ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Full Meals Movie: ಲಿಖಿತ್‌ ಶೆಟ್ಟಿ ಅಭಿನಯದ 'ಫುಲ್ ಮೀಲ್ಸ್' ಚಿತ್ರದ ಟ್ರೇಲರ್‌ ಔಟ್‌

Sandalwood News: ಲಿಖಿತ್‌ ಶೆಟ್ಟಿ, ಖುಷೀ ರವಿ, ತೇಜಸ್ವಿನಿ ಶರ್ಮ ಮುಖ್ಯ ಭೂಮಿಕೆಯಲ್ಲಿರುವ 'ಫುಲ್ ಮೀಲ್ಸ್ʼ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದೆ. ವೆಡ್ಡಿಂಗ್ ಫೋಟೋಗ್ರಾಫರ್ ಸುತ್ತ ಸುತ್ತುವ ಕಥಾ ಹಂದರವನ್ನು ಹೊಂದಿರುವ ರೊಮ್ಯಾಂಟಿಕ್ ಕಾಮಿಡಿ ಸಿನಿಮಾ. ಚಿತ್ರದುರ್ಗದ ಪ್ರತಿಭೆ ಎನ್. ವಿನಾಯಕ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ 'ಫುಲ್ ಮೀಲ್ಸ್' ಸಿನಿಮಾ ಇದೇ ತಿಂಗಳು ನವೆಂಬರ್ 21ಕ್ಕೆ ಬಿಡುಗಡೆಯಾಗಲಿದ್ದು, ಸಿನಿಮಾದ ಟ್ರೈಲರ್ 3ರಂದು, ಡಿ.ಜಿ.ಕೆ. ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ. ಈ ಕುರಿತ ವಿವರ ಇಲ್ಲಿದೆ.

ಲಿಖಿತ್‌ ಶೆಟ್ಟಿ ಅಭಿನಯದ 'ಫುಲ್ ಮೀಲ್ಸ್' ಚಿತ್ರದ ಟ್ರೇಲರ್‌ ಔಟ್‌

-

Profile Siddalinga Swamy Nov 3, 2025 3:08 PM

ಬೆಂಗಳೂರು, ನ.3: ಬಹಳ ದಿನಗಳ ನಂತರದಲ್ಲಿ ಕನ್ನಡದಲ್ಲಿ ಫೋಟೋಗ್ರಾಫರ್ ಜೀವನದ ಕುರಿತಾದ ಕತೆಯೊಂದು ಸಿನಿಮಾವಾಗಿ ತೆರೆಗೆ ಬರಲು ಸಿದ್ದವಾಗಿದೆ. ಲಿಖಿತ್‌ ಶೆಟ್ಟಿ, ಖುಷೀ ರವಿ, ತೇಜಸ್ವಿನಿ ಶರ್ಮ ಮುಖ್ಯ ಭೂಮಿಕೆಯಲ್ಲಿರುವ 'ಫುಲ್ ಮೀಲ್ಸ್ʼ (Full Meals Movie) ವೆಡ್ಡಿಂಗ್ ಫೋಟೋಗ್ರಾಫರ್ ಸುತ್ತ ಸುತ್ತುವ ಕಥಾ ಹಂದರವನ್ನು ಹೊಂದಿರುವ ರೊಮ್ಯಾಂಟಿಕ್ ಕಾಮಿಡಿ ಸಿನಿಮಾ. ಚಿತ್ರದುರ್ಗದ ಪ್ರತಿಭೆ ಎನ್. ವಿನಾಯಕ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ 'ಫುಲ್ ಮೀಲ್ಸ್' ಸಿನೆಮಾ ಇದೇ ತಿಂಗಳು ನವೆಂಬರ್ 21ಕ್ಕೆ ಬಿಡುಗಡೆಯಾಗಲಿದ್ದು, ಸಿನಿಮಾದ ಟ್ರೈಲರ್ 3ರಂದು, ಡಿ.ಜಿ.ಕೆ. ಯುಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಿದೆ.

ವೆಡ್ಡಿಂಗ್ ಫೋಟೋಗ್ರಾಫರ್ ಒಬ್ಬ ಪ್ರೀ ವೆಡ್ಡಿಂಗ್ ಶೂಟ್‌ಗೆಂದು ಹೋದಾಗ, ಆ ಮದುವೆಯ ಹೆಣ್ಣಿಗೆ ಫೋಟೋಗ್ರಾಫರ್ ಮೇಲೆ ಪ್ರೀತಿ ಮೂಡುತ್ತದೆ. ಈ ಹಿನ್ನಲೆಯಲ್ಲಿ ಸೃಷ್ಟಿಯಾಗುವ ಪರಿಸ್ಥಿತಿಗಳೇ ಚಿತ್ರದ ಪ್ರಮುಖ ಕಥಾವಸ್ತು. ಕಾಮಿಡಿ ಮತ್ತು ಎಮೋಶನ್‌ನ ಹದವಾದ ಮಿಶ್ರಣದಂತೆ ಗೋಚರಿಸುತ್ತಿರುವ 'ಫುಲ್ ಮೀಲ್ಸ್' ಪ್ರೇಕ್ಷಕರಿಗೆ ನಿಜವಾದ 'ಫುಲ್ ಮೀಲ್ಸ್' ಆಗಲಿದೆ ಎಂಬ ಭರವಸೆಯನ್ನು ಟ್ರೈಲರ್ ಮೂಡಿಸಿದೆ.



