Chikkaballapur News: ಯುವಶಕ್ತಿಯ ಸಬಲೀಕರಣವೇ ನನ್ನ ಧ್ಯೇಯವಾಗಿದೆ: ಸಂದೀಪ್ ರೆಡ್ಡಿ ಹೇಳಿಕೆ
Chikkaballapur News: ಯುವಶಕ್ತಿಯ ಸಬಲೀಕರಣವೇ ನನ್ನ ಧ್ಯೇಯವಾಗಿದೆ: ಸಂದೀಪ್ ರೆಡ್ಡಿ ಹೇಳಿಕೆ
Ashok Nayak
December 31, 2024
150 ವೃದ್ಧರಿಗೆ ಬೆಡ್ ಶೀಟ್ ಮತ್ತು ಪ್ರತಿಭಾವಂತ 60 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿ ಹೇಳಿಕೆ
ಚಿಕ್ಕಬಳ್ಳಾಪುರ : ಕ್ಷೇತ್ರದ ಯುವ ಶಕ್ತಿಯ ಸಬಲೀಕರಣ,ನೊಂದವರ ಕಣ್ಣೀರು ಒರೆಸುತ್ತಾ, ಆಶಕ್ತ ವರ್ಗಗಳನ್ನು ಸಮಾಜದ ಮುಖ್ಯವಾಹಿನಿಗೆ ತರುವುದೇ ಭಗತ್‌ಸಿಂಗ್ ಚಾರಿಟೇಬಲ್ ಟ್ರಸ್ಟ್ ಪ್ರಧಾನ ಗುರಿಯಾಗಿದೆ ಎಂದು ಅಧ್ಯಕ್ಷ ಸಂದೀಪ್ ಬಿ.ರೆಡ್ಡಿ ಹೇಳಿದರು.
ತಾಲ್ಲೂಕಿನ ಶ್ರೀರಾಮಪುರ ಗ್ರಾಮದಲ್ಲಿ ಮಂಗಳವಾರ ಭಗತ್‌ಸಿಂಗ್ ಚಾರಿಟಬಲ್ ಟ್ರಸ್ಟ್ ಮಂಗಳವಾರ ಏರ್ಪಡಿ ಸಿದ್ದ ಕಾರ್ಯಕ್ರಮದಲ್ಲಿ ೧೫೦ ವೃದ್ಧರಿಗೆ ಬೆಡ್ ಶೀಟ್ ವಿತರಣೆ ಜೊತೆಗೆ ಪ್ರತಿಭಾವಂತ 60 ವಿದ್ಯಾರ್ಥಿಗಳಿಗೆ ಮಂಗಳವಾರ ವಿದ್ಯಾರ್ಥಿ ವೇತನ ನೀಡುವ ಮೂಲಕ ಗ್ರಾಮಸ್ಥರ ಮನಗೆದ್ದರು.
ತಾಲ್ಲೂಕಿನ ಶ್ರೀರಾಮಪುರ ಗ್ರಾಮದಲ್ಲಿ ೧೫೦ ವೃದ್ಧರಿಗೆ ಬೆಡ್ ಶೀಟ್ ವಿತರಣೆ ಜೊತೆಗೆ ಪ್ರತಿಭಾವಂತ ೬೦ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವ ಮೂಲಕ ಸಾಮಾಜಿಕ ಬದ್ಧತೆಯನ್ನು ಮತ್ತೊಮ್ಮೆ ಜನರ ಮುಂದೆ ಇಟ್ಟರು.
ಇದೇ ಕಾರ್ಯಕ್ರಮದಲ್ಲಿ ಗ್ರಾಮದ ಆಶಾ ಕಾರ್ಯಕರ್ತೆಯರು,ಅಂಗನವಾಡಿ ಕಾರ್ಯಕರ್ತೆ, ವಾಟರ್ ಮನ್ ಹಾಗೂ ಸರಕಾರಿ ಶಾಲೆಯಲ್ಲಿ ಅಡುಗೆ ಮಾಡುವ ಸಿಬ್ಬಂದಿಯನ್ನು ಆತ್ಮೀಯವಾಗಿ ಸನ್ಮಾನಿಸಿ ಉಡುಗೊರೆ ನೀಡಲಾಯಿತು.
ಕಾರ್ಯಕ್ರಮಕ್ಕೂ ಮುನ್ನ ಸಂದೀಪ್ ಬಿ ರೆಡ್ಡಿ ಅವರನ್ನು ಗ್ರಾಮದ ವಿವಿಧ ದೇವಸ್ಥಾನಗಳಿಗೆ ಕರೆದೊಯ್ದು ಪೂಜೆ ಸಲ್ಲಿಸಿದರಲ್ಲದೆ, ಇನ್ನು ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಪಟಾಕಿ ಸಿಡಿಸಿ ಆರತಿ ಬೆಳಗಿ ಅಭೂತಪೂರ್ವ ಸ್ವಾಗತ ಕೋರಿ ದರು.
