Narendra Modi: ಮೋದಿ ಅದ್ದೂರಿ ಸ್ವಾಗತಕ್ಕೆ ಇಂಡಿಯನ್ ಟಚ್! NTR ಚಿತ್ರದ ಮ್ಯೂಸಿಕ್ ಬಳಸಿದ ಶ್ರೀಲಂಕಾ ಅಧ್ಯಕ್ಷ
Devara Movie Song: ಶ್ರೀಲಂಕಾ ಅಧ್ಯಕ್ಷ ಭಾರತದ ಪ್ರಧಾನಿ ನರೇಂದ್ರ ಮೋದಿಯನ್ನು ಸ್ವಾಗತಿಸುವ ವಿಡಿಯೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು ಈ ವಿಡಿಯೊಗೆ ಜ್ಯೂ. ಎನ್‌ಟಿಆರ್ ಅಭಿನಯದ ದೇವರ ಚಿತ್ರದ “ರೆಡ್ ಸೀ”ಎಂಬ ಹಿನ್ನೆಲೆ ಮ್ಯೂಸಿಕ್ ಬಳಸಿದ್ದಾರೆ. ಈ ವಿಡಿಯೊ ನೋಡಿದ ಎನ್‌ಟಿಆರ್ ಅಭಿಮಾನಿಗಳು ಸಂತಸ ವ್ಯಕ್ತ ಪಡಿಸಿದ್ದಾರೆ.


ನವದೆಹಲಿ: ಇತ್ತೀಚೆಗಷ್ಟೇ ದ್ವೀಪರಾಷ್ಟ್ರ ಶ್ರೀಲಂಕಾ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿಯಯನ್ನು ಅದ್ದೂರಿ ಸ್ವಾಗತ ಮಾಡಲಾಗಿತ್ತು. ಶ್ರೀಲಂಕಾದ ರಾಜಧಾನಿ ಕೊಲೊಂಬೋದ ಹೃದಯಭಾಗವಾದ ಇಂಡಿಪೆಂಡೆನ್ಸ್ ಸ್ಕ್ವೇರ್‌ನಲ್ಲಿ ಪ್ರಧಾನಿ ಮೋದಿಗೆ (Narendra Modi) ಅದ್ದೂರಿ ಸ್ವಾಗತ ನೀಡಲಾಗಿದ್ದು ಅಲ್ಲಿನ ಅಧ್ಯಕ್ಷ ಅನುರ ಕುಮಾರ ದಿಸ್ಸನಾಯಕೆ ಅವರೇ (Anura Kumara Dissanayake) ಸ್ಥಳಕ್ಕೆ ಆಗಮಿಸಿ ಭಾರತದ ಪ್ರಧಾನಿಯನ್ನು ಸ್ವಾಗತಿಸಿದ್ದರು. ಇದೀಗ ಪ್ರಧಾನಿ ನರೇಂದ್ರ ಮೋದಿ ಶ್ರಿಲಂಕಾಕ್ಕೆ ಭೇಟಿ ನೀಡಿದ್ದ ಕೆಲವೊಂದು ದೃಶ್ಯದ ತುಣಕನ್ನು ಶ್ರೀಲಂಕಾ ಅಧ್ಯಕ್ಷ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ವಿಶೇಷ ಅಂದರೆ ಈ ವಿಡಿಯೊಗೆ ಜ್ಯೂನಿಯರ್ ಎನ್‌ಟಿಆರ್ ದೇವರ ಚಿತ್ರದ ಮ್ಯೂಸಿಕ್ ಬಳಕೆ ಮಾಡಲಾಗಿದ್ದು ಎನ್ ಟಿ ಅರ್ ಅಭಿಮಾನಿಗಳು ಸಖತ್ ಖುಷಿ ಆಗಿದ್ದಾರೆ.
ಕೊಲೊಂಬೋಗೆ ಪ್ರಧಾನಿಯ ವಿಶೇಷ ವಿಮಾನ ಆಗಮಿಸಿದ್ದ ವೇಳೆ ಶ್ರೀಲಂಕಾ ಅಧ್ಯಕ್ಷ ಅನುರ ಕುಮಾರ ದಿಸಾನಾಯಕೆ ಸೇರಿದಂತೆ ಶ್ರೀಲಂಕಾ ಸರಕಾರದ 7 ಮಂದಿ ಸಚಿವರು ವಿಮಾನ ನಿಲ್ದಾಣದಲ್ಲಿ ಉಪಸ್ಥಿತರಿದ್ದು, ನರೇಂದ್ರ ಮೋದಿಗೆ ಅದ್ದೂರಿ ಸ್ವಾಗತ ನೀಡಿದ್ದರು. ಇದುವರೆಗೆ ಭೇಟಿ ನೀಡಿದ ಮುಖ್ಯಸ್ಥರಿಗೆ ಸಿಗದ ಸ್ವಾಗತವನ್ನು ಪ್ರಧಾನಿ ಮೋದಿಗೆ ನೀಡಲಾಗಿತ್ತು. ಇದೀಗ ಶ್ರೀಲಂಕಾ ಅಧ್ಯಕ್ಷ ಭಾರತದ ಪ್ರಧಾನಿ ನರೇಂದ್ರ ಮೋದಿಯನ್ನು ಸ್ವಾಗತಿಸುವ ವಿಡಿಯೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು ಈ ವಿಡಿಯೊಗೆ ಜ್ಯೂ. ಎನ್‌ಟಿಆರ್ ಅಭಿನಯದ ದೇವರ ಚಿತ್ರದ “ರೆಡ್ ಸೀ” ಎಂಬ ಹಿನ್ನೆಲೆ ಮ್ಯೂಸಿಕ್ ಬಳಸಿದ್ದಾರೆ. ಈ ವಿಡಿಯೊ ನೋಡಿದ ಎನ್‌ಟಿಆರ್ ಅಭಿಮಾನಿಗಳು ಖುಷಿ ವ್ಯಕ್ತ ಪಡಿಸಿದ್ದಾರೆ.
