ಕರ್ನಾಟಕ ಬಜೆಟ್​ ವಿದೇಶ ಮಹಿಳಾ ದಿನಾಚರಣೆ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Indian Army: ಭೂಸೇನೆಗೆ ಸಿಗಲಿದೆ ಸ್ಪೈಡರ್‌ ಬಲ

ಭಾರತೀಯ ಸೇನಾಪಡೆಯಲ್ಲಿ ಸ್ಪೈಡರ್ ಮಾದರಿಯ ಯಂತ್ರವನ್ನು ಬಳಸಿಕೊಂಡು ಲ್ಯಾಂಡ್ ಮೈನ್ ಅಳವಡಿಸುವ ವಿನೂತನ ತಂತ್ರಜ್ಞಾನವನ್ನು ಪರಿಚಯಿಸಲು ಸಿದ್ಧತೆ ನಡೆದಿದ್ದು, ಈಗಾಗಲೇ ಭಾರತದ ಮರಳುಗಾಡಿಯಲ್ಲಿ ಪ್ರಾಯೋಗಿಕವಾಗಿ ಈ ಸ್ಪೈಡರ್ ಕಾರ್ಯ ಆರಂಭ ಗೊಂಡಿದೆ. ಒಂದು ವೇಳೆ ಎಲ್ಲ ತಾಪಮಾನ, ಎಲ್ಲ ವಾತಾವರಣದಲ್ಲಿಯೂ ಇದು ಯಶಸ್ವಿಯಾದರೆ, ಮುಂದಿನ ಕೆಲ ವರ್ಷದಲ್ಲಿಯೇ ಭಾರತೀಯ ಭೂಸೇನೆಗೆ ಪೂರ್ಣಪ್ರಮಾಣದಲ್ಲಿ ಕಾರ್ಯ ನಿರ್ವಹಿಸಲಿದೆ ಎಂದು ಅಧಿಕಾರಿಗಳು ತಿಳಿಸಿ ದ್ದಾರೆ.

Indian Army: ಭೂಸೇನೆಗೆ ಸಿಗಲಿದೆ ಸ್ಪೈಡರ್‌ ಬಲ

Profile Ashok Nayak Feb 14, 2025 11:30 AM

ಅಪರ್ಣಾ ಎ.ಎಸ್. ಬೆಂಗಳೂರು

ಶತ್ರುಗಳ ಪ್ರವೇಶಕ್ಕೆ ಅಡ್ಡಿಪಡಿಸುವ ಲ್ಯಾಂಡ್ ಮೈನ್ಸ್ ಇಡುವುದು ಇನ್ನು ಸುಲಭ

3 ಕಿಮೀ ದೂರದಿಂದಲೇ ಮದ್ದುಗುಂಡು ಇಡುವ ನೂತನ ತಂತ್ರಜ್ಞಾನ ಅಭಿವೃದ್ದಿ

ಭೂ ಭಾಗದ ರಕ್ಷಣೆಯ ಸಮಯದಲ್ಲಿ ಸೈನಿಕರಿಗೆ ಬಹುದೊಡ್ಡ ಪ್ರಮಾಣದಲ್ಲಿ ಕಾಡುವುದು, ಶತ್ರು ಗಳ ಪ್ರವೇಶ. ಗಡಿಭಾಗದೊಳಗೆ ಶತ್ರುಗಳು ನುಸುಳದಂತೆ ತಡೆಯಲು ಹಲವು ಭಾರಿ ಲ್ಯಾಂಡ್ ಮೈನ್‌ಗಳನ್ನು ಸೇನೆಯಲ್ಲಿ ಬಳಸಲಾಗುತ್ತದೆ. ಆದರೆ ಈ ರೀತಿಯ ಮೈನ್‌ಗಳು ಅಳವಡಿಸಿದಾಗ ಶತ್ರುಗಳು ಬಾರದಿದ್ದರೆ ಭಾರಿ ನಷ್ಟವಾಗುತ್ತದೆ. ಆದ್ದರಿಂದ ಈ ನಷ್ಟ ತಡೆಯುವ ಉದ್ದೇಶದಿಂದ ಭೂಸೇನೆಗೆ ‘ಸ್ಪೈಡರ್’ನ ಬಲ ಕೊಡಲು ರಕ್ಷಣಾ ಇಲಾಖೆ ಮುಂದಾಗಿದೆ.

