Kiccha Sudeep: ಕಿಚ್ಚ ಸುದೀಪ್ ರಿಜೆಕ್ಟ್ ಮಾಡಿದ ಬ್ಲಾಕ್‌ಬಸ್ಟರ್ ಸಿನಿಮಾಗಳಿವು!
ರಂಗಿತರಂಗ , ರಾಜರಥ’ ಹಾಗೂ ‘ವಿಕ್ರಾಂತ್ ರೋಣ’ ಸಿನಿಮಾ ನಿರ್ದೇಶಿಸಿದ್ದ ಅನೂಪ್ ಭಂಡಾರಿ ಆ್ಯಕ್ಷನ್ ಕಟ್ ಹೇಳುತ್ತಿರುವ ಪ್ಯಾನ್ ಇಂಡಿಯಾ ಸಿನಿಮಾ ‘ಬಿಲ್ಲ ರಂಗ ಚಿತ್ರದ ಮೂಲಕ ಕಿಚ್ಚ ಸುದೀಪ್ ಮತ್ತೆ ಭರ್ಜರಿಯಾಗಿ ಕಂಬ್ಯಾಕ್ ಮಾಡಲಿದ್ದಾರೆ. ಇದೀಗ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರಿಜೆಕ್ಟ್ ಮಾಡಿದ ಕೆಲವು ಸಿನಿಮಾಗಳ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಈ ಬಗ್ಗೆ ಕಂಪ್ಲಿಟ್ ಮಾಹಿತಿ ಇಲ್ಲಿದೆ.


ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ದೊಡ್ಡ ಮಟ್ಟದ ಹೈಪ್ ಕ್ರಿಯೇಟ್ ಮಾಡಿರೋ ನಟ ಅಂದ್ರೆ ಕಿಚ್ಚ ಸುದೀಪ್ (Kiccha Sudeep) ಕನ್ನಡ ಚಿತ್ರರಂಗಕ್ಕೆ ಹಲವಾರು ಹಿಟ್ ಸಿನಿಮಾ ನೀಡಿರುವ ಸುದೀಪ್ ಪರಭಾಷೆಯಲ್ಲೂ ನಟನೆ ಮಾಡಿ ಫೇಮ್ ಗಿಟ್ಟಿಸಿಕೊಂಡಿದ್ದಾರೆ. ಇದೀಗ ಮ್ಯಾಕ್ಸ್’ ಸಿನಿಮಾ ಬಳಿಕ ನಟ ಕಿಚ್ಚ ಸುದೀಪ್ ಹೊಸ ಪ್ರಾಜೆಕ್ಟ್ ಆರಂಭಿಸಿದ್ದಾರೆ. ರಂಗಿತ ರಂಗ , ರಾಜರಥ’ ಹಾಗೂ ‘ವಿಕ್ರಾಂತ್ ರೋಣ’ಸಿನಿಮಾ ನಿರ್ದೇಶಿಸಿದ್ದ ಅನೂಪ್ ಭಂಡಾರಿ ಆ್ಯಕ್ಷನ್ ಕಟ್ ಹೇಳುತ್ತಿರುವ ಪ್ಯಾನ್ ಇಂಡಿಯಾ ಸಿನಿಮಾ ‘ಬಿಲ್ಲ ರಂಗ' ಚಿತ್ರದ ಮೂಲಕ ಕಿಚ್ಚ ಸುದೀಪ್ ಮತ್ತೆ ಭರ್ಜರಿಯಾಗಿ ಕಂಬ್ಯಾಕ್ ಮಾಡಲಿದ್ದಾರೆ. ಇದೀಗ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರಿಜೆಕ್ಟ್ ಮಾಡಿದ ಕೆಲವು ಸಿನಿಮಾಗಳ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಈ ಬಗ್ಗೆ ಕಂಪ್ಲಿಟ್ ಮಾಹಿತಿ ಇಲ್ಲಿದೆ.
