ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bollywood Movies: ಈ ತಿಂಗಳು ರಿಲೀಸ್ ಆಗ್ತಿರೋ ಥ್ರಿಲ್ಲಿಂಗ್ ಬಾಲಿವುಡ್ ಸಿನಿಮಾಗಳಿವು!

Bollywood Movies: ಬಾಲಿವುಡ್ ಅಂಗಳದಲ್ಲಿ ಹಾರರ್, ಸಸ್ಪೆನ್ಸ್, ಆ್ಯಕ್ಷನ್ ಸಿನಿಮಾಗಳು ಗಲ್ಲ ಪಟ್ಟಿಗೆ ಧೂಳೆಬ್ಬಿಸಿ ಅಭಿಮಾನಿಗಳನ್ನು ರಂಜಿಸಲು ಸಿದ್ಧವಾಗಿವೆ. ಕೆಲವೊಂದು ಸಿನಿ ಮಾಗಳು ಥಿಯೇಟರ್ ನಲ್ಲಿ ರಿಲೀಸ್ ಆದರೆ ಇನ್ನು ಕೆಲವೊಂದು ಡಿಜಿಟಲ್ ಪ್ಲ್ಯಾಟ್ ಫಾರ್ಮ್ ಆದ ಒಟಿಟಿನಲ್ಲಿ ತೆರೆ ಕಾಣಲಿದೆ. ಈ ತಿಂಗಳಿನಂದು ಬಾಲಿವುಡ್ ಸ್ಟಾರ್ ನಟರಾದ ಅಕ್ಷಯ್ ಕುಮಾರ್, ಸಂಜಯ್ ದತ್‌, ಸೈಫ್ ಅಲಿ ಖಾನ್, ಇಮ್ರಾನ್ ಹಶ್ಮಿ ,ಸಂಜಯ್ ದತ್ ಸಿನಿಮಾಗಳು ರಿಲೀಸ್ ಆಗಲಿದ್ದು ಈ ಬಗ್ಗೆ ಕಂಪ್ಲೀಟ್ ಮಾಹಿತಿ ಇಲ್ಲಿದೆ.

ಎಪ್ರಿಲ್ ತಿಂಗಳಿನಲ್ಲಿ ರಿಲೀಸ್‌ಗೆ ರೆಡಿಯಾದ ಸಿನಿಮಾಗಳಿವು!

Profile Pushpa Kumari Apr 4, 2025 3:15 PM

ನವದೆಹಲಿ: ಇತ್ತೀಚಿನ ವರ್ಷದಲ್ಲಿ ಹೊಸ ಆಯಾಮದ ಕಥೆಗಳು ಸಿನಿಮಾ ವಾಗಿ ನಿರ್ಮಾಣ ಆಗುತ್ತಿರುವ ಸಂಖ್ಯೆ ಹೆಚ್ಚಾಗಿದೆ. ಈ ತಿಂಗಳಿನಲ್ಲೂ ವಿಭಿನ್ನ ಕಥೆಯ ಹೊಸ ಸಿನಿಮಾಗಳು ತೆರೆಕಾಣಲು ಸಜ್ಜಾಗುತ್ತಿದ್ದು ಕೆಲ ಬಾಲಿವುಡ್ (Bollywood Movies) ಸಿನಿಮಾಗಳು ರಿಲೀಸ್ ಗೆ ರೆಡಿ ಯಾಗಿವೆ. ಈ ಮೂಲಕ ಬಾಲಿವುಡ್ ಅಂಗಳದಲ್ಲಿ ಹಾರರ್, ಸಸ್ಪೆನ್ಸ್, ಆ್ಯಕ್ಷನ್ ಸಿನಿಮಾಗಳು ಗಲ್ಲ ಪಟ್ಟಿಗೆ ಧೂಳೆಬ್ಬಿಸಿ ಅಭಿಮಾನಿಗಳನ್ನು ರಂಜಿ ಸಲು ಸಿದ್ಧವಾಗಿವೆ. ಕೆಲವೊಂದು ಸಿನಿಮಾಗಳು ಥಿಯೇಟರ್ ನಲ್ಲಿ ರಿಲೀಸ್ ಆದರೆ ಇನ್ನು ಕೆಲವೊಂದು ಡಿಜಿಟಲ್ ಪ್ಲ್ಯಾಟ್ ಫಾರ್ಮ್ ಆದ ಒಟಿಟಿ ನಲ್ಲಿ ತೆರೆ ಕಾಣಲಿದೆ. ಈ ತಿಂಗಳಿನಂದು ಬಾಲಿವುಡ್ ಸ್ಟಾರ್ ನಟರಾದ ಅಕ್ಷಯ್ ಕುಮಾರ್, ಸಂಜಯ್ ದತ್ತ್, ಸೈಫ್ ಅಲಿ ಖಾನ್, ಇಮ್ರಾನ್ ಹಶ್ಮಿ , ಸಂಜ ಯ್ ದತ್ ಸಿನಿಮಾಗಳು ರಿಲೀಸ್ ಆಗಲಿದ್ದು ಈ ಬಗ್ಗೆ ಕಂಪ್ಲೀಟ್ ಮಾಹಿತಿ ಇಲ್ಲಿದೆ.

