ಐಷಾರಾಮಿ ಮನೆಗೆ ಕಾಲಿಟ್ಟ ತರುಣ್ ಸುಧೀರ್ - ಸೋನಲ್ ದಂಪತಿ; ಇಲ್ಲಿವೆ ನೋಡಿ ಗೃಹಪ್ರವೇಶದ ಫೋಟೋಗಳು
ಸ್ಯಾಂಡಲ್‌ವುಡ್‌ನಲ್ಲಿ ʻಚೌಕʼ, ‘ರಾಬರ್ಟ್’, ‘ಕಾಟೇರ’ ಥರದ ಹಿಟ್ ಸಿನಿಮಾಗಳನ್ನು ಕೊಟ್ಟಿರುವ ನಿರ್ದೇಶಕ ತರುಣ್ ಕಿಶೋರ್ ಸುಧೀರ್ ಮತ್ತು ಅವರ ಪತ್ನಿ, ನಟಿ ಸೋನಲ್ ಮೊಂಥೆರೋ ತಮ್ಮ ಬದುಕಿನ ಹೊಸ ಮೈಲಿಗಲ್ಲನ್ನು ತಲುಪಿದ್ದಾರೆ. ಹೌದು, ಈ ದಂಪತಿ ಇದೀಗ ಬೆಂಗಳೂರಿನ ಪ್ರತಿಷ್ಠಿತ ಏರಿಯಾದಲ್ಲಿ ಐಷಾರಾಮಿ ಮನೆಯೊಂದನ್ನು ಖರೀಸಿದ್ದಾರೆ. ಈಚೆಗೆ ತಮ್ಮ ಕನಸಿನ ಆ ಹೊಸ ಐಷಾರಾಮಿ ಮನೆಗೆ ಅದ್ಧೂರಿಯಾಗಿ ಗೃಹಪ್ರವೇಶ ಮಾಡಿದ್ದಾರೆ. ಈ ಗೃಹಪ್ರವೇಶ ಸಮಾರಂಭದಲ್ಲಿ ತರುಣ್ ಸುಧೀರ್ ಹಾಗೂ ಸೋನಲ್ ಮೊಂಥೆರೋ ಕುಟುಂಬಸ್ಥರು, ಸ್ಯಾಂಡಲ್‌ವುಡ್‌ನ ಹಲವು ಗಣ್ಯರು ಭಾಗವಹಿಸಿ, ಶುಭ ಹಾರೈಸಿದರು. ಇಲ್ಲಿವೆ ನೋಡಿ ಫೋಟೋಗಳು.
-
Avinash GR
Jan 2, 2026 2:46 PM
1/6
ಬೆಂಗಳೂರಿನ ಪ್ರತಿಷ್ಠಿತ ಬಡಾವಣೆಯಲ್ಲಿ ತರುಣ್ ಸುಧೀರ್ ದಂಪತಿ ಹೊಸ ನಿವಾಸ ಖರೀದಿಸಿದ್ದಾರೆ
2/6
ತಮ್ಮ ಐಷಾರಾಮಿ ಮನೆಯ ಗೃಹಪ್ರವೇಶವನ್ನು ಅದ್ದೂರಿಯಾಗಿ ಮಾಡಿದ ತರುಣ್ - ಸೋನಲ್
3/6
ಗೃಹ ಪ್ರವೇಶ ಸಮಾರಂಭಕ್ಕೆ ಆಗಮಿಸಿದ ನಟ ಶರಣ್
4/6
2024ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಈ ಜೋಡಿಗೆ ಈಗ ಸ್ವಂತ ಮನೆಯ ಸಂಭ್ರಮ
5/6
ತಾಯಿ ಮಾಲತಿ ಸುಧೀರ್ ಅವರೊಂದಿಗೆ ನಿರ್ದೇಶಕ ತರುಣ್
6/6
ಗೃಹಪ್ರವೇಶದಲ್ಲಿ ತರುಣ್ ಮತ್ತು ಸೋನಲ್ ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ್ದಾರೆ