ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

Market Price: ಮಾರುಕಟ್ಟೆಯಲ್ಲಿ ಸಕ್ಕರೆ, ಗೋಧಿ ಬೆಲೆ ಗಗನಕ್ಕೆ

ಗೋಧಿ ಹಿಟ್ಟು ಮಿಲ್ಸ್ ಗಳಿಗೆ ಉಪಯೋಗಿಸುವ ಗೋಧಿ ಬೆಲೆ ಕ್ವಿಂಟಲ್‌ಗೆ 3000 ರಿಂದ 3500 ರು.ಗೆ ಏರಿಕೆ ಯಾಗಿದೆ. ಇನ್ನೂ ಗ್ರಾಹಕರು ಹಿಟ್ಟು ಮಾಡಿಸುವ ಗೋಧಿ ಬೆಲೆ 3200-3400 ರಿಂದ 3800-4200 ರು.ಗೆ ಏರಿಕೆಯಾಗಿದೆ. ಪರಿಣಾಮ ಕಳೆದ ಮೂರು ತಿಂಗಳಿಂದ ರವೆ, ಸಂಸ್ಕರಿಸಿದ ಮೈದಾ ಹಿಟ್ಟು ಮತ್ತು ಗೋಧಿ ಹಿಟ್ಟಿನ ಸಗಟು ಬೆಲೆ ಕ್ವಿಂಟಲ್‌ಗೆ 400 ರಿಂದ 500 ರಷ್ಟು ಏರಿಕೆ ಕಂಡಿದೆ

ಮಾರುಕಟ್ಟೆಯಲ್ಲಿ ಸಕ್ಕರೆ, ಗೋಧಿ ಬೆಲೆ ಗಗನಕ್ಕೆ

Profile Ashok Nayak Feb 15, 2025 2:16 PM

ಹೂವಪ್ಪ ಐ.ಎಚ್. ಬೆಂಗಳೂರು

ಮಾರುಕಟ್ಟೆಗೆ ಸಕ್ಕರೆ, ಗೋಧಿ ಪೂರೈಕೆ ಶೇ.20ರಷ್ಟು ಕೊರತೆ

ತಂಪು ಪಾನಿಯಗಳು, ಬಿಸ್ಕತ್ ಕಂಪನಿಗಳಿಂದ ಸಕ್ಕರೆ ದಾಸ್ತಾನು

ಸಗಟು ಮಾರುಕಟ್ಟೆಗೆ ಸಕ್ಕರೆ, ಗೋಧಿಯ ಪೂರೈಕೆ ಕೊರತೆಯಿಂದಾಗಿ ಸಕ್ಕರೆ ಸಂಸ್ಕರಿಸಿದ ಗೋಧಿ ಹಿಟ್ಟು (ಮೈದಾ) ಮತ್ತು ಗೋಧಿ ಹಿಟ್ಟು (ಅಟ್ಟಾ) ದರಗಳು ಸಗಟು ಮತ್ತು ಚಿಲ್ಲರೆ ಮಾರುಕಟ್ಟೆ ಗಳಲ್ಲಿ ಏರಿಕೆಗೆ ಕಾರಣವಾಗಿವೆ. ಮಾರುಕಟ್ಟೆಗೆ ಅಂದಾಜು ಗೋಧಿ ಮತ್ತು ಸಕ್ಕರೆ ಶೇ.20ರಷ್ಟು ಪೂರೈಕೆ ಕಡಿಮೆಯಾಗಿದೆ. ಮುಂದಿನ ದಿನಗಳಲ್ಲಿ ಊರ ಜಾತ್ರೆಗಳು ಮತ್ತು ಮದುವೆ ಸೀಜನ್ ಸಮೀಪಿಸುತ್ತಿದ್ದು, ಬೆಲೆಗಳು ಶೀಘ್ರದ ಕಡಿಮೆಯಾಗುವ ಸಾಧ್ಯತೆ ಇಲ್ಲ. ಏಪ್ರಿಲ್, ಮೇ ತಿಂಗಳಿಗೆ ಹೊಸ ಗೋಧಿ ಬಂದ ಮೇಲೆ ಇಳಿಕೆಯಾಗಬಹುದು ಎಂದು ಸಗಟು ಮಾರುಕಟ್ಟೆ ವ್ಯಾಪಾರಿಗಳು ಭವಿಷ್ಯ ನುಡಿದಿದ್ದಾರೆ.

