Dry Fruits price Rise: ಒಣ ಹಣ್ಣುಗಳ ಬೆಲೆ ಏರಿಕೆ
ಗ್ರಾಹಕರು ಸಾಮಾನ್ಯವಾಗಿ ಬಳಸುವ ಖರ್ಜೂರ ಕೆ.ಜಿ.ಗೆ ಸುಮಾರು ರು. 300ಕ್ಕೆ ಮಾರಲಾಗು ತ್ತದೆ. ರಂಜಾನ್ ಉಪವಾಸ ಸಂದರ್ಭದಲ್ಲಿ ಮುಸ್ಲಿಮರು ಬಂಧುಗಳಿಗೆ ಹಾಗೂ ಸ್ನೇಹಿತರಿಗೆ ಹಂಚಲು ದೊಡ್ಡ ಪ್ರಮಾಣದಲ್ಲಿ ಖರೀದಿಸುತ್ತಾರೆ. ಈ ಹಿನ್ನೆಲೆಯಲ್ಲಿ ಕೆ.ಜಿಗೆ 15-20 ರು.ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎನ್ನುತ್ತಾರೆ ಶಿವಾಜಿನಗರ ರಸೆಲ್ ಮಾರ್ಕೆಟ್ ಒಣಹಣ್ಣು ವ್ಯಾಪಾರಿಗಳು.
-
ಹೂವಪ್ಪ ಐ ಹೆಚ್ ಬೆಂಗಳೂರು
ಯುದ್ಧದ ಪರಿಣಾಮ
ಇರಾನ್‌ನಿಂದ ಆಮದು ಸ್ಥಗಿತ
ಇದೀಗ ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮವಾಗಿ ಮುಂದಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಕೂಡಾ ಒಣಹಣ್ಣು ಮಾರುಕಟ್ಟೆಗೆ ಭಾರೀ ಹೊಡೆತ ಬೀಳುವ ಸಾಧ್ಯತೆ ಇದ್ದು, ಈಗಾಗಲೇ ಬೆಲೆ ಏರಿಕೆ ಕಾಣತೊಡಗಿವೆ ಎಂದು ವ್ಯಾಪಾರಿಗಳು ಹೇಳಿದ್ದಾರೆ. ಅಂಜೂರ, ಪಿಸ್ತಾ, ಬಾದಾಮಿ ಸೇರಿದಂತೆ ಒಣಹಣ್ಣುಗಳಲ್ಲಿ ಬಹುಪಾಲು ನಮ್ಮ ದೇಶಕ್ಕೆ ಇರಾನ್‌ನಿಂದ ಆಮದಾಗುತ್ತವೆ, ವಿಶೇಷವಾಗಿ ರಂಜಾನ್ ತಿಂಗಳಲ್ಲಿ ಇರಾನ್‌ನ ಮಜಾಫತಿ ಖರ್ಜೂರಗಳು ಬೆಂಗಳೂರಿನಲ್ಲಿ ಅತ್ಯಂತ ಜನಪ್ರಿಯವಾಗಿವೆ.
ಗ್ರಾಹಕರು ಸಾಮಾನ್ಯವಾಗಿ ಬಳಸುವ ಖರ್ಜೂರ ಕೆ.ಜಿ.ಗೆ ಸುಮಾರು ರು. 300ಕ್ಕೆ ಮಾರಲಾಗುತ್ತದೆ. ರಂಜಾನ್ ಉಪವಾಸ ಸಂದರ್ಭದಲ್ಲಿ ಮುಸ್ಲಿಮರು ಬಂಧುಗಳಿಗೆ ಹಾಗೂ ಸ್ನೇಹಿತರಿಗೆ ಹಂಚಲು ದೊಡ್ಡ ಪ್ರಮಾಣದಲ್ಲಿ ಖರೀದಿಸುತ್ತಾರೆ. ಈ ಹಿನ್ನೆಲೆಯಲ್ಲಿ ಕೆ.ಜಿಗೆ 15-20 ರು.ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎನ್ನುತ್ತಾರೆ ಶಿವಾಜಿನಗರ ರಸೆಲ್ ಮಾರ್ಕೆಟ್ ಒಣಹಣ್ಣು ವ್ಯಾಪಾರಿಗಳು.
