ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Ranveer Singh: ʻಧುರಂಧರ್‌ 2ʼ ಚಿತ್ರಕ್ಕಾಗಿ ಹೊಸ ಪ್ಲ್ಯಾನ್‌ ಮಾಡಿದ ನಿರ್ದೇಶಕ ಆದಿತ್ಯ ಧರ್;‌ ಮಾ.7ಕ್ಕೆ ಬರ್ತಿದೆ ಟ್ರೇಲರ್‌!

Dhurandhar: The Revenge: 2025 ರಲ್ಲಿ ಬಿಡುಗಡೆ ಆಗಿದ್ದ ‘ಧುರಂಧರ್’ ಸಿನಿಮಾ ಭಾರಿ ದೊಡ್ಡ ಹಿಟ್ ಆಗಿತ್ತು. ಹಲವು ಬಾಕ್ಸ್ ಆಫೀಸ್​​ ದಾಖಲೆಗಳನ್ನು ಮುರಿದು ಹೊಸ ದಾಖಲೆಗಳನ್ನು ನಿರ್ಮಿಸಿತ್ತು. ಇದೀಗ ಟ್ರೇಲರ್ ಬಿಡುಗಡೆ ದಿನಾಂಕ ಮತ್ತು ಸಮಯವನ್ನು ಘೋಷಿಸುವ ಪೋಸ್ಟರ್‌ಗಳನ್ನು ರಣವೀರ್ ಸಿಂಗ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಬಹು ಭಾಷೆಗಳಲ್ಲಿ ಪೋಸ್ಟರ್‌ಗಳನ್ನು ಹಂಚಿಕೊಂಡಿದ್ದಾರೆ.

ʻಧುರಂಧರ್‌ 2ʼ ಚಿತ್ರಕ್ಕಾಗಿ ಹೊಸ ಪ್ಲ್ಯಾನ್‌ ಮಾಡಿದ ನಿರ್ದೇಶಕ!

ಧುರಂಧರ್ 2 ಸಿನಿಮಾ -

Yashaswi Devadiga
Yashaswi Devadiga Mar 6, 2026 6:36 PM

'ಧುರಂಧರ್: ದಿ ರಿವೆಂಜ್' (Dhurandhar: The Revenge) ಈ ವರ್ಷದ ಅತ್ಯಂತ ನಿರೀಕ್ಷಿತ ಚಿತ್ರ. ಚಿತ್ರದ ಟ್ರೇಲರ್ ಬಿಡುಗಡೆಯ ಬಗ್ಗೆ ಹಲವು ಊಹಾಪೋಹಗಳ ನಂತರ, ತಂಡ ಟ್ರೈಲರ್‌ (Trailer) ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಘೋಷಿಸಿದೆ. ರಣವೀರ್ ಸಿಂಗ್ ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಈ ಘೋಷಣೆಯನ್ನು ಹಂಚಿಕೊಂಡಿದ್ದಾರೆ. ಟ್ರೇಲರ್ ಬಿಡುಗಡೆ ದಿನಾಂಕ ಮತ್ತು ಸಮಯವನ್ನು ಘೋಷಿಸುವ ಪೋಸ್ಟರ್‌ಗಳನ್ನು (Poster) ರಣವೀರ್ ಸಿಂಗ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಬಹು ಭಾಷೆಗಳಲ್ಲಿ ಪೋಸ್ಟರ್‌ಗಳನ್ನು ಹಂಚಿಕೊಂಡಿದ್ದಾರೆ. ವಿಶೇಷ ಅಂದರೆ ʻಧುರಂಧರ್‌ʼ ಬರೀ ಹಿಂದಿಯಲ್ಲಿ ಬಂದಿತ್ತು, ಆದರೆ ಧುರಂಧರ್‌ 2 ಐದು ಭಾಷೆಯಲ್ಲಿ ಸಿನಿಮಾ ಬರುತ್ತಿದೆ.

ನಾಳೆಯೇ ಟ್ರೈಲರ್‌ ಬಿಡುಗಡೆ

ನಾಳೆ ಅಂದರೆ ಮಾರ್ಚ್ 7ರಂದು ಬೆಳಗ್ಗೆ 11:01 ಕ್ಕೆ ಟ್ರೇಲರ್ ಬಿಡುಗಡೆಯಾಗುತ್ತಿದೆ ಎಂದು ಪ್ರಕಟಣೆಯನ್ನು ಹೊರಡಿಸಿದೆ. ಮಾರ್ಚ್ 19, 2026 ರಂದು ಹಿಂದಿ, ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ ಎಂದು ಬರೆದಿದ್ದಾರೆ.

ಇದನ್ನೂ ಓದಿ: Thalapathy Vijay: ಪತ್ನಿ ವಿಚ್ಛೇದನ ಅರ್ಜಿ ಮಧ್ಯೆ ದಳಪತಿ ವಿಜಯ್ ಹಾಗೂ ತ್ರಿಷಾ ಒಂದೇ ಕಾರಿನಲ್ಲಿ ಸುತ್ತಾಟ!

ನಟ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡ ತಕ್ಷಣ, ನೆಟಿಜನ್‌ಗಳು ಕಾಮೆಂಟ್ ವಿಭಾಗಕ್ಕೆ ಬಂದು ಸಂತಸ ವ್ಯಕ್ತಪಡಿಸಿದರು. ಒಬ್ಬರು "2000 ಕೋಟಿ ಕಲೆಕ್ಷನ್ ಲೋಡ್ ಆಗುತ್ತಿದೆ" ಎಂದು ಕಮೆಂಟ್‌ ಮಾಡಿದ್ದಾರೆ.

