ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಯುಪಿಎಸ್‌ಸಿ ಪರೀಕ್ಷೆಯಲ್ಲಿ ಪಾಸ್‌ ಆಗಿದ್ದಾಗಿ ತಪ್ಪಾಗಿ ಭಾವಿಸಿ ಸಂಭ್ರಮಾಚರಣೆ; ಕೊನೆಗೆ ಕ್ಷಮೆಯಾಚಿಸಿದ ಪಿಯೂನ್ ಪುತ್ರಿ

Hurried celebration: ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣಳಾಗಿದ್ದೇನೆ ಎಂದು ಸಂಭ್ರಮಿಸಿದ ಯುವತಿಯೊಬ್ಬಳು ಬಳಿಕ ಕ್ಷಮೆಯಾಚಿಸಿದ್ದಾಳೆ. ಬಹಳ ಆತುರದಿಂದ ತಾನು ಉತ್ತೀರ್ಣಳಾಗಿದ್ದೇನೆ ಎಂದು ನಂಬಿದ ಯುವತಿ ಹಾಗೂ ಕುಟುಂಬಸ್ಥರು ತಮ್ಮ ಗ್ರಾಮದಲ್ಲಿ ಸಂಭ್ರಮಾಚರಣೆ ನಡೆಸಿದ್ದರು. ಮಾಧ್ಯಮಗಳು ಕೂಡ ಪಿಯೂನ್ ಪುತ್ರಿ ತೇರ್ಗಡೆ ಹೊಂದಿದ ಬಗ್ಗೆ ಸುದ್ದಿ ಬಿತ್ತರಿಸಿದ್ದವು.

ಯುಪಿಎಸ್‌ಸಿ ಪರೀಕ್ಷೆಯಲ್ಲಿ ʼಪಾಸ್‌ʼ ಆದ ಯುವತಿ ಕ್ಷಮೆಯಾಚಿಸಿದ್ದೇಕೆ?

ಶಿಖಾ ಗೌತಮ್‌ -

Priyanka P
Priyanka P Mar 14, 2026 5:01 PM

ಲಖನೌ, ಮಾ. 14: ಯುಪಿಎಸ್‌ಸಿ ಪರೀಕ್ಷೆಯಲ್ಲಿ (UPSC Exam) ಉತ್ತೀರ್ಣಳಾಗಿದ್ದೇನೆ ಎಂದು ಸಂಭ್ರಮಿಸಿದ ಯುವತಿಯೊಬ್ಬಳು ಬಳಿಕ ಕ್ಷಮೆಯಾಚಿಸಿದ್ದಾಳೆ. ಉತ್ತರ ಪ್ರದೇಶದ (Uttar Pradesh) ಬುಲಂದ್‌ಶಹರ್‌ನ ಯುಪಿಎಸ್‌ಸಿ ಅಭ್ಯರ್ಥಿ ಶಿಖಾ ಗೌತಮ್, ಮಾರ್ಚ್ 6ರಂದು ತನ್ನ ಫಲಿತಾಂಶವನ್ನು ಆತುರದಿಂದ ಪರಿಶೀಲಿಸಿದ್ದಾಳೆ. ತನ್ನ ಹೆಸರನ್ನು ನೋಡುತ್ತಲೇ ಕುಟುಂಬದೊಂದಿಗೆ ಸಂಭ್ರಮಾಚಿಸಿದರು. ಮಾಧ್ಯಮಗಳು ಸಹ ಆಕೆಯ ಯಶಸ್ಸಿನ ಕಥೆಯನ್ನು ಬಿತ್ತರಿಸಿದವು. ಪಿಯೋನ್‌ನ ಮಗಳು ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ ಉತ್ತೀರ್ಣಳಾದ ಕಥೆಯನ್ನು ವಿವರಿಸಿದವು.

ಆದರೆ ಆ ಸಂಭ್ರಮಾಚರಣೆ ಅಲ್ಪಕಾಲಿಕವಾಗಿತ್ತು. ಆತುರದಲ್ಲಿ ಒಂದೇ ಹೆಸರಿನ ಒಬ್ಬರಿಗಿಂತ ಹೆಚ್ಚು ಜನರು ಇರಬಹುದು ಎಂಬುದನ್ನು ಶಿಖಾ ಮರೆತಳು. ವಾಸ್ತವವಾಗಿ, ಹರಿಯಾಣದ ರೋಹ್ಟಕ್‌ನ ಮತ್ತೊಬ್ಬ ಯುಪಿಎಸ್‌ಸಿ ಅಭ್ಯರ್ಥಿ ಶಿಖಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು. ಹೀಗಾಗಿ ತನ್ನ ತಪ್ಪಿಗೆ ಬುಲಂದ್‌ಶಹರ್‌ನ ಅಭ್ಯರ್ಥಿ ಶಿಖಾ ಕ್ಷಮೆಯಾಚಿಸಿದ್ದಾಳೆ.