ಇದನ್ನೂ ಓದಿ:

ಗೋಧಿ ಹಿಟ್ಟು ಮಿಲ್ಸ್ ಗಳಿಗೆ ಉಪಯೋಗಿಸುವ ಗೋಧಿ ಬೆಲೆ ಕ್ವಿಂಟಲ್‌ಗೆ 3000 ರಿಂದ 3500 ರು.ಗೆ ಏರಿಕೆಯಾಗಿದೆ. ಇನ್ನೂ ಗ್ರಾಹಕರು ಹಿಟ್ಟು ಮಾಡಿಸುವ ಗೋಧಿ ಬೆಲೆ 3200-3400 ರಿಂದ 3800-4200 ರು.ಗೆ ಏರಿಕೆಯಾಗಿದೆ. ಪರಿಣಾಮ ಕಳೆದ ಮೂರು ತಿಂಗಳಿಂದ ರವೆ, ಸಂಸ್ಕರಿಸಿದ ಮೈದಾ ಹಿಟ್ಟು ಮತ್ತು ಗೋಧಿ ಹಿಟ್ಟಿನ ಸಗಟು ಬೆಲೆ ಕ್ವಿಂಟಲ್‌ಗೆ 400 ರಿಂದ 500 ರಷ್ಟು ಏರಿಕೆ ಕಂಡಿದೆ. ಚಿಲ್ಲರೆ ಮಾರುಕಟ್ಟೆಗಳೂ ಇದನ್ನೇ ಅನುಸರಿಸಿದ್ದು, ಕಿಲೋಗ್ರಾಂಗೆ 6 ರಿಂದ 7 ರು ರಷ್ಟು ಏರಿಕೆಯಾಗಿದೆ.

ಗೋಧಿ ಸ್ಟಾಕ್‌ನ ಸೀಮಿತ ಲಭ್ಯತೆಯು ಈ ಬೆಲೆ ಏರಿಕೆಗಳಿಗೆ ಕಾರಣವಾಗಿದೆ ಎಂದು ವ್ಯಾಪಾರಿಗಳು ಹೇಳುತ್ತಾರೆ. ಹೊಸ ಗೋಧಿ ಸರಬರಾಜುಗಳು ಮಾರುಕಟ್ಟೆಗೆ ಪ್ರವೇಶಿಸುವವರೆಗೆ ಬೆಲೆಗಳು ಹೀಗೆ ಮುಂದುವರಿಯಬಹುದು ಎಂದು ನಿರೀಕ್ಷಿಸಲಾಗಿದೆ. ಸಾಮಾನ್ಯವಾಗಿ ಪ್ರಸ್ತುತ, ಪ್ರತಿ ದಿನ ಸುಮಾರು ೮ ರಿಂದ ೧೦ ಟ್ರಕ್ ಲೋಡ್ ರವೆ, ಸಂಸ್ಕರಿಸಿದ ಹಿಟ್ಟು ಮತ್ತು ಗೋಧಿ ಹಿಟ್ಟು ಸಗಟು ಮಾರುಕಟ್ಟೆಗೆ ಬರುತ್ತವೆ.

ಮದುವೆ ಹಾಗೂ ಹಬ್ಬಗಳ ಋತುವಿನಲ್ಲಿ ಸಾಮಾನ್ಯವಾಗಿ ಈ ಉತ್ಪನ್ನಗಳ ಬೇಡಿಕೆಯಲ್ಲಿ ಹೆಚ್ಚಳ ಕಂಡುಬರುತ್ತದೆ. ಇದು ಅಸ್ತಿತ್ವದಲ್ಲಿರುವ ದಾಸ್ತಾನು ಮೇಲಿನ ಬೇಡಿಕೆ ಮತ್ತಷ್ಟು ಹೆಚ್ಚಿಸುತ್ತದೆ ಎಂದು ವರ್ತಕರು ಅಭಿಪ್ರಾಯ ಪಡುತ್ತಾರೆ. ಗೋಧಿ ದಾಸ್ತಾನುಗಳ ಕೊರತೆಯನ್ನು ಪ್ರಮುಖ ಗೋಧಿ-ಉತ್ಪಾದನಾ ರಾಜ್ಯಗಳಾದ ಪಂಜಾಬ, ಹರಿಯಾಣ, ಮಧ್ಯಪ್ರದೇಶ ಮತ್ತು ಗುಜರಾತ್‌ಗಳು ಕಡಿಮೆ ದಾಸ್ತನು ಎದುರಿಸುತ್ತಿವೆ.

