ʻಗೌತಮ್ ಗಂಭೀರ್ ಆ ವಿಚಾರವನ್ನು ಮಾತನಾಡಿದ್ದರುʼ: ಎಂಎಸ್ ಧೋನಿ ವಿರುದ್ಧ ಗುಡುಗಿದ ಯೋಗರಾಜ್ ಸಿಂಗ್!
ಭಾರತ ತಂಡದ ಮಾಜಿ ನಾಯಕ ಎಂಎಸ್ ಧೋನಿಯ ವಿರುದ್ಧ ʻಹುಕ್ಕಾʼ ವಿವಾದದ ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ ಆರೋಪ ಮಾಡಿದ ಬಳಿಕ, ದಿಗ್ಗಜ ಯುವರಾಜ್ ಸಿಂಗ್ ಅವರ ತಂದೆ ಯೋಗರಾಜ್ ಸಿಂಗ್ ಅವರು ಮತ್ತೊಮ್ಮೆ ಟೀಮ್ ಇಂಡಿಯಾ ಮಾಜಿ ನಾಯಕನನ್ನು ಟೀಕಿಸಿದ್ದಾರೆ.

ಎಂಸ್ ಧೋನಿ ವಿರುದ್ಧ ಮತ್ತೊಮ್ಮೆ ಗುಡುಗಿದ ಯೋಗರಾಜ್ ಸಿಂಗ್. -

ನವದೆಹಲಿ: ಭಾರತ ತಂಡದ ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ (Irfan Pathan) ಒಳಗೊಂಡ ವೈರಲ್ ಆದ 'ಹುಕ್ಕಾ' ವಿವಾದದ ನಂತರ ಭಾರತದ ಮಾಜಿ ಕ್ರಿಕೆಟಿಗ ಯೋಗರಾಜ್ ಸಿಂಗ್ (Yograj Pathan) ಮತ್ತೊಮ್ಮೆ ಮಾಜಿ ನಾಯಕ ಎಂಎಸ್ ಧೋನಿ (MS Dhoni) ಅವರನ್ನು ಟೀಕಿಸಿದ್ದಾರೆ. ಪಠಾಣ್ ಅವರ ಹಳೆಯ ಸಂದರ್ಶನ (2020)ದಲ್ಲಿ ಅವರು ಧೋನಿಯನ್ನು ಪಕ್ಷಪಾತದ ಆಧಾರದ ಮೇಲೆ ಆಟಗಾರರನ್ನು ಆಯ್ಕೆ ಮಾಡಿದ್ದಾರೆ ಎಂದು ದೂಷಿಸಿದ್ದರು. ಇದರ ಬಗ್ಗೆ ಕಳೆದ ಎರಡು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ.
2012ರಲ್ಲಿ ಇರ್ಫಾನ್ ಪಠಾಣ್ ಅವರು ಭಾರತ ತಂಡದ ಪರ ಕೊನೆಯ ಪಂದ್ಯವನ್ನು ಆಡಿದ್ದರು. ಆಗ ಭಾರತ ತಂಡದ ಮೂರೂ ಸ್ವರೂಪಕ್ಕೆ ಎಂಎಸ್ ಧೋನಿ ನಾಯಕನಾಗಿದ್ದರು. ಈ ಇಬ್ಬರೂ ದಕ್ಷಿಣ ಆಫ್ರಿಕಾದಲ್ಲಿ 2007ರಲ್ಲಿ ಭಾರತ ತಂಡ ಟಿ20 ವಿಶ್ವಕಪ್ ಗೆಲ್ಲಲು ಭಾರತ ತಂಡಕ್ಕೆ ನೆರವು ನೀಡಿದ್ದರು. ಪಾಕಿಸ್ತಾನ ವಿರುದ್ಧದ ಫೈನಲ್ ಪಂದ್ಯದಲ್ಲಿ ಇರ್ಫಾನ್ ಪಠಾಣ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.
ರೋಹಿತ್ ಶರ್ಮಾರ ಏಕದಿನ ವಿಶ್ವಕಪ್ ಟೂರ್ನಿಯ ಭವಿಷ್ಯವನ್ನು ನುಡಿದ ಇರ್ಫಾನ್ ಪಠಾಣ್!
