ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸ್ವ ಪಕ್ಷದ ಶಾಸಕರ ಬಗ್ಗೆ ಕೇವಲವಾಗಿ ಮಾತನಾಡುವುದು ಸರಿಯಲ್ಲ: ಜಿ.ಪಂ ಮಾಜಿ ಸದಸ್ಯ ಕೆ.ಎಂ.ಮುನೇಗೌಡ

ಶಾಸಕರ ವಿರುದ್ಧ ಆರೋಪ ಮಾಡುವವರು ತಮ್ಮಿಂದ ಪಕ್ಷಕ್ಕೆ ಎಷ್ಟು ಲಾಭವಾಗಿದೆ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕು. ಕಳೆದ ಮೂರು ವರ್ಷಗಳಲ್ಲಿ ನಡೆದ ಚುನಾವಣೆಯಲ್ಲಿ ಶಾಸಕರು ಪಕ್ಷ ನೀಡಿದ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಆರೋಪ ಮಾಡುವವರು ಎಷ್ಟು ಬಾರಿ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿದ್ದಾರೆ ಎಂಬುದನ್ನು ತಿಳಿಸಿ ಎಂದು ಸವಾಲು ಹಾಕಿದರು.

ಸ್ವ ಪಕ್ಷದ ಶಾಸಕರ ಬಗ್ಗೆ ಕೇವಲವಾಗಿ ಮಾತನಾಡುವುದು ಸರಿಯಲ್ಲ

ಸುದ್ದಿಗೋಷ್ಟಿಯಲ್ಲಿ ಕಾಂಗ್ರೆಸ್ ಮುಖಂಡರು ಮಾತನಾಡಿದರು. -

Profile
Ashok Nayak Apr 22, 2026 9:19 PM

ಚಿಕ್ಕಬಳ್ಳಾಪುರ: ಸ್ವಪಕ್ಷದ ಶಾಸಕರ ಬಗ್ಗೆ ಗೌರವವಿಲ್ಲದೆ, ಬಾಯಿಗೆ ಬಂದಂತೆ ಹಗುರವಾಗಿ ಮಾತನಾಡುವುದು ಯಾರಿಗೂ ಶೋಭ ತರುವುದಿಲ್ಲ. ಪ್ರದೀಪ್ ಈಶ್ವರ್, ಡಾ.ಎಂ.ಸಿ.ಸುಧಾಕರ್( Pradeep Eshwar, Dr. M.C. Sudhakar) ಚೆನ್ನಾಗಿಯೇ ಇದ್ದಾರೆ. ಅವರ ನಡುವೆ ಹುಳಿಹಿಂಡುವುದು ತರವಲ್ಲ ಎಂದು ಮಾಜಿ ಜಿ.ಪಂ.ಸದಸ್ಯ ಕೆ.ಎಂ.ಮುನೇಗೌಡ ತಿಳಿಸಿದರು.

ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆಸಿದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.

ಸ್ವಪಕ್ಷದ ಶಾಸಕರ ವಿರುದ್ಧವೇ ಸುದ್ದಿಗೋಷ್ಟಿ ನಡೆಸಿ ಆರೋಪಗಳ ಸುರಿಮಳೆ, ಏಕವಚನ ಪ್ರಯೋಗ ಮಾಡುವ ಮೂಲಕ ಸಮಾಜ ಮುಂದೆ ಬೆತ್ತಲಾದ ನೀವು ಮೊದಲು ನಿಮ್ಮ ಪಕ್ಷ ಯಾವುದು ಎಂಬುದನ್ನು ಹೇಳುವಿರಾ ಅಣ್ಣಂದಿರಾ ಎಂದು ಮಾತಿನಲ್ಲೇ ಕುಟುಕಿದರು.

