Sunny Deol: ಅಪ್ಪಟ ದೇಸಿ ಊಟವನ್ನು ಬಾಯಿ ಚಪ್ಪರಿಸಿಕೊಂಡು ಸವಿದ ಸನ್ನಿ ಡಿಯೋಲ್! ವಿಡಿಯೊ ಇಲ್ಲಿದೆ..
ಆಹಾರ ಪ್ರಿಯರಾದ ನಟ ಸನ್ನಿಡಿಯೋಲ್(Sunny Deol) ಬೇರೆ ಬೇರೆ ಕಡೆಗಳ ವಿಶೇಷ ತಿನಿಸುಗಳ ಬಗ್ಗೆ ಹೆಚ್ಚು ಕ್ರೇಜ್ ಹೊಂದಿದ್ದಾರೆ. ಇದೀಗ ಖಾಸಗಿ ಜೆಟ್‌ವೊಂದರಲ್ಲಿ ಅಪ್ಪಟ ದೇಸಿ ಊಟವನ್ನು ಆಹ್ಲಾದಿಸಿಕೊಂಡು ಸವಿಯುತ್ತಿರುವ ದೃಶ್ಯವನ್ನು ಪೋಸ್ಟ್ ಮಾಡಿದ್ದಾರೆ. ಪಂಜಾಬಿ ಶೈಲಿಯ ಪರೋಟ ಹಾಗೂ ಮೊಸರನ್ನು ಬಾಯಿ ಚಪ್ಪರಿಸಿಕೊಂಡು ಸವಿದಿದ್ದಾರೆ. ಈ ವಿಡಿಯೊ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗಿದೆ.


ನವದೆಹಲಿ: ಬಾಲಿವುಡ್ ನ 90 ರ ದಶಕದ ಖ್ಯಾತ ನಟ ಸನ್ನಿ ಡಿಯೋಲ್ (Sunny Deol) ಸಾಕಷ್ಟು ಹಿಟ್ ಸಿನಿಮಾ ಗಳನ್ನು ನೀಡಿ ಜನ ಮನ ಗೆದ್ದಿದ್ದರು. ಸನ್ನಿ ಡಿಯೋಲ್ ಗದರ್ 2' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿ ಹೆಚ್ಚು ಗಳಿಕೆ ಕಂಡಿತ್ತು. ಇದೇ ಯಶಸ್ಸಿನ ಬೆನ್ನಲ್ಲೇ ಇದೀಗ `ಜಾಟ್' ಚಿತ್ರ ರಿಲೀಸ್ ಆಗಿದ್ದು ಪಕ್ಕಾ ಪೈಸಾ ವಸೂಲ್' ಎನ್ನಲಾಗುತ್ತಿದೆ. ಇದರೊಂದಿಗೆ ಸೋಷಿಯಲ್ ಮೀಡಿಯಾದಲ್ಲೂ ಹೆಚ್ಚು ಸಕ್ರಿಯವಾಗಿರುವ ಸನ್ನಿ ಡಿಯೋಲ್ ಆಹಾರ ಪ್ರಿಯರು ಕೂಡ ಹೌದು. ಆಗಾಗ ರುಚಿ ರುಚಿಯಾದ ಭೋಜನ ಸವಿಯುವ ದೃಶ್ಯವನ್ನು ಹಂಚಿಕೊಳ್ಳುವ ನಟ ಇದೀಗ ಅಪ್ಪಟ ದೇಸಿ ರುಚಿಯನ್ನು ಸವಿಯುವ ದೃಶ್ಯವೊಂದು ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ (Viral Video) ಆಗುತ್ತಿದೆ.
ಆಹಾರ ಪ್ರಿಯರಾದ ನಟ ಸನ್ನಿ ಡಿಯೋಲ್ ಟ್ರಿಫ್ ಹೋಗುವ ಮೂಲಕ ಅಲ್ಲಿನ ವಿಶೇಷ ತಿನಿಸುಗಳ ಬಗ್ಗೆ ಹೆಚ್ಚು ಕ್ರೆಜ್ ಹೊಂದಿದ್ದಾರೆ. ಇದೀಗ ಖಾಸಗಿ ಜೆಟ್ ವೊಂದರಲ್ಲಿ ಅಪ್ಪಟ ದೇಸಿ ಊಟವನ್ನು ಆಹ್ಲಾದಿಸಿಕೊಂಡು ಸವಿಯುತ್ತಿರುವ ದೃಶ್ಯ ವನ್ನು ಪೋಸ್ಟ್ ಮಾಡಿದ್ದಾರೆ. ಪಂಜಾಬಿ ಶೈಲಿಯ ಪರೋಟಾ ಹಾಗೂ ಮೊಸರನ್ನು ಬಾಯಿ ಚಪ್ಪರಿಸಿಕೊಂಡು ಸವಿದಿದ್ದಾರೆ. ಮ್ಯೂಸಿಕ್ ಕೇಳುತ್ತಾ ಪರೋಟಾ ಹಾಗೂ ಮೊಸರನ್ನು ಸವಿಯುವ ದೃಶ್ಯ ಕಂಡು ನೆಟ್ಟಿಗರು ಫಿದಾ ಆಗಿದ್ದು ಈ ವಿಡಿಯೊ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗಿದೆ.
