ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಮಹಿಳೆಯ ಕೈಯಿಂದ ಗುಟ್ಕಾ ಪ್ಯಾಕೆಟ್‌ ಕಸಿದುಕೊಂಡ ಕೇಂದ್ರ ಸಚಿವ; ವಿಡಿಯೊ ನೋಡಿ!

ಮಧ್ಯಪ್ರದೇಶದ ಶಿವಪುರಿಯಲ್ಲಿ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಮಹಿಳೆಯಿಂದ ಗುಟ್ಕಾ (ತಂಬಾಕು) ಪ್ಯಾಕೆಟ್ ತೆಗೆದುಕೊಂಡು ತಂಬಾಕು ಜಗಿಯುವುದನ್ನು ನಿಲ್ಲಿಸುವಂತೆ ಸಲಹೆ ನೀಡಿದ್ದಾರೆ. ಈ ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿ ವೈರಲ್(Viral Video) ಆಗಿ ನೆಟ್ಟಿಗರ ಹೃದಯವನ್ನು ಗೆದ್ದಿದೆ.

ಮಹಿಳೆಯ ಕೈಯಿಂದ ಗುಟ್ಕಾ ಪ್ಯಾಕೆಟ್‌ ಕಸಿದುಕೊಂಡ ಕೇಂದ್ರ ಸಚಿವ

Profile pavithra Apr 11, 2025 5:24 PM

ಭೋಪಾಲ್: ಗುಟ್ಕಾ ತಿನ್ನುವುದು ಆರೋಗ್ಯಕ್ಕೆ ಹಾನಿಕಾರಕವೆಂದು ತಿಳಿದಿದ್ದರೂ ಜನ ಮಾತ್ರ ತಿನ್ನುವುದನ್ನು ಬಿಡುವುದಿಲ್ಲ. ಇದೀಗ ಗುಟ್ಕಾ ತಿನ್ನುತ್ತಿದ್ದ ಮಹಿಳೆಯೊಬ್ಬಳು ಕೇಂದ್ರ ಸಚಿವರ ಕೈಗೆ ಸಿಕ್ಕಿಬಿದ್ದಿದ್ದಾಳೆ. ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಮಹಿಳೆಯಿಂದ ಗುಟ್ಕಾ (ತಂಬಾಕು) ಪ್ಯಾಕೆಟ್ ತೆಗೆದುಕೊಂಡು ತಂಬಾಕು ಜಗಿಯುವುದನ್ನು ನಿಲ್ಲಿಸುವಂತೆ ಸಲಹೆ ನೀಡಿದ್ದಾರೆ. ಈ ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿ ವೈರಲ್(Viral Video) ಆಗಿ ನೆಟ್ಟಿಗರ ಹೃದಯವನ್ನು ಗೆದ್ದಿದೆ. ಮಾಹಿತಿಯ ಪ್ರಕಾರ ಸಚಿವ ಸಿಂಧಿಯಾ ಇತ್ತೀಚೆಗೆ ಮಧ್ಯಪ್ರದೇಶದ ಶಿವಪುರಿಯಲ್ಲಿದ್ದಾಗ ಈ ಘಟನೆ ನಡೆದಿದೆ ಎನ್ನಲಾಗಿದೆ.

ವೈರಲ್ ವಿಡಿಯೊದಲ್ಲಿ, ಸಚಿವರು ಮಹಿಳೆಯೊಬ್ಬಳು ಗುಟ್ಕಾ ಜಗಿಯುತ್ತಿರುವುದನ್ನು ನೋಡಿದ್ದಾರೆ. ತಕ್ಷಣ ಅವರು ಅವಳನ್ನು ನಿಲ್ಲಿಸಿ ನೀವು ತಂಬಾಕು ಜಗಿಯುತ್ತಿದ್ದೀರಾ? ಎಂದು ಪ್ರಶ್ನಿಸಿದ್ದಾರೆ. ಆಗ ಮಹಿಳೆ ಹೌದು ಎಂದು ತಲೆಯಾಡಿಸುತ್ತಿದ್ದಂತೆ, ಸಿಂಧಿಯಾ ಮತ್ತೆ ಆಕೆಯನ್ನು ಪ್ರಶ್ನಿಸಿ, ನೀವು ತಂಬಾಕನ್ನು ಏಕೆ ಜಗಿಯುತ್ತಿದ್ದೀರಿ? ಎಂದು ಕೇಳಿದ್ದಾರೆ. ಆಗ ಮಹಿಳೆ ಏನು ಉತ್ತರಿಸಲಾಗದೆ ಅವರ ಮುಖ ನೋಡುತ್ತಾ ನಗುವಾಗ ಸಿಂಧಿಯಾ ಅವರು ವಿನಯದಿಂದ, ಇದು ಆರೋಗ್ಯಕ್ಕೆ ಕೆಟ್ಟದು ಎಂದು ನಿಮಗೆ ತಿಳಿದಿದೆ, ಅಲ್ಲವೇ?... ಇದು ಕ್ಯಾನ್ಸರ್‌ಗೆ ಕಾರಣವಾಗುತ್ತದೆ ಎಂದು ನಿಮಗೆ ತಿಳಿದಿದೆ, ಅಲ್ಲವೇ? ಎಂದು ಸಲಹೆ ನೀಡಿದ್ದಾರೆ. ಹಾಗೂ ನಂತರ ಸಚಿವ ಸಿಂಧಿಯಾ ಅವರು ಮಹಿಳೆಗೆ ಬ್ಯಾಗ್‍ನಿಂದ ಗುಟ್ಕಾ ಪ್ಯಾಕೆಟ್ ತೆಗೆದುಕೊಂಡುವಂತೆ ಕೇಳಿದ್ದಾರೆ.

