ಬತ್ತಿದ ಜಲಮೂಲಗಳು: ರೈತರಲ್ಲಿ ಹೆಚ್ಚಿದ ಆತಂಕ
ಬೀದರ್ ಜಿಲ್ಲೆಯ ಪ್ರಮುಖ ಕಾರಂಜಾ ಜಲಾಶಯದಲ್ಲಿ ನೀರಿನ ಮಟ್ಟ ಶೇ.59.50ಕ್ಕೆ ಕುಸಿದಿದ್ದು, ಚುಳಕಿನಾಲಾದಲ್ಲಿ ಶೇ.57.04 ರಷ್ಟಿದೆ. ಅಪ್ಪರ್ ಮುಲ್ಲಾಮಾರಿ ಜಲಾಶಯವು ಶೇ.27.64 ರಷ್ಟಕ್ಕೆ ಕುಸಿದಿರುವುದು ಆ ಭಾಗದ ರೈತರ ಕೃಷಿ ಆಧಾರಿತ ಜೀವನಕ್ಕೆ ದೊಡ್ಡ ಹೊಡೆತ ನೀಡಿದೆ. ಯಾದಗಿರಿ ಜಿಲ್ಲೆಯ ಪರಿಸ್ಥಿತಿಯಂತೂ ಅತ್ಯಂತ ಗಂಭೀರವಾಗಿದ್ದು, ಹತ್ತಿಕುಣಿ ಜಲಾಶಯದಲ್ಲಿ ಕಳೆದ ವರ್ಷ ಶೇ. 80.11 ರಷ್ಟು ನೀರಿದ್ದರೆ, ಈ ಬಾರಿ ಕೇವಲ ಶೇ.25.00 ರಷ್ಟು ಮಾತ್ರ ಇದೆ.
-
ದೇವೇಂದ್ರ ಜಾಡಿ ಕಲಬುರಗಿ
ಕಲ್ಯಾಣ ಕರ್ನಾಟಕದ ಜಲಾಶಯಗಳಲ್ಲಿ ಶೂನ್ಯ ಒಳಹರಿವು
ಕೃಷಿ ಚಟುವಟಿಕೆಗಳು ಸ್ತಬ್ಧ, ಕುಡಿಯುವ ನೀರಿಗೂ ತತ್ವಾರ
ಕಲಬುರಗಿ ನೀರಾವರಿ ಯೋಜನಾ ವಲಯದ ವ್ಯಾಪ್ತಿಯ ಪ್ರಮುಖ ಜಲಾಶಯಗಳಲ್ಲಿ ಈ ಬಾರಿ ನೀರಿನ ಸಂಗ್ರಹಣೆಯಲ್ಲಿ ಭಾರಿ ಕುಸಿತ ಕಂಡು ಬಂದಿದ್ದು, ಕೃಷಿ ಚಟುವಟಿಕೆಗಳು ಹಾಗೂ ಜನರ ಕುಡಿಯುವ ನೀರಿನ ಪೂರೈಕೆಗೆ ಭಾರಿ ಹೊಡೆತ ಬೀಳುವ ಭೀತಿ ಎದುರಾಗಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿ ದರೆ ಬಹುತೇಕ ಜಲಾಶಯಗಳು ವೇಗವಾಗಿ ಬತ್ತುತ್ತಿದ್ದು, ಸದ್ಯಕ್ಕೆ ಒಳಹರಿವು ಸಂಪೂರ್ಣ ಸ್ಥಗಿತಗೊಂಡಿ ರುವುದು ಹೈದರಾಬಾದ್ ಕರ್ನಾಟಕ ಭಾಗದ ಜನರಲ್ಲಿ ತೀವ್ರ ಆತಂಕ ಮೂಡಿಸಿದೆ.
ಕಲಬುರಗಿ ಜಿಲ್ಲೆಯ ಪ್ರಮುಖ ಜಲಾಶಯವಾದ ಬೆಣ್ಣೆತೊರಾದಲ್ಲಿ ಪ್ರಸ್ತುತ ಶೇ.68.83 ರಷ್ಟು ಮಾತ್ರ ನೀರಿದ್ದು, ಕಳೆದ ವರ್ಷ ಶೇ. 80.16 ರಷ್ಟಿತ್ತು. ಇನ್ನುಳಿದಂತೆ ಅಮರ್ಜಾ ಹಾಗೂ ಗಂಡೋರಿನಾಳ ಜಲಾಶಯಗಳಲ್ಲಿ ಕ್ರಮವಾಗಿ ಶೇ. 57.27 ಮತ್ತು ಶೇ. 58.08ರಷ್ಟು ನೀರಿದೆ.
