ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Rashmika Mandanna: ಒಮನ್‌ ಟ್ರಿಪ್‌ನಲ್ಲಿರೋ ರಶ್ಮಿಕಾ ಮತ್ತಷ್ಟು ಫೋಟೋಗಳು ವೈರಲ್‌- ದೇವರಕೊಂಡ ಕ್ಲಿಕ್ಕಿಸಿದ ಫೋಟೋ ಎಂದ ಫ್ಯಾನ್ಸ್‌

Rashmika Mandanna: ಬೀಚ್‌, ಸನ್‌ಸೆಟ್‌, ನೇಚರ್‌ ಅನ್ನು ಅತಿ ಹೆಚ್ಚು ಇಷ್ಟ ಪಡುವ ರಶ್ಮಿಕಾ ಮಂದಣ್ಣ ಅವರ ಈಗ ವೈರಲಾಗುತ್ತಿರೋ ಈ ಫೋಟೋಗಳನ್ನು ನೋಡಿ ಫ್ಯಾನ್ಸ್‌ ದಿಲ್‌ ಖುಷ್‌ ಆಗಿದ್ದಾರೆ. ಇನ್ನು ಈ ಫೋಟೋಗಳನ್ನು ವಿಜಯ್ ದೇವರಕೊಂಡ ಅವರೇ ಕ್ಲಿಕ್ ಮಾಡಿದ್ದಾರೆ ಎಂದು ಇವರಿಬ್ಬರ ಫ್ಯಾನ್ಸ್ ಊಹಿಸಿದ್ದಾರೆ. ಈ ಫೊಟೋದಲ್ಲಿ ರಶ್ಮಿಕಾ, ಎತ್ತರದ ಪ್ರದೇಶದಲ್ಲಿ ಕುಳಿತು ಒಮನ್‌ನ ಸನ್‌ಸೆಟ್‌ ಎಂಜಾಯ್‌ ಮಾಡುತ್ತಿರುವುದನ್ನು ಕಾಣಬಹುದಾಗಿದೆ.

ವಿಜಯ್‌ ದೇವರಕೊಂಡ ಕ್ಲಿಕ್ಕಿಸಿದ ಶೇರ್‌ ಮಾಡಿದ ರಶ್ಮಿಕಾ

Profile Rakshita Karkera Apr 12, 2025 9:50 AM

ಬೆಂಗಳೂರು: ನ್ಯಾಷನಲ್‌ ಕ್ರಶ್‌, ಬಹುಭಾಷಾ ಸ್ಟಾರ್‌ ನಟಿ, ಕಿರಿಕ್‌ ಬೆಡಗಿ ರಶ್ಮಿಕಾ ಮಂದಣ್ಣ(Rashmika Mandanna) ಇತ್ತೀಚೆಗೆ ತಮ್ಮ 29 ನೇ ಬರ್ತ್‌ಡೇ ಒಮನ್‌ನಲ್ಲಿ ಆಚರಿಸಿಕೊಂಡಿದ್ದರು. ಅಲ್ಲಿನ ಫೋಟೋಗಳು ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್‌ ಆಗಿದ್ದವು. ಇದರ ಬೆನ್ನಲ್ಲೇ ಈ ಬರ್ಡ್‌ಡೇ ಪಾರ್ಟಿಯಲ್ಲಿ ರಶ್ಮಿಕಾ ಅವರ ಬಾಯ್‌ಫ್ರೆಂಡ್‌, ಟಾಲಿವುಡ್‌ ನಟ ವಿಜಯ್‌ ದೇವರಕೊಂಡ (Vijay Deverakonda) ಕೂಡ ಭಾಗಿಯಾಗಿದ್ದಾರೆ ಎನ್ನುವ ಸುದ್ದಿ ಹಬ್ಬಿತ್ತು. ಇಬ್ಬರು ಜತೆಯಾಗಿ ಪೋಸ್‌ ಕೊಟ್ಟಿರುವ ಫೋಟೋ ಹೊರ ಬರದಿದ್ದರೂ ಇಂತಹ ವದಂತಿ ಹರಡಲು ಇಬ್ಬರು ಪ್ರತ್ಯೇಕವಾಗಿ ಹಂಚಿಕೊಂಡ ಫೋಟೊಗಳೇ ಕಾರಣ ಎನ್ನುವುದು ವಿಶೇಷ. ಇದೀಗ ರಶ್ಮಿಕಾ ಮಂದಣ್ಣ ಅವರ ಮತ್ತೆ ಕೆಲವು ಸುಂದರ ಫೊಟೋಗಳು ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿವೆ.

