ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸೌಲಭ್ಯ ವಂಚಿತ ಪದವಿ ಕಾಲೇಜು

ತಾಲೂಕಾ ಕೇಂದ್ರವಾಗಿರುವ ರಬಕವಿ-ಬನಹಟ್ಟಿಗೆ ಪದವಿ ಕಲಿಯುವ ವಿದ್ಯಾರ್ಥಿಗಳಿಗೆ ಸರಕಾರಿ ಪದವಿ ಕಾಲೇಜು ಸವಾಲಾಗಿ ಕಾಡುತ್ತಿದೆ. ಕಲೆ ಹಾಗೂ ವಾಣಿಜ್ಯ ವಿಭಾಗ ನಿರ್ವಹಣೆ ಯಲ್ಲಿರುವ ಇಲ್ಲಿನ ಕಾಲೇಜು ಪ್ರಸಕ್ತ ವರ್ಷದಿಂದ ಬಿಬಿಎ ಹಾಗೂ ಬಿಸಿಎ ವಿಭಾಗ ಪ್ರಾರಂಭ ಗೊಳ್ಳಲಿದೆ.

ಸೌಲಭ್ಯ ವಂಚಿತ ಪದವಿ ಕಾಲೇಜು

-

Profile
Ashok Nayak May 25, 2026 10:11 AM

ಚಂದ್ರಶೇಖರ ತುಂಗಳ ರಬಕವಿ-ಬನಹಟ್ಟಿ

ಬಸ್‌ʼಗಳು ಇಲ್ಲದೆ ವಿದ್ಯಾರ್ಥಿಗಳ ಸಂಖ್ಯೆ ಗಣನೀಯ ಕುಸಿತ

ಸಾರಿಗೆ ವ್ಯವಸ್ಥೆ ಕಲ್ಪಿಸಲು ಶಾಸಕ ಭರವಸೆ

ತಾಲೂಕಾ ಕೇಂದ್ರವಾಗಿರುವ ರಬಕವಿ-ಬನಹಟ್ಟಿಗೆ ಪದವಿ ಕಲಿಯುವ ವಿದ್ಯಾರ್ಥಿಗಳಿಗೆ ಸರಕಾರಿ ಪದವಿ ಕಾಲೇಜು ಸವಾಲಾಗಿ ಕಾಡುತ್ತಿದೆ. ಕಲೆ ಹಾಗೂ ವಾಣಿಜ್ಯ ವಿಭಾಗ ನಿರ್ವಹಣೆಯಲ್ಲಿರುವ ಇಲ್ಲಿನ ಕಾಲೇಜು ಪ್ರಸಕ್ತ ವರ್ಷದಿಂದ ಬಿಬಿಎ ಹಾಗೂ ಬಿಸಿಎ ವಿಭಾಗ ಪ್ರಾರಂಭಗೊಳ್ಳಲಿದೆ.

ಕಳೆದ 5 ವರ್ಷಗಳಿಂದ ಅವಳಿ ನಗರದಿಂದ ಸುಮಾರು 3 ಕಿ.ಮೀ. ದೂರದ ಮದನಮಟ್ಟಿ ಗ್ರಾಮ ಸಮೀಪ 5 ಎಕರೆ ಪ್ರದೇಶದಲ್ಲಿ ಕಾಲೇಜು ನಿರ್ಮಾ ಣವಾಗಿದೆ. ಅಂದಿನಿಂದಲೂ ಕಾಲೇಜು ವಿದ್ಯಾರ್ಥಿಗಳ ಪ್ರವೇಶಾತಿ ಗಣನೀಯ ಇಳಿಕೆ ಕಂಡಿರುವದು ಗಮನಾರ್ಹ.

