ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

CHIMUL: ನೂತನ ಒಕ್ಕೂಟ ಚಿಮುಲ್ ಪ್ರಸ್ತುತ 70 ಕೋಟಿ ಲಾಭದಲ್ಲಿದೆ : ಚಿಮುಲ್ ಅಧ್ಯಕ್ಷ ಮಂಜುನಾಥರೆಡ್ಡಿ ಹರ್ಷ

ಕೋಲಾರದಿಂದ ಒಕ್ಕೂಟ ಬೇರ್ಪಟ್ಟಾಗ ಹಾಳಾಗುತ್ತದೆ ಎಂದವರು ಕೂಡ ಇದ್ದಾರೆ. ನಮ್ಮ ಒಕ್ಕೂಟ ದಲ್ಲಿ 60/70 ಕೋಟಿ ಹಣ ಇದೆ.ಉಸ್ತುವಾರಿ ಸಚಿವರಾದಿಯಾಗಿ ಎಲ್ಲರೂ ಇದರ ಬೆಳವಣಿಗೆಗೆ ಶ್ರಮಿಸು ತ್ತಿದ್ದಾರೆ. ಇಡೀ ರಾಜ್ಯದಲ್ಲಿಯೇ 36.90 ಪೈಸೆ ರೈತರ ಖಾತೆಗೆ ಜಮಾ ಮಾಡುತ್ತಿರುವ ಏಕೈಕ ಒಕ್ಕೂಟ ನಮ್ಮದು. ನಮ್ಮನ್ನು ನೋಡಿ ಕೋಲಾರ ಸೇರಿ ಉಳಿದ ಒಕ್ಕೂಟಗಳು ಬೆಲೆ ಏರಿಸಲು ಮುಂದಾಗಿದ್ದಾರೆ.

ನೂತನ ಒಕ್ಕೂಟ ಚಿಮುಲ್ ಪ್ರಸ್ತುತ 70 ಕೋಟಿ ಲಾಭದಲ್ಲಿದೆ

ಕೋಲಾರದಿಂದ ಬೇರ್ಪಟ್ಟು ಸ್ವತಂತ್ರ ಸ್ಥಾನಮಾನ ಹೊಂದಿರುವ ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ೧ ವರ್ಷ ಕಳೆಯುವುದರಲ್ಲಿ ೭೦ಕೋಟಿ ಲಾಭದಲ್ಲಿದೆ ಎಂದು ಅಧ್ಯಕ್ಷ ಮಂಜುನಾಥರೆಡ್ಡಿ ಹರ್ಷ ವ್ಯಕ್ತಪಡಿಸಿದರು. -

Profile
Ashok Nayak Apr 24, 2026 9:27 PM

ಗುಣಮಟ್ಟದ ಹಾಲು ಉತ್ಪಾದನೆ ಮಾಡಿದರೆ ಲಾಭ ಹೆಚ್ಚು : ಚಿಮುಲ್ ಉತ್ಪನ್ನಗಳನ್ನು ರೈತರಿಗೆ ವಿತರಿಸಲಾಗುವುದು

