ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಮುದನೂರಿನಲ್ಲಿ ಹುದುಗಿದ ಇತಿಹಾಸ ಪರಂಪರೆ

ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಮುದನೂರು (ಬಿ) ಗ್ರಾಮ ಈ ಹಿಂದೆ ಕಲ್ಯಾಣ ಚಾಲುಕ್ಯರ ಕಾಲದಲ್ಲಿ ವಾಣಿಜ್ಯ ಕೇಂದ್ರವಾಗಿ ನಂತರ ಸದ್ಯ ಪುಣ್ಯ ಕ್ಷೇತ್ರವಾಗಿದೆ. ಹಾಗೆಯೇ ಬಸವಾದಿ ಶರಣರಿಗಿಂತ ಪೂರ್ವದಲ್ಲೇ ವಚನಸಾಹಿತ್ಯ ಪರಿಚಯಿಸಿದ 10ನೇ ಶತಮಾನದ ದಾಸಿಮಯ್ಯ ಅವರ ಜನ್ಮಭೂಮಿ ಕೂಡಾ ಇದಾಗಿದೆ.

ಮುದನೂರಿನಲ್ಲಿ ಹುದುಗಿದ ಇತಿಹಾಸ ಪರಂಪರೆ

-

Ashok Nayak
Ashok Nayak Jan 26, 2026 8:06 AM

ವೀರೇಶ ಎಸ್.ಕೆಂಭಾವಿ ಯಾದಗಿರಿ

ಲಕ್ಕುಂಡಿಯಂತೆ ದೇವರ ದಾಸಿಮಯ್ಯ ಜನ್ಮ ಸ್ಥಳ ಯಾದಗಿರಿಯ ಮುದನೂರು ಉತ್ಖನನಕ್ಕೆ ಗ್ರಾಮಸ್ಥರ ಆಗ್ರಹ

ಗದಗದ ಐತಿಹಾಸಿಕ ಲಕ್ಕುಂಡಿಯಲ್ಲಿ ಕಳೆದೊಂದು ವಾರದಿಂದ ಉತ್ಖನನ ನಡೆಯುತ್ತಿದೆ. ಇದೀಗ ಅದೇ ರೀತಿ ದೇವರ ದಾಸಿಮಯ್ಯ ಅವರ ಜನ್ಮಸ್ಥಳ ಮುದನೂರು (ಬಿ) ಗ್ರಾಮದಲ್ಲಿ ಯೂ ಉತ್ಖನನ ನಡೆಸುವಂತೆ ಕೂಗು ಕೇಳಿ ಬರುತ್ತಿದೆ.

ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಮುದನೂರು (ಬಿ) ಗ್ರಾಮ ಈ ಹಿಂದೆ ಕಲ್ಯಾಣ ಚಾಲುಕ್ಯರ ಕಾಲದಲ್ಲಿ ವಾಣಿಜ್ಯ ಕೇಂದ್ರವಾಗಿ ನಂತರ ಸದ್ಯ ಪುಣ್ಯ ಕ್ಷೇತ್ರವಾಗಿದೆ. ಹಾಗೆಯೇ ಬಸವಾದಿ ಶರಣರಿಗಿಂತ ಪೂರ್ವದಲ್ಲೇ ವಚನಸಾಹಿತ್ಯ ಪರಿಚಯಿಸಿದ 10ನೇ ಶತಮಾನದ ದಾಸಿಮಯ್ಯ ಅವರ ಜನ್ಮಭೂಮಿ ಕೂಡಾ ಇದಾಗಿದೆ. ಹೀಗಾಗಿ ಭೂಗರ್ಭ ದಲ್ಲಿ ಐತಿಹಾಸಿಕ ಕುರುಹುಗಳಿದ್ದು, ಈ ಧಾರ್ಮಿಕ ಕ್ಷೇತ್ರದಲ್ಲಿ ಉತ್ಖನನ ಮಾಡಲಿ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಇಲ್ಲಿನ ಐತಿಹಾಸಿಕ ಸಂಪತ್ತು, ಶಿಲಾ ಶಾಸನಗಳು ಹಾಗೂ ದೇವಸ್ಥಾನಗಳು ಭೂಗರ್ಭದಲ್ಲಿ ಮುಚ್ಚಿ ಹೋಗಿವೆ. ಉತ್ಪನನ ಮಾಡುವ ಮೂಲಕ ಹೊರತೆಗೆಯುವ ಕೆಲಸವಾಗಬೇಕಿದೆ. ಶಿವಲಿಂಗ ಇರುವ ದೇವಸ್ಥಾನ ಮೇಲೆ ಮನೆ ನಿರ್ಮಾಣ ಮಾಡಿಕೊಂಡು ಜನರು ವಾಸವಾಗಿದ್ದಾರೆ.

