ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Sonu Nigam: ಪದ್ಮ ಪ್ರಶಸ್ತಿ ಆಯ್ಕೆ ಬಗ್ಗೆ ಗಾಯಕ ಸೋನುನಿಗಮ್ ಅಸಮಧಾನಗೊಂಡಿದ್ಯಾಕೆ?

ವಿಶ್ವದಾದ್ಯಂತ ಗಾಯಕರಿಗೆ ಸ್ಫೂರ್ತಿದಾಯಕವಾಗಿದ್ದ ಕಿಶೋರ್‌ ಕುಮಾರ್‌, ಅಲ್ಕಾ ಯಾಗ್ನಿಕ್‌ ಅವರನ್ನೂ ಈ ಬಾರಿಯೂ ಪದ್ಮ ಪ್ರಶಸ್ತಿ ಆಯ್ಕೆ ವೇಳೆ ಪರಿಗಣಿಸದಿರುವುದಕ್ಕೆ ಗಾಯಕ ಸೋನು ನಿಗಮ್‌ ಬೇಸರ ವ್ಯಕ್ತಪಡಿಸಿದ್ದಾರೆ. ಈ ಬಾರಿ 113 ಮಂದಿ ಸಾಧಕರಿಗೆ ಪದ್ಮಶ್ರೀ ಪ್ರಶಸ್ತಿ ನೀಡಲಾಗಿದ್ದು, ಅವರಲ್ಲಿ ಖ್ಯಾತ ಗಾಯಕ ಅರಿಜಿತ್ ಸಿಂಗ್ ಸಹ ಒಬ್ಬರಾಗಿದ್ದಾರೆ. ಆದರೆ ಅರಿಜಿತ್​ಗೆ ಪದ್ಮ ಪ್ರಶಸ್ತಿ ಸಿಕ್ಕಿರುವುದು ಖ್ಯಾತ ಗಾಯಕ ಸೋನು ನಿಗಮ್​ಗೆ ಇಷ್ಟವಾಗಿಲ್ಲ ಎನ್ನುವ ರೀತಿಯಲ್ಲಿ ವಿಡಿಯೊ ಹಂಚಿಕೊಂಡಿದ್ದಾರೆ.

2025ರ ಪದ್ಮ ಪ್ರಶಸ್ತಿ ಆಯ್ಕೆ ಬಗ್ಗೆ ಗಾಯಕ ಸೋನುನಿಗಮ್  ಅತೃಪ್ತಿಗೊಂಡಿದ್ಯಾಕೆ?

