Celebrity Interview 2025: ಫಿಟ್ನೆಸ್ ದಿವಾ & ಉದ್ಯಮಿ ಶೀಲಾ ಯೋಗೇಶ್ವರ್ ಫ್ಯಾಷೆನಬಲ್ ಲೈಫ್‌ಸ್ಟೈಲ್ ಝಲಕ್!
Sheela Yogeshwar: ಉದ್ಯಮಿ, ಫಿಟ್ನೆಸ್ ದಿವಾ, ಸಾಕು ಪ್ರಾಣಿ ಪ್ರೇಮಿ ಹೀಗೆ ನಾನಾ ಪಾತ್ರಗಳಲ್ಲಿ ಬ್ಯುಸಿಯಾಗಿರುವ ಯಶಸ್ವಿ ಮಹಿಳೆ ಶೀಲಾ ಯೋಗೇಶ್ವರ್. ಆಗಾಗ್ಗೆ ಮಹಿಳಾ ಸಬಲೀಕರಣಕ್ಕೆ ಸಾಥ್ ನೀಡುವಂತಹ ಕೆಲಸಗಳಲ್ಲೂ ಸದ್ದಿಲ್ಲದೇ ತೊಡಗಿಸಿಕೊಂಡಿದ್ದಾರೆ. ವಿಶ್ವವಾಣಿ ನ್ಯೂಸ್ ಅವರನ್ನು ಸಂದರ್ಶಿಸಿದಾಗ ತಮ್ಮ ಫ್ಯಾಷನ್-ಫ್ಯಾಷನ್-ಫಿಟ್ನೆಸ್ ಹಾಗೂ ಜೀವನಶೈಲಿ ಕುರಿತಂತೆ ಒಂದಿಷ್ಟು ವಿಷಯಗಳನ್ನು ಚುಟುಕಾಗಿ ಹಂಚಿಕೊಂಡರು.

ಚಿತ್ರಗಳು: ಶೀಲಾ ಯೋಗೇಶ್ವರ್, ಉದ್ಯಮಿ, ಫಿಟ್ನೆಸ್ ದಿವಾ

ಸಂದರ್ಶನ: ಶೀಲಾ ಸಿ. ಶೆಟ್ಟಿ
ಪ್ರತಿ ಮಹಿಳೆಯು ಮೊದಲು ತಮ್ಮ ಜೀವನವನ್ನು ರೂಪಿಸಿಕೊಂಡು, ಜೀವನಶೈಲಿಯನ್ನು ಇತರರಿಗೆ ಮಾದರಿಯಾಗಿಸಿದಾಗ ಇಡೀ ಕುಟುಂಬ ಅಭಿವೃದ್ಧಿ ಹೊಂದುತ್ತದೆ ಎನ್ನುತ್ತಾರೆ ಉದ್ಯಮಿ, ಫ್ಯಾಷೆನಬಲ್ ಫಿಟ್ನೆಸ್ ದಿವಾ & ಸಾಕು ಪ್ರಾಣಿ ಪ್ರೇಮಿ ಹೀಗೆ ನಾನಾ ರೋಲ್‌ಗಳಲ್ಲಿ ಬ್ಯುಸಿಯಾಗಿರುವ ಶೀಲಾ ಯೋಗೇಶ್ವರ್ (Sheela Yogeshwar). ಇವರು ನಟ, ಮಾಜಿ ಸಚಿವ ಹಾಗೂ ಚನ್ನಪಟ್ಟಣದ ಶಾಸಕ ಸಿ.ಪಿ. ಯೋಗೇಶ್ವರ್ ಅವರ ಪತ್ನಿ ಕೂಡ. ಅಂದಹಾಗೆ, ಮಾರ್ಚ್ ಮಹಿಳಾ ಮಾಸದ ಹಿನ್ನೆಲೆಯಲ್ಲಿ ವಿಶ್ವವಾಣಿ ನ್ಯೂಸ್ ಅವರನ್ನು ಸಂದರ್ಶಿಸಿದಾಗ, ಅವರು ತಮ್ಮ ಫ್ಯಾಷನ್-ಫ್ಯಾಷನ್-ಫಿಟ್ನೆಸ್ (Celebrity Interview 2025) ಎಲ್ಲದರ ಕುರಿತಂತೆ ಒಂದಿಷ್ಟು ವಿಷಯಗಳನ್ನು ಹಂಚಿಕೊಂಡರು.