ಹೊಸ ಸ್ಟಾಕ್‌ಗಳು ಬರುವವರೆಗೆ ಗೋಧಿ ಆಧಾರಿತ ಉತ್ಪನ್ನಗಳ ಬೆಲೆಗಳು ಕಡಿಮೆಯಾಗುವ ಸಾಧ್ಯತೆಯಿಲ್ಲ ಎಂದು ಎಪಿಎಂಸಿ ಮಾರುಕಟ್ಟೆಯ ಗೋಧಿ ಹಿಟ್ಟು ಮೈದಾ ರವೆ ವ್ಯಾಪಾರಿಗಳು ವಿವರಿಸಿದರು.

2024-25ರ ರಬಿ ಋತುವಿನಲ್ಲಿ ಗೋಧಿ ಬಿತ್ತನೆಯು ವರ್ಷದಿಂದ ವರ್ಷಕ್ಕೆ ಶೇ.1.38ರಷ್ಟು ಹೆಚ್ಚಾಗಿ 320 ಲಕ್ಷ ಹೆಕ್ಟೇರ್‌ಗೆ ತಲುಪಿದೆ. ಚಳಿಗಾಲದ ಪ್ರಮುಖ ಬೆಳೆಯಾದ ಗೋಧಿಯನ್ನು ಕಳೆದ ವರ್ಷ ಅಂದಾಜು 315.63 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಗಿತ್ತು.

ಸಕ್ಕರೆ ಬೆಲೆ ಏರಿಕೆ: ಕಾಫಿ ಪುಡಿ ಬೆಲೆ ಏರಿಕೆ ಬೆನ್ನ ಈಗ ಸಕ್ಕರೆ ಏರಿಕೆಯಾಗಿ ಗ್ರಾಹಕರ ತುಟಿ ಸುಡು ತ್ತಿದೆ. ಭಾರತ ಸರಕಾರವು ಸಕ್ಕರೆಯ ಕನಿಷ್ಠ ಮಾರಾಟ ಬೆಲೆಯನ್ನು ( MSP ) ಹೆಚ್ಚಿಸಲು ಮುಂದಾ ಗಿದೆ. ಇದರಿಂದ ಸಕ್ಕರೆ ಬೆಲೆ ಏರಿಕೆಯಾಗಿದೆ. ಎಂಎಸ್‌ಪಿ ಪ್ರತಿ ಕೆಜಿಗೆ 40-41 ರು.ನಷ್ಟು ಏರಿಸಬೇಕು. ಈ ದರವನ್ನು 2019ರ ಫೆಬ್ರವರಿಯಲ್ಲಿ ನಿಗದಿಪಡಿಸಲಾಗಿತ್ತು. ಹೆಚ್ಚುತ್ತಿರುವ ಉತ್ಪಾದನಾ ವೆಚ್ಚ ಮತ್ತು ಸಕ್ಕರೆ ಕಾರ್ಖಾನೆಗಳು ಎದುರಿಸುತ್ತಿರುವ ಆರ್ಥಿಕ ಒತ್ತಡದಿಂದಾಗಿ ದರವನ್ನು ಹೆಚ್ಚಿಸ ಬೇಕೆಂದು ಉದ್ಯಮ ಸಂಸ್ಥೆಗಳು ನಿರಂತರವಾಗಿ ಒತ್ತಾಯಿಸುತ್ತಿವೆ.

ಇದರಿಂದಾಗಿ ಸಗಟು ಮಾರುಕಟ್ಟೆಯಲ್ಲಿ ಸಕ್ಕರೆ ಬೆಲೆ ಹೆಚ್ಚಾಗಿದೆ. ಎಪಿಎಂಸಿ ಮಾರುಕಟ್ಟೆಗೆ ದಿನಾಂಪ್ರತಿ ಹೆಚ್ಚು ಕಡಿಮೆ 5-6 ಲಾರಿಗಳಷ್ಟು ಸರಬರಾಜಗುತ್ತಿದೆ. ಕಳೆದ ತಿಂಗಳು ಕ್ವಿಂಟಲ್‌ಗೆ ಉತ್ತಮ ಗುಣಮಟ್ಟದ್ದು ಕ್ವಿಂಟಲ್‌ಗೆ 3900-3950 ರು.ಗೆ ಇತ್ತು. ಮಧ್ಯಮ ಸಕ್ಕರೆ 3850-3860 ಅತೀ ಸಣ್ಣ 3800-3820 ಇತ್ತು.