ಸನ್ನಿ ಡಿಯೋಲ್ ಖಾದ್ಯ ಸವಿಯುವ ವಿಡಿಯೊ ಹಂಚಿಕೊಳ್ಳುವುದು ಇದೇ ಮೊದಲೇನಲ್ಲ. ಇದಕ್ಕೂ ಹಿಮಾಲಯದಲ್ಲಿ ಬಿಸಿ ಬಿಸಿ ಜಿಲೇಬಿ ಸವಿಯುವ ವಿಡಿಯೊ ಪೋಸ್ಟ್ ಮಾಡಿದ್ದರು. ಅದರೊಂದಿಗೆ ತನ್ನ ತಂದೆ ಧರ್ಮೇಂದ್ರ ಅವರೊಂದಿಗೆ ಪಿಜ್ಜಾ ಸವಿದಿದ್ದ ಪೋಸ್ಟ್ ಹಾಕಿದ್ದು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದೀಗ ಈ ವಿಡಿಯೊಗೆ ಕೂಡ ನೆಟ್ಟಿಗರು ಮೆಚ್ಚುಗೆ ವ್ಯಕ್ತ ಪಡಿಸಿದ್ದು ನಾನಾ ಬಗೆಯ ಕಮೆಂಟ್ ಮಾಡಿದ್ದಾರೆ. ನೆಟ್ಟಿಗರೊಬ್ಬರು ದೇಶಿಯ ಖಾದ್ಯಗಳ ರುಚಿ ನಮ್ಮ ಬಾಯಿ ಚಪ್ಪರಿಸುವಂತೆ ಮಾಡಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಮತ್ತೊಬ್ಬರು ಸಖತ್ ಎಂಜಾಯ್ ಮಾಡಿ ಪರೋಟಾ ಸವಿದಿದ್ದೀರಾ ಎಂದು ಬಳಕೆದಾರರೊಬ್ಬರು ಟ್ವೀಟ್ ಮಾಡಿದ್ದಾರೆ.
ಇದನ್ನು ಓದಿ: Viral Video: ಮಹಿಳೆಯ ಕೈಯಿಂದ ಗುಟ್ಕಾ ಪ್ಯಾಕೆಟ್ ಕಸಿದುಕೊಂಡ ಕೇಂದ್ರ ಸಚಿವ; ವಿಡಿಯೊ ನೋಡಿ!
ಗದರ್ 2 ನಂತಹ ಬ್ಲಾಕ್‌ಬಸ್ಟರ್ ಚಿತ್ರಗಳ ನಂತರ, ಸನ್ನಿಯ ಎರಡನೇ ಚಿತ್ರ ಈಗ ತೆರೆಗೆ ಬಂದಿದ್ದು ಚಿತ್ರದ ಬಗ್ಗೆ ಪ್ರೇಕ್ಷ ಕರಲ್ಲಿ ಕ್ರೇಜ್ ಹೆಚ್ಚಿದೆ. 200 ಕೋಟಿ ಬಜೆಟ್‌ನಲ್ಲಿ ನಿರ್ಮಿಸಲಾದ ಈ ಚಿತ್ರಕ್ಕೆ ಉತ್ತಮ ಓಪನಿಂಗ್ ಸಿಕ್ಕಿದೆ. ಇದೀಗ ಜಾಟ್' ಚಿತ್ರದ ಮೂಲಕ ಮತ್ತೆ ಸನ್ನಿ ಫುಲ್ ಸೌಂಡ್ ಮಾಡ್ತಿದ್ದಾರೆ. ಜಾಟ್' ಚಿತ್ರದಲ್ಲಿ ಸೈಯಾಮಿ ಖೇರ್ ಮತ್ತು ವಿನೀತ್ ಕುಮಾರ್ ಸೇರಿದಂತೆ ಅನೇಕ ಪ್ರತಿಭಾವಂತರು ನಟಿಸಿದ್ದಾರೆ. ಜಾತ್ ಚಿತ್ರವು ಮೊದಲ ದಿನವೇ ಸುಮಾರು 9.5 ಕೋಟಿ ರೂಪಾಯಿಯಷ್ಟು ಸಂಗ್ರಹಿಸಿದ್ದು ಹೆಚ್ಚು ಕಲೆಕ್ಷನ್ ಮಾಡುವುದರಲ್ಲಿ ಸಂದೇಹವೇ ಇಲ್ಲ.