ಕರ್ನಾಟಕ ಬಜೆಟ್​ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

L2E Empuraan Movie: ಕರ್ನಾಟಕದಲ್ಲಿ ಮಲಯಾಳಂನ ‘L2E- ಎಂಪುರಾನ್’ ಚಿತ್ರ ವಿತರಿಸಲಿದೆ ಹೊಂಬಾಳೆ ಫಿಲಂಸ್

L2E Empuraan Movie: ಪೃಥ್ವಿರಾಜ್ ಸುಕುಮಾರನ್ ನಿರ್ದೇಶನದ ಮಲಯಾಳಂನ ಬಹುನಿರೀಕ್ಷಿತ ʼL2E: ಎಂಪುರಾನ್ʼ ಚಿತ್ರವನ್ನು ಕರ್ನಾಟಕದಾದ್ಯಂತ ವಿತರಿಸುವುದಾಗಿ ಹೊಂಬಾಳೆ ಫಿಲಂಸ್‌ ಘೋಷಿಸಿದೆ. ʼL2E: ಎಂಪುರನ್ʼ ಸಿನಿಮಾವನ್ನು ಕರ್ನಾಟಕದಾದ್ಯಂತ ಐದು ಭಾಷೆಗಳಲ್ಲಿ ಹೊಂಬಾಳೆ ಫಿಲಂಸ್‌ ಬಿಡುಗಡೆ ಮಾಡಲಿದೆ. ಈ ಕುರಿತ ವಿವರ ಇಲ್ಲಿದೆ.

ಕರ್ನಾಟಕದಲ್ಲಿ ‘L2E- ಎಂಪುರಾನ್’ ಚಿತ್ರ ವಿತರಿಸಲಿದೆ ಹೊಂಬಾಳೆ ಫಿಲಂಸ್

Profile Siddalinga Swamy Mar 19, 2025 3:45 PM

ಬೆಂಗಳೂರು: ಮಲಯಾಳಂನ ಬಹುನಿರೀಕ್ಷಿತ ʼL2E: ಎಂಪುರಾನ್ʼ ಚಿತ್ರವನ್ನು (L2E Empuraan Movie) ಕರ್ನಾಟಕದಾದ್ಯಂತ ವಿತರಿಸುವುದಾಗಿ ಹೊಂಬಾಳೆ ಫಿಲಂಸ್‌ ಘೋಷಿಸಿದೆ. ಈ ಚಿತ್ರದಲ್ಲಿ ಮೋಹನ್ ಲಾಲ್, ಪೃಥ್ವಿರಾಜ್ ಸುಕುಮಾರನ್ ಮತ್ತು ಟೋವಿನೋ ಥಾಮಸ್ ನಟಿಸಿದ್ದಾರೆ. ಸ್ವತಃ ಪೃಥ್ವಿರಾಜ್ ಸುಕುಮಾರನ್ ಈ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಈ ಸಹಯೋಗವು ಹೊಂಬಾಳೆ ಫಿಲ್ಮ್ಸ್ ಮತ್ತು ಪೃಥ್ವಿರಾಜ್ ಸುಕುಮಾರನ್ ನಡುವಿನ ಗಟ್ಟಿ ಮತ್ತು ವಿಕಸನಗೊಳ್ಳುತ್ತಿರುವ ಸಂಬಂಧಕ್ಕೆ ಮತ್ತೊಂದು ಸಾಕ್ಷಿಯಾಗಿದೆ. ಅಂದಹಾಗೆ, ಹೊಂಬಾಳೆ ಫಿಲಂಸ್‌ನ ಮೆಗಾ ಹಿಟ್‌ಗಳಾದ ಕೆಜಿಎಫ್ ಚಾಪ್ಟರ್‌ 1, ಕೆಜಿಎಫ್ ಚಾಪ್ಟರ್‌ 2 ಮತ್ತು ಕಾಂತಾರ ಪೃಥ್ವಿರಾಜ್‌ ಸುಕುಮಾರನ್‌ ಕೇರಳದಲ್ಲಿ ವಿತರಿಸಿದರು.

ಅದರ ಮುಂದುವರಿದ ಭಾಗವಾಗಿ, ಪೃಥ್ವಿರಾಜ್‌ ಅವರ ಆಡುಜೀವಿತಂ (ದಿ ಗೋಟ್‌ ಲೈಫ್‌) ಸಿನಿಮಾವನ್ನು ಕರ್ನಾಟಕದಲ್ಲಿ ಹೊಂಬಾಳೆ ಫಿಲಂಸ್‌ ವಿತರಣೆ ಮಾಡಿತು. ಹೊಂಬಾಳೆ ಫಿಲಂಸ್‌ ನಿರ್ಮಾಣದ ಸಲಾರ್‌ ಸಿನಿಮಾದಲ್ಲಿ ಪೃಥ್ವಿರಾಜನ್‌ ನಟಿಸುವ ಮೂಲಕ ಆ ಬಂಧ ಮತ್ತಷ್ಟು ಗಟ್ಟಿಯಾಯಿತು. ಅಷ್ಟೇ ಅಲ್ಲ ಹೊಂಬಾಳೆ ಫಿಲಂಸ್‌ ಬ್ಯಾನರ್ ಅಡಿಯಲ್ಲಿ ಹೊಸ ಚಿತ್ರವನ್ನು ಪೃಥ್ವಿರಾಜ್‌ ಸುಕುಮಾರನ್‌ ನಿರ್ದೇಶಿಸುತ್ತಿದ್ದಾರೆ. ಇದೆಲ್ಲದರ ನಡುವೆ ʼL2E: ಎಂಪುರನ್ʼ ಸಿನಿಮಾವನ್ನು ಕರ್ನಾಟಕದಾದ್ಯಂತ ಐದು ಭಾಷೆಗಳಲ್ಲಿ ಹೊಂಬಾಳೆ ಫಿಲಂಸ್‌ ಬಿಡುಗಡೆ ಮಾಡಲಿದೆ.

ಈ ಸುದ್ದಿಯನ್ನೂ ಓದಿ | Celebrity Interview 2025: ಫಿಟ್ನೆಸ್ ದಿವಾ & ಉದ್ಯಮಿ ಶೀಲಾ ಯೋಗೇಶ್ವರ್ ಫ್ಯಾಷೆನಬಲ್ ಲೈಫ್‌ಸ್ಟೈಲ್ ಝಲಕ್!

ಅಂದಹಾಗೆ ಹೈ-ಆಕ್ಟೇನ್ ರಾಜಕೀಯ ಥ್ರಿಲ್ಲರ್ ಜಾನರ್‌ನ ʼL2E: ಎಂಪುರಾನ್ʼ ಸಿನಿಮಾ ಕನ್ನಡ, ಮಲಯಾಳಂ, ಹಿಂದಿ, ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಬಿಡುಗಡೆ ಆಗಲಿದೆ.