ಇನ್ನು ಬೀಚ್‌, ಸನ್‌ಸೆಟ್‌, ನೇಚರ್‌ ಅನ್ನು ಅತಿ ಹೆಚ್ಚು ಇಷ್ಟ ಪಡುವ ರಶ್ಮಿಕಾ ಮಂದಣ್ಣ ಅವರ ಈಗ ವೈರಲಾಗುತ್ತಿರೋ ಈ ಫೋಟೋಗಳನ್ನು ನೋಡಿ ಫ್ಯಾನ್ಸ್‌ ದಿಲ್‌ ಖುಷ್‌ ಆಗಿದ್ದಾರೆ. ಇನ್ನು ಈ ಫೋಟೋಗಳನ್ನು ವಿಜಯ್ ದೇವರಕೊಂಡ ಅವರೇ ಕ್ಲಿಕ್ ಮಾಡಿದ್ದಾರೆ ಎಂದು ಇವರಿಬ್ಬರ ಫ್ಯಾನ್ಸ್ ಊಹಿಸಿದ್ದಾರೆ. ಈ ಫೋಟೋದಲ್ಲಿ ರಶ್ಮಿಕಾ, ಎತ್ತರದ ಪ್ರದೇಶದಲ್ಲಿ ಕುಳಿತು ಒಮನ್‌ನ ಸನ್‌ಸೆಟ್‌ ಎಂಜಾಯ್‌ ಮಾಡುತ್ತಿರುವುದನ್ನು ಕಾಣಬಹುದಾಗಿದೆ. ಫೊಟೋ ನೋಡಿದ ಫ್ಯಾನ್ಸ್‌ ನಾನಾ ರೀತಿಯಲ್ಲಿ ಕಮೆಂಟ್‌ ಮಾಡುತ್ತಿದ್ದು, ಇದು ರಶ್ಮಿಕಾ ಅವರ ರೂ‌ಮರ್‌ ಬಾಯ್‌ಫ್ರೆಂಡ್‌ ವಿಜಯ್ ದೇವರಕೊಂಡ ಅವರೇ ಕ್ಲಿಕ್ ಮಾಡಿರೋ ಫೋಟೋ ಎಂದಿದ್ದಾರೆ. ಕಮೆಂಟ್ ಬಾಕ್ಸ್​ನಲ್ಲಿ ಫೋಟೋ ಕ್ರೆಡಿಟ್​ನ ವಿಜಯ್ ದೇವರಕೊಂಡ ಅವರಿಗೆ ಕೊಡಿ ಮನವಿ ಮಾಡ್ತಿದ್ದಾರೆ.

ಕೆಲವು ದಿನಗಳ ಹಿಂದೆಯಷ್ಟೇ ರಶ್ಮಿಕಾ ಬೀಚ್‌ನಲ್ಲಿ ಕುಳಿತಿರುವ ಫೋಟೋ ಮತ್ತು ವಿಡಿಯೊಗಳನ್ನು ಹಂಚಿಕೊಂಡಿದ್ದರು. ಇದರ ಬೆನ್ನಲ್ಲೇ ವಿಜಯ್‌ ದೇವರಕೊಂಡ ಕೂಡ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಬೀಚ್‌ನಲ್ಲಿ ಪೋಸ್‌ ನೀಡಿರುವ ಫೋಟೊಗಳನ್ನು ಶೇರ್‌ ಮಾಡಿದ್ದಾರೆ. ಇಬ್ಬರು ಪ್ರತ್ಯೇಕವಾಗಿ ಹಂಚಿಕೊಂಡಿರುವ ಫೋಟೊದಲ್ಲಿನ ಸಾಮ್ಯತೆಯನ್ನು ಫ್ಯಾನ್ಸ್‌ ಗಮನಿಸಿದ್ದಾರೆ. ಹೀಗಾಗಿ ರಶ್ಮಿಕಾ ಬರ್ತ್‌ಡೇ ಪಾರ್ಟಿಯಲ್ಲಿ ವಿಜಯ್‌ ಕೂಡ ಭಾಗಿಯಾಗಿದ್ದಾರೆ ಎಂದು ಹೇಳುತ್ತಿದ್ದಾರೆ.

ಈ ಸುದ್ದಿಯನ್ನೂ ಓದಿ: Rashmika Mandanna: ರಕ್ಷಿತ್ ಶೆಟ್ಟಿ ಜೊತೆ ರಶ್ಮಿಕಾ ಮಂದಣ್ಣ ಬರ್ತ್‌ ಡೇ ಸೆಲೆಬ್ರೇಶನ್‌? ವೈರಲಾಗ್ತಿರೋ ಈ ಫೊಟೋಗಳ ಅಸಲಿಯತ್ತು ಏನು?

ಫ್ಯಾನ್ಸ್‌ ಗಮನಿಸಿದ ಸಾಮ್ಯತೆ ಏನು?

