ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Actor Ajay Rao: ಸಿನಿಮಾಕ್ಕಾಗಿ ನೆಚ್ಚಿನ BMW ಕಾರು ಮಾರಿದ ನಟ ಅಜಯ್‌ ರಾವ್‌.. ಬಿಕ್ಕಿ ಬಿಕ್ಕಿ ಅತ್ತ ಪುಟ್ಟ ಮಗಳು- ವಿಡಿಯೊ ಇದೆ

Actor Ajay Rao: ಯುದ್ಧಕಾಂಡ ಚಾಪ್ಟರ್-2 ಸಿನಿಮಾ ರಿಲೀಸ್ ಗೆ ರೆಡಿಯಾಗಿದ್ದು‌ ಏಪ್ರಿಲ್ 18ರಂದು ರಾಜ್ಯಾ ದ್ಯಂತ ಬಿಡುಗಡೆಯಾಗಲಿದೆ. ಸದ್ಯ ಚಿತ್ರದ ಪ್ರಚಾರದಲ್ಲಿ‌ ಬ್ಯುಸಿಯಾಗಿರುವ ನಟ ಅಜಯ್ ರಾವ್ ಸಿನಿಮಾ ಸಕ್ಸಸ್ ಕಾಣಲು ಹಲವು ರೀತಿಯ ಪ್ರಯತ್ನದಲ್ಲಿ ಇದ್ದಾರೆ. ಈ ನಡುವೆ ಸಿನಿಮಾ ನಿರ್ಮಾಣಕ್ಕಾಗಿ ಅಜಯ್ ರಾವ್ ತಮ್ಮ ಬಿ ಎಮ್ ಡಬ್ಲೂ ಕಾರನ್ನು ಮಾರಾಟ ಮಾಡಿದ್ದು, ಮಗಳು ಚೆರಿಷ್ಮಾ ಕಾರು ಮಾರಾಟ ಮಾಡಲು ನಿರಾಕರಿಸಿದ ವಿಡಿಯೊವೊಂದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗಿದೆ.

ಕಾರು ಮಾರಾಟ ಮಾಡಿದ್ದಕ್ಕೆ ಬಿಕ್ಕಿ ಬಿಕ್ಕಿ ಅತ್ತ ಅಜಯ್ ಮಗಳು!

Profile Pushpa Kumari Apr 9, 2025 2:13 PM

ಬೆಂಗಳೂರು: ಎಕ್ಸ್ ಕ್ಯೂಸ್‌ ಮಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟವರು ಅಜಯ್ ರಾವ್ (Actor Ajay Rao) ಇದೀಗ ಹಲವು ವರ್ಷಗಳ ಬಳಿಕ ಮತ್ತೆ ಸಿನಿಮಾ ಮಾಡುತ್ತಿದ್ದಾರೆ. ಸ್ಯಾಂಡಲ್‌ವುಡ್‌ ನಟ ಕೃಷ್ಣ ಅಜಯ್‌ ರಾವ್‌ ಅವರು ನಟಿಸಿರುವ ಯುದ್ಧಕಾಂಡ ಚಾಪ್ಟರ್-2 ಸಿನಿಮಾ ರಿಲೀಸ್ ಗೆ ರೆಡಿಯಾಗಿದ್ದು‌ ಏಪ್ರಿಲ್ 18ರಂದು ರಾಜ್ಯಾ ದ್ಯಂತ ಬಿಡುಗಡೆ ಯಾಗಲಿದೆ. ಸದ್ಯ ಚಿತ್ರದ ಪ್ರಚಾರದಲ್ಲಿ‌ ಬ್ಯುಸಿಯಾಗಿರುವ ನಟ ಅಜಯ್ ರಾವ್ ಸಿನಿಮಾ ಸಕ್ಸಸ್ ಕಾಣಲು ಹಲವು ರೀತಿಯ ಪ್ರಯತ್ನದಲ್ಲಿ ಇದ್ದಾರೆ. ಈ ನಡುವೆ ಸಿನಿಮಾ ನಿರ್ಮಾಣಕ್ಕಾಗಿ ಅಜಯ್ ರಾವ್ ತಮ್ಮ ಬಿ ಎಮ್ ಡಬ್ಲೂ ಕಾರನ್ನು ಮಾರಾಟ ಮಾಡಿದ್ದು, ಮಗಳು ಚೆರಿಷ್ಮಾ ಕಾರು ಮಾರಾಟ ಮಾಡಲು ನಿರಾಕರಿಸಿದ ವಿಡಿಯೊವೊಂದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್(Viral Video) ಆಗಿದೆ.