ಜಾಟ್‌ ಸಿನಿಮಾ:

jaath

ಸನ್ನಿ ಡಿಯೋಲ್, ರಣದೀಪ್ ಹೂಡಾ, ಸಯಾಮಿ ಖೇರ್ ಅಭಿನಯದ ಜಾಟ್‌ ಸಿನಿಮಾ ಈಗಾಗಲೇ ಟ್ರೇಲರ್ ಮೂಲಕ ಸಿಕ್ಕಾಪಟ್ಟೆ ಫೇಮಸ್ ಆಗಿದೆ. ಕುಖ್ಯಾತ ಅಪರಾಧಿ ರಣತುಂಗಾ ಜೊತೆ ಹೋರಾಡುವ ಒಂದು ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ ಇದಾಗಿದೆ‌‌. ಎಪ್ರಿಲ್ 10ರಂದು ಥಿಯೇಟರ್ ನಲ್ಲಿ ಈ ಸಿನೆಮಾ ರಿಲೀಸ್ ಆಗಲಿದೆ. ಈ ಸಿನಿಮಾದ ಕ್ಯಾಮರಾ ವರ್ಕ್ ಬಹಳ ಚೆನ್ನಾಗಿದ್ದು ಟ್ರೇಲರ್ ನಲ್ಲಿ ಕತೆಯ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಹುಟ್ಟಿಸಿದೆ‌

ಫುಲೆ:

phule

ಹಿಂದಿನ ಕಾಲದಲ್ಲಿ ಸ್ತ್ರೀ ಶಿಕ್ಷಣ ವಿರೋಧ ವ್ಯಕ್ತವಾಗುತ್ತಿದ್ದು ಇದೇ ಕಥಾ ವಸ್ತುವನ್ನು ಫುಲೆ ಸಿನಿಮಾದಲ್ಲಿ ಕಾಣಬಹುದು. ಬಾಲ್ಯ ವಿವಾಹದಿಂದ ಉಂಟಾಗುತ್ತಿದ್ದ ಸಮಸ್ಯೆಗಳ ಬಗ್ಗೆ ಕೂಡ ಈ ಸಿನೆಮಾ ತಿಳಿಸಿಕೊಡುವತ್ತಾ ಸಾಗಿದೆ. ಪತ್ರಲೇಖಾ, ಅಲೆಕ್ಸಾ ಓ ನೆಲ್, ಪ್ರತೀಕ್ ಗಾಂಧಿ ಈ ಸಿನೆ‌ಮಾ ದಲ್ಲಿ ಅಭಿನಯಿಸಿದ್ದು ಸಮಾಜ ಸುಧಾರಣೆಯ ಅಂಶಗಳು ಟ್ರೇಲರ್ ನಲ್ಲಿ ಹೈಲೈಟ್ ಆಗಿದ್ದು ಕಾಣಬಹುದು. ಎಪ್ರಿಲ್ 11 ರಂದು ಈ ಸಿನೆಮಾ ಥಿಯೇಟರ್ ನಲ್ಲಿ ರಿಲೀಸ್ ಆಗಲಿದೆ.

