ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಬಾಕ್ಸ್‌ ಆಫೀಸ್‌ನಲ್ಲಿ ಇನ್ನೂ ನಿಂತಿಲ್ಲ ʻಧುರಂಧರ್‌ʼ ಅಬ್ಬರʼ; ಕರ್ನಾಟಕದಲ್ಲಿ ಈ ಸಿನಿಮಾ ಕೊಳ್ಳೆ ಹೊಡೆದ ಹಣವೆಷ್ಟು ಗೊತ್ತಾ?

Dhurandhar Movie: ರಣವೀರ್ ಸಿಂಗ್ ಅವರ ವೃತ್ತಿ ಬದುಕಿನಲ್ಲೇ ಅತಿ ದೊಡ್ಡ ಹಿಟ್ ಆಗಿ ಧುರಂಧರ್‌ ಸಿನಿಮಾ ಹೊರಹೊಮ್ಮಿದೆ. 250 ಕೋಟಿ ಬಜೆಟ್‌ನಲ್ಲಿ ತಯಾರಾದ ಈ ಚಿತ್ರ ಈಗಾಗಲೇ ವಿಶ್ವದಾದ್ಯಂತ 1150 ಕೋಟಿ ರೂ. ಬಾಚಿಕೊಂಡಿದೆ. ಕರ್ನಾಟಕದಲ್ಲಿ ಈ ಸಿನಿಮಾ ಕೊಳ್ಳೆ ಹೊಡೆದ ಹಣ ಎಷ್ಟು ಗೊತ್ತಾ?

'ಧುರಂಧರ್' ಧಮಾಕ; ಕರ್ನಾಟಕದಲ್ಲಿ ಈ ಸಿನಿಮಾ ಗಳಿಸಿದ ಹಣವೆಷ್ಟು ಗೊತ್ತಾ?

-

Avinash GR
Avinash GR Jan 2, 2026 12:39 PM

ರಣವೀರ್‌ ಸಿಂಗ್‌ ನಟನೆಯ ʻಧುರಂಧರ್ʼ‌ ಸಿನಿಮಾವು ಬಾಕ್ಸ್‌ ಆಫೀಸ್‌ನಲ್ಲಿ ಚಿನ್ನದ ಬೆಳೆ ತಂದುಕೊಟ್ಟಿದೆ. ಈಗಾಗಲೇ ಗಲ್ಲಾಪೆಟ್ಟಿಗೆಯಲ್ಲಿ ಈ ಚಿತ್ರದ ಗಳಿಕೆಯು 1150 ಕೋಟಿ ರೂ. ತಲುಪಿದೆ. 250 ಕೋಟಿ ರೂ. ಬಜೆಟ್‌ನಲ್ಲಿ ತಯಾರಾದ ಈ ಚಿತ್ರವೀಗ ನಿರ್ಮಾಪಕರ ಪಾಲಿಗೆ ಬಂಪರ್‌ ಲಾಟರಿಯಾಗಿದೆ. ತೆರೆಕಂಡು 27 ದಿನಗಳಾದರೂ ಚಿತ್ರದ ಗಳಿಕೆ ಗಮನಸೆಳೆಯುವಂತಿದೆ. ಬರೀ ಹಿಂದಿಯಲ್ಲಿ ಮಾತ್ರ ತೆರೆಕಂಡ ಈ ಚಿತ್ರಕ್ಕೆ ಕರ್ನಾಟಕದಲ್ಲೂ ಉತ್ತಮ ಕಮಾಯಿ ಆಗಿದೆ.

38 ಕೋಟಿ ರೂ. ಬಾಚಿಕೊಂಡ ಧುರಂಧರ್‌

ʻಧುರಂಧರ್‌ʼ ಯಾವುದೇ ಪ್ಯಾನ್‌ ಇಂಡಿಯಾ ಸಿನಿಮಾ ಅಲ್ಲ. ಬರೀ ಹಿಂದಿಯಲ್ಲಿ ಮಾತ್ರ ತೆರೆಕಂಡ ಚಿತ್ರ. ಆದರೂ ವಿವಿಧ ಪ್ರಾಂತ್ಯಗಳಲ್ಲಿ ಭರ್ಜರಿ ಕಮಾಯಿ ಮಾಡಿದೆ. ಡಿ.5ರಂದು ತೆರೆಂಡ ಈ ಸಿನಿಮಾವು ಕರ್ನಾಟಕದಲ್ಲೇ ಬರೋಬ್ಬರಿ 38 ಕೋಟಿ ರೂ. ಕೊಳ್ಳೆ ಹೊಡೆದಿರುವ ಮಾಹಿತಿ ಇದೆ. ಇನ್ನೊಂದಿಷ್ಟು ದಿನ ಕಳೆದರೆ ಈ ಮೊತ್ತವು 40 ಕೋಟಿ ರೂ. ದಾಟಲಿದೆ. ಕನ್ನಡದ ಕಾಂತಾರ ಚಾಪ್ಟರ್ 1, ಸು ಫ್ರಮ್‌ ಸೋ ಬಿಟ್ಟರೆ, ಇಷ್ಟು ದೊಡ್ಡ ಮೊತ್ತವನ್ನು 2025ರಲ್ಲಿ ಕನ್ನಡ ಸಿನಿಮಾಗಳೇ ಗಳಿಕೆ ಮಾಡಿಲ್ಲ. ಆದರೆ ಧುರಂಧರ್‌ ಈ ಸಾಧನೆ ಮಾಡಿರುವುದು ವಿಶೇಷ.

