ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kannada New Movie: ಶೀರ್ಷಿಕೆಯಲ್ಲೇ ಕುತೂಹಲ ಮೂಡಿಸಿರುವ ʼಆಲ್ಫಾ #ಮೆನ್ ಲವ್ ವೈಲೆನ್ಸ್#ʼ ಚಿತ್ರದ ಶೂಟಿಂಗ್‌ ಮುಕ್ತಾಯ

Sandalwood News: ವಿಜಯ್ ನಿರ್ದೇಶನದ, ಹೇಮಂತ್ ಕುಮಾರ್ ಎಂಬ ನೂತನ ಪ್ರತಿಭೆ ನಾಯಕನಾಗಿ ಅಭಿನಯಿಸುವ ʼಆಲ್ಫಾ #ಮೆನ್ ಲವ್ ವೈಲೆನ್ಸ್#ʼ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ. ಚಿತ್ರದ ನಾಯಕಿಯಾಗಿ ಗೋಪಿಕಾ ಸುರೇಶ್ ಹಾಗೂ ಅಯನಾ ನಟಿಸಿದ್ದಾರೆ. ʼಬಿಗ್ ಬಾಸ್ʼ ಖ್ಯಾತಿಯ ಕಾರ್ತಿಕ್ ಮಹೇಶ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರ ಬೆಂಗಳೂರು, ಮಂಗಳೂರು ಹಾಗೂ ಮಾಲೂರಿನಲ್ಲಿ 70ಕ್ಕೂ ಹೆಚ್ಚು ದಿನಗಳ ಚಿತ್ರೀಕರಣ ನಡೆದಿದೆ. ಈಗಾಗಲೇ ಮೊದಲ ಪೋಸ್ಟರ್‌ನಲ್ಲೇ ಮೋಡಿ ಮಾಡಿರುವ ಈ ಚಿತ್ರದ ಟೀಸರ್ ಹಾಗೂ ಹಾಡುಗಳು ಸದ್ಯದಲ್ಲೇ ಅನಾವರಣವಾಗಲಿದೆ ಎಂದು ಚಿತ್ರತಂಡ ತಿಳಿಸಿದೆ.

ʼಆಲ್ಫಾ #ಮೆನ್ ಲವ್ ವೈಲೆನ್ಸ್#ʼ ಚಿತ್ರದ ಶೂಟಿಂಗ್‌ ಮುಕ್ತಾಯ

-

Profile Siddalinga Swamy Nov 1, 2025 8:38 PM

ಬೆಂಗಳೂರು, ನ.1: ಈಗ ಕಂಟೆಂಟ್ ಓರಿಯಂಟೆಡ್ ಚಿತ್ರಗಳನ್ನು ಹೆಚ್ಚು ಜನ ಇಷ್ಟ ಪಡುತ್ತಿದ್ದಾರೆ. ಅಂತಹ ಒಂದೊಳ್ಳೆ ಕಂಟೆಂಟ್‌ವುಳ್ಳ ಆಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಚಿತ್ರ ʼಆಲ್ಫಾ #ಮೆನ್ ಲವ್ ವೈಲೆನ್ಸ್#ʼ (Alpha #Men Love Violence# Movie). ಪ್ರಸ್ತುತ ಚಿತ್ರೀಕರಣ ಪೂರ್ಣಗೊಳಿಸಿರುವ ಈ ಚಿತ್ರಕ್ಕೆ (Kannada New Movie) ಮಾತಿನ ಜೋಡಣೆ ನಡೆಯುತ್ತಿದೆ. ಬೆಂಗಳೂರು, ಮಂಗಳೂರು ಹಾಗೂ ಮಾಲೂರಿನಲ್ಲಿ 70ಕ್ಕೂ ಹೆಚ್ಚು ದಿನಗಳ ಚಿತ್ರೀಕರಣ ನಡೆದಿದೆ. L A ಪ್ರೊಡಕ್ಷನ್ಸ್ ಲಾಂಛನದಲ್ಲಿ ಆನಂದಕುಮಾರ್ ಅವರು ನಿರ್ಮಾಣ ಮಾಡುತ್ತಿರುವ ಈ ಚಿತ್ರವನ್ನು ವಿಜಯ್ ನಿರ್ದೇಶಿಸಿದ್ದಾರೆ. ‌

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ʼಗೀತಾʼ ಹಾಗೂ ಧನಂಜಯ್ ನಟನೆಯ ʼಗುರುದೇವ ಹೊಯ್ಸಳʼ ಚಿತ್ರಗಳ ನಂತರ ವಿಜಯ್ ಅವರು ನಿರ್ದೇಶಿಸಿರುವ ಮೂರನೇ ಚಿತ್ರ ʼಆಲ್ಫಾ #ಮೆನ್ ಲವ್ ವೈಲೆನ್ಸ್#ʼ.