ಕೇಸರಿ ಚಾಪ್ಟರ್ 2:

kesari chapter 2

1919ರ ಜಲಿಯನ್ ವಾಲಾಬಾಗ್ ಹತ್ಯ ಕಾಂಡದ ಬಳಿಕ ಸತ್ಯಕ್ಕಾಗಿ, ನ್ಯಾಯಕ್ಕಾಗಿ ಹೋರಾಡುವ ಸಿ. ಶಂಕರ್ ನಾಯರ್ ಕುರಿತಾದ ಕಥೆಯೆ ಕೇಸರಿ ಚಾಪ್ಟರ್ 2 ಆಗಿದೆ. ಬ್ರಿಟಿಷರ ಆಳ್ವಿಕೆಯಲ್ಲಿ ತತ್ತರಿಸಿದ್ದ ಭಾರತೀ ಯರ ಪರ ಧ್ವನಿಯಾಗಿದ್ದ ಮಹಾನ್ ವ್ಯಕ್ತಿಯ ಚಿತ್ರಣ ಈ ಸಿನೆಮಾದಲ್ಲಿ ಹೈಲೈಟ್ ಆಗಿದೆ. ಅಕ್ಷಯ್ ಕುಮಾರ್, ಅನನ್ಯಾ ಪಾಂಡೆ, ಮಾಧವನ್ ಈ ಸಿನೆಮಾದಲ್ಲಿ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಎಪ್ರಿಲ್ 18ಕ್ಕೆ ಈ ಸಿಮೆಮಾ ಥಿಯೇಟರ್ ನಲ್ಲಿ ರಿಲೀಸ್ ಆಗಲಿದೆ.

ಗ್ರೌಂಡ್ ಝೀರೋ:

2001ರಲ್ಲಿ ಸಂಸತ್ತಿನ ದಾಳಿಯೇ ಗ್ರೌಂಡ್ ಝೀರೋ ಸಿನೆಮಾದ ಮುಖ್ಯ ಕಥೆಯಾಗಿದೆ. ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆಗಳು ಅದಕ್ಕೆ ಅಧಿ ಕಾರಿಗಳ ಕಾರ್ಯ ತಂತ್ರ ಎಲ್ಲವೂ ಈ ಸಿನೆಮಾದ ಮುಖ್ಯ ಎಳೆಗಳಾಗಿವೆ. ಇದೊಂದು ಆ್ಯಕ್ಷನ್ ಸಿನೆಮಾವಾಗಿದ್ದು ಇಮ್ರಾನ್ ಹಶ್ಮಿ, ಸಾಯಿ ತಮ್ಹಾಂ ಕರ್, ಜೋಯಾ ಹುಸೇನ್ ಈ ಸಿನೆಮಾದಲ್ಲಿ ಅಭಿನಯಿಸಿದ್ದಾರೆ. ಎಪ್ರಿಲ್ 25ಕ್ಕೆ ಈ ಸಿನೆಮಾ ಥಿಯೇಟರ್ ನಲ್ಲಿ ರಿಲೀಸ್ ಆಗಲಿದೆ.

ಚೋರಿ 2:

chhorii

ಚೋರಿ ಸಿನಿಮಾದ ಮೊದಲದ ಭಾಗದ ಮುಂದುವರಿದ ಚಿತ್ರವಾಗಿದೆ. ನುಸ್ರತ್ ಭರುಚ್ಚ, ಸೋಹಾ ಅಲಿ ಖಾನ್, ಗಶ್ಮೀರ್ ಮಹಾಜನಿ ಅಭಿನಯ ದಲ್ಲಿ ಚೋರಿ 2 ಸಿನಿಮಾ ಕೂಡ ರಿಲೀಸ್ ಗೆ ರೆಡಿಯಾಗಿದೆ. 2017ರಲ್ಲಿ ಮರಾಠಿ ಭಾಷೆಯಲ್ಲಿ ತೆರೆಕಂಡ ಲಪಚ್ಚಪಿಯ ಸಿನೆಮಾದ ರಿಮೇಕ್ ಇದಾ ಗಿದೆ. ಚೋರಿ ಸಿನೆಮಾದ ಕೆಲವು ಪಾತ್ರಗಳೇ ಇಲ್ಲಿ ಮತ್ತೆ ಮರುಕಳಿಸಲಿದೆ. ಇದೊಂದು ಹಾರರ್ ಕಥಾ ಹಂದರ ಇರುವ ಸಿನೆಮಾ ಆಗಿದ್ದು ಟ್ರೈಲರ್ ಬಹಳ ಕುತೂಹಲಕಾರಿಯಾಗಿದೆ. ಎಪ್ರಿಲ್ 11 ರಂದು ಈ ಸಿನೆಮಾ ಒಟಿಟಿ ಪ್ಲ್ಯಾಟ್ ಫಾರ್ಮ್ ಆದ ಅಮೇಜಾನ್ ಪ್ರೈಮ್ ನಲ್ಲಿ ರಿಲೀಸ್ ಆಗಲಿದೆ.

