Devil Movie: ಡಿ ಬಾಸ್ ಫ್ಯಾನ್ಸ್‌ಗೆ ಗುಡ್‌ನ್ಯೂಸ್- ರಾಜಧಾನಿಯಲ್ಲಿ ಡೆವಿಲ್ ಚಿತ್ರ ಶೂಟಿಂಗ್!
Devil Movie Shooting: ಡೆವಿಲ್ ಅನ್ನೋದು ಆ್ಯಕ್ಷನ್ ಥ್ರಿಲ್ಲರ್ ಸಿನಿಮಾವಾಗಿದ್ದು ದರ್ಶನ್ ಗೆ ಸಾಕಷ್ಟು ಆರೋಗ್ಯ ಸಮಸ್ಯೆ ಇದ್ದ ಕಾರಣಕ್ಕೆ ಸಿನಿಮಾದ ಫೈಟ್ , ಆ್ಯಕ್ಷನ್ ದೃಶ್ಯಗಳನ್ನು ಶೂಟ್ ಮಾಡಲು ಸಾಧ್ಯವಾಗಿರಲಿಲ್ಲ. ಇದೀಗ ದರ್ಶನ್ ಆರೋಗ್ಯ ಸ್ಥಿತಿ ಸುಧಾರಿಸಿದ್ದು ಡೆವಿಲ್ ಸಿನಿಮಾ ಉಳಿದರ್ಧ ಭಾಗದ ಚಿತ್ರೀಕರಣದಲ್ಲಿ ದರ್ಶನ್ ಫುಲ್ ಬ್ಯುಸಿ ಆಗಿದ್ದಾರೆ.


ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ಅಭಿನಯದ ಬಹುನಿರೀಕ್ಷಿತ ಡೆವಿಲ್ (Devil Movie) ಸಿನಿಮಾ ಸದಾ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗುತ್ತಿದೆ. ದರ್ಶನ್ ವೈಯಕ್ತಿಕ ಜೀವನದ ಕೆಲ ಸಂಗತಿಗಳಿಂದ ಡೆವಿಲ್ ಸಿನಿಮಾ ಚಿತ್ರೀಕರಣ ಅರ್ಧಕ್ಕೆ ನಿಂತಿತ್ತು. ಆದರೆ ಈಗ ಮತ್ತೆ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಡೆವಿಲ್ ಅನ್ನೋದು ಆ್ಯಕ್ಷನ್ ಥ್ರಿಲ್ಲರ್ ಸಿನಿಮಾವಾಗಿದ್ದು ದರ್ಶನ್ ಗೆ ಸಾಕಷ್ಟು ಆರೋಗ್ಯ ಸಮಸ್ಯೆ ಇದ್ದ ಕಾರಣಕ್ಕೆ ಸಿನಿಮಾದ ಫೈಟ್, ಆ್ಯಕ್ಷನ್ ದೃಶ್ಯಗಳನ್ನು ಶೂಟ್ ಮಾಡಲು ಸಾಧ್ಯವಾಗಿರಲಿಲ್ಲ. ಇದೀಗ ದರ್ಶನ್ ಆರೋಗ್ಯ ಸ್ಥಿತಿ ಸುಧಾರಿಸಿದ್ದು ಡೆವಿಲ್ ಸಿನಿಮಾ ಉಳಿದಾರ್ಧ ಭಾಗದ ಚಿತ್ರೀಕರಣದಲ್ಲಿ ದರ್ಶನ್ ಫುಲ್ ಬ್ಯುಸಿ ಆಗಿದ್ದಾರೆ. ದರ್ಶನ್ ಕಾಟೇರ ಸಿನಿಮಾ ಬಳಿಕ ಯಾವುದೇ ಸಿನಿಮಾ ತೆರೆಕಂಡಿರಲಿಲ್ಲ. ತಮ್ಮ ನೆಚ್ಚಿನ ಹೀರೊವನ್ನು ಮಿಸ್ ಮಾಡಿಕೊಳ್ಳುತ್ತಿದ್ದ ಅಭಿಮಾನಿಗಳಿಗೆ ಶೀಘ್ರವೇ ಡೆವಿಲ್ ಮೂಲಕ ರೀ ಎಂಟ್ರಿ ನೀಡಲಿದ್ದಾರೆ ಎಂಬ ವಿಚಾರ ಇದೀಗ ಅಭಿಮಾನಿಗಳಿಗೆ ಖುಷಿ ನೀಡಿದೆ.
ಪ್ರಕಾಶ್ ವೀರ್ ನಿರ್ದೇಶನದ ಡೆವಿಲ್ ಸಿನಿಮಾವನ್ನು 2024ರಲ್ಲಿಯೇ ರಿಲೀಸ್ ಮಾಡಲು ಚಿತ್ರತಂಡ ಯೋಜಿಸಿತ್ತು. ಆದರೆ ದರ್ಶನ್ ರೇಣುಕಾಸ್ವಾಮಿ ಮರ್ಡರ್ ಕೇಸ್ ನಲ್ಲಿ ಸಿಲುಕಿದ್ದ ಕಾರಣ ಸಿನಿಮಾ ಕೂಡ ಅರ್ಧಕ್ಕೆ ಸ್ಥಗಿತವಾಗಿತ್ತು. ಆದರೆ ಈಗ ಮತ್ತೆ ಶೂಟಿಂಗ್ ಆರಂಭ ಆಗಿದ್ದು ದರ್ಶನ್ ಫ್ಯಾನ್ಸ್ ಫುಲ್ ಖುಷಿ ಆಗಿದ್ದಾರೆ. ಮೊದಲ ಹಂತದಲ್ಲಿ ಬೆಂಗಳೂರಿನ ಚಿತ್ರೀಕರಣ ಬಳಿಕ ಮೈಸೂರು, ಹೈದರಾಬಾದ್ ಮತ್ತು ರಾಜಸ್ಥಾನದಲ್ಲಿ ಶೂಟಿಂಗ್ ಸೆಟ್ ಏರಿತ್ತು. ಬಳಿಕ ಇದೀಗ ಮತ್ತೆ ನಾಲ್ಕನೇ ಹಂತದ ಚಿತ್ರೀಕರಣ ಬೆಂಗಳೂರಿನಲ್ಲಿ ಆರಂಭವಾಗಿದೆ. ಇದೀಗ ಬೆಂಗಳೂರಿನಲ್ಲಿ ನಡೆದ ಶೂಟಿಂಗ್‌ನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಭಾಗಿಯಾಗಿದ್ದಾರೆ.