ಇದನ್ನೂ ಓದಿ: Chikkaballapur News: ಬುದ್ಧ, ಬಸವ ಅಂಬೇಡ್ಕರ್ ಅವರ ಬದುಕು ಬರಹವೇ ನಮ್ಮ ಜೀವನಕ್ಕೆ ಸ್ಪೂರ್ತಿ: ಎಸ್‌ಎಸ್‌ಡಿ ರಾಜ್ಯಾಧ್ಯಕ್ಷ ಜಿ.ಸಿ.ವೆಂಕಟರವಣಪ್ಪ

ಪಕ್ಷ ಸಂಘಟನೆ ಮಾಡುವುದು ಶಾಸಕರೊಬ್ಬರ ಕೆಲಸವಲ್ಲ, ನೀವು ಮಾಡಿ, ಪಕ್ಷದಿಂದ ಎಲ್ಲಾ ಅಧಿಕಾರ ಭಾಗ್ಯ ಪಡೆದ ನೀವು, ಈಗಲೂ ಅಧಿಕಾರದಲ್ಲಿರುವ ನೀವು ಹೀಗೆ ಬಾಯಿಗೆ ಬಂದAತೆ ಆರೋಪ ಮಾಡುವುದು ಸರಿಯಲ್ಲ. ನೀವು ಶಾಸಕರಿಗೆ ಅವಮಾನ ಮಾಡಿಲ್ಲವಾ? ನೀವು ಪೆರೇಸಂದ್ರ ಕಾರ್ಯಕ್ರಮದಲ್ಲಿ ಪೋಟೋ ಯಾಕೆ ಹಾಕಿಲ್ಲ?ಅದೆಲ್ಲಾ ಇರಲಿ ನೀವು ಯಾವ ಕಾರ್ಯಕ್ರಮ ಆಯೋಜನೆ ಮಾಡಿದ್ದೀರಿ?  ಯಾವಾಗ ಅವರನ್ನು ಹೋಗಿ  ಕರೆದಿದ್ದೀರಿ? ಯಾವಾಗ ಅವರು ಬಂದಿಲ್ಲ  ಎಂಬುದನ್ನು ಮೊದಲು ತಿಳಿಸಿ ಎಂದು ಸಾಲು ಸಾಲು ಪ್ರಶ್ನೆಗಳನ್ನು ಮುಂದಿಟ್ಟರು.

ಪರಿಶ್ರಮ ನೀಟ್ ಅಕಾಡೆಮಿಗೆ ನಿವೇಶನ ಮಂಜೂರು ಕುರಿತು ಮಾತನಾಡಿ, ಈ ರೀತಿ ಆರೋಪ ಮಾಡುವ ಬದಲು ಸಂಬಂಧಿತ ಅಧಿಕಾರಿಗಳಿಗೆ ದೂರು ನೀಡಿ ಕ್ರಮಕ್ಕೆ ಒತ್ತಾಯಿಸಬಹುದು. ಕಾನೂನಿಗೆ ಮೀರಿದವರು ಯಾರೂ ಇಲ್ಲ ಅಲ್ಲವೇ ಎಂದು ಸಲಹೆ ನೀಡಿದರು.

ಶಾಸಕರ ವಿರುದ್ಧ ಆರೋಪ ಮಾಡುವವರು ತಮ್ಮಿಂದ ಪಕ್ಷಕ್ಕೆ ಎಷ್ಟು ಲಾಭವಾಗಿದೆ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕು. ಕಳೆದ ಮೂರು ವರ್ಷಗಳಲ್ಲಿ ನಡೆದ ಚುನಾವಣೆಯಲ್ಲಿ ಶಾಸಕರು ಪಕ್ಷ ನೀಡಿದ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಆರೋಪ ಮಾಡು ವವರು ಎಷ್ಟು ಬಾರಿ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿದ್ದಾರೆ ಎಂಬುದನ್ನು ತಿಳಿಸಿ ಎಂದು ಸವಾಲು ಹಾಕಿದರು.

ಪಕ್ಷಕ್ಕೆ ಮುಜುಗರ ತರುವವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಪತ್ರ ಬರೆದಿದ್ದೇವೆ.ಈ ರೀತಿಯ ವರ್ತನೆ ಮುಂದುವರಿದರೆ ಪರಿಣಾಮಗಳು ಉತ್ತಮವಾಗಿರುವುದಿಲ್ಲ. ಏಕವಚನ ಬಳಕೆ ಹಾಗೂ ವೈಯಕ್ತಿಕ ಆರೋಪಗಳನ್ನು ತಪ್ಪಿಸಬೇಕು ಎಂದು ಎಚ್ಚರಿಸಿದರು.

