ಕರ್ನಾಟಕ ಬಜೆಟ್​ ವಿದೇಶ ಪುನೀತ್​ @ 50 ಫ್ಯಾಷನ್​ ಧಾರ್ಮಿಕ ಕ್ರೈಂ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

KSRTC Bus: ಬಸ್‌ ಹತ್ತಲು ಸಾಲಾಗಿ ಬನ್ನಿ

ನೂಕುನುಗ್ಗಲು ತಡೆಗಟ್ಟಲು ಇದೀಗ ಕೆಎಸ್‌ಆರ್‌ಟಿಸಿ ಬಸ್ ಹತ್ತುವುದಕ್ಕೆ ಸರದಿ ಸಾಲು ಗಳನ್ನು ಪರಿಚಯಿಸಲು ಮುಂದಾಗಿದೆ. ಇದಿಷ್ಟೇ ಅಲ್ಲದೇ ಒಂದು ವೇಳೆ ನೂಕು ನುಗ್ಗಲು ಮಾಡಲು ಯಾರಾದರೂ ಪ್ರಯತ್ನಿಸಿದರೆ, ಕ್ರಮ ವಹಿಸಲು ಅಧಿಕಾರಿಗಳು ತೀರ್ಮಾನಿಸಿ ದ್ದಾರೆ. ಈ ಮೂಲ ಕ ಬಸ್ ನಿಲ್ದಾಣಗಳಲ್ಲಿ ಎದುರಾಗುವ ಹತ್ತಾರು ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಿದ್ದಾರೆ

ಬಸ್‌ ಹತ್ತಲು ಸಾಲಾಗಿ ಬನ್ನಿ

Profile Ashok Nayak Mar 16, 2025 8:30 AM

ಅಪರ್ಣಾ ಎ.ಎಸ್ ಬೆಂಗಳೂರು

ಕೆಎಸ್‌ಆರ್‌ಟಿಸಿಯಿಂದ ನೂತನ ಪ್ರಯೋಗ

ಬಸ್ ಏರುವಾಗ ನುಗ್ಗಿದರೆ ಕಠಿಣ ಕ್ರಮ

ಶಕ್ತಿ ಯೋಜನೆ ಬಳಿಕ ಬಸ್‌ಗಳಿಗೆ ನುಗ್ಗಲು ಶಕ್ತಿ ಪ್ರದರ್ಶನ ಮಾಡುತ್ತಿದ್ದ ನಾರಿಮಣಿಯರಿಗೆ, ಈ ಶಕ್ತಿ ಪ್ರದರ್ಶನ ನೋಡುತ್ತಾ ಬಸ್ ಮಿಸ್ ಮಾಡಿಕೊಳ್ಳುತ್ತಿದ್ದ ಗಂಡಸರಿಗೆ ಇದೀಗ ಒಂದು ಶುಭ ಸುದ್ದಿ ನೀಡಲು ರಾಜ್ಯ ರಸ್ತೆ ಸಾರಿಗೆ(ಕೆಎಸ್‌ಆರ್‌ಟಿಸಿ) ಮುಂದಾಗಿದೆ. ಕೆಎಸ್‌ ಆರ್‌ಟಿಸಿ ನೀಡಲು ಮುಂದಾಗಿರುವ ಈ ಸಿಹಿ ಸುದ್ದಿ ಸದ್ಯಕ್ಕೆ ಬೆಂಗಳೂರಿನ ಮೆಜೆಸ್ಟಿ ಕ್‌ಗೆ ಮಾತ್ರ ಸೀಮಿತವಾಗಿದ್ದರೂ ಕೂಡಾ ಭವಿಷ್ಯದಲ್ಲಿ ರಾಜ್ಯದ ಎಲ್ಲ ಬಸ್ ನಿಲ್ದಾಣದಲ್ಲಿ ಜಾರಿಗೊಳಿಸಿದರೂ ತಪ್ಪಿಲ್ಲ ಎನ್ನುವ ಮಾತುಗಳನ್ನು ಪ್ರಯಾಣಿಕರಲ್ಲಿ ಕೇಳಿ ಬಂದಿದೆ.

