ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kesari Chapter 2: ʼಕೇಸರಿ 2ʼ ಚಿತ್ರತಂಡದಿಂದ ಜಲಿಯನ್‌ವಾಲಾ ಭಾಗ್ ಸಂತ್ರಸ್ತರಿಗೆ ಗೌರವಪೂರ್ಣ ನಮನ

ಜಲಿಯನ್‌ವಾಲ್ ಭಾಗ್ ಹತ್ಯಾಕಾಂಡದ ಹಿಂದಿನ ನೈಜ ಘಟನೆಗಳನ್ನುಆಧರಿಸಿದ್ದ ಕಥೆಯೇ ʼಕೇಸರಿ 2ʼ ಸಿನಿಮಾದ ಮುಖ್ಯ ಎಳೆ. ಕರಣ್ ಸಿಂಗ್ ತ್ಯಾಗಿ ನಿರ್ದೇಶನದ 'ಕೇಸರಿ 2' ಸಿನಿಮಾದಲ್ಲಿ ಅಕ್ಷಯ್ ಕುಮಾರ್, ಆರ್. ಮಾಧವನ್ ಮತ್ತು ಅನನ್ಯಾ ಪಾಂಡೆ ನಟಿಸಿದ್ದಾರೆ. ಇದೀಗ ಚಿತ್ರತಂಡವು ಜಲಿಯನ್‌ವಾಲಾ ಭಾಗ್ ಹತ್ಯಾಕಂಡದಲ್ಲಿ ಮಡಿದವರನ್ನು ಸ್ಮರಿಸಿದೆ.

ಜಲಿಯನ್‌ವಾಲಾ ಭಾಗ್‌ನಲ್ಲಿ ಮಡಿದವರಿಗೆ ʼಕೇಸರಿ 2ʼ ಚಿತ್ರತಂಡದ ನಮನ

Kesari Chapter 2 Stars

Profile Pushpa Kumari Apr 15, 2025 5:45 PM

ಚಂಡೀಗಢ: ಬಾಲಿವುಡ್ ಖ್ಯಾತ ನಟ ಅಕ್ಷಯ್ ಕುಮಾರ್ (Akshay Kumar) ನಟನೆಯ ಬ್ಲಾಕ್​ ಬ್ಲಸ್ಟರ್‌​​ ಹಿಟ್ ʼಕೇಸರಿʼ ಸಿನಿಮಾ ಬಿಡುಗಡೆಯಾಗಿ 6 ವರ್ಷಗಳಾದ ಬಳಿಕ ಇದೀಗ ʼಕೇಸರಿ 2ʼ ರಿಲೀಸ್‌ಗೆ ರೆಡಿಯಾಗಿದೆ.  ಜಲಿಯನ್‌ವಾಲ್ ಭಾಗ್ ಹತ್ಯಾ ಕಾಂಡದ ಹಿಂದಿನ ನೈಜ ಘಟನೆಗಳನ್ನು ಆಧರಿಸಿರುವ ಕಥೆಯೇ ʼಕೇಸರಿ 2ʼ ಸಿನಿಮಾದ ಮುಖ್ಯ ಎಳೆ. ಕರಣ್ ಸಿಂಗ್ ತ್ಯಾಗಿ ನಿರ್ದೇಶನದ 'ಕೇಸರಿ 2' ಚಿತ್ರದಲ್ಲಿ ಅಕ್ಷಯ್ ಕುಮಾರ್, ಆರ್.ಮಾಧವನ್ ಮತ್ತು ಅನನ್ಯಾ ಪಾಂಡೆ ಹಲವು ಪ್ರಮುಖರು ನಟಿಸಿದ್ದಾರೆ. ಇದೀಗ ಸಿನಿಮಾ ಪ್ರಚಾರದಲ್ಲಿ ತೊಡಗಿದ್ದ ಚಿತ್ರತಂಡವು ಪ್ರಚಾರಕ್ಕೆ ಕೊಂಚ ಬ್ರೇಕ್ ನೀಡಿ ಜಲಿಯನ್ ವಾಲಾಬಾಗ್ ನ ಹತ್ಯಾಕಂಡ ದಿನ ಮಡಿದವರನ್ನು ಸ್ಮರಿಸುವ ಮಹತ್ಕಾರ್ಯದಲ್ಲಿ ತೊಡಗಿದೆ. ಹೀಗಾಗಿ ʼಕೇಸರಿ 2ʼ ಚಿತ್ರತಂಡಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಬಹಳಷ್ಟು ಪ್ರಶಂಸೆ ವ್ಯಕ್ತವಾಗುತ್ತಿದೆ.