ವೈರಲ್‌ ವಿಡಿಯೊ:

ರೋಲ್ ನಂಬರ್ ನೋಡದೆ, ಹೆಸರಷ್ಟೇ ನೋಡಿ ಸಂಭ್ರಮಾಚರಿಸಿದ ಶಿಖಾ

ಫಲಿತಾಂಶದ ಪಿಡಿಎಫ್‌ನಲ್ಲಿ ತನ್ನ ಹೆಸರನ್ನು ನೋಡಿದ ತಕ್ಷಣ ಶಿಖಾ ಗೌತಮ್ ಸಂಭ್ರಮಿಸಲು ಪ್ರಾರಂಭಿಸಿದಳು. ಆದರೆ ತನ್ನ ರೋಲ್ ಸಂಖ್ಯೆಯನ್ನು ಪರಿಶೀಲಿಸಲು ಮರೆತಳು. ಹೆಸರು ನೋಡಿದ ತಕ್ಷಣ ಆಕೆ ಹಾಗೂ ಆಕೆಯ ಕುಟುಂಬಸ್ಥರು ಸಂಭ್ರಮಾಚರಣೆ ಮಾಡಿದರು. ಆಕೆಯ ಪೋಷಕರು ಹಾಗೂ ಸಂಬಂಧಿಕರು ಸಾವಿರಾರು ಜನರೊಂದಿಗೆ ಸೇರಿ ಸಂಭ್ರಮಾಚರಿಸಿದರು.

ಯುಪಿಎಸ್‌ಸಿ 2025 ಫಲಿತಾಂಶ ಪ್ರಕಟ; ರಾಜಸ್ಥಾನದ ಅನುಜ್‌ ಅಗ್ನಿಹೋತ್ರಿ ಟಾಪರ್‌

ಈ ವಿಜಯದ ಮೆರವಣಿಗೆಯಲ್ಲಿ ಸಿಹಿತಿಂಡಿಗಳನ್ನು ವಿತರಿಸಲಾಯಿತು. ಮಾಧ್ಯಮಗಳು ಸಹ ಆಕೆಯ ಯಶಸ್ಸಿನ ಕಥೆಯನ್ನು ಎತ್ತಿ ತೋರಿಸಿದವು. ಒಬ್ಬ ಪಿಯೋನ್ ಮಗಳು ವಿಶ್ವದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದರಲ್ಲಿ ಉತ್ತೀರ್ಣಳಾಗಿರುವ ಸುದ್ದಿಯನ್ನು ಬಿತ್ತರಿಸಿದವು.

ನನ್ನ ಸಹೋದರಿ ಶಿಖಾ ತನ್ನ ಎರಡನೇ ಪ್ರಯತ್ನದಲ್ಲಿ ಐಎಎಸ್ ಪರೀಕ್ಷೆಯಲ್ಲಿ 113ನೇ ರ‍್ಯಾಂಕ್ ಗಳಿಸಿದ್ದಾಳೆ. ಅವಳು ಯಾವಾಗಲೂ ಓದುತ್ತಿದ್ದಳು. ಮೊದಲು ಶಿಕ್ಷಕಿಯಾಗಬೇಕೆಂಬುದು ಅವಳ ಕನಸಾಗಿತ್ತು. ನನ್ನ ತಾಯಿ ಗೃಹಿಣಿ. ನನ್ನ ಸಹೋದರಿಯ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ ಎಂದು ಆಕೆಯ ಸಹೋದರ ಸ್ಥಳೀಯ ಮಾಧ್ಯಮಗಳಿಗೆ ತಿಳಿಸಿದ್ದರು.

