Gauribidanur News: ರಕ್ತದಾನ ಜೀವದಾನಕ್ಕೆ ಸಮಾನ: ಬಿ.ಆರ್.ಶ್ರೀನಿವಾಸ್ ಮೂರ್ತಿ
ರಕ್ತದಾನ ಮಾಡಲು ಸಾಕಷ್ಟು ಸಮಯ ತೆಗೆದುಕೊಳ್ಳುವುದಿಲ್ಲ. ಕೇವಲ ಹತ್ತು ನಿಮಿಷಗಳಲ್ಲಿ ರಕ್ತದಾನ ಮಾಡಬಹುದು ,ಇಪ್ಪತ್ತು ನಿಮಿಷಗಳಲ್ಲಿ ಚೇತರಿಸಿಕೊಳ್ಳಬಹುದು , ಆರೋಗ್ಯವಂತ ವ್ಯಕ್ತಿಗಳು ಕಾಲ ಕಾಲಕ್ಕೆ ರಕ್ತದಾನ ಮಾಡುವುದರಿಂದ ಹೃದಯ ರಕ್ತ ನಾಳಗಳು ಶುದ್ಧಗೊಳ್ಳುವುದು, ಮಧುಮೇಹ ಕಡಿವಾಣ ಸೇರಿದಂತೆ ಅನೇಕ ಆರೋಗ್ಯದ ಲಾಭಗಳಿವೆ.
ರಕ್ತದಾನ ಜೀವದಾನಕ್ಕೆ ಸಮಾನ. ಆದ್ದರಿಂದ ಆರೋಗ್ಯವಂತ ವ್ಯಕ್ತಿಗಳು ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಬೇಕು ಎಂದು ಹಿರಿಯ ವಾಣಿಜ್ಯೋದ್ಯಮಿ ಬಿ.ಆರ್.ಶ್ರೀನಿವಾಸ್ ಮೂರ್ತಿ ತಿಳಿಸಿದರು. -
ಗೌರಿಬಿದನೂರು: ರಕ್ತದಾನ ಜೀವದಾನಕ್ಕೆ ಸಮಾನ. ಆದ್ದರಿಂದ ಆರೋಗ್ಯವಂತ ವ್ಯಕ್ತಿಗಳು ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಬೇಕು ಎಂದು ಹಿರಿಯ ವಾಣಿಜ್ಯೋದ್ಯಮಿ ಬಿ.ಆರ್.ಶ್ರೀನಿವಾಸ್ ಮೂರ್ತಿ ತಿಳಿಸಿದರು.
ಅವರು ನಗರದ ವಾಸವಿ ದೇವಸ್ಥಾನದಲ್ಲಿ ವಾಸವಿ ಯುವಜನ ಸಂಘ ,ವಾಸವಿ ಜಯಂತಿ ಪ್ರಯುಕ್ತ ರೆಡ್ ಕ್ರಾಸ್ ಸಂಸ್ಥೆಯ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಬೃಹತ್ ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದರು.
ತಜ್ಞ ವೈದ್ಯರ ಪ್ರಕಾರ ಒಂದು ಯೂನಿಟ್ ರಕ್ತ ಮೂರು ಜನರ ಜೀವವನ್ನು ಉಳಿಸಬಲ್ಲದು, ಅಲ್ಲದೆ ನಾವು ದಾನ ಮಾಡಿದ ರಕ್ತ ಮತ್ತೆ ನಮ್ಮ ದೇಹದಲ್ಲಿ ಕೇವಲ 48 ಗಂಟೆಗಳಲ್ಲಿ ಮರು ಉತ್ಪತ್ತಿ ಯಾಗುತ್ತದೆ. ಆದ್ದರಿಂದ ತಪ್ಪು ಕಲ್ಪನೆ ಹಾಗೂ ಮೂಢ ನಂಭಿಕೆಗಳನ್ನು ಬಿಟ್ಟು ರಕ್ತದಾನ ಮಾಡ ಬೇಕು ಎಂದ ಅವರು ರಕ್ತದಾನ ಶಿಬಿರವನ್ನು ಏರ್ಪಡಿಸುವ ಮೂಲಕ ವಾಸವಿ ಯುವಜನ ಸಂಘ ಉತ್ತಮ ಸಮಾಜಮುಖಿ ಕಾರ್ಯ ಮಾಡಿದೆ ಎಂದು ಶ್ಲಾಘಿಸಿದರು.