ಬಸ್‌ಗಳ ಕೊರತೆ: ತಾಲೂಕಿನ ಗ್ರಾಮಗಳಾದ ಹನಗಂಡಿ, ನಾವಲಗಿ, ಚಿಮ್ಮಡ, ಯಲ್ಲಟ್ಟಿ ಪ್ರದೇಶಗಳಿಂದ ಬರುವ ವಿದ್ಯಾರ್ಥಿಗಳಿಗೆ ಬಸ್‌ಗಳ ಸೌಕರ್ಯವಿಲ್ಲ. ಕೇವಲ ಬನಹಟ್ಟಿ ಯಿಂದ ಬೆಳಗ್ಗೆ ಒಂದು ಹೊರತುಪಡಿಸಿ ಈಗಲೂ ವಿದ್ಯಾರ್ಥಿ ಅದರಲ್ಲೂ ವಿದ್ಯಾರ್ಥಿನಿ ಯರು ನಡೆದುಕೊಂಡೇ ದೂರದ ಬಸ್ ನಿಲ್ದಾಣಕ್ಕೆ ತೆರಳಬೇಕಾದ ಅನಿವಾರ್ಯತೆ.

ಇದರಿಂದಾಗಿ ನಿರ್ಜನ ಪ್ರದೇಶವಾಗಿರುವ ಕಾರಣ ಪಾಲಕರು ಸರ್ಕಾರಿ ಪದವಿ ಕಾಲೇಜಿಗೆ ಪ್ರವೇಶಾತಿಗೆ ಹಿಂದೇಟು ಹಾಕುವಲ್ಲಿ ಕಾರಣವಾಗಿದ್ದು, ದೂರದ ಜಮಖಂಡಿ ಹಾಗೂ ಸಾಲ-ಶೂಲ ಮಾಡಿಯಾದರೂ ಖಾಸಗಿ ಕಾಲೇಜುಗಳಿಗೆ ಮಕ್ಕಳನ್ನು ಕಳಿಸುತ್ತಿರುವದು ಆಘಾತಕಾರಿ ವಿಷಯವಾಗಿದೆ.

ಇದನ್ನೂ ಓದಿ: Bagalkot By-Election Results 2026: ಬಾಗಲಕೋಟೆ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಉಮೇಶ್‌ ಮೇಟಿ ಜಯಭೇರಿ

ಅರ್ಧದಷ್ಟು ಪ್ರವೇಶಾತಿ ಕಡಿಮೆ: 5 ವರ್ಷಗಳ ಹಿಂದೆ ಬನಹಟ್ಟಿಯ ಹೃದಯಭಾಗದಲ್ಲಿ ಕಾಲೇಜು ನಿರ್ವಹಣೆಯಾಗುವ ಸಂದರ್ಭ ಸಾವಿರ ಗಡಿಯಲ್ಲಿದ್ದ ಮಕ್ಕಳ ಸಂಖ್ಯೆ ಇದೀಗ 400ಕ್ಕೆ ತಲುಪಿದೆ. ತಡೆಗೋಡೆಯಿಲ್ಲ: ಬೃಹದಾಕಾರವಾಗಿ ಬೆಳೆದು ನಿಂತಿರುವ ಪದವಿ ಕಾಲೇಜಿಗೆ ತಡೆಗೋಡೆಯಿಲ್ಲದ ಕಾರಣ ರಾತ್ರಿ ಹೊತ್ತು ಕುಡುಕರ ತಾಣವಾಗಿ ಪರಿಣಮಿ ಸಿದ್ದು, ಇದರ ನಿರ್ವಹಣೆಯೇ ಸವಾಲಾಗಿ ಕಾಡುತ್ತಿದೆ.