ಇದೀಗ ಬೆಲೆ ಏರಿಕೆಯಾಗಿದ್ದು, ಕ್ವಿಂಟಲ್‌ಗೆ ಉತ್ತಮ ಗುಣಮಟ್ಟದ್ದು 2120-2130 ರು. ಗೆ ಮಧ್ಯಮ 2080-2090 ಸಣ್ಣ ಸಕ್ಕರೆ 2050-2060 ಮಾರಾಟವಾಗುತ್ತಿದೆ. ಒಟ್ಟಿನಲ್ಲಿ ಕಳೆದ ತಿಂಗಳಿಗೆ ಹೋಲಿಸಿ ದರೆ ಕೆಜಿಗೆ ಹೆಚ್ಚು ಕಡಿಮೆ 3-5 ರು. ಏರಿಕೆಯಾಗಿದೆ. ಚಿಲ್ಲರೆ ಬೆಲೆಯಲ್ಲಿ ಕೆಜಿಗೆ 42-45 ರು.ಗೆ ಮಾರಾಟ ವಾಗುತ್ತಿದೆ. ಈ ಸಾಲಿನಲ್ಲಿ ಸಕ್ಕರೆ ಉತ್ಪಾದನೆ ಕಡಿಮೆ ಇದೆ. ಮುಂದೆ ಬೇಸಿಗೆ ಇರುವು ದರಿಂದ ಐಸ್ಕ್ರೀಮ್, ಬಿಸ್ಕೆತ್ ಮತ್ತು ತಂಪು ಪಾನಿಯಗಳ ಕಂಪನಿಗಳು ದಾಸ್ತಾನು ಮಾಡಲಿವೆ.

ಇದರ ಬೇಡಿಕೆಯೊಂದಿಗೆ ಇನ್ನೂ ಬೆಲೆ ಹೆಚ್ಚಾಗುವ ಸಾಧ್ಯತೆ ಇದೆ ಎನ್ನುತ್ತಾರೆ ಸಕ್ಕರೆ ಉತ್ಪಾದಕರು. ಪ್ರಸಕ್ತ ಮಾರುಕಟ್ಟೆ ವರ್ಷದ ಮೊದಲ ತ್ರೈಮಾಸಿಕದಲ್ಲಿ ಸಕ್ಕರೆ ಉತ್ಪಾದನೆಯು ಕಳೆದ ವರ್ಷದ ಇದೇ ಅವಧಿಯಲ್ಲಿ ಅಂದಾಜು 11.30 ಮಿಲಿಯನ್ ಟನ್‌ಗಳಷ್ಟಿತ್ತು. ಇದು 9.54 ಮಿಲಿಯನ್ ಟನ್‌ಗಳಿಗೆ ಇಳಿದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.16ರಷ್ಟು ಕಡಿಮೆಯಾಗಿದೆ ಎನ್ನುತ್ತಿವೆ ಮೂಲಗಳು.

ಪ್ರಮುಖ ರಾಜ್ಯವಾದ ಮಹಾರಾಷ್ಟ್ರದಲ್ಲಿ ಸಕ್ಕರೆ ಉತ್ಪಾದನೆಯಲ್ಲಿ ಕುಸಿತವು ಉತ್ಪಾದನೆಯಲ್ಲಿ ಇಳಿಕೆಗೆ ಇದು ಪ್ರಮುಖ ಕಾರಣವಾಗಿದೆ. ಇತ್ತೀಚೆಗೆ ಸಕ್ಕರೆ ಉದ್ಯಮದ ಮೇಲೆ ಪರಿಣಾಮ ಬೀರುವ ನಿರ್ಣಾಯಕ ವಿಷಯಗಳ ಕುರಿತು ಚರ್ಚಿಸಲು ವಿವಿಧ ಸಕ್ಕರೆ ಕಾರ್ಖಾನೆಗಳ ಸಂಘಗಳ ಪ್ರತಿನಿಧಿ ಗಳು ಕೇಂದ್ರ ಸಚಿವರನ್ನು ಭೇಟಿ ಮಾಡಿದ್ದಾರೆ.

