Cheetah Operation: INFOSYS campus ಮೈಸೂರಿನಲ್ಲಿ ಚಿರತೆ ಸೆರೆ ಕಾರ್ಯಾಚರಣೆ
Infosys ಕ್ಯಾಂಪಸ್ ಗೆ ಹೊಂದಿಕೊಂಡಂತಿರುವ ಪ್ರದೇಶ ಗಳಲ್ಲಿ ಯೂ ಸಹಾ ಯಾವುದೇ ಚಿರತೆಯ ಚಲನ ವಲನಗಳು ಕಂಡು ಬಂದಿರುವುದಿಲ್ಲ. ಕಾರ್ಯಾಚರಣೆಯಲ್ಲಿ Aerial search ಗಾಗಿ ಎರಡು drone ಗಳನ್ನು ಹಾಗೂ ಪಶುವೈದ್ಯಕೀಯ ತಂಡವನ್ನು ಬಳಸ ಲಾಗಿರುತ್ತದೆ.
                                INFOSYS campus ಮೈಸೂರಿನಲ್ಲಿ ಚಿರತೆ ಸೆರೆ ಕಾರ್ಯಾಚರಣೆ -
                                
                                Ashok Nayak
                            
                                Jan 15, 2025 8:26 PM
                            ಮೈಸೂರು: INFOSYS campus ಮೈಸೂರಿನಲ್ಲಿ ಚಿರತೆ ಸೆರೆ ಕಾರ್ಯಾಚರಣೆಯಲ್ಲಿ ಕಳೆದ 10 ದಿನಗಳಿಂದ ಇಲ್ಲಿಯವರೆಗೂ ಕ್ಯಾಮೆರಾ ಟ್ರ್ಯಾಪ್ ಗಳಲ್ಲಿಯಾಗಲೀ, ಡ್ರೋನ್ ಕ್ಯಾಮೆರಾ, ಕ್ಯಾಂಪಸ್ ನಲ್ಲಿನ ಸಿಸಿಟಿವಿ ಕ್ಯಾಮೆರಾಗಳಲ್ಲಿಯಾಗಲೀ combing cum search ನಲ್ಲಿ ಯಾಗಲೀ ಯಾವುದೇ ಚಲನ ವಲನಗಲಾಗಲೀ , ಹೆಜ್ಜೆ ಗುರುತು ಅಥವಾ ಯಾವುದೇ ರೀತಿಯ ಚಿರತೆ ಇರುವಿಕೆಯ ಕುರುಹುಗಳಾಗಲಿ ಕಂಡು ಬಂದಿರುವುದಿಲ್ಲ.
Infosys ಕ್ಯಾಂಪಸ್ ಗೆ ಹೊಂದಿಕೊಂಡಂತಿರುವ ಪ್ರದೇಶಗಳಲ್ಲಿಯೂ ಸಹಾ ಯಾವುದೇ ಚಿರತೆಯ ಚಲನ ವಲನಗಳು ಕಂಡು ಬಂದಿರುವುದಿಲ್ಲ. ಕಾರ್ಯಾಚರಣೆಯಲ್ಲಿ Aerial search ಗಾಗಿ ಎರಡು droneಗಳನ್ನು ಹಾಗೂ ಪಶುವೈದ್ಯಕೀಯ ತಂಡವನ್ನು ಬಳಸ ಲಾಗಿರುತ್ತದೆ.
ಕಳೆದ 10 ದಿನಗಳಿಂದ ಇಲ್ಲಿಯವರೆಗೂ ಚಿರತೆ ಇರುವಿಕೆ ಬಗ್ಗೆ ಯಾವುದೇ ರೀತಿಯ ಪ್ರತ್ಯಕ್ಷ ಅಥವಾ ಪರೋಕ್ಷ ಕುರುಹುಗಳು ಕಂಡು ಬಾರದೇ ಇರುವುದರಿಂದ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿರುತ್ತದೆ.
ಇಂತಹ ಪ್ರಕರಣಗಳು ಮರುಕಳಿಸದಂತೆ ಇನ್ಫೋಸಿಸ್ ಕ್ಯಾಂಪಸ್ ನ್ನೂ ಬಲವರ್ಧನೆ ಗೊಳಿಸುವ ಬಗ್ಗೆ ಹಾಗೂ ಅನುಸರಿಸಬೇಕಾದ ಮುಂಜಾಗ್ರತೆ ಕ್ರಮಗಳ ಬಗ್ಗೆ ಅಗತ್ಯ ಸಲಹೆ ಸೂಚನೆಗಳನ್ನು ನೀಡಲಾಗಿರುತ್ತದೆ. ರಾತ್ರಿ ವೇಳೆ ಥರ್ಮಲ್ ಡ್ರೋನ್ ಬಳಸಿ ಕ್ಯಾಂಪಸ್ ನಲ್ಲಿ ನಿರಂತರ ನಿಗಾವಣೆ ಮಾಡುವಂತೆ ಸೂಚಿಸಲಾಗಿರುತ್ತದೆ.
ಉಪ ಅರಣ್ಯ ಸಂರಕ್ಷಣಾಧಿಕಾರಿ
ಮೈಸೂರು ಪ್ರಾದೇಶಿಕ ಅರಣ್ಯ ವಿಭಾಗ