Dhurandhar: ಧುರಂಧರ್ ಚಿತ್ರದ ಫಸ್ಟ್ ಲುಕ್ ಔಟ್- ರಣವೀರ್ ಸಿಂಗ್ ಉಗ್ರಾವತಾರಕ್ಕೆ ಫ್ಯಾನ್ಸ್ ಫುಲ್ ಫಿದಾ!
ಬಾಲಿವುಡ್ ನಟ ರಣವೀರ್ ಸಿಂಗ್ ಅವರ ಜನ್ಮದಿನದಂದು ಧುರಂಧರ್ ಚಿತ್ರದ ಫಸ್ಟ್ ಲುಕ್ ಬಿಡುಗಡೆಗೊಂಡಿದೆ. ಟೀಸರ್‌ನಲ್ಲಿ ರಣವೀರ್ ಸಿಂಗ್ ರಗಡ್ ಅವತಾರದಲ್ಲಿ ಕಾಣಿಸಿಕೊಂಡಿದ್ದು ಚಿತ್ರದ ಬಗ್ಗೆ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ. ಟೀಸರ್‌ನಲ್ಲಿ ರಣವೀರ್ ಸಿಂಗ್ ರಗಡ್ ಅವತಾರದಲ್ಲಿ ಕಾಣಿಸಿಕೊಂಡಿದ್ದು ಚಿತ್ರದ ಬಗ್ಗೆ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ. ಉದ್ದ ಕೂದಲಿನ ಜೊತೆ ರಕ್ತ ಸಿಕ್ತವಾದ ಅವತಾರದಲ್ಲಿ ರಣವೀರ್ ಗ್ಯಾಂಗ್‌ಸ್ಟರ್‌ನಂತೆ ಕಾಣಿಸಿಕೊಂಡಿದ್ದಾರೆ.


ನವದೆಹಲಿ: ಬಾಲಿವುಡ್ ನಟ ರಣವೀರ್ ಸಿಂಗ್ ಅವರ ಜನ್ಮದಿನದಂದು ಧುರಂಧರ್ (Dhurandhar) ಚಿತ್ರದ ಫಸ್ಟ್ ಲುಕ್ ಬಿಡುಗಡೆಗೊಂಡಿದೆ. ಟೀಸರ್‌ನಲ್ಲಿ ರಣವೀರ್ ಸಿಂಗ್ (Ranveer Singh) ರಗಡ್ ಅವತಾರದಲ್ಲಿ ಕಾಣಿಸಿಕೊಂಡಿದ್ದು ಚಿತ್ರದ ಬಗ್ಗೆ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ. ಉದ್ದ ಕೂದಲಿನ ಜೊತೆ ರಕ್ತ ಸಿಕ್ತವಾದ ಅವತಾರದಲ್ಲಿ ರಣವೀರ್ ಗ್ಯಾಂಗ್ ಸ್ಟರ್‌ನಂತೆ ಕಾಣಿಸಿ ಕೊಂಡಿದ್ದಾರೆ. ಸಿಗರೇಟ್ ಎಳೆಯುತ್ತಾ, ಗನ್ ಹಿಡಿದು ಆರ್ಭಟಿಸಿದ್ದಾರೆ. ಧುರಂಧರ್ ಚಿತ್ರ ದಲ್ಲಿ ರಣವೀರ್ ಲುಕ್‌ಗೆ ಫ್ಯಾನ್ಸ್ ವೈಟಿಂಗ್ ನಲ್ಲಿದ್ದರು. ಇಂದು ರಣವೀರ್ ಹುಟ್ಟುಹಬ್ಬದ ದಿನದಂದೇ ಫಸ್ಟ್ ಲುಕ್ ಬಿಡುಗಡೆ ಮಾಡಲಾಗಿದ್ದು ಫ್ಯಾನ್ಸ್ ಮತ್ತಷ್ಟು ಎಕ್ಸೈಟ್ ಆಗಿದ್ದಾರೆ.
ಧುರಂಧರ್ ಸಿನಿಮಾ ಘೋಷಣೆಯಾದಾಗಿನಿಂದ ಹೆಚ್ಚು ಸುದ್ದಿಯಲ್ಲಿದೆ. ಚಿತ್ರದಲ್ಲಿ ಅನೇಕ ಖ್ಯಾತ ನಟರು ಕಾಣಿಸಿಕೊಳ್ಳಲಿದ್ದು ಆರ್. ಮಾಧವನ್, ಸಂಜಯ್ ದತ್, ಅರ್ಜುನ್ ರಾಂಪಾಲ್ ಮತ್ತು ಅಕ್ಷಯ್ ಖನ್ನಾ ಸೇರಿದಂತೆ ಹಲವಾರು ಇದ್ದಾರೆ. 'ಧುರಂಧರ್' ಚಿತ್ರವು ಡಿಸೆಂಬರ್ 5, 2025 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಯಾಗಲಿದ್ದು 'ಉರಿ: ದಿ ಸರ್ಜಿಕಲ್ ಸ್ಟ್ರೈಕ್' ನಂತಹ ಸೂಪರ್‌ಹಿಟ್ ಚಿತ್ರಗಳನ್ನು ನೀಡಿರುವ ಆದಿತ್ಯ ಧಾರ್ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ.
