ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Gold Rate Today 6th March 2026: ಇಂದೂ ಕುಸಿದ ಚಿನ್ನದ ದರ; 15 ಸಾವಿರ ರುಪಾಯಿ ಗಡಿಯಿಂದ ಕೆಳಗಿಳಿದ ಬೆಲೆ

Gold Price Today 6th March 2026: ಕೆಲವು ದಿನಗಳಿಂದ ಇಳಿಕೆಯ ಹಾದಿಯಲ್ಲಿರುವ ಚಿನ್ನದ ದರ ಶುಕ್ರವಾರವೂ (ಮಾರ್ಚ್‌ 6) ಕಡಿಮೆಯಾಗಿದೆ. ಇಂದು ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನಕ್ಕೆ 70 ರುಪಾಯಿ ಇಳಿಕೆಯಾಗಿ 14,860 ರುಪಾಯಿಗೆ ಬಂದು ತಲುಪಿದೆ. ಇನ್ನು 24 ಕ್ಯಾರಟ್‌ನ 1 ಗ್ರಾಂ ಚಿನ್ನ 77 ರುಪಾಯಿ ಕಡಿಮೆಯಾಗಿದ್ದು, 16,211 ರುಪಾಯಿಗೆ ಕುಸಿದಿದೆ.

ಚಿನ್ನದ ದರದಲ್ಲಿ ಇಂದು ಭಾರಿ ಕುಸಿತ

ಸಾಂದರ್ಭಿಕ ಚಿತ್ರ -

Ramesh Ballamoole
Ramesh Ballamoole Mar 6, 2026 1:51 PM

ಬೆಂಗಳೂರು, ಮಾ. 6: ಆಭರಣ ಗ್ರಾಹಕರಿಗೆ ಮತ್ತೆ ಗುಡ್‌ನ್ಯೂಸ್‌ ಸಿಕ್ಕಿದೆ. ಕೆಲವು ದಿನಗಳಿಂದ ಇಳಿಕೆಯ ಹಾದಿಯಲ್ಲಿರುವ ಚಿನ್ನದ ದರ ಶುಕ್ರವಾರವೂ (ಮಾರ್ಚ್‌ 6) ಕಡಿಮೆಯಾಗಿದೆ (Gold Rate Today 3rd March 2026). ಇಂದು ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನಕ್ಕೆ 70 ರುಪಾಯಿ ಇಳಿಕೆಯಾಗಿ 14,860 ರುಪಾಯಿಗೆ ಬಂದು ತಲುಪಿದೆ. ಇನ್ನು 24 ಕ್ಯಾರಟ್‌ನ 1 ಗ್ರಾಂ ಚಿನ್ನ 77 ರುಪಾಯಿ ಕಡಿಮೆಯಾಗಿದ್ದು, 16,211 ರುಪಾಯಿಗೆ ಕುಸಿದಿದೆ.

ಇನ್ನು 22 ಕ್ಯಾರಟ್‌ನ 8 ಗ್ರಾಂ ಚಿನ್ನದ ಬೆಲೆ 1,18,880 ರುಪಾಯಿ ಆಗಿದ್ದರೆ, 10 ಗ್ರಾಂಗೆ 1,48,600 ರುಪಾಯಿ ಹಾಗೂ 100 ಗ್ರಾಂಗೆ 14,86,000 ರುಪಾಯಿ ಪಾವತಿಸಬೇಕು. 24 ಕ್ಯಾರಟ್‌ 8 ಗ್ರಾಂ ಚಿನ್ನದ ಬೆಲೆ 1,29,688 ರುಪಾಯಿ, 10 ಗ್ರಾಂಗೆ ನೀವು 1,62,110 ರುಪಾಯಿ ಹಾಗೂ 100 ಗ್ರಾಂಗೆ ನೀವು 16,21,100 ರುಪಾಯಿ ನೀಡಬೇಕಾಗುತ್ತದೆ.

ಚೆನ್ನೈಯಲ್ಲಿ 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 14,960 ರುಪಾಯಿ, 24 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 16,320 ರುಪಾಯಿ, ಮುಂಬೈಯಲ್ಲಿ 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 14,860 ರುಪಾಯಿ, 24 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 16,211 ರುಪಾಯಿ, ದೆಹಲಿಯಲ್ಲಿ 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 14,875 ರುಪಾಯಿ, 24 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 16,226 ರುಪಾಯಿ, ಕೋಲ್ಕತ್ತಾದಲ್ಲಿ 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 14,860 ರುಪಾಯಿ, 24 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 16,211 ರುಪಾಯಿ, ಹೈದರಾಬಾದ್‌ನಲ್ಲಿ 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 14,860 ರುಪಾಯಿ, 24 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 16,211 ರುಪಾಯಿ ಇದೆ.

ವಿವಿಧ ನಗರಗಳಲ್ಲಿನ ಚಿನ್ನದ ಬೆಲೆ

ದರ ಪಟ್ಟಿ ಹೀಗಿದೆ

ನಗರ 22 ಕ್ಯಾರಟ್‌ (1 ಗ್ರಾಂ) 24 ಕ್ಯಾರಟ್‌ (1 ಗ್ರಾಂ)
ಚೆನ್ನೈ 14,960 ರುಪಾಯಿ 16,320 ರುಪಾಯಿ
ಮುಂಬೈ 14,860 ರುಪಾಯಿ 16,211 ರುಪಾಯಿ
ದೆಹಲಿ 14,875 ರುಪಾಯಿ 16,226 ರುಪಾಯಿ
ಕೋಲ್ಕತ್ತಾ 14,860 ರುಪಾಯಿ 16,211 ರುಪಾಯಿ
ಹೈದರಾಬಾದ್‌ 14,860 ರುಪಾಯಿ 16,211 ರುಪಾಯಿ

ಬೆಳ್ಳಿ ದರ

ಇತ್ತ ಬೆಳ್ಳಿ ದರ ಯಥಾಸ್ಥಿತಿ ಕಾಯ್ದುಕೊಂಡಿದೆ. ಬೆಂಗಳೂರಿನಲ್ಲಿ 1 ಗ್ರಾಂ ಬೆಳ್ಳಿಗೆ 285 ರುಪಾಯಿ ಇದೆ. 10 ಗ್ರಾಂ ಬೆಳ್ಳಿಗೆ 2,850 ರುಪಾಯಿ ಹಾಗೂ 1 ಕೆಜಿಗೆ 2,85,000 ರುಪಾಯಿ ಕಂಡುಬಂದಿದೆ.

ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.