ಭಗತ್ ಸಿಂಗ್ ಚಾರಿಟೇಬಲ್ ಟ್ರಸ್ಟ್ ಮಾಡುತ್ತಿರುವ ಸಮಾಜ ಸೇವೆಗಳನ್ನು ಸ್ಪೂರ್ತಿಯಾಗಿ ತೆಗೆದುಕೊಂಡು ಈ ಗ್ರಾಮದ ಅರವಿಂದ್,ಶಿವು,ಶಶಿ ಮುಂದೆ ಬಂದು ಇಂತಹ ಕಾರ್ಯಕ್ರಮ ಆಯೋಜಿಸಿರುವುದು ನಿಜಕ್ಕೂ ಸಂತೋಷ ತಂದಿದೆ. ಗ್ರಾಮದ ಯುವಪಡೆ ನನ್ನನ್ನು ಬೆಂಬಲಿಸಿ ತಮ್ಮ ಗ್ರಾಮದ ಹಿರಿಯ ಜೀವಗಳಿಗೆ ಚಳಿಗಾಲದಲ್ಲಿ ಬೆಡ್‌ಶೀಟ್ ವಿತರಣೆ, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡಿ ಪ್ರೋತ್ಸಾಹಿಸುತ್ತಿರುವುದು ಇತರೆ ಗ್ರಾಮಗಳ ಯುವಕರಿಗೆ ಮಾದರಿಯಾಗಿದೆ.ಗ್ರಾಮೀಣ ಭಾಗದ ಯುವಕರು ದುಶ್ಚಟಗಳಿಗೆ ಬಲಿಯಾಗದೆ ನಮ್ಮ ಊರು ಮೊದ ಲಾಗಿ ಸುತ್ತಣ ಸಮಾಜಕ್ಕೆ ಒಂದಿಷ್ಟು ಒಳ್ಳೆದನ್ನು ಮಾಡಬೇಕು ಎಂಬ ಚಿಂತನೆ ಬೆಳೆಸಿಕೊಳ್ಳಬೇಕು.ಇಂತಹ ದೃಡ ಸಂಕಲ್ಪದೊAದಿಗೆ ಸದಾ ಮುನ್ನಡೆಯಬೇಕೆಂದರು.
ದೇಶದಲ್ಲಿ ಯುವ ಶಕ್ತಿ ಮಾಡಬಹುದಾದದ್ದು ಬಹಳಷ್ಟು ಇದೆ. ಬದುಕು ಏನೆಂಬುದನ್ನು ಅರ್ಥೈಸಿಕೊಳ್ಳಿ,ಮೋಜಿನ ಜೀವನ ಶಾಶ್ವತವಲ್ಲ, ಇದ್ದಷ್ಟು ದಿನ ಇತರರಿಗೆ ಕೈಲಾದಷ್ಟು ಸಹಾಯ ಮಾಡಿದರೆ ಸತ್ತ ಮೇಲೆಯೂ ಬದುಕುತ್ತೇವೆ ಎಂದು ಯುವಕರಿಗೆ ಕಿವಿ ಮಾತು ಹೇಳಿದರು.
ಸಮಾಜ ನನಗೆ ಕೊಟ್ಟಿರುವುದರಲ್ಲಿಯೇ ಉಳಿಸಿ ಅದನ್ನು ಸಮಾಜಕ್ಕೆ ಸೇವೆಯ ರೂಪದಲ್ಲಿ ಹಿಂದಿರುಗಿಸುತ್ತಿದ್ದೇನೆ. ಸಮಾಜಸೇವೆಯೇ ನನ್ನ ಪರಮಗುರಿಯಾಗಿದ್ದು ಪ್ರಚಾರಕ್ಕೋ, ರಾಜಕೀಯ ಉದ್ದೇಶಕ್ಕಾಗಿಯೋ ಅಲ್ಲ. ರಾಜಕೀಯ ಬೇರೆ ಸಮಾಜಸೇವೆ ಬೇರೆ ನನ್ನ ಚಿಕ್ಕಬಳ್ಳಾಪುರ ಜನತೆಗೆ ಸೇವೆ ಮಾಡಲು ನಾನು ಸದಾ ಸಿದ್ಧ ಎಂದರು.
ವಿದ್ಯಾರ್ಥಿಗಳಿಗೆ ಕಿವಿಮಾತು....
ವಿದ್ಯಾರ್ಥಿ ವೇತನ ಪಡೆದ ಪ್ರತಿಭೆಗಳಿಗೆ ಹೇಳುವುದಿಷ್ಟೆ. ಶಿಕ್ಷಣವು ಬದಲಾವಣೆಯ ಬಹು ದೊಡ್ಡ ಅಸ್ತ್ರ, ಶಿಕ್ಷಣದಿಂದ ಮಾತ್ರ ಮನುಷ್ಯರಿಗೆ ಪರಿಪೂರ್ಣ ವ್ಯಕ್ತಿತ್ವ ಬೆಳೆಯುಲ್ಲದೆ ಆರ್ಥಿಕವಾಗಿ ಕೂಡ ಅಭಿವೃದ್ಧಿ ಕಾಣಬಹುದು.ಇದನ್ನರಿತು ನಿಮ್ಮ ಶಿಕ್ಷಣವನ್ನು ಸರಿಯಾದ ರೀತಿಯಲ್ಲಿ ಪಡೆಯಲು ಮುಂದಾಗಿ ಎಂದರು.ಈ ವೇಳೆ ಶ್ರೀರಾಮಪುರ ಗ್ರಾಮದ ಮುಖಂಡರು,ಭಗತ್‌ಸಿAಗ್ ಚಾರಿಟೇಬಲ್ ಟ್ರಸ್ಟ್ ಸದಸ್ಯರು ಇದ್ದರು.