ಇದನ್ನೂ ಓದಿ: Yadgir News: ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಭರ್ಜರಿ ಗೆಲುವು

ಸುಮಾರು 160 ಮನೆಗಳು ದೇವಸ್ಥಾನ ಮೇಲೆ ಇವೆ. ಮನೆಗಳನ್ನು ಸ್ಥಳಾಂತರ ಮಾಡಿ, ಉತ್ಖನನ ಮಾಡಿದರೆ ಭೂಗರ್ಭದಲ್ಲಿಯೇ ಅಪಾರ ಸಂಪತ್ತು ದೊರೆಯುತ್ತದೆ. ಅದೇ ರೀತಿ ನೂರಾರು ದೇಗುಲಗಳ ಕುರುಹುಗಳು ಪತ್ತೆಯಾಗಲಿವೆ ಎನ್ನುವ ಮಾತುಗಳು ಸಾರ್ವಜನಿಕರ ವಲಯದಲ್ಲಿ ಹರಿದಾಡುತ್ತಿವೆ.

160 ಮನೆಗಳ ಸ್ಥಳಾಂತರ: ಈಗಾಗಲೇ ಜಿಲ್ಲಾಡಳಿತ 160 ಮನೆಗಳ ಸ್ಥಳಾಂತರಕ್ಕೆ ಗುರುತಿಸಿದೆ. ಕೂಡಲೇ 160 ಮನೆಗಳ ಸ್ಥಳಾಂತರ ಮಾಡಿ, ಸರಕಾರ ಉತ್ಖನನ ಮಾಡಿದರೆ ಭಾರಿ ಪ್ರಮಾಣದಲ್ಲಿ ಸಂಪತ್ತು ಹಾಗೂ ಐತಿಹಾಸಿಕ ಕುರುಹುಗಳು ದೊರಕುತ್ತದೆ. ಈ ಕಾರ್ಯಕ್ಕೆ ಸರಕಾರ ಮುಂದಾಗಬೇಕಾಗಿದೆ.

Screenshot_6 R

ಚಾಲುಕ್ಯರ ಕಾಲಾವಧಿಯಲ್ಲಿ ಇದು ವಾಣಿಜ್ಯ ಕೇಂದ್ರವಾಗಿತಂತೆ. ಇಲ್ಲಿ ವಜ್ರ, ಚಿನ್ನಾಭರಣ ಸೇರಿ ಅಪಾರ ಸಂಪತ್ತು ಬಳಕೆಯಾಗಿತ್ತು ಎನ್ನಲಾಗಿದೆ. ನಂತರದ ಕಾಲಾವಧಿಯಲ್ಲಿ ಐತಿಹಾಸಿಕ ಕುರುಹುಗಳು ಮುಚ್ಚಲ್ಪಟ್ಟಿವೆ. ದೇವರ ದಾಸಿಮಯ್ಯ ನೆಲದಲ್ಲಿ ಸುಮಾರು 101 ಶಿವಲಿಂಗ ದೇಗುಲಗಳು ಇವೆ. ಈಗಾಗಲೇ ದಾಸಿ ಮಯ್ಯ ದೇವಾಲಯದ ಸುತ್ತಲೂ ಶಿವಲಿಂಗದ ದೇಗುಲಗಳಿದ್ದು, ಸರಕಾರ ಉತ್ಖನ ಮಾಡಲಿ.

-ಶಾಂತರಡ್ಡಿ ಚೌಧರಿ, ಅಧ್ಯಕ್ಷರು, ದೇವರ ದಾಸಿಮಯ್ಯ ಶಿಕ್ಷಣ ಸಂಸ್ಥೆ

ದಾಸಿಮಯ್ಯ ದೇವಾಲಯದ ಸುತ್ತ ಉತ್ಖನನ ನಡೆಸಿದರೆ ಶಾಸನಗಳು ಸೇರಿ ಹೊಸ ಕುರುಹು ಗಳು ಪತ್ತೆಯಾಗಲಿವೆ. ಹಾಗೇ ಇದನ್ನು ಅಭಿವೃದ್ಧಿಪಡಿಸಿ ಪ್ರವಾಸಿ ತಾಣ ಮಾಡಬೇಕು.

-ನಿಂಗನಗೌಡ ದೇಸಾಯಿ, ಸಂಶೋಧಕರು

ಪ್ರಮುಖಾಂಶಗಳು

ವಚನ ಸಾಹಿತ್ಯದ ಆದಿ, ದೇವರ ದಾಸಿಮಯ್ಯ ನೆಲೆಸಿದ ತಾಣ

ಐತಿಹಾಸಿಕ ಸಂಪತ್ತು, ಶಿಲಾ ಶಾಸನಗಳು ಹಾಗೂ ದೇವಸ್ಥಾನಗಳು ಭೂಗರ್ಭದಲ್ಲಿ ಮುಚ್ಚಿಹೋಗಿರುವ ಸಾಧ್ಯತೆ

ಗ್ರಾಮದಲ್ಲಿ 101 ದೇವಸ್ಥಾನ, 101 ಬಾವಿಗಳಿವೆ, ಅವುಗಳಲ್ಲಿ ಹಲವು ಸದ್ಯ, ಕಣ್ಮರೆ

ಹೀಗಾಗಿ ಅವುಗಳ ಉತ್ಖನ ಕಾರ್ಯಕ್ಕೆ ಸರಕಾರ ಮುಂದಾಗಬೇಕು ಎಂಬ ಆಗ್ರಹ