ಹೇಮಂತ್ ಕುಮಾರ್ ಎಂಬ ನೂತನ ಪ್ರತಿಭೆ ಈ ಚಿತ್ರದ ನಾಯಕನಾಗಿ ಅಭಿನಯಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ನವನಾಯಕನಟನಾಗಿ ಪದಾರ್ಪಣೆ ಮಾಡುತ್ತಿದ್ದಾರೆ. ನಾಯಕಿಯಾಗಿ ಗೋಪಿಕಾ ಸುರೇಶ್ ಹಾಗೂ ಅಯನಾ ನಟಿಸಿದ್ದಾರೆ. ʼಬಿಗ್ ಬಾಸ್ʼ ಖ್ಯಾತಿಯ ಕಾರ್ತಿಕ್ ಮಹೇಶ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವಿನಾಶ್, ಅಚ್ಯುತ್ ಕುಮಾರ್, ರಮೇಶ್ ಇಂದಿರಾ, ಬಾಲು ನಾಗೇಂದ್ರ, ಮಾನಸಿ ಸುಧೀರ್, ಗಿರಿರಾಜ್, ರಾಘು ಶಿವಮೊಗ್ಗ ಹೀಗೆ ಅನುಭವಿ ಕಲಾವಿದರ ದೊಡ್ಡ ತಾರಾಬಳಗವೇ ಈ ಚಿತ್ರದಲ್ಲಿದೆ.

ನಾಗಾರ್ಜುನ ಶರ್ಮ ಅವರು ಬರೆದಿರುವ ಐದು ಹಾಡುಗಳು ಚಿತ್ರದಲ್ಲಿದ್ದು, ಹೆಸರಾಂತ ಸಂಗೀತ ನಿರ್ದೇಶಕ ಜೆ. ಅನೂಪ್ ಸೀಳಿನ್ ಸಂಗೀತ ಸಂಯೋಜಿಸುತ್ತಿದ್ದಾರೆ. ಕಾರ್ತಿಕ್ ಎಸ್. ಛಾಯಾಗ್ರಹಣ, ದೀಪು ಎಸ್. ಕುಮಾರ್ ಸಂಕಲನ, ಚಂಪಕಧಾಮ ಬಾಬು ನಿರ್ಮಾಣ ನಿರ್ವಹಣೆ, ಅಮರ್ ಕಲಾ ನಿರ್ದೆಶನ ಹಾಗೂ ಭೂಷಣ್ ನೃತ್ಯ ನಿರ್ದೇಶನವಿರುವ ʼಆಲ್ಫಾ #ಮೆನ್ ಲವ್ ವೈಲೆನ್ಸ್#ʼ ಚಿತ್ರಕ್ಕೆ ಜನಪ್ರಿಯ ಸಂಭಾಷಣೆಗಾರ ಮಾಸ್ತಿ ಸಂಭಾಷಣೆ ಬರೆದಿದ್ದಾರೆ. ಮೈನವಿರೇಳಿಸುವ ಸಾಹಸ ಸನ್ನಿವೇಶಗಳು ಚಿತ್ರದಲ್ಲಿದ್ದು, ವಿಜಯ್, ವಿನೊದ್, ಅರ್ಜುನ್ ರಾಜ್ ಹಾಗೂ ಯೋಗಾನಂದ ಸಾಹಸ ನಿರ್ದೇಶನ ಮಾಡಿದ್ದಾರೆ.

ಈ ಸುದ್ದಿಯನ್ನೂ ಓದಿ | Winter Fashion 2025: 2025ರ ವಿಂಟರ್ ಫ್ಯಾಷನ್‌ಗೆ ಲಗ್ಗೆ ಇಟ್ಟ ಫ್ಯಾಷನ್‌ವೇರ್‌ಗಳಿವು!

ಈಗಾಗಲೇ ಮೊದಲ ಪೋಸ್ಟರ್‌ನಲ್ಲೇ ಮೋಡಿ ಮಾಡಿರುವ ಈ ಚಿತ್ರದ ಟೀಸರ್ ಹಾಗೂ ಹಾಡುಗಳು ಸದ್ಯದಲ್ಲೇ ಅನಾವರಣವಾಗಲಿದೆ.