ಈ ಹಿಂದೆ ಸಂಕಷ್ಟಕರ ಗಣಪತಿ, ಪುನೀತ್ ರಾಜ್ ಕುಮಾರ್ ಅವರ ಪಿ.ಆರ್.ಕೆ. ಪ್ರೊಡಕ್ಷನ್‌ನಲ್ಲಿ ಮೂಡಿಬಂದ ‘ಫ್ಯಾಮಿಲಿ ಪ್ಯಾಕ್’ ಚಿತ್ರಗಳ ಮೂಲಕ ನಾಯಕ ನಟರಾಗಿ ಸಾಕಷ್ಟು ಜನಪ್ರಿಯತೆ ಗಳಿಸಿದ್ದ ನಾಯಕ ನಟ 'ಲಿಖಿತ್ ಶೆಟ್ಟಿ' ಫೋಟೋಗ್ರಾಫರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೆ, ದಿಯಾ ಖ್ಯಾತಿಯ ಖುಷೀ ರವಿ ಮದುವೆ ಹೆಣ್ಣಿನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅವರ ಹಿಂದಿನ ಸಿನಿಮಾಗಳಿಗಿಂತ ವಿಭಿನ್ನ ಮತ್ತು ವಿಶೇಷ ಪಾತ್ರ ಅವರದ್ದಾಗಿದೆ. ಮೇಕಪ್ ಹುಡುಗಿಯ ಪಾತ್ರದಲ್ಲಿ ತೇಜಸ್ವಿನಿ ಶರ್ಮ‌ ಕಾಣಿಸಿಕೊಂಡಿದ್ದು, ತ್ರಿಕೋನ ಪ್ರೇಮಕತೆಯ ಸ್ಪರ್ಶ ಕೂಡ ಸಿನಿಮಾದಲ್ಲಿದೆ.

ಇತ್ತೀಚಿನ ದಿನಗಳಲ್ಲಿ ಮನೋರಂಜನೆಯ ಜತೆಗೆ ನವಿರಾದ ಪ್ರೇಮಕತೆಯನ್ನು ಹೇಳುವ ಸಿನಿಮಾಗಳ ಕಡಿಮೆಯಾಗಿರುವ ಸಂದರ್ಭದಲ್ಲಿ, ಆ ಕೊರತೆಯನ್ನು ನೀಗುವ ಸುಳಿವನ್ನು ‘ಫುಲ್ ಮೀಲ್ಸ್’ ನ ಟ್ರೈಲರ್ ನೀಡಿದೆ. ಪ್ರೇಕ್ಷಕರಿಗೆ ಫುಲ್ ಮೀಲ್ಸ್ ಅನ್ನು ಸವಿಯಲು ಧೈರ್ಯವಾಗಿಯೇ ಫುಲ್ ಮೀಲ್ಸ್ ಬರಲು ಬಲವಾದ ಆಮಂತ್ರಣ ಟ್ರೈಲರ್ ಮೂಲಕ ಸಿಕ್ಕಿದೆ.ಈ ಚಿತ್ರದ ಮೂಲಕ ಲಿಖಿತ್ ಶೆಟ್ಟಿ ಮೊದಲ ಬಾರಿಗೆ ಪೂರ್ಣ ಪ್ರಮಾಣದ ನಿರ್ಮಾಪಕರಾಗಿದ್ದಾರೆ.

ಈ ಸುದ್ದಿಯನ್ನೂ ಓದಿ | Winter Fashion 2025: 2025ರ ವಿಂಟರ್ ಫ್ಯಾಷನ್‌ಗೆ ಲಗ್ಗೆ ಇಟ್ಟ ಫ್ಯಾಷನ್‌ವೇರ್‌ಗಳಿವು!

ಗುರು ಕಿರಣ್ ಸಂಗೀತ ನಿರ್ದೇಶನ, ದೀಪು ಎಸ್. ಕುಮಾರ್ ಸಂಕಲನ, ಮನೋಹರ್ ಜೋಷಿ ಛಾಯಾಗ್ರಹಣ, ಹರೀಶ್ ಗೌಡ ಸಂಭಾಷಣೆ, ವಿಶ್ವಾಸ್ ಕಶ್ಯಪ್ ಕಲಾ ನಿರ್ದೇಶನ, ಅರ್ಜುನ್ ರಾಜ್ ಸಾಹಸ ನಿರ್ದೇಶನ, ಕವಿರಾಜ್ ಮತ್ತು ಪ್ರಮೋದ್ ಮರವಂತೆ ಸಾಹಿತ್ಯ ಚಿತ್ತಕ್ಕಿದೆ. ಉಳಿದಂತೆ ತಾರಾಗಣದಲ್ಲಿ ರಂಗಾಯಣ ರಘು, ಸೂರಜ್ ಲೋಕ್ರೆ, ವಿಜಯ್ ಚಂಡೂರ್, ರವಿ ಶಂಕರ್ ಗೌಡ, ರಾಜೇಶ್ ನಟರಂಗ, ಸುಜಯ್ ಶಾಸ್ತ್ರಿ, ಚಂದ್ರಕಲಾ ಮೋಹನ್, ಹೂನ್ನವಳ್ಳಿ ಕೃಷ್ಣ, ರಮೇಶ್ ಪಂಡಿತ್, ಗಣೇಶ್ ರಾವ್, ಕೋಟೆ ಪ್ರಭಾಕರ್, ಚೇತನ್ ದುರ್ಗಾ, ನಾಗೇಂದ್ರ ಅರಸ್, ಮೂಗು ಸುರೇಶ್ ಸೇರಿದಂತೆ ಬಹು ದೊಡ್ಡ ತಾರಾ ಬಳಗವೇ ಇದೆ.