ನೂಕುನುಗ್ಗಲು ತಡೆಗಟ್ಟಲು ಇದೀಗ ಕೆಎಸ್‌ಆರ್‌ಟಿಸಿ ಬಸ್ ಹತ್ತುವುದಕ್ಕೆ ಸರದಿ ಸಾಲು ಗಳನ್ನು ಪರಿಚಯಿಸಲು ಮುಂದಾಗಿದೆ. ಇದಿಷ್ಟೇ ಅಲ್ಲದೇ ಒಂದು ವೇಳೆ ನೂಕು ನುಗ್ಗಲು ಮಾಡಲು ಯಾರಾದರೂ ಪ್ರಯತ್ನಿಸಿದರೆ, ಕ್ರಮ ವಹಿಸಲು ಅಧಿಕಾರಿಗಳು ತೀರ್ಮಾನಿಸಿ ದ್ದಾರೆ. ಈ ಮೂಲಕ ಬಸ್ ನಿಲ್ದಾಣಗಳಲ್ಲಿ ಎದುರಾಗುವ ಹತ್ತಾರು ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಸದ್ಯಕ್ಕೆ ಬೆಂಗಳೂರಿನ ಪ್ರಮುಖ ನಿಲ್ದಾಣ ವಾಗಿರುವ ಮೆಜೆಸ್ಟಿಕ್‌ನಲ್ಲಿ ಈ ಕ್ರಮಕ್ಕೆ ಮುಂದಾಗಿದ್ದು, ಬಸ್ ಹತ್ತಬೇಕಾದರೆ ಸರದಿ ಸಾಲಿ ನಲ್ಲಿ ನಿಲ್ಲಬೇಕು. ಗುಂಪಿನಲ್ಲಿ ನುಗ್ಗಾಡಿ ಹತ್ತುವವರ ಮೇಲೆ ಕ್ರಮ ಕೈಗೊಳ್ಳಲು ನಿಲ್ದಾಣದ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಎಚ್ಚರಿಸಿದ್ದಾರೆ.

ಮೆಜೆಸ್ಟಿಕ್‌ನಲ್ಲಿ ಬಸ್ ಹತ್ತುವರರಿಗೆ ಈ ನಡುವೆ ಭಾರೀ ಸಮಸ್ಯೆಯಾಗುತ್ತಿದ್ದು, ಬಸ್‌ಗೆ ಹತ್ತುವಾಗ, ಇಳಿಯುವಾಗ ನೂಕು ನುಗ್ಗಲುಂಟಾದರೆ, ಗುಂಪು ಗುಂಪಾಗಿ ಬಸ್ ಹತ್ತುವು ದನ್ನು, ಬಸ್ ಹತ್ತುವಾಗ ಅನಗತ್ಯವಾಗಿ, ಅಸಭ್ಯವಾಗಿ ಮಹಿಳೆಯರನ್ನು ಸ್ಪರ್ಶಿಸುವುದು ಹಾಗೂ ಕಳ್ಳತನದಂತಹ ಪ್ರಕರಣಗಳಿಗೆ ನಿರ್ಬಂಧ ಹೇರಲು ನಿಲ್ದಾಣದ ಅಧಿಕಾರಿಗಳು ಸಜ್ಜಾಗಿದ್ದು, ಈ ಮೂಲಕ ಪ್ರಯಾಣಿಕರಿಗೆ ಹಾಗೂ ಮಹಿಳೆಯರ ರಕ್ಷಣೆಗೆ ಕ್ರಮಕ್ಕೆ ಮುಂದಾಗಿದ್ದಾರೆ.

ಇನ್ನು ಮುಂದೆ ಮೆಜೆಸ್ಟಿಕ್‌ನಲ್ಲಿ ಬಸ್ ಬಂದಂತೆ ದಿಢೀರನೇ ಬಸ್‌ನೊಳಗೆ ನುಗ್ಗುವಂತಿಲ್ಲ ಬದಲಾಗಿ ಸರತಿಯಲ್ಲಿ ನಿಂತುಕೊಂಡು ಟಿಕೆಟ್ ಪಡೆದು ಬಸ್ ಹತ್ತಬೇಕು ಎನ್ನುವ ವ್ಯವಸ್ಥೆ ಜಾರಿಗೆ ತರಲು ಕೆಎಸ್ ಆರ್‌ಟಿಸಿ ಅಧಿಕಾರಿಗಳು ನಿರ್ಧರಿಸಿದ್ದಾರೆ.

