಾಶ

ಒಟ್ಟು 33 ಮಂದಿಯ ಸಚಿವ ಸಂಪುಟದಲ್ಲಿ ನಾಗೇಂದ್ರ ಮತ್ತು ರಾಜಣ್ಣ ರಾಜೀನಾಮೆ ನಂತರ ಸಂಪುಟದಲ್ಲಿ 31ಮಂದಿ ಮಂತ್ರಿಗಳಿದ್ದಾರೆ. ಈ ಪಟ್ಟಿಯಲ್ಲಿ ಸಚಿವರಾದ ಡಿ.ಸುಧಾಕರ್ ಭೋಸ ರಾಜ್, ಮಂಕಾಳ ವೈದ್ಯ, ಶರಣಪ್ಪ ದರ್ಶನಾ ಪುರ, ಎಚ್.ಕೆ.ಪಾಟೀಲ್, ಭೈರತಿ ಸುರೇಶ್, ರಹೀಮ್ ಖಾನ್, ಲಕ್ಷ್ಮೀ ಹೆಬ್ಬಾಳ್ಕರ್, ಶಿವಾ ನಂದ ಪಾಟೀಲ್ ಸೇರಿದಂತೆ 12ರಿಂದ 15 ಮಂದಿಗೆ ಕೊಕ್ ನೀಡುವ ಚಿಂತನೆಯಲ್ಲಿ ಸಿಎಂ ಇದ್ದಾರೆ ಎನ್ನಲಾಗಿದೆ.

ಅದರಲ್ಲೂ ಭ್ರಷ್ಟಾಚಾರದ ಆರೋಪ ಹೊತ್ತ ಮತ್ತು ಅಕ್ರಮಗಳಿಗೆ ಹೆಸರಾದ ಸಚಿವರನ್ನು ತೆಗೆಯಿರಿ ಎಂದು ಹೈಕಮಾಂಡ್ ಈ ಹಿಂದೆಯೇ ಸೂಚಿಸಿದ್ದರಿಂದ ಅಂಥವರಿಗೆ ಹೆಚ್ಚಿನ ಅಪಾಯ ವಿದೆ ಎಂದು ಮೂಲಗಳು ಹೇಳಿವೆ. ಅದೇ ರೀತಿ ಈ ಸ್ಥಾನಗಳಿಗೆ ಶಾಸಕರಾದ ನರೇಂದ್ರ ಸ್ವಾಮಿ, ಎಂ.ಕೃಷ್ಣಪ್ಪ, ಎ.ಎಸ್.ಪೊನ್ನಣ್ಣ, ಎನ್.ಎ.ಹ್ಯಾರೀಸ್, ಸಲೀಂ ಮಹಮ್ಮದ್, ರುದ್ರಪ್ಪ ಲಮಾಣಿ, ಟಿ.ಬಿ. ಜಯಚಂದ್ರ, ಕೆ. ಷಡಕ್ಷರಿ, ಎನ್.ವೈ. ಗೋಪಾಲ ಕೃಷ್ಣ ಹಾಗೂ ಬಿ.ಕೆ. ಹರಿ ಪ್ರಸಾದ್ ಸೇರಿದಂತೆ ಅನೇಕರು ಪ್ರಯತ್ನಿಸುತ್ತಿದ್ದು, ಇವರಲ್ಲಿ ಬಹುತೇಕರಿಗೆ ಅವಕಾಶ ಸಿಗುವ ಸಂಭವವಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.