ವಿಶ್ವವಾಣಿ ನ್ಯೂಸ್: ಸದಾ ಒಂದಲ್ಲ ಒಂದು ಕಾರ್ಯಚಟುವಟಿಕೆಗಳಲ್ಲಿ ಬ್ಯುಸಿಯಾಗಿರುವ ನೀವು ಮಹಿಳಾ ಸಬಲೀಕರಣಕ್ಕೆ ಹೇಗೆ ಸಾಥ್ ನೀಡಿದ್ದೀರಾ?
ಶೀಲಾ ಯೋಗೇಶ್ವರ್: ಮದುವೆಗೆ ಮುನ್ನವೇ ನಾನು ತಂದೆಯ ಬಿಸ್‌ನೆಸ್ ಸಂಭಾಳಿಸುತ್ತಿದ್ದೆ. ನಂತರ ಚನ್ನಪಟ್ಟಣದಲ್ಲಿನ ಗಾರ್ಮೆಂಟ್ ಫ್ಯಾಕ್ಟರಿಯಲ್ಲಿ, ಅತಿ ಹೆಚ್ಚು ಅಂದರೆ, ಸುಮಾರು 3,000 ಮಹಿಳೆಯರಿಗೆ ಬೇಸಿಕ್ ಟ್ರೈನಿಂಗ್ ಕಲ್ಪಿಸಿ, ಭವಿಷ್ಯ ರೂಪಿಸಿಕೊಳ್ಳಲು ಪ್ರೋತ್ಸಾಹಿಸಿದ್ದೇನೆ. ಇಂತಹದ್ದೇ ಸಾಕಷ್ಟು ಸ್ತ್ರೀ ಪರ ಕಾರ್ಯದಲ್ಲಿಯೂ ತೊಡಗಿಸಿಕೊಂಡಿದ್ದೇನೆ.
ವಿಶ್ವವಾಣಿ ನ್ಯೂಸ್: ನೀವು ಮಾಡೆಲಿಂಗ್‌ನಲ್ಲಿದ್ದೀರಾ?
ಶೀಲಾ ಯೋಗೇಶ್ವರ್: ಪ್ರೊಫೆಷನಲ್ ಆಗಿ ಕ್ಷೇತ್ರಕ್ಕೆ ಕಾಲಿಟ್ಟಿಲ್ಲ. ಆದರೆ, ಬಹಳಷ್ಟು ವರ್ಷಗಳ ಹಿಂದೆ ಕೆಎಸ್ಐಸಿ ಗಾಗಿ ಬ್ರಾಂಡ್ ಅಂಬಾಸಡರ್ ಆಗಿ ಕಾಣಿಸಿಕೊಂಡಿದ್ದೆ. ನಟ, ಮಾಡೆಲ್ ಮಿಲಿಂದ್ ಸುಮನ್ ಅವರ ನೇತೃತ್ವದಲ್ಲಿ ನಡೆದಿದ್ದ ಪಿಂಕಾಥಾನ್‌ನಲ್ಲಿ ಪಾಲ್ಗೊಂಡಿದ್ದೆ. ಫ್ಯಾಷನ್ ನನ್ನ ಪ್ಯಾಷನ್ ಹಾಗಾಗಿ ಸಾಕಷ್ಟು ಬಾರಿ ಫ್ಯಾಷೆನಬಲ್ ಫೋಟೋಶೂಟ್‌ಗಳಲ್ಲಿ ಕಾಣಿಸಿಕೊಂಡಿದ್ದೇನೆ.