ಡೆವಿಲ್ ಸಿನಿಮಾ ರಾಜಸ್ಥಾನದಲ್ಲಿ ಶೂಟಿಂಗ್ ನಡೆಯುತ್ತಿರುವಾಗ ದರ್ಶನ್ ಆರೋಗ್ಯ ಸುಧಾರಣೆ ಆಗಿಲ್ಲ ಎಂದು ಪತ್ನಿ ವಿಜಯಲಕ್ಷ್ಮಿ ಕೂಡ ಜೊತೆಗೆ ಶೂಟಿಂಗ್ ಕೆಲಸದಲ್ಲಿ ಭಾಗಿಯಾಗಿದ್ದರು. ಈ ಬಗ್ಗೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಸೋಶಿಯಲ್ ಮಿಡಿಯಾದಲ್ಲಿ ಫೋಟೋ ಕೂಡ ಹಂಚಿಕೊಂಡಿದ್ದರು. ಇದೀಗ ರಾಜಸ್ಥಾನದ ಬಳಿಕಬೆಂಗಳೂರಿನಲ್ಲಿ ಎಪ್ರಿಲ್ 16 ರಿಂದ ಶೂಟಿಂಗ್ ಆರಂಭವಾಗಿದೆ. ಬೆಂಗಳೂರಿನ ಕೆಲ ಭಾಗದಲ್ಲಿ ಭರ್ಜರಿಯಾಗಿ ಶೂಟಿಂಗ್ ನಡೆ ಯುತ್ತಿದ್ದು ಶೂಟಿಂಗ್ ಕೆಲವು ಸಿಕ್ವೆನ್ಸ್ ಗಳು ಅದ್ಭುತವಾಗಿ ಮೂಡಿ ಬರುತ್ತಿದೆ. ದರ್ಶನ್ ತಮ್ಮ ಸಹಕಲಾವಿದರ ಜೊತೆಗೆ ಸಂಭಾಷಣೆಯಲ್ಲಿ ತೊಡಗುವುದು ಇತ್ಯಾದಿ ಸದ್ಯದ ಚಿತ್ರೀಕರಣ ಭಾಗವಾಗಿದೆ.
ಇದನ್ನು ಓದಿ: 45 Movie: '45' ಚಿತ್ರದ ಪ್ರಚಾರ ಶುರು; ಖಾಸಗಿ ವಿಮಾನ ಏರಿ ಪಕ್ಕದ ರಾಜ್ಯಕ್ಕೆ ಹೊರಟ ಸ್ಟಾರ್ಸ್
ಶ್ರೀ ಜೈ ಮಾತಾ ಕಂಬೈನ್ಸ್ ಬ್ಯಾನರ್ ಅಡಿಯಲ್ಲಿ ಡೆವಿಲ್ ಸಿನಿಮಾ ಮೂಡಿ ಬರುತ್ತಿದೆ. ಈ ಚಿತ್ರಕ್ಕೆ ಪ್ರಕಾಶ್ ವೀರ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾ ಸಖತ್ ಮಾಸ್ ಆಗಿ ಇರಲಿದೆ. ನಾಯಕಿಯಾಗಿ ರಚನಾ ರೈ, ಸಹ ಕಲಾವಿದರ ಸಾಲಿನಲ್ಲಿ ಮಹೇಶ್ ಮಂಜ್ರೇಕರ್, ತುಳಸಿ, ಅಚ್ಯುತಕುಮಾರ್, ಶ್ರೀನಿವಾಸ ಪ್ರಭು, ಶೋಭ್ರಾಜ್ ಇತರರು ಈಗಾಗಲೇ ಬೆಂಗಳೂರಿನಲ್ಲಿ ನಡೆಯುತ್ತಿರುವ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ, ಸುಧಾಕರ್.ಎಸ್.ರಾಜ್ ಛಾಯಾ ಗ್ರಹಣ,ಮೋಹನ್ ಬಿ ಕೆರೆ ಕಲಾ ನಿರ್ದೇಶನ ಹಾಗೂ ರಾಮ್-ಲಕ್ಷ್ಮಣ್ ಸಾಹಸ ನಿರ್ದೇಶನ ಚಿತ್ರಕ್ಕೆ ಇದೆ. ಈ ಮೂಲಕ ಡೆವಿಲ್ ಚಿತ್ರಕ್ಕೆ ದರ್ಶನ್ ಮಾಸ್ ಎಂಟ್ರಿ ನೀಡಲು ಸಕಲ ಸಿದ್ಧತೆ ನಡೆಯುತ್ತಿದೆ.