ಅಮೆರಿಕಾ ಅಮೆರಿಕಾ:
ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನ ಮಾಡಿರುವ ಹಿಟ್ ಸಿನಿಮಾ 'ಅಮೆರಿಕಾ ಅಮೆರಿಕಾ' ಚಿತ್ರ ಇದರಲ್ಲಿ ನಟ ಸುದೀಪ್ ಅಭಿಯನಯಿಸಬೇಕಿತ್ತು. ಅಕ್ಷಯ್ ಆನಂದ್ ನಿರ್ವಹಿಸಿದ್ದ ಶಶಾಂಕ್ ಪಾತ್ರಕ್ಕೆ ಈ ಮೊದಲು ಕಿಚ್ಚ ಸುದೀಪ್ ಅವರನ್ನು ಕೇಳಲಾಗಿತ್ತು. ಆದರೆ, ಕಾರಣಂತರ ಗಳಿಂದ ಸುದೀಪ್ ಈ ಸಿನಿಮಾ ಮಾಡಲು ಒಪ್ಪಲಿಲ್ಲ.. ಈ ಸಿನಿಮಾದಲ್ಲಿ ರಮೇಶ್ ಅರವಿಂದ್ ಮತ್ತು ಅಕ್ಷಯ್ ಆನಂದ್ ಪ್ರಮುಖ ಪಾತ್ರದಲ್ಲಿ ನಟಿಸಿ ಹಿಟ್ ಆಗಿತ್ತು.
ಬಿಮ್ಲಾ ನಾಯಕ್:
2022ರಲ್ಲಿ ಬಿಡುಗಡೆ ಆದ ಬಿಮ್ಲಾ ನಾಯಕ್ ಸಿನಿಮಾ ಕೂಡ ಹಿಟ್ ಲೀಸ್ಟ್ ಸೇರಿತ್ತು. ಪವನ್ ಕಲ್ಯಾಣ್ ನಾಯಕನಾಗಿ ನಟಿಸಿದ್ದ ಈ ಸಿನಿಮಾಕ್ಕೂ ಸುದೀಪ್ ಗೆ ಆಫರ್ ಬಂದಿತ್ತು. ಇದು ಮಲಯಾಳಂನ ಅಯ್ಯಪ್ಪನುಮ್ ಕೋಶಿಯುಮ್ ಚಿತ್ರದ ರಿಮೇಕ್ ಆಗಿದ್ದು ಚಿತ್ರದಲ್ಲಿ ಅಯ್ಯಪ್ಪನ್ ಪಾತ್ರವನ್ನು ಬಿಜು ಮೆನನ್ ಹಾಗೂ ಕೋಶಿಯುಮ್ ಪಾತ್ರವನ್ನು ಪೃಥ್ವಿರಾಜ್ ಮಾಡಿದ್ದರು 'ಬಿಮ್ಲಾ ನಾಯಕ್' ಚಿತ್ರದಲ್ಲಿ ಕಿಚ್ಚನಿಗೂ ಆಫರ್ ಬಂದಿತ್ತು ಎಂಬ ಸುದ್ದಿ ವೈರಲ್ ಆಗಿತ್ತು. ಆದರೆ, ಸುದೀಪ್ ಆ ಪಾತ್ರ ಮಾಡಲು ಒಪ್ಪಲಿಲ್ಲ.
ಆಚಾರ್ಯ:
ಚಿರಂಜೀವಿ ಅಭಿನಯದ 'ಆಚಾರ್ಯ' ಸಿನಿಮಾದಲ್ಲೂ ಪ್ರಮುಖ ಪಾತ್ರಕ್ಕಾಗಿ ಸುದೀಪ್ ಅವರನ್ನು ಕೇಳಲಾಗಿತ್ತು. ನಿರ್ದೇಶಕ ಕೊರಟಲಾ ಶಿವ ಕಿಚ್ಚನ ಬಳಿ ಕೇಳಿದ್ದು, ಸುದೀಪ್ ಈ ಚಿತ್ರದ ನಟನೆಗೆ ಒಪ್ಪಿಗೆ ನೀಡಿರಲಿಲ್ಲ.ಇದಕ್ಕೂ ಮುನ್ನ ಸುದೀಪ್ 'ಸೈರಾ ನರಸಿಂಹ ರೆಡ್ಡಿ' ಸಿನಿಮಾದಲ್ಲಿ ಚಿರಂಜೀವಿ ಜೊತೆ ನಟನೆ ಮಾಡಿದ್ದರು.
