Kantara Movie: ಕಾಂತಾರ-1 ಬೆನ್ನಲ್ಲೇ ಚಾಪ್ಟರ್ 3 ಸೆಟ್ಟೇರುತ್ತಾ? ಒಟ್ಟೊಟ್ಟಿಗೆ ಎರಡು ಚಿತ್ರಗಳ ಶೂಟಿಂಗ್?
Kantara Movie: ರಿಷಬ್ ಶೆಟ್ಟಿ ನಿರ್ದೇಶಿಸಿ, ಅಭಿನಯಿಸಿದ ಕಾಂತಾರ ಸಿನಿಮಾ ಥಿಯೇಟರ್ನಲ್ಲಿ ಸೂಪರ್ ಹಿಟ್ ಆಗಿ ಕೇವಲ ಕನ್ನಡಿಗರನ್ನು ಮಾತ್ರವಲ್ಲದೆ, ಪರಭಾಷಿಕರನ್ನೂಸೆಳೆದಿತ್ತು. ಇದೀಗ ರಿಷಬ್ ಶೆಟ್ಟಿ ನಿರ್ದೇಶಿಸಿ ನಾಯಕರಾಗಿ ನಟಿಸುತ್ತಿರುವ ಕಾಂತಾರ ಚಾಪ್ಟರ್ 1' ಪ್ರೀಕ್ವೆಲ್ ಬಗ್ಗೆ ಕುತೂಹಲ ಹೆಚ್ಚಿದೆ. ಈಗಾಗಲೇ ಚಾಪ್ಟರ್-1 ಚಿತ್ರದ ಶೂಟಿಂಗ್ ಬಹುತೇಕ ಪೂರ್ಣಗೊಂಡಿದೆ. ಇನ್ನೇನು ರಿಲೀಸ್ ತಯಾರಿ ಹಂತದಲ್ಲಿರುವಾಗಲೇ ಈ ಮಧ್ಯೆ ಕಾಂತಾರ ಪಾರ್ಟ್ 3 ಬಗ್ಗೆಯು ಹೊಸ ಅಪ್ಡೇಟ್ ಸಿಕ್ಕಿದೆ.


ಕಾಂತಾರ ಚಾಪ್ಟರ್ 1 ಚಿತ್ರದ ಟೀಸರ್ ಈಗಾಗಲೇ ಬಿಡುಗಡೆ ಯಾಗಿದ್ದು ಹೆಚ್ಚು ಕುತೂಹಲ ಉಂಟುಮಾಡಿದೆ. ಪೌರಾಣಿಕ ಕಥೆ ಆಧಾರಿತ ಸಿನಿಮಾ ಇದಾಗಿದ್ದು ಪರಶುರಾಮ, ಕದಂಬರ ಆಳ್ವಿಕೆಯ ಸಂದರ್ಭದ ಕಥೆಯೂ ಇರಬಹುದು ಎಂಬೆಲ್ಲ ಊಹೆಗಳು ಟೀಸರ್ ನಲ್ಲಿ ಮೂಡಿಬಂದಿದೆ. ಮೂಲಗಳ ಪ್ರಕಾರ, ಈ ಚಿತ್ರದ ನಾಯಕಿಯಾಗಿ ರುಕ್ಮಿಣಿ ವಸಂತ್ ನಟಿಸ ಲಿದ್ದಾರೆ. ಮಲಯಾಳಂ ನಟ ಮೋಹನ್‌ಲಾಲ್ ಕೂಡ ಚಿತ್ರದ ಮುಖ್ಯ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ಮಾಹಿತಿ ಕೂಡ ಹೊರಬಿದ್ದಿದೆ.್ರದ ಶೂಟಿಂಗ್ ಬಹುತೇಕ ಪೂರ್ಣಗೊಂಡಿದೆ. ಇನ್ನೇನು ರಿಲೀಸ್ ತಯಾರಿ ಹಂತದಲ್ಲಿರುವಾಗಲೇ ಈ ಮಧ್ಯೆ ಕಾಂತಾರ ಪಾರ್ಟ್ 3 ಬಗ್ಗೆಯೂ ಹೊಸ ಅಪ್ಡೇಟ್ ಸಿಕ್ಕಿದೆ.