sonu nigam

Profile Pushpa Kumari Jan 30, 2025 7:31 AM

ನವದೆಹಲಿ: ಇತ್ತೀಚೆಗಷ್ಟೇ ನಾಗರಿಕ ಶ್ರೇಷ್ಠ ಪುರಸ್ಕಾರ ಎಂದು ಕರೆಯಲ್ಪಡುವ ಪದ್ಮ ಪ್ರಶಸ್ತಿಯನ್ನು ಕೇಂದ್ರ ಸರಕಾರ ಘೋಷಣೆ ಮಾಡಿದೆ. ಆದರೆ ಗಾಯನ ಕ್ಷೇತ್ರದಲ್ಲಿ ಹಲವು ದಿಗ್ಗಜರಿದ್ದಾರೆ ಅವರಿಗೆ ಇನ್ನೂ ಯಾವುದೇ ಗೌರವ, ಪ್ರಶಸ್ತಿಗಳು ಲಭಿಸಿಲ್ಲ ಎಂದು ಗಾಯಕ ಸೋನು ನಿಗಮ್‌ (Sonu Nigam) ಬೇಸರ ವ್ಯಕ್ತಪಡಿಸಿದ್ದಾರೆ. ಪದ್ಮ ಪ್ರಶಸ್ತಿ ಆಯ್ಕೆ ಬಗ್ಗೆ ತನ್ನ ಅಭಿಪ್ರಾಯ ವ್ಯಕ್ತ ಪಡಿಸುವ ವಿಡಿಯೊವೊಂದನ್ನು ಗಾಯಕ ಸೋನು ನಿಗಮ್‌ ಅವರು ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ವಿಶ್ವದಾದ್ಯಂತ ಗಾಯಕರಿಗೆ ಸ್ಫೂರ್ತಿದಾಯಕವಾಗಿದ್ದ ಕಿಶೋರ್‌ ಕುಮಾರ್‌, ಅಲ್ಕಾ ಯಾಗ್ನಿಕ್‌ ಅವರನ್ನೂ ಈ ಬಾರಿಯೂ ಪದ್ಮ ಪ್ರಶಸ್ತಿ ಆಯ್ಕೆ ವೇಳೆ ಪರಿಗಣಿ ಸದಿರುವುದಕ್ಕೆ ಗಾಯಕ ಸೋನು ನಿಗಮ್‌ ಬೇಸರ ವ್ಯಕ್ತಪಡಿಸಿದ್ದಾರೆ. ಈ ಬಾರಿ 113 ಮಂದಿ ಸಾಧಕರಿಗೆ ಪದ್ಮಶ್ರೀ ಪ್ರಶಸ್ತಿ ನೀಡಲಾಗಿದ್ದು, ಅವರಲ್ಲಿ ಖ್ಯಾತ ಗಾಯಕ ಅರಿಜಿತ್ ಸಿಂಗ್ ಸಹ ಒಬ್ಬರಾಗಿದ್ದಾರೆ. ಆದರೆ ಅರಿಜಿತ್​ಗೆ ಪದ್ಮ ಪ್ರಶಸ್ತಿ ಸಿಕ್ಕಿರುವುದು ಖ್ಯಾತ ಗಾಯಕ ಸೋನು ನಿಗಮ್​ಗೆ ಇಷ್ಟವಾಗಿಲ್ಲ ಎನ್ನುವ ರೀತಿಯಲ್ಲಿ ವಿಡಿಯೊ ಹಂಚಿಕೊಂಡಿದ್ದಾರೆ.

ಸೋನುಗೆ ಅಸಮಧಾನವಾಗಿದ್ಯಾಕೆ?:

ಪದ್ಮ ಪ್ರಶಸ್ತಿಗೆ ಬಾಕಿ ಉಳಿದವರು ಎನ್ನುವ ಶೀರ್ಷಿಕೆ ಅಡಿಯಲ್ಲಿ ಮಾಹಿತಿ ಹಾಕಿರುವ ಅವರು ಪದ್ಮ ಪ್ರಶಸ್ತಿ ಬಗ್ಗೆ ಅಸಮಧಾನ ವ್ಯಕ್ತ ಪಡಿಸಿದ್ದಾರೆ. ಬಿಹಾರದ ಸ್ವರ ಕೋಕಿಲ ಎಂದು ಪ್ರಸಿದ್ಧರಾಗಿದ್ದ ಶಾರದಾ ಸಿನ್ಹಾ ಅವರಿಗೆ ಮರಣೋತ್ತರ ಪದ್ಮ ವಿಭೂಷಣ ಹಾಗೂ ಗಾಯಕ ಅರ್ಜಿತ್ ಸಿಂಗ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಖ್ಯಾತ ಗಾಯಕರಾದ ಅರ್ಜಿತ್ ಸಿಂಗ್ ಅವರಿಗೆ ಪದ್ಮ ಪ್ರಶಸ್ತಿ ಘೋಷಣೆ ಆದ ಬೆನ್ನಲ್ಲೆ ಈ ಬಗ್ಗೆ ಗಾಯಕ ಸೋನು ನಿಗಮ್‌ ಅಸಮಧಾನ ವ್ಯಕ್ತ ಪಡಿಸಿದ್ದಾರೆ.