ಅಜಯ್ ರಾವ್ ತಾಜ್ ಮಹಲ್,ಕೃಷ್ಣನ್ ಲವ್ ಸ್ಟೋರಿ,ಎಕ್ಸ್ ಕ್ಯೂಸ್‌ ಮಿ ಅಂತಹ‌ ಕೆಲ ಸಿನಿಮಾಗಳು ಹಿಟ್ ಲಿಸ್ಟ್ ಸೇರಿವೆ. ಸಿನಿಮಾಗಾಗಿ ತಾವು ಪಟ್ಟ ಕಷ್ಟವನ್ನು ಅಜಯ್‌ ರಾವ್‌ ಈ ಹಿಂದೆ ಸಂದರ್ಶನ ವೊಂದರಲ್ಲಿ ಹೇಳಿಕೊಂಡಿದ್ದು,ತನಗೆಕೋಟಿ ಕೋಟಿ ರೂಪಾಯಿ ಸಾಲ ಇದೆ ಎಂದು ಹೇಳಿಕೊಂಡಿದ್ದರು. ಈ ಬೆನ್ನಲೇ ಅಜಯ್ ರಾವ್ ತಮ್ಮ ಫೇವರಿಟ್ ಬಿಎಂಡ್ಲ್ಯೂ ಕಾರನ್ನು ಮಾರಾಟ ಮಾಡಿದ್ದಾರೆ. ಅಪ್ಪನ ಕಾರು ಮಾರಾಟ ಆಗಿದ್ದಕ್ಕೆ ಅಜಯ್ ರಾವ್ ಪುತ್ರಿ ಚರೀಷ್ಮಾ ಕಣ್ಣೀರು ಹಾಕಿದ ದೃಶ್ಯ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗುತ್ತಿದೆ.

ಮಧ್ಯಮ ಕುಟುಂಬದಿಂದ ಸಿನಿ ಜರ್ನಿಗೆ ಪ್ರವೇಶಿಸಿದ ಅಜಯ್‌ ರಾವ್‌ ಕೆಲ ಸಿನಿಮಾಗಳು ಹಿಟ್‌ ಲೀಸ್ಟ್ ಸೇರಿದ್ರೆ ಇನ್ನೂ ಕೆಲವು ಕಳಪೆ ಪ್ರದರ್ಶನವೂ ಕಂಡಿತ್ತು. ಈಗ ಯುದ್ಧಕಾಂಡ’ ಸಿನಿಮಾ ವನ್ನು ಅಜಯ್ ರಾವ್ ಅವರೇ ನಿರ್ದೇಶನ ಮಾಡುತ್ತಿದ್ದು ಇವರ ಪ್ರೊಡಕ್ಷನ್‌ನಲ್ಲೇ ಮೂಡಿ ಬರುತ್ತಿದೆ. ಈ ಸಿನಿಮಾವನ್ನು ತಾವೇ ನಿರ್ಮಾಣ ಮಾಡುತ್ತಿರುವುದರಿಂದ ಬಂಡವಾಳಕ್ಕೆ ಹಣ ಹೊಂದಿಸಲು ನಾನಾ ಕಷ್ಟಗಳನ್ನು ಎದುರಿಸಿದ್ದಾರೆ. ಹೀಗಾಗಿ ತಮ್ಮ ನೆಚ್ಚಿನ ಬಿಎಂಡಬ್ಲ್ಯು ಕಾರನ್ನು ಮಾರಾಟ ಮಾಡಲು‌ ನಿರ್ಧಾರಿಸಿದ್ದಾರೆ.

