ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Prema Sankranthi: ದಗ್ಗುಬಾಟಿ ವೆಂಕಟೇಶ್ ನಟನೆಯ ಪ್ರೇಮ ಸಂಕ್ರಾತಿ ಇದೇ ಎ.27ಕ್ಕೆ ಕಿರುತೆರೆಯಲ್ಲಿ ಪ್ರಸಾರ!..

ತೆಲುಗಿನಲ್ಲಿ ತೆರೆಕಂಡ ದಗ್ಗುಬಾಟಿ ವೆಂಕಟೇಶ್ ನಟಿಸಿದ ಸೂಪರ್ ಹಿಟ್ ಸಿನೆಮಾ ಪ್ರೇಮ ಸಂಕ್ರಾಂತಿ ಏಪ್ರಿಲ್ 27 ರಂದು ಸಂಜೆ 4:30 ಕ್ಕೆ ಮೊದಲ ಬಾರಿಗೆ ಕನ್ನಡಿಗರನ್ನು ಮನರಂಜಿಸಲು ಝೀ ಕನ್ನಡದಲ್ಲಿ ಪ್ರಸಾರ ಆಗುತ್ತಿದೆ. ಚಿತ್ರಮಂದಿರಗಳಲ್ಲಿ ಬ್ಲಾಕ್ಬಸ್ಟರ್ ಹಿಟ್ ಆಗಿದ್ದ ಸಂಕ್ರಾಂತಿಕಿ ವಸ್ತುನ್ನಾಂ ತೆಲುಗು ಸಿನಿಮಾ ಈಗಾಗಲೇ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಒಟಿಟಿಯಲ್ಲಿಯೂ ಬಿಡುಗಡೆಯಾಗಿತ್ತು. ಇದೀಗ ಈ ಸಿನಿಮಾ ಕನ್ನಡ ಕಿರುತೆರೆಯಲ್ಲಿ ಹೊಸ ಹೆಸರಿನೊಂದಿಗೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ.

ಇದೇ ವಾರಾಂತ್ಯಕ್ಕೆ ಝೀ ಕನ್ನಡದಲ್ಲಿ ಪ್ರೇಮ ಸಂಕ್ರಾಂತಿ!..

Prema Sankranthi

Profile Pushpa Kumari Apr 25, 2025 6:59 PM

ಬೆಂಗಳೂರು; ಮನರಂಜನೆ ಮೂಲಕ ಪ್ರಸಿದ್ಧಿ ಯಾಗಿರುವ ಝೀ ಕನ್ನಡ ಇದೀಗ ಮತ್ತೊಂದು ಗುಡ್ ನ್ಯೂಸ್ ನೀಡುತ್ತಿದೆ. ಹೌದು, ತೆಲುಗಿನಲ್ಲಿ ತೆರೆಕಂಡ ದಗ್ಗುಬಾಟಿ ವೆಂಕಟೇಶ್ ನಟಿಸಿದ ಸೂಪರ್ ಹಿಟ್ ಸಿನೆಮಾ ಪ್ರೇಮ ಸಂಕ್ರಾಂತಿ (Prema Sankranthi) ಏಪ್ರಿಲ್ 27 ರಂದು ಸಂಜೆ 4:30 ಕ್ಕೆ ಮೊದಲ ಬಾರಿಗೆ ಕನ್ನಡಿಗರನ್ನು ಮನರಂಜಿಸಲು ಝೀ ಕನ್ನಡದಲ್ಲಿ ಪ್ರಸಾರ ಆಗುತ್ತಿದೆ.ಚಿತ್ರಮಂದಿರಗಳಲ್ಲಿ ಬ್ಲಾಕ್ಬಸ್ಟರ್ ಹಿಟ್ ಆಗಿದ್ದ ಸಂಕ್ರಾಂತಿಕಿ ವಸ್ತುನ್ನಾಂ ತೆಲುಗು ಸಿನಿಮಾ ಈಗಾಗಲೇ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಒಟಿಟಿಯಲ್ಲಿಯೂ ಬಿಡುಗಡೆಯಾಗಿತ್ತು. ಇದೀಗ ಈ ಸಿನಿಮಾ ಕನ್ನಡ ಕಿರುತೆರೆಯಲ್ಲಿ ಹೊಸ ಹೆಸರಿನೊಂದಿಗೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ.