ಕುತೂಹಲಕಾರಿ ವಿಷಯವೆಂದರೆ ಶಿಖಾ ಯುಪಿಎಸ್‌ಸಿ ಸಿವಿಲ್ ಸರ್ವೀಸಸ್ (ಸಿಎಸ್‌ಇ) ಮುಖ್ಯ ಪರೀಕ್ಷೆಯಲ್ಲಿಯೇ ಉತ್ತೀರ್ಣಳಾಗಿಲ್ಲ. ಹೀಗಾಗಿ ಪರೀಕ್ಷೆಯಲ್ಲಿ ಆಕೆ ಉತ್ತೀರ್ಣಳಾಗಲು ಅರ್ಹಳಾಗಿರಲಿಲ್ಲ ಎಂಬುದು ಯಾರಿಗೂ ಹೊಳೆಯದಿಲ್ಲ.

ಯುಪಿಎಸ್‌ಸಿ ಆಕಾಂಕ್ಷಿ ಕೊಲೆಗೆ ಟ್ವಿಸ್ಟ್‌; ಮಾಜಿ ಗೆಳೆಯನ ಜೊತೆಗೂಡಿ ಮುಹೂರ್ತ ಇಟ್ಲು ಐನಾತಿ ಲವರ್‌

ಕ್ಷಮೆಯಾಚಿಸಿದ ಶಿಖಾ

ಇದೀಗ ತನ್ನ ಗೊಂದಲಕ್ಕೆ ಶಿಖಾ ಗೌತಮ್ ಕ್ಷಮೆಯಾಚಿಸಿದ್ದಾಳೆ. ಫಲಿತಾಂಶದ ಪಿಡಿಎಫ್‌ನಲ್ಲಿ ಶಿಖಾ ಎಂದು ಉಲ್ಲೇಖಿಸಿರುವುದನ್ನು ಮಾತ್ರ ನೋಡಿದ್ದೇನೆ. ರೋಲ್ ನಂಬರ್ ಅನ್ನು ನೋಡಿಲ್ಲ ಎಂದು ಒಪ್ಪಿಕೊಂಡಿದ್ದಾಳೆ. ಆಯ್ಕೆಯಾದವರು ಬೇರೆ. ನಮ್ಮಿಬ್ಬರ ಹೆಸರುಗಳು ಒಂದೇ ಆಗಿರುವುದರಿಂದ ಗೊಂದಲಕ್ಕೊಳಗಾದೆ. ನಾನು ಪಿಡಿಎಫ್‌ನಲ್ಲಿ ಹೆಸರನ್ನು ಮಾತ್ರ ಪರಿಶೀಲಿಸಿದ್ದೇನೆ, ರೋಲ್ ಸಂಖ್ಯೆಯನ್ನು ಪರಿಶೀಲಿಸಲಿಲ್ಲ, ಅದು ನನ್ನ ತಪ್ಪು ಎಂದು ತಿಳಿಸಿದಳು.

ಯುಪಿಎಸ್‌ಸಿ ನಾಗರಿಕ ಸೇವಾ ಪರೀಕ್ಷೆ 2025ರ ಅಂತಿಮ ಫಲಿತಾಂಶದಲ್ಲಿ ತಪ್ಪಾಗಿ ಗುರುತಿಸಲ್ಪಟ್ಟ ಪ್ರಕರಣ ಬೆಳಕಿಗೆ ಬಂದಿರುವುದು ಇದೇ ಮೊದಲಲ್ಲ. ಇದಕ್ಕೂ ಮೊದಲು, ಬಿಹಾರದ ಅರಾ ಜಿಲ್ಲೆಯ ಆಕಾಶ್ ಸಿಂಗ್ ಕೂಡ ಯುಪಿಎಸ್‌ಸಿ ಸಿಎಸ್ಇ 2025 ಪರೀಕ್ಷೆಯಲ್ಲಿ 301ನೇ ರ‍್ಯಾಂಕ್ ಗಳಿಸಿರುವುದಾಗಿ ಹೇಳಿಕೊಂಡಿದ್ದ. ಆದರೆ ಒಂದು ದಿನದ ನಂತರ, ಪರೀಕ್ಷೆಯಲ್ಲಿ ಉತ್ತೀರ್ಣರಾದ ಸರಿಯಾದ ಅಭ್ಯರ್ಥಿ ಉತ್ತರ ಪ್ರದೇಶದ ಘಾಜಿಪುರದ ಆಕಾಶ್ ಸಿಂಗ್ ಎಂದು ಯುಪಿಎಸ್‌ಸಿ ದೃಢಪಡಿಸಿತು.