ಸಕ್ಕರೆ ಎಂಎಸ್‌ಪಿ ಮತ್ತು ಎಥೆನಾಲ್ ಖರೀದಿ ಬೆಲೆಯನ್ನು ಹೆಚ್ಚಿಸುವ ಅಗತ್ಯವನ್ನು ಸಂಘಗಳು ಒತ್ತಾಯಿಸುತ್ತಿವೆ. ಹೆಚ್ಚುತ್ತಿರುವ ಕಬ್ಬಿನ ಎಫ್‌ ಆರ್‌ಪಿ ಮತ್ತು ಸಕ್ಕರೆ ಎಂಎಸ್‌ಪಿ ನಡುವೆ ಹೆಚ್ಚು ತ್ತಿರುವ ಅಂತರವನ್ನು ಎತ್ತಿ ತೋರಿಸುತ್ತಿರುವ ಉದ್ಯಮ ಪ್ರತಿನಿಧಿಗಳು, ಸಕ್ಕರೆ ಎಂಎಸ್‌ಪಿ ಹೆಚ್ಚಿಸುವ ಮೂಲಕ ಈ ಸಮಸ್ಯೆಯನ್ನು ಪರಿಹರಿಸಲು ಸಕ್ಕರೆ ಕಾರ್ಖಾನೆಗಳ ಸಂಘಟನೆಗಳು ಸರಕಾರವನ್ನು ಒತ್ತಾಯಿಸುತ್ತಿವೆ.

*

ಕಳೆದ ವರ್ಷ ನೀರು ಲಭ್ಯವಿಲ್ಲದ ಕಾರಣ ನಾವು ಹೆಚ್ಚು ಕಬ್ಬನ್ನು ನೆಡಲು ಸಾಧ್ಯವಾಗಲಿಲ್ಲ. ಈ ವರ್ಷ ಉತ್ತಮ ಮಳೆಯಾಗಿರುವುದರಿಂದ ನಮಗೆ ಸಾಕಷ್ಟು ನೀರು ಇದೆ. ಹೀಗಾಗಿ ಹೆಚ್ಚು ಕಬ್ಬು ನಾಟಿಯೊಂದಿಗೆ ಮುಂದಿನ ಬೆಳೆ ಹೆಚ್ಚು ತೆಗೆಯಬಹುದು.

-ದೇವೇಂದ್ರಪ್ಪ ಹಂಚಿನಮನಿ ಹಾವೇರಿ ಜಿಲ್ಲೆಯ ಕಬ್ಬು ಬೆಳೆಗಾರ

ಹೊಸ ಬೆಳೆ ಮಾರುಕಟ್ಟೆಗೆ ಬರುವವರೆಗೆ ನಾವೆಲ್ಲರೂ ಉಳಿದ ಹಳೆಯ ಗೋಧಿ ದಾಸ್ತಾನುಗಳನ್ನು ಅವಲಂಬಿಸಬೇಕಾಗಿದೆ. ಏಪ್ರಿಲ್‌ಗೆ ಹೊಸ ಗೋಧಿ ಬರಲಿದೆ. ಉತ್ತಮ ಇಳುವರಿ ಬಂದರೆ ಗೋಧಿ ಮತ್ತು ಹಿಟ್ಟು ಬೆಲೆಗಳು ಕಡಿಮೆಯಾಗಬಹುದು.

-ನಾರಾಯಣಸ್ವಾಮಿ ಮೈದಾ ಗೋಧಿ ಹಿಟ್ಟು ಉತ್ಪಾದಕರು, ಬೆಂಗಳೂರು

ಈ ಸಾಲಿನಲ್ಲಿ ಸಕ್ಕರೆ ಉತ್ಪಾದನೆ ಕಡಿಮೆ ಇದೆ. ಮುಂದೆ ಬೇಸಿಗೆ ಇರುವುದರಿಂದ ಐಸ್ಕ್ರೀಮ್, ಬಿಸ್ಕೆತ್ ಮತ್ತು ತಂಪು ಪಾನಿಯಗಳ ಕಂಪನಿಗಳು ದಾಸ್ತಾನು ಮಾಡಲಿವೆ. ಇದರ ಬೇಡಿಕೆಯೊಂದಿಗೆ ಇನ್ನೂ ಬೆಲೆ ಹೆಚ್ಚಾಗುವ ಸಾಧ್ಯತೆ ಇದೆ.

-ಸತೀಶ್ ಎಪಿಎಂಸಿ ಸಕ್ಕರೆ ವ್ಯಾಪಾರಿ