Jogi Prem: ಬಾಲಿವುಡ್ ಗಾಯಕ ಸೋನು ನಿಗಮ್‌ಗೆ ಹಿಗ್ಗಾಮುಗ್ಗಾ ಬೈದಿದ್ರಂತೆ ಜೋಗಿ ಪ್ರೇಮ್!
Sonu Nigam: ಇತ್ತೀಚೆಗೆ ನಿರ್ದೇಶಕ ಜೋಗಿ ಪ್ರೇಮ್ ಅವರು ಗಾಯಕ ಸೋನ್ ನಿಗಮ್ ಬಗ್ಗೆ ಮಾತ ನಾಡಿದ್ದು ಬಾಲಿವುಡ್ ಗಾಯಕ ಸೋನು ನಿಗಮ್ ಬೇಜವಾಬ್ದಾರಿ ತನಕ್ಕೆ ತಾನು ಸರಿಯಾಗಿಯೇ ಕ್ಲಾಸ್ ತೆಗೆದುಕೊಂಡಿದ್ದೆ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

-

ಬೆಂಗಳೂರು: ಬಾಲಿವುಡ್ ಗಾಯಕ ಸೋನುನಿಗಮ್ ಹಾಡಿಗೆ ಮನ ಸೋಲದವರೇ ಇಲ್ಲ. ಈಗಾಗಲೇ ಹಲವು ಭಾಷೆಗಳಲ್ಲಿ ಹಾಡಿ ಜನರ ಮನಗೆದಿದ್ದ ಸೋನು ನಿಗಮ್(Sonu Nigam) ಅವರನ್ನು ಕರ್ನಾಟಕದಲ್ಲಿ ಬ್ಯಾನ್ ಮಾಡಲು ನಿರ್ಧರಿಸಲಾಗಿತ್ತು.ಇತ್ತೀಚೆಗೆ ಕನ್ನಡಿಗರ ಬಗ್ಗೆ ಹೇಳಿಕೆ ನೀಡಿದ್ದು ವಿವಾದಕ್ಕೆ ಕಾರಣವಾಗಿತ್ತು. ಆ ಬಳಿಕ ಅವರನ್ನು ಕನ್ನಡ ಚಿತ್ರರಂಗದಿಂದ ಬ್ಯಾನ್ ಮಾಡಲಾಗಿದ್ದು ನಂತರ ಕ್ಷಮೆ ಕೇಳಿ ವಿವಾದ ಬಗೆಹರಿಸಲಾಗಿತ್ತು. ಇತ್ತೀಚೆಗೆ ನಿರ್ದೇಶಕ ಜೋಗಿ ಪ್ರೇಮ್ (Jogi Prem) ಅವರು ಗಾಯಕ ಸೋನ್ ನಿಗಮ್ ಬಗ್ಗೆ ಮಾತನಾಡಿದ್ದು ಬಾಲಿವುಡ್ ಗಾಯಕ ಸೋನು ನಿಗಮ್ ಬೇಜವಾಬ್ದಾರಿ ತನಕ್ಕೆ ತಾನು ಸರಿಯಾಗಿಯೇ ಕ್ಲಾಸ್ ತೆಗೆದುಕೊಂಡಿದ್ದೆ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ
'ಜೋಗಿ’ ಪ್ರೇಮ್ ನಿರ್ದೇಶನದ ‘ಏಕ್ ಲವ್ ಯಾ’ ಚಿತ್ರ ತೆರೆಗೆ ಬಂದಿತ್ತು. ಈ ಮೊದಲೇ ಈ ಸಿನಿ ಮಾದ ಹಾಡುಗಳು ರಿಲೀಸ್ ಆಗಿ ಹಿಟ್ ಆಗಿದ್ದವು..