ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

MLA S.N. Subbareddy: ಬಾಗೇಪಲ್ಲಿಯಲ್ಲಿ ಅದ್ದೂರಿಯಾಗಿ ನಡೆದ 70ನೇ ಕನ್ನಡ ರಾಜ್ಯೋತ್ಸವ ಸಂಭ್ರಮ : ಶಾಸಕ ಭಾಗಿ

ಬಾಗೇಪಲ್ಲಿಯನ್ನು ಬಾಗ್ಯನಗರ ಎಂದು ನಾಮಕರಣ ಮಾಡಬೇಕೆಂಬುದು ಬಾಗೇಪಲ್ಲಿ ತಾಲೂಕಿನ  ಕನ್ನಡ ಪರ ಹೋರಾಟಗಾರರ ಪ್ರಮುಖ ಬೇಡಿಕೆಗಳಲ್ಲಿ ಒಂದಾಗಿದ್ದು, ಭಾಗ್ಯನಗರವನ್ನಾಗಿ ನಾಮಕರಣ ಮಾಡಲು ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿದೆ. ಆದರೆ ಕೇಂದ್ರ ಸರ್ಕಾರದ ಒಪ್ಪಿಗೆ ಸಿಗಬೇಕಾಗಿದ್ದು ಅದನ್ನು ಶೀಘ್ರವಾಗಿ ನೇರವೇರಿಸುತ್ತೇನೆ

ಬಾಗೇಪಲ್ಲಿಯಲ್ಲಿ ಅದ್ದೂರಿಯಾಗಿ ನಡೆದ 70ನೇ ಕನ್ನಡ ರಾಜ್ಯೋತ್ಸವ ಸಂಭ್ರಮ

-

Ashok Nayak Ashok Nayak Nov 1, 2025 11:47 PM

ಬಾಗೇಪಲ್ಲಿ: ಮಮ್ಮಿ, ಡಾಡಿ ಎಂದು ಕರೆಯುವ ಭಾಷೆಗೆ ಆಧ್ಯತೆ ನೀಡುವುದರ ಬದಲಿಗೆ ಪ್ರೀತಿ ಯಿಂದ ಕರೆಯುವ ಅಪ್ಪ, ಅಮ್ಮ ಎಂಬ ಬಾಷೆಯನ್ನು ಮಕ್ಕಳಿಗೆ ಕಲಿಸಿ ಕನ್ನಡ ಭಾಷೆಗೆ ಪ್ರಾಮುಖ್ಯತೆ ಕೊಡುವಂತಹ ಕೆಲಸ ಮನೆಯಿಂದಲೇ ಪ್ರಾರಂಭವಾಗಬೇಕಾಗಿದೆ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ( MLA S.N. Subbareddy) ಅಭಿಮತ ವ್ಯಕ್ತಪಡಿಸಿದರು.

ಬಾಗೇಪಲ್ಲಿ ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢಶಾಲಾವರಣದಲ್ಲಿ ರಾಷ್ಟೀಯ ಹಬ್ಬಗಳ ಆಚರಣಾ ಸಮಿತಿವತಿಯಿಂದ ಅಯೋಜಿಸಿದ್ದ 70 ನೇ ವರ್ಷದ ಕನ್ನಡ ರಾಜ್ಯೋತ್ಸವ ಕಾರ್ಯ ಕ್ರಮದಲ್ಲಿ ತಾಯಿ ಭುವನೇಶ್ವರಿ ಚಿತ್ರಪಟಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿ, ಬಾಗೇಪಲ್ಲಿಯನ್ನು ಬಾಗ್ಯನಗರ ಎಂದು ನಾಮಕರಣ ಮಾಡಬೇಕೆಂಬುದು ಬಾಗೇ ಪಲ್ಲಿ ತಾಲೂಕಿನ ಕನ್ನಡ ಪರ ಹೋರಾಟಗಾರರ ಪ್ರಮುಖ ಬೇಡಿಕೆಗಳಲ್ಲಿ ಒಂದಾಗಿದ್ದು, ಭಾಗ್ಯ ನಗರವನ್ನಾಗಿ ನಾಮಕರಣ ಮಾಡಲು ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿದೆ. ಆದರೆ ಕೇಂದ್ರ ಸರ್ಕಾರದ ಒಪ್ಪಿಗೆ ಸಿಗಬೇಕಾಗಿದ್ದು ಅದನ್ನು ಶೀಘ್ರವಾಗಿ ನೇರವೇರಿಸುತ್ತೇನೆ ಎಂದರು. 