ಮೈದಾನವಿಲ್ಲ: ಪದವಿ ಕಾಲೇಜಿಗೆ ಪ್ರಮುಖವಾಗಿ ಮೈದಾನಗಳು ಅವಶ್ಯ. ಇಲ್ಲಿ ಯಾವದೇ ಮೈದಾನವಿಲ್ಲದೆ ಕ್ರೀಡೆಯಲ್ಲಿ ವಿದ್ಯಾರ್ಥಿಗಳು ಹಿಂದೆ ಬೀಳುವಲ್ಲಿ ಕಾರಣವಾಗಿದೆ. ಒಳಾಂಗಣ ಹಾಗು ಹೊರಾಂಗಣ ಮೈದಾನಕ್ಕೆ ಆದ್ಯತೆ ನೀಡಬೇಕಾದುದು ಸರ್ಕಾರದ ಕರ್ತವ್ಯವಾಗಿದ್ದರೂ ಇಲ್ಲಿ ಮಾತ್ರ ನಮಗೇನು ಸಂಬಂಧವಿಲ್ಲದಂತೆ ಬಿಂಬಿಸುತ್ತಿರುವದು ಬೇಸರ ತರುವಂಥದ್ದು.

ಗಂಥಾಲಯವಿಲ್ಲ: ಡಿಜಿಟಲ್ ಯುಗದಲ್ಲಿರುವ ಕಾಲೇಜುಗಳಿದ್ದರೂ, ಇಲ್ಲಿ ಮಾತ್ರ ಸುಸಜ್ಜಿತ ಗ್ರಂಥಾಲಯವಿಲ್ಲದೆ ವಿದ್ಯಾರ್ಥಿಗಳು ಪರದಾಡುವ ಸ್ಥಿತಿಯಿದೆ. ಒಟ್ಟಾರೆ ವಿದ್ಯಾರ್ಥಿಗಳಿಗೆ ಸರಕಾರಿ ಪದವಿ ಕಾಲೇಜಿಗೆ ತೆರಳಲು ಸಮರ್ಪಕ ವಾಹನದ ಸೌಕರ್ಯ ವಿಲ್ಲದೆ ದೂರದ ಬೆಟ್ಟವಾಗಿದ್ದು, ಸರ್ಕಾರ ಕೂಡಲೇ ಎಚ್ಛೆತ್ತು ಪ್ರಸಕ್ತ ವರ್ಷದಿಂದ ಬಸ್ಗಳ ಸೌಲಭ್ಯ ಕಲ್ಪಿಸುವದರೊಂದಿಗೆ ಬಡ ವಿದ್ಯಾರ್ಥಿಗಳಿಗೆ ನೆರವಾಗಬೇಕಾದ ಅವಶ್ಯಕತೆಯಿದೆ.

image

ನುರಿತ ಉಪನ್ಯಾಸಕರು ಹಾಗೂ ಅತಿಥಿ ಉಪನ್ಯಾಸಕರಿದ್ದಾರೆ. ಮೂಲಭೂತ ಸೌಕರ್ಯಕ್ಕೆ ಮೇಲಧಿಕಾರಿಗಳ ಗಮನಕ್ಕೂ ತಂದಿದ್ದೇನೆ. ಪ್ರಸಕ್ತ ವರ್ಷ ಸಮರ್ಪಕ ವ್ಯವಸ್ಥೆಯಾಗಲಿದೆ’.

-ಶಿವಾನಂದ ಹಂದಿಗುಂದ, ಪ್ರಾಚಾರ್ಯ
image

ಸರಕಾರಿ ಕಾಲೇಜಿಗೆ ಅನುದಾನದ ಅವಶ್ಯಕತೆಯಿದೆ. ಸರಕಾರದಿಂದ ಸಮರ್ಪಕ ಆರ್ಥಿಕ ವ್ಯವಸ್ಥೆಯ ಅನಿವಾರ್ಯತೆಯಿದೆ. ಸಾಕಷ್ಟು ಬಾರಿ ಪ್ರಯತ್ನಿಸಲಾಗಿದೆ. ಹೆಚ್ಚಿನ ಅನುದಾನದೊಂದಿಗೆ ಕಾಲೇಜು ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು. ಸಾರಿಗೆ ವ್ಯವಸ್ಥಾಪಕರೊಂದಿಗೆ ಚರ್ಚಿಸಿ ಬಸ್ ಸೌಕರ್ಯ ಕಲ್ಪಿಸಲಾಗುವುದು.

ಸಿದ್ದು ಸವದಿ, ಶಾಸಕ