ಅಮೆರಿಕಾದ ರಿಚ್ ಬಿಸಿನೆಸ್ ಮ್ಯಾನ್ ದೊಡ್ಡ ಕಂಪನಿ ಸಿಇಓ ಸತ್ಯ ಹೈದರಾಬಾದ್ ಗೆ ಬರ್ತಾನೆ. ಆತನನ್ನು ಸುರಕ್ಷಿತವಾಗಿ ವಾಪಸ್ ಕಳುಹಿಸಬೇಕಾಗಿರುವುದು ಮುಖ್ಯಮಂತ್ರಿ ಜವಾಬ್ದಾರಿ ಆಗಿರುತ್ತದೆ. ಅಷ್ಟರಲ್ಲಿ ಆತನನ್ನು ಬಿಜು ಪಾಂಡೆ ಅಪಹರಿಸು ತ್ತಾನೆ ಮತ್ತು ಆತ ತನ್ನ ಸದಸ್ಯ ಪಾಪ ಪಾಂಡೆಯನ್ನು ಆತನಿಗೆ ಒಪ್ಪಿಸಿದರೆ ಮಾತ್ರ ಸತ್ಯನನ್ನು ಬಿಟ್ಟುಕೊಡುವುದಾಗಿ ಬ್ಲಾಕ್ಮೇಲ್ ಮಾಡ್ತಾನೆ. IPS ಆಫೀಸರ್ ಮೀನಾಕ್ಷಿ ಸತ್ಯನನ್ನು ಬಿಡಿಸುವ ಜವಾಬ್ದಾರಿಯನ್ನು ಒಪ್ಪಿಕೊಂಡಿರುತ್ತಾಳೆ. ಇದಕ್ಕೆ ತನ್ನ ಮಾಜಿ ಪ್ರಿಯಕರ ಸಸ್ಪೆನ್ಡ್ ಆಗಿರೋ ಡಿಸಿಪಿ ರಾಜುವಿನ ನೆರವು ಕೇಳ್ತಾಳೆ. ಆದ್ರೆ ರಾಜು ಹಳೆಯದೆಲ್ಲವನ್ನು ಮರೆತು ಹೆಂಡ್ತಿ ಮಕ್ಕಳ ಜೊತೆ ಸುಖವಾಗಿ ಬಾಳ್ತಿರ್ತಾನೆ. ಮೀನಾಕ್ಷಿ ರಾಜುವನ್ನು ಹೇಗೆ ಒಪ್ಪಿಸ್ತಾಳೆ? ರಾಜು ಸತ್ಯನ ರಕ್ಷಣೆ ಮಾಡ್ತಾನಾ ಅನ್ನೋದೇ ಈ ಸಿನೆಮಾದ ಕಥೆ ಯಾಗಿದೆ.

ಇದನ್ನು ಓದಿ: Suthradhari Movie: ಸಿನಿಮಾ ಬಿಡುಗಡೆಗೂ ಮುನ್ನ ತಿರುಪತಿ ತಿಮ್ಮಪ್ಪನ ದರ್ಶನ ಮಾಡಿದ ʼಸೂತ್ರಧಾರಿʼ ಚಿತ್ರತಂಡ

ಅನಿಲ್ ರಾವಿಪುಡಿ ನಿರ್ದೇಶಿಸಿ ದುಗ್ಗುಬಾಟಿ ವೆಂಕಟೇಶ್ ನಾಯಕನಟನಾಗಿ ನಟಿಸಿರುವ ಪ್ರೇಮ ಸಂಕ್ರಾಂತಿ ಚಿತ್ರದಲ್ಲಿ ಐಶ್ವರ್ಯ ರಾಜೇಶ್, ಮೀನಾಕ್ಷಿ ಚೌಧರಿ, ನರೇಶ್, ಸಾಯಿ ಕುಮಾರ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಈ ಸಿನೆಮಾ ಫ್ಯಾಮಿಲಿ ಎಂಟರ್ಟೈನ್ಮೆಂಟ್ ಆಗಿದ್ದು, ದುಗ್ಗುಬಾಟಿ ವೆಂಕಟೇಶ್, ಐಶ್ವರ್ಯ ರಾಜೇಶ್ ಹಾಗು ಮೀನಾಕ್ಷಿ ಅವರ ಸಕತ್ ಅಭಿನಯ ಪ್ರೇಕ್ಷಕರನ್ನು ಮನಸೂರೆಗೊಳಿಸುವಲ್ಲಿ ಯಾವುದೇ ಸಂಶಯವಿಲ್ಲ.ಇದೀಗ ಏಪ್ರಿಲ್ 27 ರಂದು ಝೀ ಕನ್ನಡದಲ್ಲಿ ಈ ಸಿನಿಮಾ ಪ್ರಸಾರವಾಗಲಿದ್ದು ಸಿನಿ ಪ್ರಿಯರನ್ನು ಮನರಂಜಿಸಲಿದೆ.