ಆದರೆ ಕಾರು ಮಾರಾಟ ಆಗಿದ್ದಕ್ಕೆ ಅಜಯ್‌ ರಾವ್‌ ಮಗಳು ಚೆರಿಷ್ಮಾ ಕಾರ್‌ ಮುಂದೆ ನಿಂತು, ʻಕಾರು ಮಾರಾಟ ಮಾಡುವುದು ಬೇಡʼ ಎಂದು ಹೇಳುತ್ತಾ ಬಿಕ್ಕಿ ಬಿಕ್ಕಿ ಅತ್ತು‌ ಹಠ ಹಿಡಿದಿದ್ದಾಳೆ. ಇದು ನಿನ್ನ ಫೇವರಿಟ್‌ ಕಾರಾ? ಎಂಬ ಅಜಯ್‌ ರಾವ್‌‌ ಪ್ರಶ್ನೆಗೆ, ʻಹೌದುʼ ಎಂದಿದ್ದಾಳೆ‌ .ಇದಕ್ಕೆ ಅಜಯ್‌ ರಾವ್‌, “ಸಾರಿ ಪುಟ್ಟ ಇನ್ನೊಂದು ಹೊಸ ಕಾರು ತರೋಣ ಬಿಡು” ಅಂತ ಹೇಳಿದ್ದು ಇಲ್ಲ ನನಗೆ ಇದೇ ಕಾರು ಬೇಕುʼ ಎಂದ ಮಗಳು ಬಿಕ್ಕಿ ಬಿಕ್ಕಿ ಅತ್ತಿದ್ದಾಳೆ.

ಇದನ್ನು ಓದಿ:Ajay Rao: ಕೋಟಿ ಗಟ್ಟಲೆ ಸಾಲ ಮಾಡಿಕೊಂಡ ಅಜಯ್ ರಾವ್: ಶಾಕಿಂಗ್ ವಿಚಾರ ಬಹಿರಂಗ

ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಭಾವುಕರಾಗಿದ್ದಾರೆ. ನಟ ಅಜಯ್ ರಾವ್ ಹಾಗೂ ಪುತ್ರಿ ಚರಿಷ್ಮಾ ಗೆ ಅವರ ಅಭಿಮಾನಿಗಳು ಬೆಂಬಲ ನೀಡಿದ್ದಾರೆ. ಈ ಬಗ್ಗೆ ನೆಟ್ಟಿಗರು ನಾನಾ ಬಗೆಯ ಪ್ರತಿಕ್ರಿಯೆ ನೀಡಿದ್ದು ಮುಂದೊಂದು ದಿನ ಒಳ್ಳೆ ಸಮಯ ಬರಬಹುದು ಎಂದು ಅಜಯ್ ಅಭಿಮಾನಿ ಯೊಬ್ಬರು ಟ್ವೀಟ್ ಮಾಡಿದ್ದರೆ. ಈ ವಿಡಿಯೊ ನೋಡಿದ ಹೆಚ್ಚಿನ ಜನರು ಅಜಯ್ ಹೊಸ ಸಿನಿಮಾಕ್ಕೆ ಸಕ್ಸಸ್ ಕಾಣಲಿ ಎಂದು ಶುಭ ಹಾರೈಸಿದ್ದಾರೆ.. "

ಯುದ್ಧಕಾಂಡ’ ಸಿನಿಮಾದ ಟೀಸರ್  ಈಗಾಗಲೇ ಬಿಡುಗಡೆ ಆಗಿದ್ದು ಅಜಯ್ ರಾವ್, ಅರ್ಚನಾ ಜೋಯಿಸ್ ಮುಂತಾದವರು ಈ ಟೀಸರ್​ನಲ್ಲಿ ಕಾಣಿಸಿಕೊಂಡಿದ್ದಾರೆ.‌ ಚಿತ್ರವು ಏಪ್ರಿಲ್‌ 18ರಂದು ರಿಲೀಸ್‌ ಆಗಲಿದ್ದು ಪ್ರಕಾಶ್‌ ಬೆಳವಾಡಿ, ಟಿ.ಎಸ್.ನಾಗಾಭರಣ ಮತ್ತಿತರರೂ ಕೂಡ ಚಿತ್ರದಲ್ಲಿ ನಟಿಸಿದ್ದಾರೆ. ಶ್ರೀಕೃಷ್ಣ ಆರ್ಟ್ಸ್ ಆ್ಯಂಡ್ ಕ್ರಿಯೇಷನ್ಸ್’ ಬ್ಯಾನರ್ ಮೂಲಕ ಅಜಯ್ ರಾವ್ ಈ ‌ಸಿನಿಮಾವನ್ನು ನಿರ್ಮಿಸಿದ್ದಾರೆ. ಪವನ್ ಭಟ್ ಅವರು ಕಥೆ ಬರೆದು ನಿರ್ದೇಶನ ಮಾಡಿದ್ದಾರೆ.