ಜಗತ್ತಿನಲ್ಲಿ ಅನೇಕ ಅದ್ಭುತ ಹಾಡುಗಾರರಿದ್ದಾರೆ ಅಂತವರ ಸಾಲಿನಲ್ಲಿ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದ ಮೊಹಮ್ಮದ್ ರಫಿ ಹಾಗೂ ಕಿಶೋರ್ ಕುಮಾರ್ ಕೂಡ ಸೇರಿದ್ದಾರೆ. ಮೊಹಮ್ಮದ್ ರಫಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ಮಾತ್ರ ಸೀಮಿತ ಮಾಡಲಾಗಿದೆ. ಕಿಶೋರ್ ಕುಮಾರ್ ಅವರ ಸಾಧನೆಗೆ ಪದ್ಮಶ್ರೀ ಸಹ ನೀಡಿಲ್ಲ. ಹಾಗಿದ್ದರೂ ಪ್ರಶಸ್ತಿಯನ್ನು ಮರಣೋತ್ತರವಾಗಿ ನೀಡುವುದು ಸರಿಯೇ?. ಗಾಯಕಿ ಶ್ರೇಯಾಘೋಷಲ್ ಅನೇಕ ವರ್ಷದಿಂದ ಕಲಾಸೇವೆ ಮಾಡಿದ್ದು ಅವರಿಗೂ ಪದ್ಮ ಗೌರವ ಇನ್ನು ಸಿಕ್ಕಿಲ್ಲ ಎಂದು ವಿಡಿಯೊದಲ್ಲಿ ಹೇಳಿದ್ದಾರೆ.

ಅಲ್ಕಾ ಯಾಗ್ನಿಕ್ ಅವರು ಸಂಗೀತ ಕಲಾಸೇವೆಯಲ್ಲಿ ಸುದೀರ್ಘ ವರ್ಷ ಶ್ರಮಿಸಿದ್ದಾರೆ. ಸುನಿಧಿ ಚೌಹಾಣ್ ಅವರು ತಮ್ಮ ಅದ್ಭುತ ಕಂಠ ಸಿರಿಯಿಂದ ಇತರರಿಗೆ ಪ್ರೇರಣೆಯಾಗಿದ್ದಾರೆ. ಇವರೆಲ್ಲರೂ ನಾಗರಿಕ ಶ್ರೇಷ್ಠ ಪ್ರಶಸ್ತಿಗೆ ಅರ್ಹರಾಗಿದ್ದವರು ಅವರನ್ನು ಸಹ ಪರಿಗಣನೆಗೆ ತೆಗೆದು ಕೊಂಡಿಲ್ಲ‌ ಎಂಬುದು ಬೇಸರದ ಸಂಗತಿ ಎಂದಿದ್ದಾರೆ.

ಇದನ್ನು ಓದಿ: Chikkaballapur News: ಬಾಲ್ಯಕ್ಕೆ ಜಾರಿದ ಶಿಷ್ಯರು, ಭಾವುಕರಾದ ಶಿಕ್ಷಕರು

ವಿಡಿಯೊ ಕೊನೆಯಲ್ಲಿ ಗಾಯಕ ಸೋನು ನಿಗಂ ಅವರು ತಮ್ಮ ಅಭಿಮಾನಿಗಳಿಗೆ ಬೇರೆ ಯಾವ ಪ್ರಮುಖರಿಗೆ ಗೌರವ ಸಿಕ್ಕಿಲ್ಲ ಎಂದು ಕಮೆಂಟ್ ಮಾಡುವಂತೆ ತಿಳಿಸಿದ್ದು ಸದ್ಯ ಇವರ ಈ ವಿಡಿಯೊ ಎಲ್ಲೆಡೆ ವೈರಲ್ ಆಗಿ ಸಿಕ್ಕಾಪಟ್ಟೆ ಚರ್ಚೆಯಾಗಿದೆ. ಈ ಮೂಲಕ ಕೆಲವರು ಸೋನು ನಿಗಂ ಅವರಿಗೆ ಅರ್ಜಿತ್ ಮೇಲೆ ಹೊಟ್ಟೆ ಉರಿ ಎಂದರೆ ಇನ್ನು ಕೆಲವರು ಸೋನು ನಿಗಂ ಹೇಳಿದ್ದು ಸರಿಯಾಗಿದೆ ಎಂದು ಕಮೆಂಟ್ ಮಾಡಿದ್ದಾರೆ.