ಈ ಮ್ಯೂಸಿಕ್ ಆಯ್ಕೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಶಂಸೆ ವ್ಯಕ್ತವಾಗಿದ್ದು ಚಿತ್ರದ ಹಿನ್ನೆಲೆ ಸಂಗೀತವು ಈ ವಿಡಿಯೊಗೆ ಹೆಚ್ಚು ಸೂಕ್ತವಾಗಿದ್ದು ಅಭಿಮಾನಿಗಳು ಮೆಚ್ಚುಗೆ ನೀಡಿದ್ದಾರೆ. ಈ ವಿಡಿಯೊ ಇದೀಗ ಸೋಷಿಯಲ್ ಮೀಡಿ ಯಾದಲ್ಲಿ ಬಹಳಷ್ಟು ವೈರಲ್ ಆಗಿದ್ದು ನೆಟ್ಟಿಗರು ನಾನಾ ಬಗೆಯ ಪ್ರತಿಕ್ರಿಯೆ ನೀಡಿದ್ದಾರೆ. ನೆಟ್ಟಿಗರೊಬ್ಬರು “ಅಂತರ ರಾಷ್ಟ್ರೀಯ ರಾಜಕಾರಣವೂ ಇಷ್ಟು ಸಿನೆಮಾಟಿಕ್ ಆಗಿರಬಹುದು ಎಂದು ಊಹಿಸಿ ಇರಲಿಲ್ಲ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ರಾಜಕೀಯದಲ್ಲೂ ಎನ್ ಟಿ ಅರ್ ಹವಾ ಎಂದು ಕಮೆಂಟ್ ಮಾಡಿದ್ದಾರೆ.
ಇದನ್ನು ಓದಿ: Firefly Movie: ಮಗಳ ಸಿನಿಮಾದಲ್ಲಿ ಪಿಜ್ಜಾ ಡೆಲಿವರಿ ಬಾಯ್ ಆದ ಶಿವಣ್ಣ
ದೇವರ ಸಿನಿಮಾವು ತೆಲುಗು ಆ್ಯಕ್ಷನ್ ಚಿತ್ರವಾಗಿದ್ದು 'ದೇವರ' ಸಿನಿಮಾದ ದೊಡ್ಡ ಪ್ಲಸ್ ಪಾಯಿಂಟ್ ಆ್ಯಕ್ಷನ್ ಸೀನ್‌ಗಳು. ಕೊರಟಾಲ ಶಿವ ಈ ಚಿತ್ರವನ್ನು ನಿರ್ದೇಶಿಸಿದ್ದು ಅನಿರುದ್ಧ್ ರವಿಚಂದರ್ ಸಂಗೀತ ನೀಡಿದ್ದಾರೆ. ನ್ಯಾಯ, ಅಧಿಕಾರದ ಕಥೆ ಯುಳ್ಳ ಈ ಚಿತ್ರದಲ್ಲಿ ಜಾನ್ವಿ ಕಪೂರ್ ಪೋಷಕ ಪಾತ್ರದಲ್ಲಿ ನಟಿಸಿದ್ದಾರೆ. ದೇವರ ಅದ್ದೂರಿಯಾಗಿ ಮೂಡಿ ಬಂದ ಚಿತ್ರ ವಾಗಿದ್ದು ಆ್ಯಕ್ಯನ್ ದೃಶ್ಯ, ಉತ್ತಮ ಸಂಗಿತ, ತಾಂತ್ರಿಕ ಶ್ರೀಮಂತಿಕೆ ಎಲ್ಲವೂ ಇದೆ. ಜ್ಯೂ. ಎನ್‌ಟಿಆರ್ ಇತ್ತೀಚೆಗಷ್ಟೆ ಮ್ಯಾಡ್ ಸ್ಕ್ವೇರ್ ಕಾರ್ಯಕ್ರಮದಲ್ಲಿ ದೇವರ ಭಾಗ 2 ಎಂದು ದೃಢಪಡಿಸಿದ್ದಾರೆ.ಇದೀಗ ಶ್ರೀಲಂಕಾ ನಾಯಕ ಎನ್ ಟಿಅರ್ ಚಿತ್ರದ ಮ್ಯೂಸಿಕ್ ಆಯ್ಕೆ ಮಾಡಿದ್ದಕ್ಕಾಗಿ ಅಭಿಮಾನಿಗಳು ಸೋಷಿಯಲ್ ಮೀಡಿಯಾ ದಲ್ಲಿ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.