ಚಿಕ್ಕಬಳ್ಳಾಪುರ: ಕೋಲಾರದಿಂದ ಬೇರ್ಪಟ್ಟು ಸ್ವತಂತ್ರ ಸ್ಥಾನಮಾನ ಹೊಂದಿರುವ ಚಿಕ್ಕಬಳ್ಳಾ ಪುರ ಹಾಲು ಒಕ್ಕೂಟ 1 ವರ್ಷ ಕಳೆಯುವುದರಲ್ಲಿ 70 ಕೋಟಿ ಲಾಭದಲ್ಲಿದೆ ಎಂದು ಅಧ್ಯಕ್ಷ ಮಂಜುನಾಥರೆಡ್ಡಿ ಹರ್ಷ ವ್ಯಕ್ತಪಡಿಸಿದರು. ನಗರದ ಜೆ.ಕೆ.ಕಂಫರ್ಟ್ ಪಂಕ್ಷನ್ ಹಾಲ್‌ನಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ಶಿಬಿರ ಕಚೇರಿ ವತಿಯಿಂದ ಏರ್ಪಡಿಸಿದ್ದ ಪ್ರಾದೇಶಿಕ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ನಮ್ಮ ಹಾಲು ಉತ್ಪಾದಕರು ಕಷ್ಟ ಪಟ್ಟು ಗುಣಮಟ್ಟದ ಹಾಲು ಉತ್ಪಾದನೆ ಮಾಡುತ್ತಿದ್ದಾರೆ.ಆದರೆ ಅವರ ಹಾಲು ಬಳಸಿಕೊಂಡು ತಯಾರಿಸುವ ಹೈನೋತ್ಪನ್ನಗಳನ್ನು ವರ್ಷದಲ್ಲಿ ಒಮ್ಮೆ ಅವರಿಗೆ ನೀಡುವಂತೆ ಹೇಳಿರುವ ಸಲಹೆಯನ್ನು ಸ್ವೀಕರಿಸಿ ಉತ್ಪನ್ನಗಳನ್ನು ರೈತರಿಗೆ ನೀಡುವ ಕೆಲಸ ಮಾಡು ತ್ತೇವೆ ಎಂದು ಹೇಳಿದರು.

ಚಿಮುಲ್ ಇಂದು ಸ್ವಂತ ಬಲದ ಮೇಲೆ ನಿಲ್ಲುವಲ್ಲಿ ಈ ಸಹಕಾರಿ ರಂಗ ಬಲಿಷ್ಟವಾಗಿ ಬೆಳೆಯುವಲ್ಲಿ ದಿವಂಗತ ಕೆ.ಬಿ.ಪಿಳ್ಳಪ್ಪ, ಎಂ.ವಿ.ಕೃಷ್ಣಪ್ಪ,ಕ್ಷೀರಕ್ರಾಂತಿಯ ಪಿತಾಮಹ ಕುರಿಯನ್ ಸ್ಮರಣೆ ಅಗತ್ಯ ಎಂದರು.

ಕೋಲಾರದಿಂದ ಒಕ್ಕೂಟ ಬೇರ್ಪಟ್ಟಾಗ ಹಾಳಾಗುತ್ತದೆ ಎಂದವರು ಕೂಡ ಇದ್ದಾರೆ. ನಮ್ಮ ಒಕ್ಕೂಟದಲ್ಲಿ 60/70 ಕೋಟಿ ಹಣ ಇದೆ.ಉಸ್ತುವಾರಿ ಸಚಿವರಾದಿಯಾಗಿ ಎಲ್ಲರೂ ಇದರ ಬೆಳವಣಿ ಗೆಗೆ ಶ್ರಮಿಸುತ್ತಿದ್ದಾರೆ. ಇಡೀ ರಾಜ್ಯದಲ್ಲಿಯೇ 36.90 ಪೈಸೆ ರೈತರ ಖಾತೆಗೆ ಜಮಾ ಮಾಡುತ್ತಿರುವ ಏಕೈಕ ಒಕ್ಕೂಟ ನಮ್ಮದು. ನಮ್ಮನ್ನು ನೋಡಿ ಕೋಲಾರ ಸೇರಿ ಉಳಿದ ಒಕ್ಕೂಟಗಳು ಬೆಲೆ ಏರಿಸಲು ಮುಂದಾಗಿದ್ದಾರೆ. ನಮ್ಮದು ಡಿಸಿ.ಸಿ ಬ್ಯಾಂಕ್ ತರ ಆಗುವುದು ಬೇಡ. ಸಹಕಾರ ಕ್ಷೇತ್ರ ಬಲವಾಗಿದ್ದರೆ ಮಾತ್ರ ರೈತರ ಉದ್ಧಾರ ಸಾಧ್ಯ ಎಂದರು.