ಕಾಂತಾರ ಪಾರ್ಟ್ 1 ಸಿನಿಮಾ ಭಾರೀ ಕುತೂಹಲ ಸೃಷ್ಟಿಸಿರುವ ಜೊತೆಗೆ ಬಹುನಿರೀಕ್ಷೆಗಳನ್ನು ಹೊಂದಿರುವ ಕನ್ನಡದ ಮೋಸ್ಟ್ ಓನ್ ಸಿನಿಮಾಗಳಲ್ಲಿ ಒಂದಾಗಿದೆ. ಕಾಂತಾರ ಚಾಪ್ಟರ್-1 ಚಿತ್ರದ ರಿಲೀಸ್ ಡೇಟ್ ಕೂಡ ಫಿಕ್ಸ್ ಆಗಿದ್ದು ಇದೇ ವರ್ಷದ ಅಕ್ಟೋಬರ್-2 ರಂದು ಈ ಸಿನಿಮಾ ತೆರೆಗೆ ಬರಲಿದೆ. ಈ ನಡುವೆಯೇ ಕಾಂತರ 3 ಬಗ್ಗೆಯು ಇಂಟ್ರಸ್ಟಿಂಗ್ ಮಾಹಿತಿ ಯೊಂದು ಹೊರಬಿದ್ದಿದೆ. ಕಾಂತಾರ ಚಾಪ್ಟರ್ 1' ಪ್ರೀಕ್ವೆಲ್ ಶೂಟಿಂಗ್ ನಡೆಯುತ್ತಿದ್ದಂತೆ ಇನ್ನೊಂದು ಸೀಕ್ವೆಲ್ ಕೂಡ ರೆಡಿ ಆಗುತ್ತಿದ್ದು ಇದಕ್ಕಾಗಿ ಬೃಹತ್ ಸೆಟ್ ಹಾಕಿದ್ದು, ಎರಡು ಚಿತ್ರಗಳ ಶೂಟಿಂಗ್ ನಡೆಯುತ್ತಿದೆ ಎಂಬ ಮಾಹಿತಿ ಹೊರ ಬಿದ್ದಿದೆ.
ಕಾಂತಾರ ಚಾಪ್ಟರ್ 1 ಚಿತ್ರದ ಟೀಸರ್ ಈಗಾಗಲೇ ಬಿಡುಗಡೆ ಯಾಗಿದ್ದು ಹೆಚ್ಚು ಕುತೂಹಲ ಉಂಟುಮಾಡಿದೆ. ಪೌರಾಣಿಕ ಕಥೆ ಆಧಾರಿತ ಸಿನಿಮಾ ಇದಾಗಿದ್ದು ಪರಶುರಾಮ, ಕದಂಬರ ಆಳ್ವಿಕೆಯ ಸಂದರ್ಭದ ಕಥೆಯೂ ಇರಬಹುದು ಎಂಬೆಲ್ಲ ಊಹೆಗಳು ಟೀಸರ್‌ನಲ್ಲಿ ಮೂಡಿಬಂದಿದೆ.ಮೂಲಗಳ ಪ್ರಕಾರ, ಈ ಚಿತ್ರದ ನಾಯಕಿಯಾಗಿ ರುಕ್ಮಿಣಿ ವಸಂತ್ ನಟಿಸ ಲಿದ್ದಾರೆ. ಮಲಯಾಳಂ ನಟ ಮೋಹನ್‌ಲಾಲ್ ಕೂಡ ಚಿತ್ರದ ಮುಖ್ಯ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ಮಾಹಿತಿ ಕೂಡ ಹೊರಬಿದ್ದಿದೆ.
ಇದನ್ನು ಓದಿ: Green Movie: ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿರುವ "ಗ್ರೀನ್" ಚಿತ್ರ ಸದ್ಯದಲ್ಲೇ ತೆರೆಗೆ
ಕಾಂತಾರದ ಈ ಮೊದಲ ಪಾರ್ಟ್ ಅನ್ನು ರಿಷಬ್ ಅವರು ತಮ್ಮ ಹುಟ್ಟೂರಿನಲ್ಲೇ ಶೂಟ್ ಮಾಡಿ ಚಿತ್ರೀಕರಣ ಮಾಡಿದ್ದರು. ಈ ಸಿನಿಮಾ ಸಕ್ಸಸ್ ಆಗಿ ಭಾರಿ ಸ್ಪಂದನೆ ಸಿಕ್ಕಿದ ನಂತರ ಪ್ಯಾನ್ ಇಂಡಿಯಾ ಸಿನಿಮಾ ಆಗಿ ಬಹುಭಾಷೆಗಳಲ್ಲಿ ತೆರೆ ಕಂಡಿತ್ತು. ಕಾಂತಾರ' ಸಿನಿಮಾವನ್ನು ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡಿತ್ತು ರಿಷಬ್ ಶೆಟ್ಟಿ ಜೊತೆಗೆ ಸಪ್ತಮಿ ಗೌಡ, ಅಚ್ಯುತ್ ಕುಮಾರ್, ಕಿಶೋರ್, ದೀಪಕ್ ರೈ, ಮಾನಸಿ ಸುಧೀರ್ ಮುಂತಾದವರು ನಟಿಸಿದ್ದರು.ಸಿನಿಮಾ ಹಿಟ್ ಆದ್ದಂತೆ ರಿಷಬ್ ಕಾಂತಾರ ಪಾರ್ಟ್ 1 ಪ್ರೀಕ್ವೆಲ್ ಮಾಡು ವುದಾಗಿ ಘೋಷಣೆ ಮಾಡಿದ್ದರು. ಸದ್ಯ ಕಾಂತಾರ ಚಾಪ್ಟರ್-1 ಜೊತೆಗೆ ಕಾಂತಾರ ಚಾಪ್ಟರ್-3 ಚಿತ್ರದ ಶೂಟಿಂಗ್ ಕೂಡ ಶುರು ಆಗಿದೆ ಅನ್ನುವ ಸುದ್ದಿ ಹರಡಿದೆ.ಆದರೆ, ಈ ಬಗ್ಗೆ ಚಿತ್ರ ತಂಡ ಇನ್ನೂ ಅಧಿಕೃತವಾಗಿ ಹೇಳಿಕೊಂಡಿಲ್ಲ..