ಇದನ್ನು ಓದಿ: Toxic Movie: ಭರದಿಂದ ಸಾಗುತ್ತಿದೆ ಯಶ್‌ ʼಟಾಕ್ಸಿಕ್‌ʼ ಶೂಟಿಂಗ್‌; ಮಕ್ಕಳೊಂದಿಗೆ ಮುಂಬೈಗೆ ಬಂದಿಳಿದ ನಯನತಾರಾ

ಜುವೆಲ್ ಥೀಫ್:

jewel thief

ಆಫ್ರಿಕನ್ ರೆಡ್ ಸನ್ ವಜ್ರ ಕದಿಯುವ ಕತರ್ ನಾಕ್ ಕಳ್ಳತನದ ಕಥೆಯೇ ಜುವೆಲ್ ಥೀಫ್ ಸಿನೆಮಾವಾಗಿದೆ. ಸೈಫಲಿ ಖಾನ್, ಜೈದೀಪ್ ಅಹ್ಲಾವತ್, ನಿಕಿತಾ ದತ್ತಾ ಅವರು ಈ ಆಕ್ಷನ್ , ಸಸ್ಪೆನ್ಸ್ ಥ್ರಿಲ್ಲರ್ ಸಿನೆಮಾದಲ್ಲಿ ಅಭಿ ನಯಿಸಿದ್ದಾರೆ. ಎಪ್ರಿಲ್ 25ರಂದು ಜುವೆಲ್ ಥೀಫ್ ಸಿನೆಮಾವು ಒಟಿಟಿ ಪ್ಲ್ಯಾಟ್ ಫಾರ್ಮ್ ಆದ ನೆಟ್ ಫ್ಲಿಕ್ಸ್ ನಲ್ಲಿ ತೆರೆ ಕಾಣಲಿದೆ.

ದಿ ಭೂತ್ನಿ:

ಸಂಜಯ್ ದತ್‌, ಮೌನಿ ರಾಯ್ ಹಾಗೂ ಸನ್ನಿ ಸಿಂಗ್ ಅಭಿನಯದ ದಿ ಭೂತ್ನಿ ಸಿನೆಮಾ ಬಹಳ ನಿರೀಕ್ಷೆ ಹೆಚ್ಚಿಸುತ್ತಿದೆ. ಇದೊಂದು ಹಾರರ್ ಕಮ್ ಕಾಮಿಡಿ ಸಿನೆಮಾವಾಗಿದ್ದು ಅಭಿಮಾನಿಗಳಿಗೆ ಫುಲ್ ಆಫ್ ಎಂಟಟೈನ್ ಮೆಂಟ್ ಪ್ಯಾಕೇಜ್ ಈ ಸಿನಿಮಾದಲ್ಲಿ ಸಿಗಲಿದೆ. ಮೌನಿ ರಾವ್ಅವರು ಭೂತದ ಪಾತ್ರದಲ್ಲಿ ಅಭಿನಯಿಸಿದ್ದು ಸಂಜಯ್ ದತ್ ಕಾಮಿಡಿ ಪಂಚಿಂಗ್ ಟ್ರೇಲರ್ ನಲ್ಲಿ ಬಹಳ ಚೆನ್ನಾಗಿ ಮೂಡಿಬಂದಿದೆ. ಎಪ್ರಿಲ್ 18ರಂದು ಈ ಸಿನೆಮಾ ಥಿಯೇಟರ್ ನಲ್ಲಿ ರಿಲೀಸ್ ಆಗಲಿದೆ.