ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Monk the Young Movie: ವಿಭಿನ್ನ ಕಥಾಹಂದರವುಳ್ಳ ʼಮಾಂಕ್ ದಿ ಯಂಗ್ʼ ಚಿತ್ರ ಫೆ.28ಕ್ಕೆ ರಿಲೀಸ್‌

Monk the Young Movie: ವಿಭಿನ್ನ ಕಥಾಹಂದರ ಹೊಂದಿರುವ ʼಮಾಂಕ್ ದಿ ಯಂಗ್ʼ ಚಿತ್ರ ಈ ವಾರ ಫೆಬ್ರವರಿ 28 ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ. ಸರೋವರ್ ನಾಯಕನಾಗಿ ನಟಿಸಿರುವ ಈ ಚಿತ್ರದ ನಾಯಕಿ ಸೌಂದರ್ಯ ಗೌಡ. ತೆಲುಗು ಹಾಗೂ ತಮಿಳಿನ ಪ್ರಸಿದ್ದ ನಟ ಬಬ್ಲೂ ಪೃಥ್ವಿರಾಜ್, ಈ ಚಿತ್ರದ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ವಿಭಿನ್ನ ಕಥಾಹಂದರವುಳ್ಳ ʼಮಾಂಕ್ ದಿ ಯಂಗ್ʼ ಚಿತ್ರ ಫೆ.28ಕ್ಕೆ ರಿಲೀಸ್‌

Profile Siddalinga Swamy Feb 25, 2025 12:58 PM

ಬೆಂಗಳೂರು: ಹೊಸ ತಂಡ ಸೇರಿ ನಿರ್ಮಿಸಿರುವ, ವಿಭಿನ್ನ ಕಥಾಹಂದರ ಹೊಂದಿರುವ ʼಮಾಂಕ್ ದಿ ಯಂಗ್ʼ ಚಿತ್ರ (Monk the Young Movie) ಈ ವಾರ ಫೆಬ್ರವರಿ 28 ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ. ಕೆ.ಆರ್.ಜಿ ಸ್ಟುಡಿಯೋಸ್ ಅವರು ವಿತರಣೆ ಮಾಡುತ್ತಿದ್ದಾರೆ. ಈಗಾಗಲೇ ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿರುವ ಚಿತ್ರದ ಹಾಡುಗಳು, ಟೀಸರ್ ಹಾಗೂ ಟ್ರೇಲರ್ ಜನರ ಮನ ತಲುಪಿದೆ. ಸ್ವಾಮಿನಾಥನ್ ರಾಮಕೃಷ್ಣ ಹಾಗೂ ಸುಪ್ರೀತ್ ಫಾಲ್ಗುಣ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಈವರೆಗೂ ಕನ್ನಡದಲ್ಲಿ ಅಪರೂಪ ಎನ್ನಬಹುದಾದ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಮಾಸ್ಚಿತ್ ಸೂರ್ಯ ನಿರ್ದೇಶಿಸಿದ್ದಾರೆ.

ಸರೋವರ್ ಅವರು ನಾಯಕನಾಗಿ ನಟಿಸಿರುವ ಈ ಚಿತ್ರದ ನಾಯಕಿ ಸೌಂದರ್ಯ ಗೌಡ. ತೆಲುಗು ಹಾಗೂ ತಮಿಳಿನ ಪ್ರಸಿದ್ದ ನಟ ಬಬ್ಲೂ ಪೃಥ್ವಿರಾಜ್ ಅವರು ಈ ಚಿತ್ರದ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದು, ಉಷಾ ಭಂಡಾರಿ, ಪ್ರಣಯ ಮೂರ್ತಿ ಮುಂತಾದವರು ತಾರಾಬಳಗದಲ್ಲಿದ್ದಾರೆ. ನಿವೃತ್ತ ಆರ್ಮಿ ಆಫೀಸರ್ ಕರ್ನಲ್ ರಾಜೇಂದ್ರನ್, ವಿನಯ್ ಬಾಬು ರೆಡ್ಡಿ ಶೆಟ್ಟಿಹಳ್ಳಿ, ಗೋಪಿಚಂದ್, ಲಾಲ್ ಚಂದ್ ಖತಾರ್ ಮತ್ತು ಸರೋವರ್ ಐದು ಜನ ಸೇರಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ನಿರ್ಮಾಪಕರೆಲ್ಲಾ ಈ ಚಿತ್ರದಲ್ಲಿ ನಟನೆಯನ್ನೂ ಮಾಡಿರುವುದು ವಿಶೇಷ.

ಈ ಸುದ್ದಿಯನ್ನೂ ಓದಿ | Celebrity Womens Kabbadi League: ʼಸಿಡಬ್ಲ್ಯುಕೆಎಲ್‌ʼ ಲೋಗೊ ಅನಾವರಣ ಮಾಡಿದ ಅಶ್ವಿನಿ ಪುನೀತ್ ರಾಜಕುಮಾರ್

ಕಾರ್ತಿಕ್ ಶರ್ಮ ಛಾಯಾಗ್ರಹಣ, ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ, ಕ್ಲೈಮಾಕ್ಸ್ ಛಾಯಾಗ್ರಹಣ ದೀಪಕ್ ಹಾಗೂ ಧನುಷ್ ಬೆದ್ರೆ ಅವರ ಸಂಕಲನ ಹರ್ಷವರ್ಧನ್ ಏ ಎಲ್ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.