ಹೌದು, ಭಾರತೀಯ ಸೇನಾಪಡೆಯಲ್ಲಿ ಸ್ಪೈಡರ್ ಮಾದರಿಯ ಯಂತ್ರವನ್ನು ಬಳಸಿಕೊಂಡು ಲ್ಯಾಂಡ್ ಮೈನ್ ಅಳವಡಿಸುವ ವಿನೂತನ ತಂತ್ರಜ್ಞಾನವನ್ನು ಪರಿಚಯಿಸಲು ಸಿದ್ಧತೆ ನಡೆದಿದ್ದು, ಈಗಾಗಲೇ ಭಾರತದ ಮರಳುಗಾಡಿಯಲ್ಲಿ ಪ್ರಾಯೋಗಿಕವಾಗಿ ಈ ಸ್ಪೈಡರ್ ಕಾರ್ಯ ಆರಂಭ ಗೊಂಡಿದೆ. ಒಂದು ವೇಳೆ ಎಲ್ಲ ತಾಪಮಾನ, ಎಲ್ಲ ವಾತಾವರಣದಲ್ಲಿಯೂ ಇದು ಯಶಸ್ವಿಯಾದರೆ, ಮುಂದಿನ ಕೆಲ ವರ್ಷದಲ್ಲಿಯೇ ಭಾರತೀಯ ಭೂಸೇನೆಗೆ ಪೂರ್ಣಪ್ರಮಾಣದಲ್ಲಿ ಕಾರ್ಯ ನಿರ್ವಹಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಾಮಾನ್ಯವಾಗಿ ಲ್ಯಾಂಡ್ ಮೈನಿಂಗ್ ಅನ್ನು ಅಳವಡಿಸಿದ ಕೆಲ ದಿನಗಳ ಕಾಲ ಮಾತ್ರ ನಿರ್ವಹಿ ಸುತ್ತವೆ. ಆ ಸಮಯ ಮುಗಿದರೆ, ಮೈನ್ ಸೋಟವಾಗುವುದಿಲ್ಲ. ಆದರೆ ಅನೇಕ ಬಾರಿ ಶತ್ರು ರಾಷ್ಟ್ರ ಗಳು ಬಾರದಿದ್ದರೆ 75 ಸಾವಿರ ರು. ಮೊತ್ತದ ಲ್ಯಾಂಡ್ ವ್ಯರ್ಥವಾಗುತ್ತದೆ. ಹಾಗೆಂದ ಮಾತ್ರ ಶತ್ರುಗಳು ಬಂದಾಗ ಸೈನಿಕರು ಹೋಗಿ, ಮೈನ್ ಅಳವಡಿಸಲು ಸಾಧ್ಯವಿಲ್ಲ. ಆದ್ದರಿಂದ ಈ ಸ್ಪೈಡರ್‌ ನಲ್ಲಿರುವ ಕ್ಯಾಮೆರಾ ಬಳಸಿಕೊಂಡು, ಶತ್ರುಗಳ ಆಗಮನವನ್ನು ನೋಡಿಕೊಂಡು ಲ್ಯಾಂಡ್ಮೈನ್ ಅಳವಡಿಸುವ ಆಲೋಚನೆಯಿದೆ ಎನ್ನಲಾಗಿದೆ.

ಸ್ಪೈಡರ್‌ನ ಅಗತ್ಯವೇನಿದೆ?: ಈ ವಿನೂತನ ತಂತ್ರಜ್ಞಾನದ ಸ್ಪೈಡರ್ ಅನ್ನು ಏರೋ ಇಂಡಿಯಾ ದಲ್ಲಿ ಪ್ರದರ್ಶನ ಮಾಡಲಾಗಿದ್ದು, ಈ ಬಗ್ಗೆ ಅಧಿಕಾರಿಗಳು ಮಾತನಾಡಿದ್ದು, ಸಾಮಾನ್ಯವಾಗಿ ಶತ್ರುಗಳು ದಾಳಿ ಮಾಡಲು ಬರುವಾಗ ಒಂದೊಂದೇ ಟ್ಯಾಂಕರ್‌ನಲ್ಲಿ ಬರುವುದಿಲ್ಲ. ಏಕಕಾಲಕ್ಕೆ 10ಕ್ಕೂ ಹೆಚ್ಚು ಟ್ಯಾಂಕರ್‌ನಲ್ಲಿ ದಾಳಿ ನಡೆಸಲು ಮುಂದಾಗುತ್ತಾರೆ. ಈ ಸಮಯದಲ್ಲಿ ಸಾವಿರಕ್ಕೂ ಹೆಚ್ಚು ಲ್ಯಾಂಡ್ ಮೈನ್ ಅಳವಡಿಸಬೇಕಾಗುತ್ತದೆ.

ಏಕಾಏಕಿ ದಾಳಿ ನಡೆದ ಸಮಯದಲ್ಲಿ ಸೈನಿಕರು ಹೋಗಿ ಲ್ಯಾಂಡ್ ಮೈನ್ ಅಳವಡಿಸಿದರೆ ಜೀವ ಕಳೆದುಕೊಳ್ಳುವ ಸಾಧ್ಯತೆಯಿರುತ್ತದೆ. ಆದ್ದರಿಂದ ಈ ಸ್ಪೈಡರ್‌ನಲ್ಲಿ ಸುಮಾರು ಐದು ಕೆ.ಜಿ ತೂಕದ ಲ್ಯಾಂಡ್ ಮೈನ್ ಅನ್ನು ರಿಮೋಟ್ ಮೂಲಕ ಅಗತ್ಯವಿರುವ ಕಡೆಯಲ್ಲಿ ಹೂತಿಡಬಹುದು.