ರಂಜಾನ್ ಮುನ್ನವೇ ಹೆಚ್ಚಿನ ವ್ಯಾಪಾರಿಗಳು ಸಾಕಷ್ಟು ಒಣಹಣ್ಣುಗಳನ್ನು ಸಂಗ್ರಹಿಸಿ ಕೊಂಡಿದ್ದಾರೆ. ರಂಜಾನ್ ಉಪವಾಸ ಸಮಯದಲ್ಲಿ ಇದರ ಮಾರಾಟ ಹೆಚ್ಚು ಇರುವು ದರಿಂದ ನಾವು ಹಬ್ಬಕ್ಕೆ ಮುಂಚೆಯೇ ಸಾಕಷ್ಟು ಸ್ಟಾಕ್ ಮಾಡಿಕೊಂಡಿದ್ದೇವೆ, ಆದ್ದರಿಂದ ಈಗ ಸದ್ಯ ತೊಂದರೆ ಇರುವುದಿಲ್ಲ. ಆದರೆ ಯುದ್ಧ ಇದೇ ರೀತಿ ಮುಂದುವರೆದರೆ ಮುಂದೆ ಪರಿಸ್ಥಿತಿ ಕಷ್ಟವಾಗಬಹುದು ಎಂಬ ಅಭಿಪ್ರಾಯ ಕೇಳಿ ಬರುತ್ತಿದೆ.
ಇದನ್ನೂ ಓದಿ: Shalini Rajaneesh Column: ಮಹಿಳಾ ಸಬಲೀಕರಣ ಮತ್ತು ಮಕ್ಕಳ ಕಲ್ಯಾಣದ ಕಿರುನೋಟ
ಒಣ ಹಣ್ಣು ಬೆಲೆ ಏರಿಕೆ: ಸದ್ಯದಲ್ಲೇ ಸರಬರಾಜು ಕಡಿಮೆಯಾಗುವ ಆತಂಕದಿಂದ ಈಗಾಗಲೇ ಒಣ ಹಣ್ಣುಗಳಿಗೆ ಕೆಲವು ವ್ಯಾಪಾರಿಗಳು ಬೆಲೆ ಹೆಚ್ಚಿಸಲು ಆರಂಭಿಸಿದ್ದಾರೆ. ಶಿವಾಜಿನಗರದ ಅಂಗಡಿಯ ಮಾಲೀಕ ಅಬ್ದುಲ್ ಹಮೀದ್ ಹೇಳುವಂತೆ, ಪಿಸ್ತಾ ಬೇಡಿಕೆ ಹೆಚ್ಚಿದ್ದು, ಸ್ಟಾಕ್ ಕಡಿಮೆ ಇದೆ, ಹಾಗಾಗಿ ಕಿಲೋಗ್ರಾಂಗೆ ರು. 200 ರಿಂದ 300 ಏರಿಕೆ ಯಾಗಿದೆ.
ವಿಶ್ವದಲ್ಲೇ ಅತ್ಯುತ್ತಮವೆಂದು ಪರಿಗಣಿಸಲ್ಪಡುವ ಇರಾನಿಯನ್ ಕೇಸರಿ (ಸ್ಯಾಫ್ರನ್) ಈಗ ಕಿಲೋಗ್ರಾಂಗೆ ರು. 2.5 ಲಕ್ಷದಿಂದ ರು. 3 ಲಕ್ಷವರೆಗೆ ಇದೆ, ಆದರೆ ಎರಡು ವಾರಗಳಲ್ಲಿ ಇದು 4 ಲಕ್ಷವರೆಗೆ ಏರಬಹುದು ಎಂದು ವ್ಯಾಪಾರಿಗಳು ಅಂದಾಜಿಸಿದ್ದಾರೆ.
ಮಾರುಕಟ್ಟೆ ಪ್ರಸ್ತುತ ಬೆಲೆಗಳು: ಪಿಸ್ತಾ ರು. ಕೆ.ಜಿಗೆ 1800ರಿಂದ 2100 ರು.ಗೆ ಕೆ.ಜಿಗೆ ಏರಿಕೆಯಾಗಿದೆ, ಅಂಜೂರದ ದರವು ಸುಮಾರು ರು. 1600-1700 ರು.ಗೆ ಹೆಚ್ಚಿದೆ. ಬಾದಾಮಿ ಕೆ.ಜಿಗೆ 850-ಇದ್ದದ್ದು, ರು.860 ಆಗಿದೆ.