ಇದನ್ನೂ ಓದಿ: Chikkaballapur News: ನನ್ನ ವಿರುದ್ಧ ನಿಂತು ಜಿಲ್ಲಾ ಪಂಚಾಯಿತಿ ಸ್ಥಾನ ಗೆಲ್ಲಲಿ ನೋಡೋಣ : ಕಾಕಲ ಚಿಂತೆ ರಾಜಣ್ಣ ಸವಾಲು

ಹೈನೋಧ್ಯಮದ ಬೆಳವಣಿಗೆಗೆ ಕಂಠಕವಾಗಿರುವ ಕರ್ನಾಟಕ ಹಾಲು ಮಹಾಮಂಡಳ( ಕೆ.ಎಂ.ಎಫ್ ) ಎಂಬುದು ಹಾಲು ಉತ್ಪಾದಕರ ಪಾಲಿಗೆ ಸದಾ ಶೋಷಣೆ ಮಾಡುವ ಈಸ್ಟ್ ಇಂಡಿಯಾ ಕಂಪನಿ ಯಂತಾಗಿದೆ ಎಂದು ಚಿಂತಾಮಣಿಯ ಚಿಮುಲ್ ನಿರ್ದೇಶಕ ಊಲವಾಡಿ ಅಶ್ವತ್ಥನಾರಾಯಣ ಬೇಸರಿಸಿದರು.

ಜಿಲ್ಲಾ ಕೇಂದ್ರ ಬ್ಯಾಂಕ್‌ನಲ್ಲಿ ೨೫೦ಕೋಟಿ ಹಗರಣ ಆಗಿರುವುದು ಅದರ ಸದಸ್ಯರಿಗೇ ಗೊತ್ತಿರಲಿಲ್ಲ. ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ಹೀಗಾಗಬಾರದು ಎನ್ನುವುದಾದರೆ ಪ್ರತಿಯೊಬ್ಬ ಹಾಲು ಉತ್ಪಾದಕರು ಸಹಕಾರಿ ವ್ಯವಸ್ಥೆಯ ಮೂಲ ತತ್ವಗಳನ್ನು ಸರಿಯಾಗಿ ಅರಿಯಬೇಕು. ಆಗ ಮಾತ್ರ ಸ್ವಾರ್ಥಕ್ಕೆ ಅವಕಾಶವಿಲ್ಲದಂತೆ ರಾಜಕೀಯ ರಹಿತವಾಗಿ ಒಕ್ಕೂಟ ಕೆಲಸ ಮಾಡಲು ಸಾಧ್ಯ.ಹಾಲು ಉತ್ಪಾದಕರು ಕೂಡ ತಮ್ಮ ನ್ಯಾಯಯುತ ಹಕ್ಕುಗಳನ್ನು ಪಡೆಯಲು ಸಾಧ್ಯ ಎಂದರು.

ಚಿಕ್ಕಬಳ್ಳಾಪುರ ಹಾಲು ಒಕ್ಕೂಟವು ಬೇರ್ಪಟ್ಟು 1 ವರ್ಷವಾಗಿದ್ದರೂ ಉತ್ತಮವಾಗಿ ಕೆಲಸ ಮಾಡಿ ಕೊಂಡು ಹೋಗುತ್ತಿದೆ. ನಿಯಮಿತವಾಗಿ ಹಾಲು ಉತ್ಪಾದಕರಿಗೆ ಲಾಭವನ್ನು ಪುನರ್ ಹಂಚಿಕೆ ಮಾಡಿಕೊಂಡು ಹೋಗುತ್ತಿದ್ದೇವೆ.ಪ್ರಾಥಮಿಕ ಹಂತದಲ್ಲಿ ಕೊಡುವ ಸಬ್ಸಿಡಿಗಳನ್ನು ಕೊಡು ತ್ತಿದ್ದೇವೆ. ಇಷ್ಟೆಲ್ಲಾ ಇದ್ದರೂ ನೋವಿನ ಸಂಗತಿ ಎಂದರೆ ನಾವೇ ಮಾಡಿಕೊಂಡಿರುವ ಹಾಲು ಮಹಾಮಂಡಳ ಎಂಬ ಈಸ್ಟ್ ಇಂಡಿಯಾ ಕಂಪನಿಯಾಗಿದೆ ಎಂದರು.