ಅದೇ ರೀತಿಯಲ್ಲಿ ರಾಷ್ಟ್ರೀಯ ಹೆದ್ದಾರಿಯಿಂದ ಬಾಗೇಪಲ್ಲಿ ಪಟ್ಟಣಕ್ಕೆ ಪ್ರವೇಶ ಕಲ್ಪಿಸುವ ಟಿ.ಬಿ.ಕ್ರಾಸ್‌ಬಳಿ ಭಾಗ್ಯನಗರಕ್ಕೆ ಸುಸ್ವಾಗತ ಹೆಸರುಳ್ಳ ಪ್ರವೇಶ ದ್ವಾರವನ್ನು ನಿರ್ಮಿಸಿ ಕೊಡ ಬೇಕೆಂಬ ಬೇಡಿಕೆಯಿದೆ. ಪಟ್ಟಣದ ಬೀದಿಗಳಿಗೆ ಕವಿಗಳ ಹೆಸರುಗಳನ್ನು ನಾಮಕರಣ ಮಾಡ ಬೇಕೆಂಬ ಬೇಡಿಕೆಯನ್ನು ಪೂರೈಸುತ್ತೇನೆ ಎಂದರು.

ಇದನ್ನೂ ಓದಿ:Chikkaballapur News: ಕನ್ನಡ ಭಾಷೆ ಹಾಗೂ ಸಾಹಿತ್ಯದ ಒಳಗೊಳ್ಳುವ ಗುಣ ಮನುಕುಲಕ್ಕೆ ಮಾದರಿ

ಮಕ್ಕಳು ಇಂಗ್ಲೀಷ್ ಭಾಷೆ ಮಾತನಾಡಿದರೆ ದೊಡ್ಡಸ್ಥಿಕೆ ಎಂಬ ಭಾವನೆಯಲ್ಲಿರುವ ಪಾಲಕರು ಭ್ರಮೆಯಿಂದ ಹೊರಬರಬೇಕು, ಮಕ್ಕಳಿಗೆ ತಂದೆ, ತಾಯಿ ಮೊದಲು ಗುರುಗಳಾಗಿದ್ದು ಮನೆಯಲ್ಲಿ ಕನ್ನಡ ಭಾಷೆಯಲ್ಲೇ ವ್ಯವಹರಿಸಬೇಕೆಂದು ವಿನಂತಿಸಿಕೊಂಡರು.

ತಹಶೀಲ್ದಾರ್ ಮನೀಷಾ ಪತ್ರಿ ಮಾತನಾಡಿ, 1905 ನೇ ಇಸ್ವಿಯಲ್ಲಿ ಬ್ರಿಟೀಷರು ಹೊಡೆದು ಆಳುವ ನೀತಿಯ ತಂತ್ರಗಾರಿಕೆಗೆ ಮುಂದಾಗಿ ಪ್ರಾಂತೀಯ ಭಾಷೆಗೆ ಮನ್ನಣೆ ನೀಡುವುದಿಲ್ಲ. ಅಂತಹ ಸಂದರ್ಭದಲ್ಲಿ ಐದು ಪ್ರಾಂತಗಳಾಗಿದ್ದ ಭಾರತ ದೇಶವನ್ನು ಹೊಡೆಯುತ್ತಾರೆ. ಬ್ರಿಟೀಷರ ಆಳ್ವಿಕೆ ಯಲ್ಲಿ ಪ್ರಾಂತವಾರು ಭಾಷೆಗೆ ಆಧ್ಯತೆ ನೀಡುವ ಬಗ್ಗೆ ದೊಡ್ಡ ಕ್ರಾಂತಿ ನಡೆಯುತ್ತೆ .ಈ ವೇಳೆಯಲ್ಲಿ ಕನ್ನಡ ಬಾಷೆಗೆ ಮನ್ನಣೆ ಸಿಗುವುದರ ಜತೆಗೆ ಕರ್ನಾಟಕ ರಾಜ್ಯವೂ ಉದಯವಾಗುತ್ತದೆ ಎಂದು ಕನ್ನಡ ಬಾಷೆಯ ಉದಯದ ಬಗ್ಗೆ ವಿವರಿಸಿದರು.

ಈ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಹಲವು ಸಾಧಕರಿಗೆ ರಾಷ್ಟ್ರೀಯ ಹಬ್ಬಗಳ ಅಚರಣಾ ಸಮಿತಿವತಿಯಿಂದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ ಮಾಡಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶಪ್ಪ, ಪುರಸಭೆ ಅದ್ಯಕ್ಷ ಶ್ರೀನಿವಾಸ, ಉಪಾಧ್ಯಕ್ಷೆ ಸುಜಾತ ನರಸಿಂಹನಾಯ್ಡು, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಶ್ರೀನಿವಾಸರೆಡ್ಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್.ನರೇಂಧ್ರ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಆರ್.ಹನುಮಂತರೆಡ್ಡಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ವೆಂಕಟರವಣಪ್ಪ, ಕಾರ್ಯದರ್ಶಿ ವೆಂಕಟರಾಯಪ್ಪ, ಕಸಾಪ ಅದ್ಯಕ್ಷ ಚಿನ್ನಕೈವಾರಮಯ್ಯ, ಕರವೇ ಮುಖಂಡರಾದ ಬಾಬಾಜಾನ್, ಬಿ.ಟಿ.ಸೀನಾ, ಹರೀಶ್, ರವೀಂಧ್ರ, ಜಭೀವುಲ್ಲಾ ಮತ್ತಿತರರು ಇದ್ದರು.