ಇದನ್ನೂ ಓದಿ: Kalaburagi Transport App: ಕೈಕೊಟ್ಟ ನಮ್ಮ ಕಲಬುರಗಿ ಸಾರಿಗೆ App
ಲೋಯರ್ ಮುಲ್ಲಾ ಮಾರಿ ಜಲಾಶಯವು ಶೇ75.81 ರಷ್ಟು ಭರ್ತಿ ಯಾಗಿದ್ದರೂ, ಬಿ.ಎ.ಲ್.ಐ.ಎಸ್ ಜಲಾಶಯವು ಅತ್ಯಂತ ಕನಿಷ್ಠ ಮಟ್ಟಕ್ಕೆ ಅಂದರೆ ಕೇವಲ ಶೇ8.53 ಕ್ಕೆ ಕುಸಿದಿದೆ. ಕಳೆದ ವರ್ಷ ಇಲ್ಲಿ ಶೇ. 64.78 ರಷ್ಟು ನೀರಿದ್ದು, ಈಗ ಸಂಪೂರ್ಣ ಬರಿದಾಗುವ ಹಂತ ತಲುಪಿದೆ. ಇದು ಕೃಷಿ ನಾಲೆ ಗಳನ್ನೇ ನಂಬಿದ ರೈತರ ನಿದ್ದೆಗೆಡಿಸಿದೆ.
ಬೀದರ್ ಜಿಲ್ಲೆಯ ಪ್ರಮುಖ ಕಾರಂಜಾ ಜಲಾಶಯದಲ್ಲಿ ನೀರಿನ ಮಟ್ಟ ಶೇ.59.50ಕ್ಕೆ ಕುಸಿದಿದ್ದು, ಚುಳಕಿನಾಲಾದಲ್ಲಿ ಶೇ.57.04 ರಷ್ಟಿದೆ. ಅಪ್ಪರ್ ಮುಲ್ಲಾಮಾರಿ ಜಲಾಶಯವು ಶೇ.27.64 ರಷ್ಟಕ್ಕೆ ಕುಸಿದಿರುವುದು ಆ ಭಾಗದ ರೈತರ ಕೃಷಿ ಆಧಾರಿತ ಜೀವನಕ್ಕೆ ದೊಡ್ಡ ಹೊಡೆತ ನೀಡಿದೆ. ಯಾದಗಿರಿ ಜಿಲ್ಲೆಯ ಪರಿಸ್ಥಿತಿಯಂತೂ ಅತ್ಯಂತ ಗಂಭೀರವಾಗಿದ್ದು, ಹತ್ತಿಕುಣಿ ಜಲಾಶಯದಲ್ಲಿ ಕಳೆದ ವರ್ಷ ಶೇ. 80.11 ರಷ್ಟು ನೀರಿದ್ದರೆ, ಈ ಬಾರಿ ಕೇವಲ ಶೇ.25.00 ರಷ್ಟು ಮಾತ್ರ ಇದೆ.
ಸೌದಾಗರ್ ಜಲಾಶಯವು ಕೇವಲ ಶೇ.23.00 ರಷ್ಟು ನೀರನ್ನು ಹೊಂದಿದೆ. ಕಲಬುರಗಿ, ಯಾದಗಿರಿ ಜಿಲ್ಲೆ ವ್ಯಾಪ್ತಿಯ 11 ಜಲಾಶಯಗಳಿಗೂ ಒಳಹರಿವು ಶೂನ್ಯವಾಗಿದೆ. ಕಾರಂಜಾದಿಂದ 30 ಕ್ಯೂಸೆಕ್ ಹಾಗೂ ಗಂಡೋರಿ ನಾಳದಿಂದ 20 ಕ್ಯೂಸೆಕ್ ಹೊರಹರಿವನ್ನು ಹೊರತು ಪಡಿಸಿ, ಉಳಿದ ಯಾವುದೇ ಜಲಾಶಯಗಳಿಂದ ನದಿ ಅಥವಾ ನಾಲೆಗಳಿಗೆ ನೀರನ್ನು ಬಿಡಲಾಗುತ್ತಿಲ್ಲ. ಮುಂಗಾರು ಮಳೆಯ ಕೊರತೆಯಿಂದಾಗಿ ಜಲಾಶಯಗಳಲ್ಲಿ ನೀರಿನ ಮಟ್ಟ ತೀವ್ರವಾಗಿ ಕುಸಿ ಯುತ್ತಿದ್ದು, ಈ ಭಾಗದ ಕೃಷಿ ಚಟುವಟಿಕೆಗಳಿಗೆ ಮಾತ್ರವಲ್ಲದೆ ಮುಂಬರುವ ದಿನಗಳಲ್ಲಿ ಜನ- ಜಾನುವಾರುಗಳ ಕುಡಿಯುವ ನೀರಿಗೂ ಭಾರಿ ತತ್ವಾರ ಎದುರಾಗುವ ಮುನ್ಸೂಚನೆ ಸಿಕ್ಕಿದೆ.