7t ಋ

ನಾವು ದುಡಿದು ಅವರಿಗೆ ಲೆವಿ ಕಟ್ಟಬೇಕಿದೆ. ಆ ಲೆವಿಯನ್ನು ಬಳಸಿಕೊಂಡು ಅವರು ಮಜಾ ಮಾಡುತ್ತಿದ್ದಾರೆ. ನಮ್ಮ ಲಾಭದಿಂದ ಅವರು ಪಿಪಿ ಮಾದರಿಯಲ್ಲಿ ಕೈಗಾರಿಕೆ ಸ್ಥಾಪಿಸಿಕೊಂಡು ಲಾಭ ಮಾಡುತ್ತಿದ್ದಾರೆ. ಇಲ್ಲಿ ಬರುವ ಲಾಭವನ್ನು ನಮ್ಮ ರೈತರಿಗೆ ಕೊಡುವುದಿಲ್ಲ. ಫೀಡ್ ಫ್ಯಾಕ್ಟರಿ ಗಳನ್ನು ಅವರೇ ಸ್ಥಾಪಿಸುವುದರಿಂದ ನಮಗೆ ಕೊಡುವುದಿಲ್ಲ. ಲಾಭ ಬರುವುದೆಲ್ಲಾ ಅವರದ್ದೇ. ಜಿಲ್ಲೆಯಲ್ಲಿ ಸಾದಲಿ ಬಳಿಯ ಫೀಡ್ ಪ್ಯಾಕ್ಟರಿಗೆ ಭೂಮಿ ನಮ್ಮದು. ಲಾಭ ಮಾತ್ರ ಕೆ.ಎಂ.ಎಫ್‌ನದು. ಮದರ್ ಡೈರಿ ಅವರದ್ದೇ.ಇದನ್ನು ಹೊಸ ನಿರ್ದೇಶಕರು ಅಲ್ಲಿ ದನಿ ಎತ್ತಬೇಕು ಎಂದು ಒತ್ತಾಯಿಸಿ ದರು.

ಮರಳುಕುಂಟೆ ಕೃಷ್ಣಮೂರ್ತಿ ಮಾತನಾಡಿ, ಚಿಮುಲ್‌ಗೆ ಬರಲು ನನಗೂ ಆಸೆಯಿತ್ತು. ಆದರೆ ರಾತ್ರೋರಾತ್ರಿ ಕ್ಷೇತ್ರ ಬದಲಾವಣೆ ಆಯಿತು. ಆದರೂ ಸ್ಪರ್ಧಿಸುವಂತೆ ಬಲವಾಗಿ ಒತ್ತಡ ಬಂತು. ಭರಣಿ ವೆಂಕಟೇಶ್ ಕಾರಣ ತ್ಯಾಗ ಮಾಡಿದೆ.ಇಂದು ರಾಜಕಾರಣದಲ್ಲಿ ಬೆಳೆಸಿದವರನ್ನು ತುಳಿಯುವ ಕೆಲಸ ಆಗುತ್ತಿದೆ. ವೆಂಕಟೇಶ್ ಅವರು ಮಾಡಿರುವ ಕೆಲಸಕ್ಕೆ ಮತದಾರರು 24ಕ್ಕೂ ಅಧಿಕ ಮತ ನೀಡಿದ್ದಾರೆ.ಶಾಸಕರು ಕೂಡ ಸೋಲಿಸಲು ಮುಂದಾಗಿದ್ದರು. ಇಂತಹ ಸಂದರ್ಭದಲ್ಲಿ ಅವರನ್ನು ಗೆಲ್ಲಿಸುವ ಕೆಲಸ ಮಾಡಿದೆ ನಿಮಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ ಎಂದು ಮತದಾರರಿಗೆ ಧನ್ಯವಾದ ಗಳನ್ನು ಅರ್ಪಿಸಿದರು.