ಮಾನಾಡು ಚಿತ್ರ:
ಇನ್ನು ತಮಿಳಿನ ನಿರ್ದೇಶಕ ವೆಂಕಟ್ ಪ್ರಭು ನಿರ್ದೇಶನದ 'ಮಾನಾಡು' ಸಿನಿಮಾದ ವಿಲನ್ ಪಾತ್ರಕ್ಕಾಗಿ ಕಿಚ್ಚ ಸುದೀಪ್‌ಗೆ ಕೇಳಲಾಗಿತ್ತು. ಆದರೆ, ಸಿಂಬು ನಾಯಕನಾಗಿ ನಟಿಸಿದ್ದ ಈ ಸಿನಿಮಾದಲ್ಲಿ ನಟಿಸಲು ಅಭಿನಯ ಚಕ್ರವರ್ತಿ ಒಪ್ಪಲಿಲ್ಲ ಎನ್ನುವ ಸುದ್ದಿಯು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇದನ್ನು ಓದಿ: Devil Movie: ಡಿ ಬಾಸ್ ಫ್ಯಾನ್ಸ್‌ಗೆ ಗುಡ್‌ನ್ಯೂಸ್- ರಾಜಧಾನಿಯಲ್ಲಿ ಡೆವಿಲ್ ಚಿತ್ರ ಶೂಟಿಂಗ್!
ರೈ ಸಿನಿಮಾ:
ಅದೇ ರೀತಿ ರಾಮ್ ಗೋಪಲ್ ವರ್ಮಾ ನಿರ್ದೇಶನದ 'ರೈ' ಎಂಬ ಸಿನಿಮಾ ಹಿಟ್ ಲೀಸ್ಟ್ ಗಳಿಸಿತ್ತು. ಭೂಗತ ಲೋಕದ ದೊರೆ ಮುತ್ತಪ್ಪ ರೈ ನಿಜಜೀವನದ ಕಥೆಯನ್ನು ಆಧರಿಸಿರುವ ಈ ಸಿನಿಮಾದಲ್ಲಿ ಸುದೀಪ್‌ಗೆ ನಟಿಸಲು ಅವಕಾಶ ನೀಡ ಲಾಗಿತ್ತು. ಆದರೆ, ಈ ಸಿನಿಮಾವನ್ನು ನಟ ಸುದೀಪ್ ರಿಜೆಕ್ಟ್ ಮಾಡಿದ್ದರು. ನಂತರ ವಿವೇಕ್ ಒಬೆರಾಯ್ ಈ ಚಿತ್ರ ಒಪ್ಪಿಕೊಂಡಿದ್ದಾರೆ.
ಸದ್ಯ ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಬಿಲ್ಲ ರಂಗ ಚಿತ್ರದ ಶೂಟಿಂಗ್ ಆರಂಭವಾಗಿದೆ.ಜೊತೆಗೆ ಸುದೀಪ್ ಅವರ ಫಸ್ಟ್ ಲುಕ್'ನ್ನೂ ಬಿಡುಗಡೆ ಮಾಡಿದ್ದು ಅಭಿಮಾನಿಗಳು ಮತ್ತಷ್ಟು ಎಕ್ಸೈಟ್ ಆಗಿದ್ದಾರೆ.. ಬಿಲ್ಲ ರಂಗ ಬಾಷ ದೊಡ್ಡ ಬಜೆಟ್ ನೊಂದಿಗೆ ಕನ್ನಡ, ತೆಲುಗು, ಹಿಂದಿ ಮೊದಲಾದ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಚಿತ್ರವನ್ನು ಅನೂಪ್ ಭಂಡಾರಿ ನಿರ್ದೇಶಿಸುತ್ತಿದ್ದು, ಸುಪ್ರಿಯಾನ್ವಿ ಪಿಕ್ಚರ್ ಸ್ಟುಡಿಯೋ ಮತ್ತು ಕೆಎಸ್‌ಕೆ ಶೋ ರೀಲ್ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಿಸಲಾಗುತ್ತಿದೆ.