Chikkaballapur News: ಚರ್ಚ್ ನಿರ್ಮಾಣಕ್ಕೆ ತಡೆ ನೀಡುವಂತೆ ಬೋವಿ ಮುಖಂಡರ ಆಗ್ರಹ
ಗ್ರಾಮ ಪಂಚಾಯತಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ ಬೋವಿ ಸಮಾಜದ ಮುಖಂಡರು ಗ್ರಾ.ಪಂ.ಅಧಿಕಾರಿಗಳ ಮೂಲಕ ತಹಶೀಲ್ದಾರ್ ಹಾಗೂ ಪೊಲೀಸರಿಗೆ ಮನವಿ ಸಲ್ಲಿಸಿದರು
Source : Chikkaballapur Reporter
ಬಾಗೇಪಲ್ಲಿ: ಕ್ರೈಸ್ತ ಜನಾಂಗದವರೇ ಇಲ್ಲದ ಗರುಡಾದ್ರಿಪುರ ಗ್ರಾಮದಲ್ಲಿ ಗ್ರಾಮ ಪಂಚಾ ಯತಿ ಅನುಮತಿ ಪಡೆಯದೆ ಅಕ್ರಮವಾಗಿ ಚರ್ಚ್ ನಿರ್ಮಾಣಕ್ಕೆ ಮುಂದಾದವರ ವಿರುದ್ಧ ಕ್ರಮವಹಿಸಬೇಕೆಂದರು ಬೋವಿ ಸಮುದಾಯದ ಮುಖಂಡರು ಗ್ರಾಮ ಪಂಚಾಯಿತಿ ಅಧಿಕಾರಿಗಳ ಮೂಲಕ ತಹಶೀಲ್ದಾರ್‌ಗೆ ದೂರು ನೀಡಿ ಒತ್ತಾಯಿಸಿದರು.
ಗರುಡಾದ್ರಿಪುರ ಗ್ರಾಮದಲ್ಲಿ ಬೋವಿ ಸಮುದಾಯ ಹೆಚ್ಚಿದ್ದು ಇಲ್ಲಿ ಒಬ್ಬರೂ ಕೂಡ ಕ್ರೆöÊಸ್ತ ಸಮುದಾಯವರು ಇಲ್ಲ.ಆದೂ ಇಲ್ಲಿ ಚರ್ಚ್ ನಿರ್ಮಾಣ ಮಾಡುತ್ತಿರುವುದರ ಹಿಂದೆ ಗ್ರಾಮೀಣರಲ್ಲಿ ಮತಾಂತರ ವಿಷ ಬೀಜ ಬಿತ್ತಿ ಶಾಂತಿಯನ್ನು ಕದಡುವ ಅಪಾಯ ವಿದೆ. ಕ್ರೈಸ್ತ ಮಿಷನರಿಗಳ ಮೂಲ ಉದ್ದೇಶವಾದ ಬಲವಂತದ ಮತಾಂತರಕ್ಕೆ ಕಡಿವಾಣ ಹಾಕಬೇಕೆಂದು ಒತ್ತಾಯಿಸಿ ಮಿಟ್ಟೇಮರಿ ಗ್ರಾಮ ಪಂಚಾಯತಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ ಬೋವಿ ಸಮಾಜದ ಮುಖಂಡರು ಗ್ರಾ.ಪಂ.ಅಧಿಕಾರಿಗಳ ಮೂಲಕ ತಹಶೀಲ್ದಾರ್ ಹಾಗೂ ಪೊಲೀಸರಿಗೆ ಮನವಿ ಸಲ್ಲಿಸಿದರು.
ಬಾಗೇಪಲ್ಲಿ ತಾಲೂಕಿನ ಮಿಟ್ಟೇಮರಿ ಗ್ರಾಮ ಪಂಚಾಯತಿಯ ಗರುಡಾದ್ರಿಪುರ ಗ್ರಾಮದಲ್ಲಿ 40 ಕುಟುಂಬಗಳು ವಾಸಿಸುತ್ತಿದ್ದು ಎಲ್ಲರೂ ಬೋವಿ ಜನಾಂಗಕ್ಕೆ ಸೇರಿರುವವರಾಗಿದ್ದಾರೆ. ಒಂದೇ ಜನಾಂಗಕ್ಕೆ ಸೇರಿರುವ 40 ಕುಟುಂಬಗಳ ಸದಸ್ಯರು ವಾಸವಿರುವ ಗ್ರಾಮದ ಹೃದಯ ಭಾಗದಲ್ಲಿ ಹೈದರಾಬಾದ್ ಮೂಲದ ಕೆಲ ಮತಾಂತರ ಕ್ರೈಸ್ತ ಮಿಷನರಿಗಳು ಸಂಕ್ರಾಂತಿ ಹಬ್ಬದಂದು ನೂತನ ಚರ್ಚ್ ಕಟ್ಟಡ ಕಾಮಗಾರಿಗೆ ಚಾಲನೆ ನೀಡಲು ಸಭೆ ಅಯೋಜಿಸಿದ್ದಾರೆ.
ಈ ವೇಳೆ ಮಾಂಸದ ಅಡುಗೆಯನ್ನು ಸಿದ್ದಪಡಿಸಿ ಗ್ರಾಮದ ಮಕ್ಕಳಿಗೆ, ಮಹಿಳೆಯರಿಗೆ ಹಂಚಿ ಬಲವಂತದ ಮತಾಂತರಕ್ಕೆ ಒತ್ತಾಯಿಸಿ ಸಂಭ್ರಮಿಸಿದ್ದಾರೆಂದು ದೂರಿದ ಮುಖಂಡರು ಚರ್ಚ್ ಕಟ್ಟಡ ನಿರ್ಮಾಣಕ್ಕೆ ಅಡ್ಡಿಪಡಿಸಿ ಸಂಬಂಧಪಟ್ಟ ಇಲಖೆ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ.