Akhanda 2 Box Office Collection: ಡೆವಿಲ್‌, ಧುರಂಧರ್‌ ನಡುವೆಯೂ ಅಬ್ಬರಿಸಿದ 'ಅಖಂಡ 2' ! ಬಾಲಯ್ಯ ಸಿನಿಮಾ ಮೊದಲ ದಿನ ಗಳಿಸಿದ್ದೆಷ್ಟು?

ಇನ್ನು, ಭಾರತದಲ್ಲಿ ಧುರಂಧರ್‌ ಸಿನಿಮಾವು 767 ಕೋಟಿ ರೂ. ಗಳಿಸಿದ್ದು, ಅದರಲ್ಲಿ ಹೆಚ್ಚಿನ ಮೊತ್ತ ಹರಿದುಬಂದಿರುವುದು ಮಹಾರಾಷ್ಟ್ರದಿಂದ. ಸುಮಾರು 200 ಕೋಟಿ ರೂ. ಹಣ ಅಲ್ಲಿಂದಲೇ ಬಂದಿದೆ. ನಂತರದ್ದು ಉತ್ತರ ಭಾರತದ ಪಾಲು. ಇನ್ನು, ಪಂಜಾಬ್‌ ಪ್ರಾಂತ್ಯದಿಂದಲೇ 70+ ಕೋಟಿ ರೂ. ಕಮಾಯಿ ಆದರೆ, ತೆಲುಗು ರಾಜ್ಯಗಳಿಂದ 43+ ಕೋಟಿ ರೂ. ಹರಿದುಬಂದಿದೆ. ವಿಶೇಷೆಂದರೆ, ತಮಿಳು ನಾಡು ಮತ್ತು ಕೇರಳ ಈ ಎರಡೂ ರಾಜ್ಯಗಳಿಂದ ಆಗಿರುವ ಕಲೆಕ್ಷನ್‌ ಬರೀ 7+ ಕೋಟಿ ರೂ. ಮಾತ್ರ!

Ranveer Singh: 6 ದೇಶಗಳಲ್ಲಿ 'ಧುರಂಧರ್‌' ಬ್ಯಾನ್, ಆದರೂ ಗಲ್ಲಾಪೆಟ್ಟಿಗೆಯಲ್ಲಿ ಸಿಡಿಲಬ್ಬರದ ಕಲೆಕ್ಷನ್!‌ ಈವರೆಗೂ ಆಗಿರುವ ಗಳಿಕೆ ಎಷ್ಟು?

ಹೊಸ ವರ್ಷನ್‌ ರಿಲೀಸ್‌

ಈ ಸಿನಿಮಾದಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿ, ಹೊಸ ವರ್ಷನ್‌ ಅನ್ನು ಚಿತ್ರಮಂದಿರಗಳಲ್ಲಿ ಈ ಪ್ರದರ್ಶನ ಮಾಡಲಾಗುತ್ತಿದೆಯಂತೆ. ಭಾರತ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಸೂಚನೆಗಳ ಮೇರೆಗೆ, ಚಿತ್ರತಂಡವು ಸಿನಿಮಾದಲ್ಲಿರುವ ಎರಡು ಪದಗಳನ್ನು ಮ್ಯೂಟ್ ಮಾಡಿದೆ ಮತ್ತು ಒಂದು ಸಂಭಾಷಣೆಯನ್ನು ಬದಲಾಯಿಸಿದೆ ಎಂದು ಮೂಲಗಳು ತಿಳಿಸಿವೆ. ರಣವೀರ್‌ ಸಿಂಗ್‌, ಸಾರಾ ಅರ್ಜುನ್‌, ಸಂಜಯ್‌ ದತ್‌, ಅಕ್ಷಯ್‌ ಖನ್ನಾ ಅರ್ಜುನ್‌ ರಾಮ್‌ಪಾಲ್‌ ಮುಂತಾದವರು ನಟಿಸಿರುವ ಈ ಸಿನಿಮಾವನ್ನು ಆದಿತ್ಯ ಧರ್‌ ನಿರ್ಮಾಣ ಮಾಡಿ, ನಿರ್ದೇಶಿಸಿದ್ದಾರೆ.