ಅದೇ ರೀತಿ 'ಏಕ್ ಲವ್ ಯಾ' ಚಿತ್ರಕ್ಕಾಗಿ ಸೋನು ನಿಗಮ್ ಒಂದು ಹಾಡು ಹಾಡಿದ್ದಾರೆ. ಈ ಹಾಡಿನ ರೆಕಾರ್ಡಿಂಗ್ ಸಂದರ್ಭ ಏನಾಗಿತ್ತು ಎಂದು ಪ್ರೇಮ್ ಸಂದರ್ಶನ ವೊಂದರಲ್ಲಿ ಹೇಳಿಕೊಂಡಿದ್ದಾರೆ. ನಾನು ಹಾಗೂ ಅರ್ಜುನ್ ಜನ್ಯಾ ಮುಂಬೈಗೆ ಹೋಗಿ ಸೋನು ಸಿಗಮ್ ನಿಂದ ಹಾಡು ಹಾಡಿಸಲು ಪ್ಲಾನ್ ಮಾಡಲಾಗಿತ್ತು. ಸಂಜೆ 6 ಗಂಟೆಗೆ ನಮ್ಮನ್ನು ಬರಲು ಹೇಳಿದ್ರು..ಆದರೆ ಅಲ್ಲಿ ಅವರು ಇರಲಿಲ್ಲ. ಸ್ಟುಡಿಯೋದಲ್ಲಿ ಅವರ ಸ್ನೇಹಿತ ರೊಬ್ಬರು ಸಾಂಗ್ ಟ್ರ್ಯಾಕ್ ಕೇಳಿದ್ರು. ಸೋನು ನಿಗಮ್ ಅವರು ಬರೋದು ಸ್ವಲ್ಪ ತಡ ವಾಗುತ್ತೆ 7 ಗಂಟೆ ಆಗಬಹುದು ಅಂದ್ರು. ಸರಿ ಎಂದು ಬಹಳಷ್ಟು ಕಾದೆವು ಎಂದು ಪ್ರೇಮ್ ಆ ಘಟನೆ ಬಗ್ಗೆ ಹೇಳಿಕೊಂಡಿದ್ದಾರೆ.
ಕೊನೆಗೆ ಸೋನು ನಿಗಮ್ ಆ ದಿನ ಬಾರದೇ ಹಾಡು ಹಾಡಲು ನಿರಾಕರಿಸಿದ್ದಾಗ ಪ್ರೇಮ್ ಬಾಯಿಗೆ ಬಂದಂತೆ ಬೈದಿದ್ದೇನೆ ಎಂದು ಮೆಲುಕು ಹಾಕಿದ್ದಾರೆ. ಒಮ್ಮೆ ಸರ್ 9 ಗಂಟೆಗೆ ಬರ್ತಾರೆ ಎಂದು ಆಯಿತು. ಬಳಿಕ ಏನೋ ಫಂಕ್ಷನ್ ಅಂತೆ 12 ಗಂಟೆಗೆ ಬರ್ತಾರಂತೆ ಎಂದು ಆತ ಹೇಳಿದ. ಕೂಡಲೇ ಬೇಸರದಿಂದ ಸೋನು ನಿಗಮ್‌ಗೆ ಫೋನ್ ಮಾಡಿ ಸರಿ ಬೈದೆ ಎಂದು ಹೇಳಿದ್ದಾರೆ. ನನಗೆ ಯಾವ ಭಾಷೆಯಲ್ಲಿ ಬೈಯೋಕೆ ಬರುತ್ತೋ ಆದರಲ್ಲಿ ಅಷ್ಟು ಕೆಟ್ಟದಾಗಿ ಬೈದೆ. ಮೊದ್ಲು ಹಾಡಿಗೆ, ಸಂಗೀತ ನಿರ್ದೇಶಕರಿಗೆ ಗೌರವ ಕೊಡುವುದನ್ನು ಕಲಿ ಎಂದು ಹೇಳಿದೆ.. ಬಳಿಕ ಅವರು ಕ್ಷಮೆ ಕೇಳಿ ಸೋನು ನಿಗಮ್ ಖುದ್ದಾಗಿ ಬಂದು ಅರ್ಜುನ್ ಸ್ಟುಡಿಯೋ ದಲ್ಲಿ ಹಾಡು ಹಾಡಿದ್ರು. ತಪ್ಪಾಯ್ತು, ಹೀಗೆ ಮಾಡಬಾರದಿತ್ತು ಎಂದು ಅವರು ತಮ್ಮ ವ್ಲಾಗ್ ಅಲ್ಲಿ ಹಾಕಿದ್ರು ಎಂದು ಪ್ರೇಮ್ ಅವರು ಈ ವಿಚಾರವನ್ನು ಸಂದರ್ಶನ ವೊಂದರಲ್ಲಿ ಹೇಳಿ ಕೊಂಡಿದ್ದಾರೆ. ಸದ್ಯ ಪ್ರೇಮ್ 'ಕೆಡಿ' ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದು ಸಿನಿಮಾ ಬಗ್ಗೆ ಅಭಿಮಾನಿಗಳಲ್ಲಿ ಕಾತುರ ಕೂಡ ಹೆಚ್ಚಾಗಿದೆ.