ಸಾಯಿಬಾಬಾ ಅವರನ್ನು ಜನ ನೆನೆಯುತ್ತಾರೆ. ಹಾಗೆ ಚಿಮುಲ್ ಆಡಳಿತ ಮಂಡಳಿ ರೈತರಿಗೆ ಒಳ್ಳೆಯ ಕೆಲಸ ಮಾಡಿ.ಬೂಸಾ ಚೆಕ್ಕೆ ಕಾರ್ಖಾನೆ ತೆಗೆಯಿರಿ. ಕಡಲೆ ಎಣ್ಣೆ ಬ್ರಾಂಡ್ ಮಾಡೀ ಮಾರಾಟ ಮಾಡಿ ಪಕ್ಷ ಬೇಧ ಮರೆತು ಒಕ್ಕೂಟವನ್ನು ಬಲಪಡಿಸಿ ರೈತರಿಗೆ ನೆರವಾಗಿ. ವರ್ಷಕ್ಕೆ ಒಮ್ಮೆ ಚಿಮುಲ್ ಉತ್ಪನ್ನಗಳನ್ನು ಎಲ್ಲಾ ರೈತರಿಗೆ ಸೇರುವಂತೆ ಮಾಡಿ,ಹಾಲು ಉತ್ಪಾದನೇ ಹೆಚ್ಚಳ ಮಾಡಲು ಹಸುಗಳ ಖರೀದಿಗೆ ಸಹಾಯಧನ ವಿತರಣೆ ಮಾಡಿ ಎಂದರು.

*

ಮೊದಲ ಬಾರಿ ಸ್ಪರ್ಧೆ ಮಾಡಿದಾಗ 3 ಮತಗಳ ಅಂತರದಿಂದ ಗೆಲ್ಲಿಸಿದ ಹಾಲು ಉತ್ಪಾದಕರ ಸಹಕಾರ ಸಂಘದ ಮಹಾ ಜನತೆ ಎರಡನೇ ಬಾರಿಗೆ 24 ಮತಗಳ ಅಂತರದಿಂದ ಗೆಲುವು ತಂದು ಕೊಟ್ಟಿರುವುದು ಸಂತೋಷ ತಂದಿದೆ. ನಿಮ್ಮ ಋಣವನ್ನು ಜೀವನಪರ್ಯಂತ ಸ್ಮರಿಸುತ್ತೇನೆ ಎಂದರು.

5 ವರ್ಷಗಳ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟ ಒಕ್ಕೂಟದ ಎಲ್ಲಾ ಅಧಿಕಾರಿ ಗಳಿಗೂ ಅಭಿನಂದನೆ ಸಲ್ಲಿಸುತ್ತೇನೆ. ನೀವು ಪ್ರತಿವರ್ಷದ ಆಯವ್ಯಯದಲ್ಲಿ ರೈತರಿಗೆ ಲೀಟರ್ ಹಾಲಿಗೆ 2 ರೂಪಾಯಿ ಹೆಚ್ಚಳ ಮಾಡಿ, ಬೇರೇನೂ ಮಾಡುವುದು ಬೇಡ. ನೀವು ಇದನ್ನು ಮಾಡಿದರೆ ಮುಂದೆ ಬರುವ ಯಾವ ಮುಖ್ಯಮಂತ್ರಿಗಳೂ ಕೂಡ ಇದನ್ನು ಬದಲು ಮಾಡುವುದಿಲ್ಲ ಎಂದು ಮುಖ್ಯ ಮಂತ್ರಿಗಳಿಗೆ ನಾನೊಂದು ಪತ್ರ ಬರೆದಿದ್ದೇನೆ.

ಮುಂಬರುವ ಬಜೆಟ್‌ನಲ್ಲಿ ಇದಾಗುತ್ತದೆ ಎಂಬ ವಿಶ್ವಾಸವಿದೆ.ಬೆಂಗಳೂರು ಡೈರಿಯಲ್ಲಿ 2022-23ರಲ್ಲಿ 65 ಕೋಟಿ ಲಾಭ ಮಾಡಿತ್ತು. ಶೇ.25ರಷ್ಟು ತೆರಿಗೆ ಸರಕಾರಕ್ಕೆ ಪಾವತಿ ಮಾಡುವ ಬದಲಿಗೆ ಹಾಲು ಉತ್ಪಾದಕರಿಗೆ 65 ಕೋಟಿ ನೇರ ಜಮೆ ಮಾಡಿ ರೈತ ಪರ ನಿಲುವು ತಳೆದಿದ್ದಾರೆ. ನಾವೂ ಕೂಡ ಮುಂದೆ ಹೀಗೆಯೇ ಮಾಡುತ್ತೇವೆ ಅಧ್ಯಕ್ಷರು ಭರವಸೆ ನೀಡಿರುವುದನ್ನು ಸ್ವಾಗತಿಸುತ್ತೇವೆ ಎಂದ ಅವರು ಕೆ.ಎಂ.ಎಫ್‌ನಲ್ಲಿ ನಡೆದಿರುವ ಅಂದಾ ದರ್ಭಾರ್ ಬಗ್ಗೆ ಮುಂದಿನ ದಿನಗಳಲ್ಲಿ ಕ್ರಮ ವಹಿಸಲಾಗುವುದು ಎಂದರು.

ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸಗೌಡ ಮಾತನಾಡಿ, ಚಿಮುಲ್ ಸ್ವಾತಂತ್ರ್ಯ ನಿರ್ವಹಣೆ ಮಾಡು ತ್ತಿದ್ದು ಈ ಹಿಂದೆ 979 ಹಾಲು ಉತ್ಪಾದಕ ಸಹಕಾರ ಸಂಘಗಳಿದ್ದು, ಪ್ರಸ್ತುತ 1163 ಸಂಘ ಇದೆ ಪ್ರತಿದಿನ ಹಿಂದೆ 3.90 ರಿಂದ 4.90 ಲಕ್ಷ ಲೀಟರ್ ಹಾಲು ಸರಬರಾಜು ಆಗುತ್ತಿದ್ದು ಪ್ರಸ್ತುತ 5 ಲಕ್ಷ ಇದೆ. ಮುಂದೆ 6 ಲಕ್ಷ ಲೀಟರ್ ಗುರಿ ಹೊಂದಲಾಗಿದೆ. ಜ.ಮಾ.16 ತನಕ 1.50 ಬೆಲೆ ಹೆಚ್ಚಳ ಇಡೀ ರಾಜ್ಯದಲ್ಲಿ ನಮ್ಮದೇ ಮೊದಲು. ಬೇಸಿಗೆ ಮೇವಿನ ಅಭಾವ ತಪ್ಪಿಸಲು 1 ಎಕರೆ ಹಸಿ ಮೇವು ಬೆಳೆಯುವ ಪ್ರತಿ ರೈತರಿಗೆ 3500 ಪ್ರೋತ್ಸಾಹಧನ ಹಾಗೂ ಉಚಿತವಾಗಿ ಬೀಜಕೊಡಲಾಗುವುದು, ಗುಣಮಟ್ಟದ ಹಾಲು ಕೊಟ್ಟರೆ ಉತ್ತಮ ದರ ಕೊಡಲು ಸಾಧ್ಯ. 2500 ರಿಂದ 3500 ಕೆ.ಜಿ.ಉತ್ಪಾದನೆ ಆಗುತ್ತಿದೆ. ಕಾಲಕಾಲಕ್ಕೆ ಬಟವಾಡೆ ಆಗುತ್ತಿದೆ ಎಂದರು.

ಇದೇ ವೇಳೆ, ಕಾರ್ಯಕ್ರಮದಲ್ಲಿ ಕರ್ನಾಟಕ ಹಾಲು ಮಹಾಮಂಡದ ನಿರ್ದೇಶಕ, ಚಿಮುಲ್ ನಿರ್ದೇಶಕ ಭರಣಿ ವೆಂಕಟೇಶ್ ಅವರಿಗೆ ಹಿತೈಷಿಗಳು ಆತ್ಮೀಯವಾಗಿ ಸನ್ಮಾನ ಮಾಡಿದರು.

ಆವುಲರೆಡ್ಡಿ, ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ, ಚದಲುಪುರ ನಾರಾಯಣಸ್ವಾಮಿ, ಪಿ.ಎಲ್.ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ನಾಗೇಶ್, ಊಲವಾಡಿ ಅಶ್ವತ್ಥ್ ನಾರಾಯಣ್ ಮತ್ತಿತರರು ಮಾತನಾಡಿ ದರು.