ಇದನ್ನೂ ಓದಿ: Gauribidanur News: ಸಾಮಾಜಿಕ ಅನಿಷ್ಟಗಳ ವಿರುದ್ಧ ಸಮರ ಸಾರಿದ್ದವರು ಬಸವಣ್ಣ: ಮಹೇಂದ್ರ
ವಾಸವಿ ಯುವಜನ ಸಂಘದ ಅಧ್ಯಕ್ಷ ಸುಮನ್ ಮಾತನಾಡಿ, ರಕ್ತದಾನ ಮಾಡಲು ಸಾಕಷ್ಟು ಸಮಯ ತೆಗೆದುಕೊಳ್ಳುವುದಿಲ್ಲ. ಕೇವಲ ಹತ್ತು ನಿಮಿಷಗಳಲ್ಲಿ ರಕ್ತದಾನ ಮಾಡಬಹುದು ,ಇಪ್ಪತ್ತು ನಿಮಿಷಗಳಲ್ಲಿ ಚೇತರಿಸಿಕೊಳ್ಳಬಹುದು , ಆರೋಗ್ಯವಂತ ವ್ಯಕ್ತಿಗಳು ಕಾಲ ಕಾಲಕ್ಕೆ ರಕ್ತದಾನ ಮಾಡುವುದರಿಂದ ಹೃದಯ ರಕ್ತ ನಾಳಗಳು ಶುದ್ಧಗೊಳ್ಳುವುದು, ಮಧುಮೇಹ ಕಡಿವಾಣ ಸೇರಿ ದಂತೆ ಅನೇಕ ಆರೋಗ್ಯದ ಲಾಭಗಳಿವೆ. ಆದ್ದರಿಂದ ಜನ ಹಿಂಜರಿಕೆಯಿಲ್ಲದೆ ರಕ್ತದಾನ ಮಾಡ ಬಹುದು ಎಂದ ಅವರು ರಕ್ತದಾನ ಶಿಬಿರದಲ್ಲಿ ಒಟ್ಟು ಎಪ್ಪತ್ತು ಮಂದಿ ರಕ್ತದಾನಿಗಳು ಶಿಬಿರದಲ್ಲಿ ಭಾಗವಹಿಸುವ ಮೂಲಕ ಎಪ್ಪತ್ತು ಯೂನಿಟ್ ರಕ್ತವನ್ನು ಸಂಗ್ರಹಿಸಿ ರೆಡ್ ಕ್ರಾಸ್ ಸೊಸೈಟಿಗೆ ನೀಡುವ ಮೂಲಕ ರಕ್ತದಾನ ಶಿಬಿರ ಅತ್ಯಂತ ಯಶಸ್ವಿಯಾಗಿ ನೆರೆವೇರಿದೆ, ರಕ್ತದಾನ ಶಿಬಿರ ಯಶಸ್ವಿಯಾಗಲು ಸಹಕರಿಸಿದ ಎಲ್ಲರಿಗೂ ವಾಸವಿ ಯುವಜನ ಸಂಘದಿAದ ಕೃತಜ್ಞತೆಗಳನ್ನು ಅರ್ಪಿಸುವುದಾಗಿ ತಿಳಿಸಿದರು.
ಬೆಳಗ್ಗೆ 2 ರಿಂದ ಮಧ್ಯಾಹ್ನ 3ವರೆಗೆ ನಡೆದ ರಕ್ತದಾನ ಶಿಬಿರದಲ್ಲಿ ಅನೇಕ ಮಂದಿ ಸ್ವಯಂ ಪ್ರೇರಣೆಯಿಂದ ಭಾಗವಹಿಸಿ ರಕ್ತದಾನ ಮಾಡಿದರು.
ಶಿಬಿರದಲ್ಲಿ ವಾಸವಿ ಯುವಜನ ಸಂಘದ ರಾಜೇಂದ್ರ ಪ್ರಸಾದ್,ಉಪೇಂದ್ರ, ಹೇಮಂತ್, ನಾಗಶಿವ, ಕಾಪರ್ತಿ ನಾಗೇಂದ್ರ ಸಮುದಾಯದ ಹಿರಿಯರಾದ ಅಲ್ಲಂಪಲ್ಲಿ ರಾಜಣ್ಣ ,ಇಸ್ತೂರಿ ಸತೀಶ್, ಸಂಪಂಗಿ ,ರಾಮ್ ಮೋಹನ್ ಹಾಗೂ ಇನ್ನಿತರರು ಭಾಗವಹಿಸಿದ್ದರು.