ಸ್ಪೈಡರ್ ಭೂಮಿಯ ತೀರಾ ಕೆಳಮಟ್ಟದಲ್ಲಿ ಸಂಚರಿಸುವುದರಿಂದ ಶತ್ರುಗಳಿಗೆ ಗಮನಕ್ಕೆ ಬರುವು ದಿಲ್ಲ. ಇದರಿಂದ ಲ್ಯಾಂಡ್ ಮೈನ್ ಅಳವಡಿಕೆ ಸುಲಭ. ಒಂದು ವೇಳೆ ಶತ್ರುಗಳ ಗಮನಕ್ಕೆ ಬಂದರೂ, ಸೈನಿಕರು ಅಲರ್ಟ್ ಇದ್ದಾರೆಂದು ವಾಪಸು ಹೋಗುವ ಸಾಧ್ಯತೆಯಿರುತ್ತದೆ. ಆದ್ದರಿಂದ ಯಾವುದೇ ಸೈನಿಕನ ಜೀವವನ್ನು ಪಣಕ್ಕೆ ಇಡದೇ, ಸುಮಾರು ಮೂರು ಕಿಮೀ ದೂರದಲ್ಲಿಯೇ ಕೂತು ಈ ಸ್ಪೈಡರ್ ಗಳ ಸಹಾಯದಿಂದ ಲ್ಯಾಂಡ್ ಮೈನ್ ಅಳವಡಿಸಬಹುದು ಎಂದು ವಿವರಿಸಿದ್ದಾರೆ.

ಆಟೋಮ್ಯಾಟಿಕ್ ಮಿಷನ್‌ಗನ್ ಸಿದ್ಧ

ಇಷ್ಟು ದಿನಗಳ ಭಾರತೀಯ ಸೇನೆಯಲ್ಲಿ ಭಿನ್ನ-ವಿಭಿನ್ನ ಮಿಷನ್ ಗನ್ ಗಳಿಗೇನು ಕಡಿಮೆಯಿರ ಲಿಲ್ಲ. ಆದರೀಗ ಭೂಸೇನೆ ಅಭಿವೃದ್ಧಿಪಡಿಸಿರುವ ವಿನೂತನ ತಂತ್ರಜ್ಞಾನದಲ್ಲಿ ಆಟೋ ಮ್ಯಾಟಿಕ್ ಮಿಷನ್‌ಗನ್‌ಗಳನ್ನು ಅಭಿವೃದ್ಧಿಪಡಿಸಲಾಗಿದೆ. ಈ ತಂತ್ರಜ್ಞಾನದ ಮೂಲಕ ನಿಗದಿತ ಸ್ಥಳದಲ್ಲಿ ಕ್ಯಾಮೆರಾ ಕಣ್ಗಾವಲಿನಲ್ಲಿಡಲಾಗುತ್ತದೆ. ಒಂದು ವೇಳೆ ನಿಗದಿತ ಸ್ಥಳದಲ್ಲಿ ಅನಾಮಧೇಯ ಅಥವಾ ಶತ್ರು ಸೈನ್ಯ ಬಂದರೆ ಸ್ವಯಂಚಾಲಿತವಾಗಿ ಮಿಷನ್‌ಗನ್ ಆನ್ ಆಗುತ್ತದೆ.

ಒಂದು ವೇಳೆ ಆಟೋಮ್ಯಾಟಿಕ್ ಬೇಡವೆಂದರೆ, ಆ ಆಯ್ಕೆಯನ್ನು ರದ್ದುಪಡಿಸಿ ಸೈನಿಕರೇ ಗುಂಡ ನ್ನು ಹಾರಿಸಬಹುದು. ವಿವಿಧ ಶ್ರೇಣಿಯಲ್ಲಿ ಈ ಗನ್ ಅನ್ನು ಬಳಸಬಹುದಾಗಿದ್ದು, 7.5 ಎಂ.ಎಂ. ಗುಂಡಿನವರೆಗೆ ಸದ್ಯಕ್ಕೆ ಬಳಸಬಹುದಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ವಿಶೇಷತೆಯೇನು?

ಮಾನವನ ಸಹಾಯವಿಲ್ಲದೇ, ಮೂರು ಕಿಮೀ ದೂರದಲ್ಲಿಯೇ ಲ್ಯಾಂಡ್ ಮೈನ್ ಅಳವಡಿಸಬ ಹುದು

ಸೈನಿಕರು ಮೂರು ಕಿಮೀ ದೂರದಿಂದಲೇರಿಮೋಟ್ ಮೂಲಕ ಇದನ್ನು ನಿರ್ವಹಿಸಬಹುದು

ಮರಳುಗಾಡು ಸೇರಿದಂತೆ ಯಾವುದೇ ವಾತಾವರಣದಲ್ಲಿಯೂ ಕಾರ್ಯನಿರ್ವಹಣೆ ಈ ಸ್ಪೈಡರ್‌ ನಿಂದ ಲ್ಯಾಂಡ್ ಮೈನ್ ವ್ಯರ್ಥದಿಂದಾಗುವ ಹಣ ಉಳಿತಾಯವಾಗಲಿದೆ.