ಮಸಾಲೆ ಬೆಲೆ ಮೇಲೆ ಪರಿಣಾಮ: ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದ ಪರಿಣಾಮವಾಗಿ ಮಸಾಲೆಗಳ ದರಗಳ ಮೇಲೂ ಪರಿಣಾಮ ಬೀರತೊಡಗಿದೆ. ಒಣಹಣ್ಣು ಗಳ ಜತೆಗೆ ಜಾಯಿಕಾಯಿ, ದಾಲ್ಚಿನ್ನಿ, ಸ್ಟಾರ್ ಅನೀಸ್ ಮುಂತಾದ ಮಸಾಲೆಗಳೂ ಇರಾನ್ ನಿಂದ ಆಮದು ಆಗುತ್ತವೆ.
ಯಶವಂತಪುರದ ಅಂಗಡಿ ವ್ಯವಸ್ಥಾಪಕ ಮೊಹಮ್ಮದ್ ಅಝಾಸ್ ಹೇಳುವಂತೆ, ‘ಇರಾನ್ ನಲ್ಲಿ ವ್ಯಾಪಾರ ಅಕಸ್ಮಿಕವಾಗಿ ನಿಂತರೆ ಅಫಘಾನಿಸ್ತಾನದಿಂದ ಬರುವ ಒಣಹಣ್ಣುಗಳ ಸರಬರಾಜಿಗೂ ಅದು ಪರಿಣಾಮ ಬೀಳುತ್ತದೆ. ಇರಾನ್ ಬಂದರುಗಳು ಸಮಸ್ಯೆಗೆ ಒಳಗಾದರೆ ಮುಂದಿನ ದಿನಗಳಲ್ಲಿ ಒಣಹಣ್ಣುಗಳ ಕೊರತೆ ಉಂಟಾಗಬಹುದು, ಹೀಗಾಗಿ ರಖಂ ವ್ಯಾಪಾರಿಗಳು ಬೆಲೆಗಳನ್ನು ಹೆಚ್ಚಿಸುವ ಸಾಧ್ಯತೆ ಇದೆ ಎಂದು ಹೇಳುತ್ತಾರೆ.
ಡ್ರೈಫ್ರೂಟ್ಸ್ ಬೆಲೆ ಏರಿಕೆ ಆದರೆ ಅದರ ಪರಿಣಾಮ ಕೇವಲ ಗ್ರಾಹಕರಿಗಷ್ಟೇ ಅಲ್ಲ, ಐಸ್ ಕ್ರೀಂ ಪಾರ್ಲರ್‌ಗಳು, ಬೇಕರಿಗಳು, ಹೋಟೆಲ್‌ಗಳು ಮತ್ತು ಸಿಹಿತಿಂಡಿ ಉದ್ಯಮಗಳಿಗೂ ತಟ್ಟಲಿದೆ, ಏಕೆಂದರೆ ಈ ಉದ್ಯಮಗಳಲ್ಲೂ ಡ್ರೈಫ್ರೂಟ್ಸ್ ಪದಾರ್ಥಗಳಾಗಿ ಬಳಸಲಾಗುತ್ತದೆ
![]()
ಯುದ್ಧದ ಪರಿಣಾಮವಾಗಿ ಇರಾನ್‌ನಲ್ಲಿ ಆಕಸ್ಮಿಕವಾಗಿ ವ್ಯಾಪಾರ ನಿಂತರೆ, ಅಫ್ಘಾನಿಸ್ತಾನ ದಿಂದ ಬರುವ ಒಣಹಣ್ಣುಗಳ ಸರಬರಾಜಿನ ಮೇಲೆ ಪರಿಣಾಮ ಬೀಳುತ್ತದೆ. ರಂಜಾನ್ ಸಮೀಸುತ್ತಿದೆ, ಹೀಗಾಗಿ ಬೆಲೆ ಏರಿಕೆ ಸಾಧ್ಯತೆ ಹೆಚ್ಚಾಗಿದೆ.
ಮಂಜುನಾಥ್, ಒಣಹಣ್ಣು ವ್ಯಾಪಾರಿ ಬೆಂಗಳೂರು