ವಿಶ್ವವಾಣಿ ನ್ಯೂಸ್: ನಿಮ್ಮ ಫಿಟ್ನೆಸ್ ಸೀಕ್ರೆಟ್?
ಶೀಲಾ ಯೋಗೇಶ್ವರ್: ಪ್ರತಿದಿನ ಬೆಳಗ್ಗೆ-ಸಂಜೆ ಸ್ಟ್ರೆಂತ್ ಟ್ರೈನಿಂಗ್ ಏರೋಬಿಕ್ಸ್, ಜುಂಬಾ ಸೇರಿದಂತೆ ಫಿಟ್ನೆಸ್ ಟ್ರೈನಿಂಗ್‌ನಲ್ಲಿ ನಿರತಳಾಗುತ್ತೇನೆ.
ವಿಶ್ವವಾಣಿ ನ್ಯೂಸ್: ನಿಮ್ಮ ಕುದುರೆ ಸವಾರಿ ನೋಡಿದರೆ ಖುಷಿಯಾಗುತ್ತದಲ್ಲ?
ಶೀಲಾ ಯೋಗೇಶ್ವರ್: ನಮ್ಮ ಫಾರ್ಮ್ ಹೌಸ್‌ನಲ್ಲಿ ಸುಮಾರು 25 ಕ್ಕೂ ಹೆಚ್ಚು ಕುದುರೆಗಳಿವೆ. ಆಗಾಗ್ಗೆ ಸವಾರಿ ಮಾಡುವುದು ನನಗಿಷ್ಟ.
ವಿಶ್ವವಾಣಿ ನ್ಯೂಸ್: ನಿಮ್ಮ ಹವ್ಯಾಸ?
ಶೀಲಾ ಯೋಗೇಶ್ವರ್: ಸಾಕಷ್ಟಿವೆ. ಅವುಗಳಲ್ಲಿ ಸಾಕು ಪ್ರಾಣಿಗಳೊಂದಿಗೆ ಕಾಲ ಕಳೆಯುವುದೂ ನನಗಿಷ್ಟವಾದ ಹವ್ಯಾಸ.
ವಿಶ್ವವಾಣಿ ನ್ಯೂಸ್: ನಿಮ್ಮ ಲೈಫ್ ಮಂತ್ರ ಏನು?
ಶೀಲಾ ಯೋಗೇಶ್ವರ್: ಸದಾ ನಗುನಗುತ್ತಾ ಜೀವನವನ್ನು ಸ್ವೀಕರಿಸುವುದು, ನಮ್ಮನ್ನು ನಾವು ಪ್ರೀತಿಸುವುದು.

ವಿಶ್ವವಾಣಿ ನ್ಯೂಸ್: ನಿಮ್ಮನ್ನು ಫಾಲೋ ಮಾಡುವ ಅಭಿಮಾನಿ ಮಹಿಳೆಯರಿಗೆ ನೀವು ಹೇಳುವುದೇನು?
ಶೀಲಾ ಯೋಗೇಶ್ವರ್: ಮೊದಲು ನಿಮ್ಮ ಆರೋಗ್ಯದ ಬಗ್ಗೆ ಕಾಳಜಿವಹಿಸಿ ಫಿಟ್ನೆಸ್‌ಗೆ ಆದ್ಯತೆ ನೀಡಿ. ಮೊದಲು ನಿಮ್ಮನ್ನು ನೀವು ಪ್ರೀತಿಸಿ.
(ಲೇಖಕಿ: ಫ್ಯಾಷನ್ ಪತ್ರಕರ್ತೆ)
ಈ ಸುದ್ದಿಯನ್ನೂ ಓದಿ | Midi Ring Fashion 2025: ಕೈ ಬೆರಳುಗಳ ತುದಿ ತಲುಪಿದ ಫ್ಯಾಷೆನಬಲ್ ಮಿಡಿ ರಿಂಗ್ಸ್!