ಶಾಸಕರ ಅಭಿವೃದ್ಧಿ ಕಾರ್ಯಗಳ ಬಗ್ಗೆ ಪ್ರಶ್ನಿಸಿರುವವರಿಗೆ ಉತ್ತರಿಸುತ್ತಾ,ಕಳೆದ ಮೂರು ವರ್ಷ ಗಳಲ್ಲಿ ಶಾಸಕರು ಹಂತ ಹಂತವಾಗಿ ಚಿಕ್ಕಬಳ್ಳಾಪುರ ಅಭಿವೃದ್ಧಿಗೆ ಅನುದಾನ ತರಿಸಿ ಹಲವಾರು ಕೆಲಸಗಳನ್ನು ಮಾಡುತ್ತಿದ್ದಾರೆ.ಜನರು ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಲು ಅಧಿಕಾರಿ ಗಳನ್ನು ಜನರ ಬಳಿಗೆ ಕರೆದೊಯ್ಯುವ ಮೂಲಕ ಸಮಸ್ಯೆಗಳನ್ನು ಪರಿಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ.ಹಲವಾರು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿಗಳು ನಡೆದಿದ್ದು,ಕಂದವಾರ ರಸ್ತೆ ಕಾಮಗಾರಿ ನ್ಯಾಯಾಲಯದ ವಿಚಾರಣೆಯ ಕಾರಣದಿಂದ ತಡವಾ ಗಿದ್ದು, ಶೀಘ್ರದಲ್ಲೇ ಆರಂಭವಾಗಲಿದೆ ಎಂದು ಸಮರ್ಥಿಸಿದರು.

ಡ್ಯಾನ್ಸ್ ಶ್ರೀನಿವಾಸ್ ಮಾತನಾಡಿ, ಶಾಸಕರಿಗೆ 86 ಸಾವಿರ ಓಟು ಹಾಕಿಸಿದ್ದು ನಾವೇ ಎಂಬಂತೆ ಭರಣಿವೆಂಕಟೇಶ್, ಮಂಚೇನಹಳ್ಳಿ ಪ್ರಕಾಶ್, ಮೋಹನ್‌ರೆಡ್ಡಿ, ಕಾಕಲಚಿಂತೆ ರಾಜಣ್ಣ ಇತರರು ಮಾತನಾಡುತ್ತಿದ್ದಾರೆ. ಅವರಿಗೆ ಕೇಳುತ್ತೇನೆ ಶಾಸಕರನ್ನು ಸಚಿವರ ಬತ್ಡೇðಗೆ ಕರೆದುಕೊಂಡು ಹೋಗಿದ್ದು ಯಾರು? ಯಾಕೆ ಅವತ್ತು ಕಾಂಗ್ರೆಸ್ ಪಕ್ಷದಲ್ಲಿ ಯಾರೂ ಗಂಡಸರೇ ಇರಲಿಲ್ಲವಾ? ಪ್ರದೀಪ್ ಈಶ್ವರ್ ಒಬ್ಬರೇನಾ ಇದ್ದಿದ್ದು?ಬಲಿಜ ಸಮಾಜ ಕ್ಷೇತ್ರದಲ್ಲಿ ಪ್ರಬಲವಾಗಿದೆ ಎಂದು ಅರಿತೇ  ಸೀಟು ಕೊಟ್ಟಿದ್ದಾರೆ. ಪ್ರಶ್ನೆ ಮಾಡುವವರು ಮೊದಲು ಇದನ್ನು ಅರ್ಥ ಮಾಡಿಕೊಳ್ಳಿ ಎಂದರು.

ಪ್ರದೀಪ್ ಎಂಎಲ್‌ಎ ಆಗುತ್ತಿದ್ದಂತೆ ದೇವನಹಳ್ಳಿಯಲ್ಲಿ ಸಭೆ ನಡೆಸಿದ ಬೆಂಗಳೂರು ಬಾಯ್ಸ್ ಯಾರಿಗೆ ಯಾವ ಪೋಸ್ಟ್ ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಮಹತ್ವ ನೀಡದ ಶಾಸಕರು ಎಲ್ಲಾ ಸಮುದಾಯಕ್ಕೆ ಅವಕಾಶ ನೀಡಿದ್ದಾರೆ. ದಲಿತ, ಒಕ್ಕಲಿಗ, ಮುಸ್ಲಿಂರಿಗೆ ಅವಕಾಶ ನೀಡಿದ್ದಾರೆ. ಕೊನೆ ಯದಾಗಿ ಬಲಜಿಗರಿಗೆ ಒಂದೋ ತಪ್ಪಿದರೆ ಎರಡೋ ಅವಕಾಶ ಕಲ್ಪಿಸಿದ್ದಾರೆ. ಆದರೂ ನಮಗೆ ಏನೂ ಮಾಡಿಲ್ಲ ಎಂದು ದೂರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.