ಪ್ರಾಯೋಗಿಕವಾಗಿ ಜಾರಿ

ಈ ಬಗ್ಗೆ ಮಾತನಾಡಿರುವ ಕೆಎಸ್‌ಆರ್‌ಟಿಸಿ ಅಧಿಕಾರಿಗಳು, ಇನ್ನು ಮುಂದೆ ಮೆಜೆಸ್ಟಿಕ್ ನಿಲ್ದಾಣದಲ್ಲಿ ನಾ ಮುಂದೆ ತಾ ಮುಂದೆ ಎಂದು ಅವಸರದಿಂದ ಬಸ್ ಹತ್ತುವಂತಿಲ್ಲ. ಬದ ಲಾಗಿ ಸರತಿನಲ್ಲಿ ನಿಂತು ಟಿಕೆಟ್ ಪಡೆದು ಹತ್ತಬೇಕು. ಮೈಸೂರಿಗೆ ಹೋಗುವ ಪ್ರಯಾಣಿಕ ರಿಗೆ ಸ್ಯಾಟ್‌ಲೈಟ್ ಬಸ್ ನಿಲ್ದಾಣದಿಂದ ಬಸ್‌ಗಳ ವ್ಯವಸ್ಥೆಯಿದೆ. ಸ್ಯಾಟ್‌ಲೈಟ್ ಗೆ ಹೋಗಲು ಮೆಜೆಸ್ಟಿಕ್ ನಿಂದ ಸ್ಯಾಟ್‌ಲೈಟ್ ತನಕ ಹೋಗಬೇಕು. ಈ ವೇಳೆ ಬಸ್ ಹತ್ತು ವಾಗ ಮಹಿಳಾ ಪ್ರಯಾಣಿಕರನ್ನು ಅಸಭ್ಯವಾಗಿ ಸ್ಪರ್ಶಿಸುವುದು, ಮೊಬೈಲ್, ಪರ್ಸ್ ಕಳವು ಪ್ರಕರಣ ಗಳನ್ನು ತಡೆಯಲು ಈ ಸರತಿ ವ್ಯವಸ್ಥೆ ಮಾಡಲಾಗಿದೆ. ಇದಕೆ ಮಹಿಳಾ ಪ್ರಯಾ‌ಣಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದು ಎಡೆ ಈ ವ್ಯವಸ್ಥೆ ಆಗಬೇಕು ಎಂದಿದ್ದಾರೆ. ಕಳೆದ ಕೆಲ ದಿನ ಗಳಿಂದ ಈ ವ್ಯವಸ್ಥೆ ಆರಂಭಿಸಲಾಗಿದ್ದು, ಮೆಜೆಸ್ಟಿಕ್ ನಿಲ್ದಾಣದಲ್ಲಿ ಕ್ಯೂ ನಲ್ಲಿ ನಿಂತ ಪ್ರಯಾಣಿಕರು ಒಬ್ಬೊಬ್ಬರಾಗಿ ಟಿಕೆಟ್ ಪಡೆದು ಬಸ್ ಹತ್ತಬೇಕು. ನೇರವಾಗಿ ಬಸ್ ಹತ್ತಲು ಬಂದವರನ್ನು ಸರತಿಯಲ್ಲಿ ನಿಲ್ಲಿಸಲಾಗುತ್ತಿದ್ದು, ವಯಸ್ಸಾದವರು, ಅನಾರೋಗ್ಯಕ್ಕೀಡಾ ದವರು ಇದ್ದರೆ ಅವರಿಗೆ ಮೊದಲ ಆದ್ಯತೆಯನ್ನು ನೀಡಲಾಗುವುದು. ಈ ವ್ಯವಸ್ಥೆ ಮೂಲಕ ಬಸ್ ಹತ್ತುವ ನೆಪದಲ್ಲಿ ಮಹಿಳೆಯರಿಗೆ ಕೊಡುತ್ತಿದ್ದ ಕಿರುಕುಳವನ್ನು ತಡೆಯಲು ಹಾಗೂ ಕಳ್ಳತನಕ್ಕೆ ಕಡಿವಾಣ ಹಾಕಲು ಅಧಿಕಾರಿಗಳು ಮುಂದಾಗಿದ್ದಾರೆ.

*

ಎಲ್ಲಾ ಬಸ್ ನಿಲಾಣಗಳಲ್ಲಿ ಈ ರೀತಿಯ ಕ್ಯೂ ವ್ಯವಸ್ಥೆ ಆಗಬೇಕಿದೆ. ಬಸ್ ಹತ್ತುವಾಗ ಒಬ್ಬೊಬ್ಬರಾಗಿ ಹತ್ತುವುದರಿಂದ ಅಸಭ್ಯ ಸ್ಪರ್ಶ, ಕಳ್ಳತನಕ್ಕೆ ಕೊನೆ ಹಾಕಲಾಗುವುದು. ಆಯಾ ಬಸ್ ನಿಲ್ದಾಣದ ಉಸ್ತುವಾರಿಗಳು ವಿಶೇಷ ಕಾಳಜಿ ವಹಿಸಿ ಕ್ಯೂ ವ್ಯವಸ್ಥೆ ಮಾಡಿ ದರೆ, ಹೆಣ್ಣು ಮಕ್ಕಳಿ ಗಾಗುವ ಕಿರುಕುಳವನ್ನು ತಡೆಯಬಹುದು, ಕಳ್ಳತನಕ್ಕೂ ಕಡಿವಾಣ ಹಾಕಬಹುದು. ಅಧಿಕಾರಿಗಳು ಸರತಿ ವ್ಯವಸ್ಥೆ ಮೂಲಕ ಉತ್ತಮ ಕ್ರಮ ಕೈಗೊಳ್ಳುತ್ತಿದ್ದಾರೆ

-ಸುನೀತಾ, ಪ್ರಯಾಣಿಕ