ರಶ್ಮಿಕಾ ಮತ್ತು ವಿಜಯ್‌ ಅವರಿದ್ದ ಬ್ಯಾಕ್‌ಗ್ರೌಂಡ್‌ ಗಮನಿಸಿದರೆ ಇವರಿಬ್ಬರಿದ್ದ ಸ್ಥಳ ಒಂದೇ ಎನ್ನುವುದು ಹಲವರ ವಾದ. ಇಬ್ಬರ ಫೋಟೋದಲ್ಲಿಯೂ ಕಂಡು ಬರುವ ಬಿಳಿ ಮರಳು, ನೀಲಿ ಛತ್ರಿ ಮತ್ತು ತಾಳೆ ಮರ ಇದೆರಡೂ ಒಂದೇ ಜಾಗ ಎನ್ನುವುದಕ್ಕೆ ಸಾಕ್ಷಿ ಎಂದು ಅಭಿಮಾನಿಗಳು ಹೇಳಿದ್ದಾರೆ. ಹೀಗಾಗಿ ಓಮನ್‌ನಲ್ಲಿ ಇಬ್ಬರೂ ಒಟ್ಟಿಗೆ ಪಾರ್ಟಿ ಮಾಡಿದ್ದಾರೆ ಎನ್ನುತ್ತಿದ್ದಾರೆ. ವಿಜಯ್‌ ಮತ್ತು ರಶ್ಮಿಕಾ ಡೇಟಿಂಗ್‌ ನಡೆಸುತ್ತಿದ್ದಾರೆ ಎನ್ನುವ ವದಂತಿ ಹಲವು ವರ್ಷಗಳಿಂದ ಹರಿದಾಡುತ್ತಿದ್ದರೂ ಇಬ್ಬರು ಈ ಬಗ್ಗೆ ಎಲ್ಲಿಯೂ ಬಾಯ್ಬಿಟ್ಟಿಲ್ಲ. ಕದ್ದುಮುಚ್ಚಿ ಓಡಾಡುವಾಗ ಈ ಜೋಡಿ ಹಲವು ಬಾರಿ ಕ್ಯಾಮೆರಾ ಕಣ್ಣಿಗೆ ಬಿದ್ದಿದೆ.

2018ರಲ್ಲಿ ತೆರೆಕಂಡ ಟಾಲಿವುಡ್‌ ಚಿತ್ರ ʻಗೀತ ಗೋವಿಂದಂʼನಲ್ಲಿ ಈ ಜೋಡಿ ಮೊದಲ ಬಾರಿಗೆ ತೆರೆ ಹಂಚಿಕೊಂಡಿತ್ತು. ಈ ರೊಮ್ಯಾಂಟಿಕ್‌ ಡ್ರಾಮ ಬಾಕ್ಸ್‌ ಆಫೀಸ್‌ನಲ್ಲಿ ಮ್ಯಾಜಿಕ್‌ ಮಾಡುವ ಮೂಲಕ ವಿಜಯ್‌-ರಶ್ಮಿಕಾ ಸಿನಿಪ್ರಿಯರ ಹಾಟ್‌ ಫೆವರೇಟ್‌ ಎನಿಸಿಕೊಂಡರು. ಜತೆಗೆ ಈ ಚಿತ್ರದ ವೇಳೆ ಇಬ್ಬರ ಮಧ್ಯೆ ಪ್ರೀತಿ ಚಿಗುರೊಡೆಯಿತು ಎನ್ನಲಾಗಿದೆ.ಅದಾದ ಬಳಿಕ 2019ರಲ್ಲಿ ತೆರೆಕಂಡ ʻಡಿಯರ್‌ ಕಾಮ್ರೇಡ್‌ʼ ತೆಲುಗು ಸಿನಿಮಾದಲ್ಲಿಯೂ ಇವರು ಜತೆಯಾಗಿ ನಟಿಸಿದರು. ಈ ವೇಳೆ ಇವರ ಸಂಬಂಧ ಮತ್ತಷ್ಟು ಗಟ್ಟಿಯಾಯ್ತು. ಈ ಮಧ್ಯೆ ರಶ್ಮಿಕಾ ಹಲವು ಬಾರಿ ವಿಜಯ್‌ ಮನೆಯಲ್ಲಿ ಕಾಣಿಸಿಕೊಂಡರು. ಜತೆಗೆ ಇಬ್ಬರು ಆಗಾಗ ಕದ್ದುಮುಚ್ಚಿ ಪ್ರವಾಸ ಮಾಡುತ್ತಿದ್ದರು. ಇವರು ನೇರವಾಗಿ ಹೇಳದಿದ್ದರೂ ಪ್ರತ್ಯೇಕವಾಗಿ ಹಂಚಿಕೊಳ್ಳುತ್ತಿದ್ದ ಫೋಟೊ ಇಬ್ಬರೂ ಒಂದೇ ಸ್ಥಳದಲ್ಲಿದ್ದರು ಎನ್ನುವ ಸೂಚನೆ ನೀಡುತ್ತಲೇ ಇತ್ತು. ಸದ್ಯದಲ್ಲೇ ಇವರು ತಮ್ಮ ಪ್ರೀತಿಗೆ ಅಧಿಕೃತ ಮುದ್ರೆ ಒತ್ತಲಿದ್ದಾರೆ ಎನ್ನುವ ಮಾತು ಕೇಳಿ ಬಂದಿದೆ.