ವಸಾಹತುಶಾಹಿ ಇತಿಹಾಸದ ಅತ್ಯಂತ ಭಯಾನಕ ಕರಾಳ ಘಟನೆಗಳಲ್ಲಿ ಜಲಿಯನ್‌ವಾಲಾ ಭಾಗ್ ಹತ್ಯಾಕಾಂಡ ಕೂಡ ಒಂದಾಗಿದ್ದು 1919 ಎಪ್ರಿಲ್ 13ರಂದು ಈ ಕರಾಳ ಘಟನೆ ನಡೆದಿದೆ. ಈ‌ ದಿನ ಪ್ರತೀ ವರ್ಷ ಸಂತ್ರಸ್ತರಿಗೆ ಗೌರವ ನಮನ ಸಲ್ಲಿಸಲಾಗುತ್ತದೆ. ಆದರೆ ಈ ಬಾರಿ ಮಡಿದ ಜೀವಗಳಿಗೆ ʼಕೇಸರಿ 2ʼ ಚಿತ್ರತಂಡವೂ ಗೌರವಪೂರ್ಣ ನಮನ ಸಲ್ಲಿಸಿದೆ. ʼಕೇಸರಿ 2ʼ ಸಿನಿಮಾದಲ್ಲಿ ನಟಿಸಿದ ಅಕ್ಷಯ್ ಕುಮಾರ್, ಆರ್.ಮಾಧವನ್ ಮತ್ತು ಅನನ್ಯಾ ಪಾಂಡೆ ಅಮೃತಸರದ ಜಲಿಯನ್‌ವಾಲಾ ಭಾಗ್‌ಗೆ ಭೇಟಿ ನೀಡಿ ಗೌರವ ನಮನ ಸಲ್ಲಿಸಿದ್ದಾರೆ. ಸಿನಿಮಾ ತಂಡದ ಈ ಕಾರ್ಯವೈಖರಿಗೆ ಹಲವರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

ಭಾರತ ಸ್ವಾತಂತ್ರ್ಯ ಹೋರಾಟದ ಕಿಚ್ಚು ಹೆಚ್ಚಿಸಿದ ಘಟನೆ ‘ಜಲಿಯನ್‌ವಾಲಾ ಭಾಗ್’ ಹತ್ಯಾಕಾಂಡ. ಭಾರತದಲ್ಲಿ ನಡೆದ ಅತ್ಯಂತ ಘೋರ ಹಾಗೂ ಅಮಾನವೀಯ ದುರಂತವಿದು.1919ರ ಏ. 13ರಂದು ಜಲಿಯನ್‌ವಾಲಾ ಭಾಗ್‌ ದುರಂತ ನಡೆದಿತ್ತು. ಆ ದಿನ ಅಮೃತ್‌ಸರದ ಜಲಿಯನ್‌ವಾಲಾ ಭಾಗ್‌ ಎಂಬ ಪ್ರದೇಶದಲ್ಲಿ ಬ್ರಿಟಿಷ್‌ ಪಡೆಗಳು ನಿರಾಯುಧ ಭಾರತೀಯರ ಗುಂಪಿನ ಮೇಲೆ ಅಮಾನುಷವಾಗಿ ಗುಂಡಿನ ದಾಳಿ ನಡೆಸಿದ್ದವು. ಮಹಿಳೆಯರು, ಮಕ್ಕಳು ಸೇರಿದಂತೆ ಹಲವರು ಈ ದುರಂತದಲ್ಲಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದರು.

ಇದನ್ನು ಓದಿ: Kesari 2 Movie: ಕೇಸರಿ 2 ಚಿತ್ರದ ನೈಜ ಕಥೆಯೇನು? ಇದರ ಹಿಂದಿನ ರಿಯಲ್ ಹೀರೋ ಯಾರು?

ʼಕೇಸರಿ 2ʼ ಚಿತ್ರದಲ್ಲಿ ಜಲಿಯನ್‌ವಾಲಾ ಭಾಗ್ ದುರಂತ ಕಥೆಯನ್ನು ಆಧಾರಿಸಿಯೇ ಸಿನಿಮಾ ಮಾಡಲಾಗಿದೆ. ʼಕೇಸರಿ 2ʼ ಸಿನಿಮಾದಲ್ಲಿ ನ್ಯಾಯವಾದಿ ಸಿ.ಶಂಕರನ್ ನಾಯರ್ ಅವರ ಸತತ ಹೋರಾಟದ ಕಥೆ ಇದರಲ್ಲಿದೆ. ವಸಾಹತುಶಾಹಿ ಆಳ್ವಿಕೆಯಲ್ಲಿ ಭಾರತೀಯರಿಗೆ ಆಗುತ್ತಿದ್ದ ಅನ್ಯಾಯವನ್ನು ಪ್ರಶ್ನಿಸುವ ಧೀಮಂತ ನಾಯಕ ಸಿ. ಶಂಕರನ್ ಪಾತ್ರದಲ್ಲಿ ನಟ ಅಕ್ಷಯ್ ಕುಮಾರ್ ಕಾಣಿಸಿಕೊಂಡಿದ್ದಾರೆ. ಆರ್. ಮಾಧವನ್ ಮತ್ತು ಅನನ್ಯಾ ಪಾಂಡೆ ಅವರಿಗೂ ಮುಖ್ಯ ಪಾತ್ರ ನಿರ್ವಹಿಸಿದ್ದಾರೆ. ಏ. 3ರಂದು ಟ್ರೈಲರ್‌ ರಿಲೀಸ್ ಆಗಿದ್ದು, ಪಾಸಿಟಿವ್ ಪ್ರತಿಕ್ರಿಯೆ ವ್ಯಕ್ತವಾಗಿದೆ. ಏ. 18ರಂದು ಸಿನಿಮಾ ರಿಲೀಸ್ ಆಗಲಿದ್ದು ಚಿತ್ರದ ನಿರೀಕ್ಷೆ ಹೆಚ್ಚಾಗಿದೆ.