ಹುಡುಗರು ಬೇಳೆಯಲಿ ಎಂದು ಮುಸ್ಲಿಂ ಯುವಕರಿಗೆ ಅವಕಾಶ ನೀಡಿದ್ದಾರೆ. ಬೆಂಗಳೂರು ಬಾಯ್ಸ್ ಎಂಬ ತಂಡಕ್ಕೆ ನಂಬಿದವರನ್ನು ಮುಗಿಸುವುದು ಮಾತ್ರ ಗೊತ್ತು. ವಿನಯ್ ಶ್ಯಾಮ್ ಅವರನ್ನು ಮುಗಿಸಿದರು. ನಂತರ ಪ್ರದೀಪ್ ಬಳಿಗೆ ಬಂದರು. ಪ್ಯಾಕೇಜ್ ಕೇಳುವುದೇ ಇವರ ಗುರಿ.. ಅಕ್ರಮ ಆಸ್ತಿ ನೀವೇ ಮಾಡಿಕೊಳ್ಳಬೇಕಾ? ಬೇರೆ ಯಾರೂ ಮಾಡಬಾರದಾ ಎಂದ ಅವರು ಶಾಸಕರ ಪಿಎ, ಅವರ ತಮ್ಮ ಅಕ್ರಮ ಮಾಡಿದ್ದಾರೆ ಎಂದು ಒಂದೇ ಒಂದು ದಾಖಲೆ ತೋರಿಸಿ ಎಂದು ಸವಾಲು ಹಾಕಿದರು.

ಭರಣಿ ವೆಂಕಟೇಶ್ ಅವರ ಕ್ಷೇತ್ರಕ್ಕೆ ಶಾಸಕರಾದ ಹೊಸತರಲ್ಲೇ 12 ಕೋಟಿ ನೀಡಿ ಗುದ್ದಲಿ ಪೂಜೆ ಮಾಡಿದರು. ಇದು ಬಸವರಾಜು ಬೊಮ್ಮಾಯಿ ಹಣ ಅಲ್ಲ. ಸಚಿವರು ಶಾಸಕರು ಚೆನ್ನಾಗಿಯೇ ಇದ್ದಾರೆ. ನಾವೂ ಕಮೂಡ ರಾಜಕಾರಣಕ್ಕೆ ರಾಜಕೀಯ ಮಾಡಲೇ ಬಂದಿದ್ದೇವೆ. ಸಚಿವ ಶಾಸಕರ ನಡುವೆ ಬೆಂಕಿ ಹಾಕುವುದೇ ಇವರ ಕೆಲಸ.ನಿಮ್ಮ ಕೈಯಲ್ಲಿ ಏನೂ ಮಾಡಲು ಆಗಲ್ಲ. ಪ್ರದೀಪ್ ಈಶ್ವರ್ ಬೆನ್ನಿಗೆ 45 ಸಾವಿರ ಬಲಜಿಗ ಜನಾಂಗ ಇದೆ. ಬಾಯಿಗೆ ಬಂದಂತೆ ಮಾತನಾಡಿದರೆ ನೋಡಿ ಕೊಂಡು ಸುಮ್ಮನಿರುವುದಿಲ್ಲ ಎಚ್ಚರ ಎಂದರು.

ಸುದ್ದಿಗೋಷಿಯಲ್ಲಿ ಡ್ಯಾನ್ಸ್ ಶ್ರೀನಿವಾಸ್, ಗವಿರಾಯಪ್ಪ, ಮಂಜುನಾಥ, ಮುನೇಗೌಡ, ಸಂದೀಪ್ ಚಕ್ರವರ್ತಿ, ಆದಿನಾರಾಯಣ, ನಾಗೇಶ್ ಮತ್ತಿತರರು ಇದ್ದರು.