BBK 11: ಇಂದೇ ನಡೆಯಲಿದೆ ಮಿಡ್ ವೀಕ್ ಎಲಿಮಿನೇಷನ್: ಔಟ್ ಆದ ಸ್ಪರ್ಧಿ ಇವರೇ ನೋಡಿ
ಎಲಿಮಿನೇಷನ್ನಿಂದ ಪಾರಾಗಲು ಬಿಗ್ ಬಾಸ್ ನೀಡಿದ ಟಾಸ್ಕ್ನಲ್ಲಿ ಅತಿ ಹೆಚ್ಚು ಪಾಯಿಂಟ್ಸ್ ಗೆದ್ದು ಧನರಾಜ್ ಆಚಾರ್ ಬಚಾವ್ ಆದರು. ಹೀಗಾಗಿ ಉಳಿದ ಆರು ಸ್ಪರ್ಧಿಗಳಿಗೆ ಅಗ್ನಿಪರೀಕ್ಷೆ ಎದುರಾಗಿದೆ. ಅಚ್ಚರಿ ಎಂದರೆ ಇಂದೇ ಮಿಡ್ ವೀಕ್ ಎಲಿಮಿನೇಷನ್ ಪ್ರಕ್ರಿಯೆಯ ಎಪಿಸೋಡ್ ಇಂದೇ ಪ್ರಸಾರ ಕಾಣಲಿದೆ.
ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಗ್ರ್ಯಾಂಡ್ ಫಿನಾಲೆಗೆ ಕೇವಲ ಒಂದೂವರೆ ವಾರಗಳಷ್ಟೆ ಬಾಕಿಯಿದೆ. ಸದ್ಯ ಮನೆಯಲ್ಲಿ ಎಂಟು ಮಂದಿ ಇದ್ದಾರಷ್ಟೆ. ಇದರ ನಡುವೆ ಕಳೆದ ವಾರ ಚೈತ್ರಾ ಕುಂದಾಪುರ ದೊಡ್ಮನೆಯಿಂದ ಔಟ್ ಆಗಿ ಆಚೆ ಬಂದಿದ್ದಾರೆ. ಈ ವಾರ ಟ್ವಿಸ್ಟ್-ಟರ್ನ್ಗಳ ಜೊತೆ ಟಾಸ್ಕ್ಗಳ ಕಾವು ಮತ್ತಷ್ಟು ಏರಿದೆ. ಬಹುತೇಕ ಎಲ್ಲ ಟಾಸ್ಕ್ಗಳು ವೈಯಕ್ತಿಕವಾಗಿಯೇ ಆಡಿದ್ದಾರೆ. ಇದರ ಜೊತೆಗೆ ಮಿಡ್ ಎಲಿಮಿನೇಷನ್ ಭಯ ಸ್ಪರ್ಧಿಗಳಲ್ಲಿ ಮೂಡಿದೆ.
ವಾರದ ಮೊದಲ ದಿನವೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಬಿಗ್ ಶಾಕಿಂಗ್ ನ್ಯೂಸ್ ಕೊಟ್ಟಿದ್ದರು. ಈ ವಾರ ಮಿಡ್ ವೀಕ್ ಎಲಿಮಿನೇಷನ್ ಇರಲಿದೆ ಎಂದು ಬಿಗ್ ಬಾಸ್ ಹೇಳಿದ್ದರು. ಇದನ್ನು ಕೇಳಿ ಸ್ಪರ್ಧಿಗಳಿಗೆ ನಡುಕ ಶುರುವಾಗಿತ್ತಿ. ಮಿಡ್ ವೀಕ್ ಎಲಿಮಿನೇಷನ್ನಿಂದ ಪಾರಾಗಲು ಕೂಡ ಬಿಗ್ ಬಾಸ್ ಒಂದು ಅವಕಾಶ ನೀಡಿದ್ದರು. ಮಿಡ್ ವೀಕ್ ಎಲಿಮಿನೇಷನ್ನಿಂದ ಬಚಾವ್ ಆಗಲು ಬಿಗ್ ಬಾಸ್ ಕಾಲಕಾಲಕ್ಕೆ ಟಾಸ್ಕ್ ನೀಡುತ್ತಾರೆ. ಈ ಟಾಸ್ಕ್ಗಳಲ್ಲಿ ಗೆದ್ದು ಅಂತಿಮವಾಗಿ ಅತಿ ಹೆಚ್ಚು ಪಾಯಿಂಟ್ಸ್ ಪಡೆದಿರುವ ಸ್ಪರ್ಧಿ ಎಲಿಮಿನೇಷನ್ ತೂಗುಗತ್ತಿಯಿಂದ ಪಾರಾಗಲಿದ್ದಾರೆ ಹೇಳಿದ್ದರು.