ವಿಡಿಯೊ ಇಲ್ಲಿದೆ ನೋಡಿ...



ಆಗ ಮಹಿಳೆ ನಗುತ್ತಾ ತನ್ನ ಬ್ಯಾಗ್‍ನಲ್ಲಿದ್ದ ಗುಟ್ಕಾ-ಪ್ಯಾಕೆಟ್ ಅನ್ನು ಸಿಂಧಿಯಾ ಅವರಿಗೆ ವಿಧೇಯತೆಯಿಂದ ನೀಡಿದ್ದಾಳೆ. ನಂತರ ಸಚಿವರು ಅದನ್ನು ಎಸೆಯುವಂತೆ ತಮ್ಮ ಜನರಿಗೆ ಆದೇಶಿಸಿದ್ದಾರೆ. ಇದರ ನಂತರ, ಸಿಂಧಿಯಾ ಮಹಿಳೆಯನ್ನು ಸಮಾಧಾನಪಡಿಸಿ, " ನಿಮ್ಮ ಗುಟ್ಕಾ-ಪ್ಯಾಕೆಟ್ ತೆಗೆದುಕೊಂಡಿದ್ದೇನೆ ಎಂದು ಬೇಸರ ಮಾಡಿಕೊಳ್ಳಬೇಡಿ, ಇನ್ನು ಮುಂದೆ ನೀವು ಆರೋಗ್ಯವಾಗಿರುತ್ತೀರಿ. ಅದನ್ನು ಮತ್ತೆ ತಿನ್ನಬೇಡಿ ಎಂದು ಹೇಳಿದ್ದಾರೆ.

ತಂಬಾಕು ಮತ್ತು ಇತರ ಹಾನಿಕಾರಕ ವಸ್ತುಗಳ ವಿರುದ್ಧ ಜಾಗೃತಿ ಮೂಡಿಸುವ ಮೂಲಕ ಸಿಂಧಿಯಾ ಜನರ ಗಮನ ಸೆಳೆದಿದ್ದಾರೆ. ಈ ದೃಶ್ಯವನ್ನು ಜನರು ತಮ್ಮ ಮೊಬೈಲ್‍ಗಳಲ್ಲಿ ರೆಕಾರ್ಡ್ ಮಾಡಿದ್ದಾರೆ ಮತ್ತು ವಿಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಸದ್ಯ ಈ ವಿಡಿಯೊ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸಿಂಧಿಯಾ ಅವರಿಗೆ ಜನರ ಮೇಲಿದ್ದ ಕಾಳಜಿಯನ್ನು ಕಂಡು ನೆಟ್ಟಿಗರು ಹೊಗಳಿದ್ದಾರೆ. ಒಂದೆಡೆ, ಅವರು ನಾಯಕರಾಗಿ ಜನರೊಂದಿಗೆ ಸಂವಹನ ನಡೆಸುತ್ತಿದ್ದಾರೆ, ಮತ್ತೊಂದೆಡೆ, ಅವರು ಕುಟುಂಬದ ಸದಸ್ಯರಂತೆ ಒಬ್ಬರ ಆರೋಗ್ಯದ ಬಗ್ಗೆ ಚಿಂತಿತರಾಗಿದ್ದಾರೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ:Viral Video: ಬಿಕಿನಿ ತೊಟ್ಟ ಮಹಿಳೆಯರನ್ನು ಕಂಡೊಡನೆ ಈತ ಮಾಡಿದ್ದೇನು ಗೊತ್ತಾ? ನೆಟ್ಟಿಗರು ಫುಲ್‌ ಗರಂ

ತಮ್ಮ ಭೇಟಿಯ ವೇಳೆ ಕೇಂದ್ರ ಸಚಿವರು ಅಶೋಕನಗರ ಜಿಲ್ಲೆಯ ಝಗರ್ ಬಮುರಿಯಾ ಗ್ರಾಮಕ್ಕೂ ಭೇಟಿ ನೀಡಿದ್ದಾರೆ. ಇತ್ತೀಚೆಗೆ ಈ ಗ್ರಾಮದಲ್ಲಿ ಬೆಂಕಿಯಿಂದಾಗಿ, ರೈತರು ಭಾರೀ ನಷ್ಟವನ್ನು ಅನುಭವಿಸಿದ್ದಾರೆ. ಸಿಂಧಿಯಾ ಅವರು ರಾಜ್ಯ ಸರ್ಕಾರದ ಸಹಾಯದಿಂದ ತಕ್ಷಣದ ಪರಿಹಾರವನ್ನು ಒದಗಿಸಲು ಉಪಕ್ರಮ ಕೈಗೊಂಡರು ಮತ್ತು ಪರಿಹಾರದ ಮೊತ್ತದ ಪ್ರಮಾಣಪತ್ರಗಳನ್ನು ತಮ್ಮ ಕೈಗಳಿಂದ ರೈತರಿಗೆ ಹಸ್ತಾಂತರಿಸಿದರು. ಮತ್ತು ತನ್ನಿಂದ ಸಾಧ್ಯವಾಗುವಂತಹ ಎಲ್ಲ ಸಹಾಯವನ್ನು ಒದಗಿಸುವ ಜವಾಬ್ದಾರಿಯನ್ನು ತೆಗೆದುಕೊಂಡಿದ್ದಾರೆ.