ಪಂಚ ಭಾಷೆಗಳಲ್ಲಿ ರಿಲೀಸ್‌

ಕೆಲ ದಿನಗಳ ಹಿಂದೆಯಷ್ಟೇ ''ಧುರಂಧರ್-2'' ಚಿತ್ರದ ಟೀಸರ್ ನ ಚಿತ್ರತಂಡ ಬಿಡುಗಡೆ ಮಾಡಿತ್ತು. ಆದರೆ, ಅದರಲ್ಲಿ ಹೊಸತನ ಇರಲಿಲ್ಲ. ಈ ಹಿಂದೆ ''ಧುರಂಧರ್-2'' ಚಿತ್ರದ ರನ್ ಟೈಮ್ 3 ಗಂಟೆ 40 ನಿಮಿಷ ಎಂದು ಹೇಳಲಾಗಿತ್ತು. ಅದಕ್ಕೂ ಮೊದಲು ''ಧುರಂಧರ್'' ಚಿತ್ರಕ್ಕಿಂತ ''ಧುರಂಧರ್ 2'' ಚಿತ್ರದ ಅವಧಿ ಕಡಿಮೆ ಇರಲಿದೆ ಎಂಬ ಮಾತು ಕೇಳಿ ಬಂದಿತ್ತು

. ''ಧುರಂಧರ್'' ಮೊದಲ ಭಾಗ ಕೇವಲ ಹಿಂದಿಯಲ್ಲಿ ಮಾತ್ರ ಬಿಡುಗಡೆಯಾಗಿತ್ತು. ಆದರೆ, ''ಧುರಂಧರ್ 2'' ಪಂಚ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಹಿಂದಿ ಜೊತೆ ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂನಲ್ಲಿ ಬಿಡುಗಡೆಯಾಗಲಿದೆ.

ಆದಿತ್ಯ ಧಾರ್ ನಿರ್ದೇಶನದ ಈ ಚಿತ್ರವು ಡಿಸೆಂಬರ್ 2025 ರಲ್ಲಿ ಬಿಡುಗಡೆಯಾದ 'ಧುರಂಧರ್' ಚಿತ್ರದ ಎರಡನೇ ಭಾಗವಾಗಿದೆ. 'ಧುರಂಧರ್ 2' ಚಿತ್ರದಲ್ಲಿ, ಅರ್ಜುನ್ ರಾಂಪಾಲ್ ಅವರ ಮೇಜರ್ ಇಕ್ಬಾಲ್ ಮುಖ್ಯ ಖಳನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ.

ರಣವೀರ್ ಸಿಂಗ್ ಮತ್ತು ಅರ್ಜುನ್ ರಾಂಪಾಲ್ ಜೊತೆಗೆ, ಚಿತ್ರದಲ್ಲಿ ಸಂಜಯ್ ದತ್ , ಆರ್. ಮಾಧವನ್, ರಾಕೇಶ್ ಬೇಡಿ, ಸಾರಾ ಅರ್ಜುನ್ ಮತ್ತು ಇನ್ನೂ ಅನೇಕರು ನಟಿಸಿದ್ದಾರೆ.ಈ ಚಿತ್ರವು ಮಾರ್ಚ್ 19, 2026 ರಂದು ಬಿಡುಗಡೆಯಾಗಬೇಕಿತ್ತು. ಇದು ಯಶ್ ಅವರ 'ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್-ಅಪ್ಸ್' ಚಿತ್ರದೊಂದಿಗೆ ಘರ್ಷಣೆಗೆ ಒಳಗಾಗಬೇಕಿತ್ತು; ಆದರೆ ಟಾಕ್ಸಿಕ್‌ ಜೂನ್‌ಗೆ ಬಿಡುಗಡೆ ಆಗುತ್ತಿದೆ.

ಇದನ್ನೂ ಓದಿ: Dog Satish: ಶ್ವಾನಗಳ ಬಗ್ಗೆ ಡಾಗ್ ಸತೀಶ್ ಕೆಟ್ಟ ಮಾತು; ದಾಖಲಾಯ್ತು ದೂರು

ಧುರಂಧರ್‌ ಮೊದಲ ಭಾಗವು 2025ರ ಡಿಸೆಂಬರ್ 5ರಂದು ತೆರೆಕಂಡಿತ್ತು. ಇತ್ತೀಚೆಗಷ್ಟೇ ನೆಟ್‌ಪ್ಲಿಕ್ಸ್‌ನಲ್ಲಿ ಬಿಡುಗಡೆಗೊಂಡಿತ್ತು. ಅಕ್ಷಯ್ ಖನ್ನಾ, ಅರ್ಜುನ್ ರಾಂಪಾಲ್, ಆರ್.ಮಾಧವನ್ ಮತ್ತು ರಾಕೇಶ್ ಬೇಡಿ ನಟಿಸಿರುವ ಈ ಸಿನಿಮಾದ ಮೊದಲ ಭಾಗ ಅಕ್ಷಯ್ ಖನ್ನಾ ಅವರು ನಿಭಾಯಿಸಿದ 'ರೆಹಮಾನ್‌ ಡಕಾಯತ್' ಪಾತ್ರದ ಸಾವಿನೊಂದಿಗೆ ಕೊನೆಗೊಂಡಿತ್ತು.