ಹೀಗಾಗಿ ಸ್ಪರ್ಧಿಗಳು ಟಾಸ್ಕ್ಗಳನ್ನು ಗೆಲ್ಲಲೇಬೇಕಾದ ಇಕ್ಕಟ್ಟಿಗೆ ಸಿಲುಕಿದ್ದರು. ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿತ್ತು. ಮಂಜು, ಗೌತಮಿ, ತ್ರಿವಿಕ್ರಮ್, ಭವ್ಯಾ, ರಜತ್, ಧನರಾಜ್ ಆಚಾರ್, ಮೋಕ್ಷಿತಾ ಪೈ ಈ ಟಾಸ್ಕ್ನಲ್ಲಿ ಭಾಹವಹಿಸಿದ್ದರು. ಈಗಾಗಲೇ ಹನುಮಂತು ಅವರು ಫಿನಾಲೆಗೆ ಎಂಟ್ರಿ ಆಗಿದ್ದಾರೆ. ಅವರಿಗೆ ಈ ಮಿಡ್ ವೀಕ್ ಎಲಿಮಿನೇಷನ್ ಟೆನ್ಷನ್ ಇರಲ್ಲ.
ಎಲಿಮಿನೇಷನ್ನಿಂದ ಪಾರಾಗಲು ಬಿಗ್ ಬಾಸ್ ನೀಡಿದ ಟಾಸ್ಕ್ನಲ್ಲಿ ಅತಿ ಹೆಚ್ಚು ಪಾಯಿಂಟ್ಸ್ ಗೆದ್ದು ಧನರಾಜ್ ಆಚಾರ್ ಬಚಾವ್ ಆದರು. ಹೀಗಾಗಿ ಉಳಿದ ಆರು ಸ್ಪರ್ಧಿಗಳಿಗೆ ಅಗ್ನಿಪರೀಕ್ಷೆ ಎದುರಾಗಿದೆ. ಅಚ್ಚರಿ ಎಂದರೆ ಇಂದೇ ಮಿಡ್ ವೀಕ್ ಎಲಿಮಿನೇಷನ್ ಪ್ರಕ್ರಿಯೆಯ ಎಪಿಸೋಡ್ ಇಂದೇ ಪ್ರಸಾರ ಕಾಣಲಿದೆ. ಅಂದರೆ ನಿನ್ನೆ ಎಲಿಮಿನೇಷನ್ ನಡೆದು ಹೋಗಿದೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಮಾಹಿತಿಯ ಪ್ರಕಾರ ಗೌತಮಿ ಜಾಧವ್ ಮಿಡ್ ವೀಕ್ ಎಲಿಮಿನೇಷನ್ನಲ್ಲಿ ಎಲಿಮಿನೇಟ್ ಆಗಿ ಹೊರಬಂದಿದ್ದಾರೆ.
BBK 11: ಅಂತಿಮ ಹಂತದಲ್ಲಿ ವೈರಿಗಳಾದ ಭವ್ಯಾ-ತ್ರಿವಿಕ್ರಮ್: ಇಬ್ಬರ ಮಧ್ಯೆ ಜಗಳ