ರಣವೀರ್ ಸಿಂಗ್ 'ಧುರಂಧರ್' ಚಿತ್ರದಲ್ಲಿ ಇದುವರೆಗೆ ಕಾಣಿಸಿಕೊಳ್ಳದಂತಹ ಅತ್ಯಂತ ಉಗ್ರ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಟೀಸರ್ ನಲ್ಲಿ ರಣವೀರ್ ಮುಖ ಉಗ್ರವಾಗಿದ್ದು, ಉದ್ದನೆಯ ಕೂದಲು ಮತ್ತು ದಪ್ಪ ಗಡ್ಡ ಮೂಲಕ ರಗಡ್ ಅವರತಾರದಲ್ಲಿ ಕಾಣಿಸಿಕೊಂಡಿದ್ದಾರೆ. ರಣವೀರ್ ಸಿಗರೇಟ್ ಎಳೆಯುತ್ತಾ, ಗನ್ ಹಿಡಿದು ಆರ್ಭಟಿಸಿದ್ದಾರೆ. ರಕ್ತಸಿಕ್ತ ಅವತಾರದಲ್ಲಿ ಕಂಪ್ಲೀಟ್ ಮಾಸ್ ಲುಕ್‌ನಲ್ಲಿ ರಣವೀರ್ ಎಂಟ್ರಿ ನೀಡಿದ್ದಾರೆ. ರಣವೀರ್ ಸಿಂಗ್ ಜೊತೆಗೆ ಸಂಜಯ್ ದತ್, ಅಕ್ಷಯ್ ಖನ್ನಾ ಕೂಡ ಕಾಣಿಸಿಕೊಂಡಿದ್ದಾರೆ.ಚಿತ್ರದ ಮೊದಲ ಲುಕ್ ನೋಡಿದ ಅಭಿಮಾನಿಗಳು ಸೋಷಿಯಲ್ ಮೀಡಿ ಯಾದಲ್ಲಿ ನಾನಾ ಬಗೆಯ ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ:Jockey 42 Movie: ನಟ ಕಿರಣ್ ರಾಜ್ ಹುಟ್ಟುಹಬ್ಬಕ್ಕೆ ಗುಡ್‌ನ್ಯೂಸ್ ಕೊಟ್ಟ ನಿರ್ದೇಶಕ ಗುರುತೇಜ್ ಶೆಟ್ಟಿ
ಬಳಕೆದಾರೊಬ್ಬರು ಕೊನೆಗೂ, ರಣವೀರ್ ಸಿಂಗ್ ಎಂಟ್ರಿ ಮಸ್ತ್ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಅಭಿಮಾನಿ ಇದು ಬೆಂಕಿ ಎಂಟ್ರಿ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಜಿಯೋ ಸ್ಟುಡಿಯೋಸ್ ಪ್ರಸ್ತುತಪಡಿಸುವ, ಬಿ62 ಸ್ಟುಡಿಯೋಸ್ ನಿರ್ಮಿತ ಧುರಂಧರ್ ಚಿತ್ರಕ್ಕೆ ಕಥೆ, ನಿರ್ದೇಶನ ಮತ್ತು ನಿರ್ಮಾಣ ಎಲ್ಲವನ್ನೂ ಆದಿತ್ಯ ಧಾರ್ ವಹಿಸಿಕೊಂಡಿದ್ದಾರೆ. ಜೊತೆಗೆ ನಿರ್ಮಾಪಕರಾಗಿ ಜ್ಯೋತಿ ದೇಶಪಾಂಡೆ ಮತ್ತು ಲೋಕೇಶ್ ಧಾರ್ ಕೆಲಸ ಮಾಡಲಿದ್ದಾರೆ. ರಣವೀರ್ ತಮ್ಮ ಹುಟ್ಟುಹಬ್ಬಕ್ಕೆ ಒಂದು ದಿನ ಮೊದಲು ತಮ್ಮ ಎಲ್ಲಾ ಇನ್‌ಸ್ಟಾಗ್ರಾಮ್ ಪೋಸ್ಟ್‌ಗಳನ್ನು ಅಳಿಸಿ ಹಾಕಿದ್ದರು.ಇದಷ್ಟೇ ಅಲ್ಲ, ಅವರು ತಮ್ಮ ಪ್ರೊಫೈಲ್ ಚಿತ್ರವನ್ನು ಸಹ ಅಳಿಸಿದ್ದರು. ಆದಾಗ್ಯೂ, ನಟ ಪಸ್ಟ್ ಲುಕ್ ಬಿಡುಗಡೆ ಬಗ್ಗೆ ಈ ಮೊದಲೇ ಸುಳಿವು ನೀಡಿದ್ದರು.