ನಗರಕೆ ಕುಡಿಯುವ ನೀರಿಗೆ ಸದ್ಯ ಆತಂಕವಿಲ್ಲ ಕಲಬುರಗಿ ನಗರದ ಕುಡಿಯುವ ನೀರಿನ ಪೂರೈಕೆಗೆ ಸದ್ಯ ಯಾವುದೇ ತೊಂದರೆ ಇಲ್ಲ. ನಾರಾಯಣಪುರ ಜಲಾಶಯದಿಂದ 0.3 ಟಿಎಂಸಿ ನೀರು ಬಿಡುಗಡೆ ಯಾಗಿರುವುದರಿಂದ ಮುಂದಿನ ಎರಡು ತಿಂಗಳವರೆಗೆ ನೀರಿನ ಪೂರೈಕೆ ಸುಗಮವಾಗಿರ ಲಿದೆ. ಸಾರ್ವಜನಿಕರು ಅನಗತ್ಯವಾಗಿ ನೀರು ವ್ಯರ್ಥ ಮಾಡದೆ ಮಿತವಾಗಿ ಬಳಸುವಂತೆ ಅಧಿಕಾರಿ ಗಳು ಮನವಿ ಮಾಡಿದ್ದಾರೆ. ಅಲ್ಲದೇ, ಎರಡು ತಿಂಗಳ ಬಳಿಕ ಮತ್ತೆ ಕುಡಿಯುವ ನೀರಿನ ಅವಶ್ಯಕತೆ ಬಿದ್ದರೆ, ಮತ್ತೊಮ್ಮೆ ಮನವಿ ಸಲ್ಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಇಕ್ರಮ್ ಶರೀಫ್ ತಿಳಿಸಿದ್ದಾರೆ.
![]()
ರಾಜ್ಯದಲ್ಲಿ ಮಳೆಯಿಲ್ಲದೆ ಜಲಾಶಯಗಳು ಬರಿದಾಗಿವೆ. ಬೆಳೆ ನಷ್ಟದಿಂದ ರೈತರು ವಲಸೆ ಹಾಗೂ ಆತ್ಮಹತ್ಯೆಗೆ ಶರಣಾಗುವ ಮುನ್ನ ಸರಕಾರ ಎಚ್ಚೆತ್ತುಕೊಳ್ಳಬೇಕು. ತಕ್ಷಣವೇ ರಾಷ್ಟ್ರೀಯ ಮತ್ತು ಸಹಕಾರ ಬ್ಯಾಂಕುಗಳ ರೈತರ ಸಂಪೂರ್ಣ ಸಾಲ ಮನ್ನಾ ಮಾಡಲಿ. ವರ್ಷದ ಮಟ್ಟಿಗೆ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಿಯಾದರೂ ಮೊದಲು ಅನ್ನದಾತನನ್ನು ಉಳಿಸಲಿ.
-ಶರಣಗೌಡ ಕಂದಕೂರು, ಶಾಸಕ,
![]()
ಗುರುಮಿಠಕಲ್ ಜಿಲ್ಲೆಯ ಬಹುತೇಕ ಜಲಾಶಯಗಳಿಗೆ ಸದ್ಯ ಒಳಹರಿವು ಹಾಗೂ ಹೊರ ಹರಿವು ಸಂಪೂರ್ಣ ನಿಂತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷ ಜಲಾಶಯಗಳ ನೀರಿನ ಮಟ್ಟದಲ್ಲಿ ಕುಸಿತ ಕಂಡಿದೆ. ಹೀಗಾಗಿ, ಲಭ್ಯವಿರುವ ನೀರನ್ನು ರೈತರು ಮತ್ತು ಸಾರ್ವಜನಿಕರು ಮಿತವಾಗಿ ಬಳಸಬೇಕು. ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾದರೆ ನೀರಿನ ಪರಿಸ್ಥಿತಿ ಸುಧಾರಿಸಿ ಯಾವುದೇ ಸಮಸ್ಯೆ ಎದುರಾಗುವುದಿಲ್ಲ.
-ಇಕ್ರಮ್ ಶರೀಫ್, ಜಿಲ್ಲಾಧಿಕಾರಿ, ಕಲಬುರಗಿ