ಗರುಡಾದ್ರಿಪುರ ಗ್ರಾಮದ ಶಿವಕುಮಾರ್ ಮಾತನಾಡಿ, ಬಾಗೇಪಲ್ಲಿ ತಾಲೂಕಿನ ಮಿಟ್ಟೇಮರಿ ಗ್ರಾಮ ಪಂಚಾಯತಿಯ ಗರುಡಾದ್ರಿಪುರ ಗ್ರಾಮದಲ್ಲಿ ಗ್ರಾ.ಪಂ.ನಿಂದ ಕಟ್ಟಡ ನಿರ್ಮಾಣಕ್ಕೆ ಅನುಮತಿ ಪಡೆಯದೆ ಅಕ್ರಮವಾಗಿ ಚರ್ಚ್ ಕಟ್ಟಡ ನಿರ್ಮಾಣ ಮಾಡುತ್ತಿರುವ ಬಗ್ಗೆ ಗ್ರಾಮ ಪಂಚಾಯತಿ ಅಧಿಕಾರಿಗಳಿಗೆ ದೂರು ಸಲ್ಲಿಸಲಾಗಿದೆ. ಸಂಬಂಧಪಟ್ಟ ಇಲಾಖೆಯ ಅಧಿüಕಾರಿಗಳು ಅಕ್ರಮ ಕಟ್ಟಡ ನಿರ್ಮಾಣವನ್ನು ನಿಲ್ಲಸಬೇಕು. ಕುಲ ಕಸುಬನ್ನು ನಂಬಿ ಕಾಯಕ ಜೀವನ ನಡೆಸುತ್ತಿರುವ ಬೋವಿ ಜನಾಂಗದವರನ್ನು ಬಲವಂತದ ಮತಾಂತರ ಮಾಡಲು ಹೊರಟಿರುವ ಮತಾಂಧ ಕ್ರೈಸ್ತರ ವಿರುದ್ದ ಕಾನೂನು ಕ್ರಮ ಜರುಗಿಸ ಬೇಕೆಂದು ಒತ್ತಾಯಿಸುತ್ತಿದ್ದೇವೆ ಎಂದರು.
ಈ ಪ್ರತಿಭಟನೆಯಲ್ಲಿ ಗ್ರಾ.ಪಂ.ಮಾಜಿ ಅಧ್ಯಕ್ಷ ಎಂಬಿಎಲ್ ನರಸಿಂಹಯ್ಯ, ಗ್ರಾ.ಪಂ.ಸದಸ್ಯ ವೆಂಕಟರಾಮಪ್ಪ, ಮುಖಂಡರಾದ ಕಾಮರೆಡ್ಡಿ, ವಿಜಯಗೋಪಾಲರೆಡ್ಡಿ, ಬೋವಿ ಸಂಘ ದ ಜಿಲ್ಲಾಧ್ಯಕ್ಷ ಪಿ.ಡಿ.ವೆಂಕಟರಾಮ್, ತಾಲೂಕು ಅಧ್ಯಕ್ಷ ವಿನಯ್ ಕುಮಾರ್, ಗ್ರಾಮಸ್ಥ ರಾದ ಮುನಿರಾಜು, ಶಂಕರ, ಕೃಷ್ಣಪ್ಪ, ಮುರಳಿ, ಅಭಿಷೇಕ್, ಮೂರ್ತಿ, ನಂಜುಂಡ, ಅಂಜಲಿ, ಭವಾನಿ, ನಿರ್ಮಲ, ಸುಬ್ರಮಣಿ, ಶಿವಾ ಮತ್ತಿತರರು ಇದ್ದರು.
*
ಮಿಟ್ಟೇಮರಿ ಗ್ರಾಮ ಪಂಚಾಯತಿಯ ಗರುಡಾದ್ರಿಪುರ ಗ್ರಾಮದಲ್ಲಿ ಚರ್ಚ್ ಕಟ್ಟಡ ನಿರ್ಮಾಣಕ್ಕಾಗಿ ಗ್ರಾಮ ಪಂಚಾಯತಿಗೆ ಇದುವರೆಗೂ ಯಾರೊಬ್ಬರು ಅರ್ಜಿ ಸಲ್ಲಿಸಿಲ್ಲ. ಗ್ರಾಮ ಪಂಚಾಯತಿಯಿAದ ಚರ್ಚ್ ಕಟ್ಟಡ ನಿರ್ಮಾಣಕ್ಕೆ ಅನುಮತಿಯೂ ಕೊಟ್ಟಿಲ್ಲ. ಇದು ನಮ್ಮ ವ್ಯಾಪ್ತಿಗೆ ಬಂದಿಲ್ಲ. ಸದರಿ ಚರ್ಚ್ ನಿರ್ಮಾಣದ ಸ್ಥಳ ಕಂದಾಯ ಇಲಾಖೆಗೆ ಒಳಪಡುವುದರಿಂದ ತಾಲೂಕು ಆಡಳಿತದ ಈ ಬಗ್ಗೆ ಕ್ರಮ ವಹಿಸುತ್ತದೆ.
-ವೆಂಕಟೇಶಪ್ಪ, ಪಿಡಿಒ ಮಿಟ್ಟೇಮರಿ ಗ್ರಾಮ ಪಂಚಾಯತಿ
ಇದನ್ನೂ ಓದಿ: Chikkaballapur News: ಯುವಶಕ್ತಿಯ ಸಬಲೀಕರಣವೇ ನನ್ನ ಧ್ಯೇಯವಾಗಿದೆ: ಸಂದೀಪ್ ರೆಡ್ಡಿ ಹೇಳಿಕೆ