ಧೋನಿ-ಪಠಾಣ್ ಹುಕ್ಕಾ ವಿವಾದದ ಬಗ್ಗೆ ಯೋಗರಾಜ್ ಸಿಂಗ್
ಇನ್‌ಸೈಡ್ ಸ್ಪೋರ್ಟ್ ಜೊತೆ ಮಾತನಾಡಿದ ಯೋಗರಾಜ್ ಸಿಂಗ್, ಎಂಎಸ್ ಧೋನಿ ಮತ್ತು ಇರ್ಫಾನ್ ಪಠಾಣ್ ಅವರ ಹುಕ್ಕಾ ವಿವಾದದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
"ಇದು ಇರ್ಫಾನ್ ಪಠಾಣ್ ಅವರ ಬಗ್ಗೆ ಮಾತ್ರವಲ್ಲ. ಗೌತಮ್ ಗಂಭೀರ್ ಈ ಬಗ್ಗೆ ಮಾತನಾಡಿರುವುದನ್ನು ನೀವು ನೋಡಬಹುದು. ವೀರೇಂದ್ರ ಸೆಹ್ವಾಗ್ ಕೂಡ ಇದನ್ನು ಮುಕ್ತವಾಗಿ ಹೇಳಿಕೊಂಡಿದ್ದಾರೆ. ತಂಡದ ಆಟಗಾರರನ್ನು ಗುಂಗಿನಲ್ಲಿ ತೇಲುವಂತೆ ಎಂಎಸ್ ಧೋನಿ ಮಾಡಿದ್ದರು ಎಂಬುದನ್ನು ಹರ್ಭಜನ್ ಸಿಂಗ್ ಕೂಡ ಬಹಿರಂಗಪಡಿಸಿದ್ದರು. ಎಂಎಸ್ ಧೋನಿ ಇದಕ್ಕೆ ಉತ್ತರ ನೀಡಲು ಬಯಸುವುದಿಲ್ಲ. ಯಾರು ಇದಕ್ಕೆ ಉತ್ತರ ನೀಡಲು ಬಯಸುತ್ತಿಲ್ಲವೋ ಅವರಿಗೆ ಅಪರಾಧ ಪ್ರಜ್ಞೆ ಕಾಡುತ್ತಿದೆ," ಎಂದು ಯೋಗರಾಜ್ ಸಿಂಗ್ ತಿಳಿಸಿದ್ದಾರೆ.
Asia Cup 2025: ಟಿ20 ಕ್ರಿಕೆಟ್‌ನಲ್ಲಿ ದೊಡ್ಡ ದಾಖಲೆಯ ಸನಿಹದಲ್ಲಿ ಹಾರ್ದಿಕ್ ಪಾಂಡ್ಯ!
ಕಪಿಲ್ ದೇವ್, ಬಿಷನ್ ಸಿಂಗ್ ವಿರುದ್ಧವೂ ಯೋಗರಾಜ್ ಸಿಂಗ್ ಕಿಡಿ
ಎಂಎಸ್ ಧೋನಿಯ ಬಳಿಕ ಕೆಲವೇ ಆಟಗಾರರನ್ನು ಚೆನ್ನಾಗಿ ನೋಡಿಕೊಂಡಿದ್ದ ಮಾಜಿ ನಾಯಕ ಕಪಿಲ್ ದೇವ್ ಹಾಗೂ ಬಿಷನ್ ಸಿಂಗ್ ಬೇಡಿ ಅವರನ್ನು ಇದೇ ವೇಳೆ ಯೋಗರಾಜ್ ಸಿಂಗ್ ತರಾಟೆಗೆ ತೆಗೆದುಕೊಂಡಿದ್ದಾರೆ. ಭಾರತಕ್ಕೆ 50 ಓವರ್‌ಗಳ ವಿಶ್ವಕಪ್ ಗೆದ್ದು ಕೊಟ್ಟ ನಾಯಕರ ಸಾಲಿನಲ್ಲಿ ಕಪಿಲ್ ದೇವ್ ಮತ್ತು ಎಂಎಸ್ ಧೋನಿ ಇದ್ದಾರೆ.
"ನಾನು ಬಿಷನ್ ಸಿಂಗ್ ಬೇಡಿ, ಕಪಿಲ್ ದೇವ್, ಎಂಎಸ್ ಧೋನಿ ಬಗ್ಗೆ ಮಾತನಾಡುತ್ತೇನೆ. ನಾನು ಯಾರ ಜೊತೆ ಆಡಿದ್ದೆ ಅವರ ಬಗ್ಗೆ ಮಾತನಾಡಬಲ್ಲೆ. ಅವರು ಜನರನ್ನು ಕೆಟ್ಟವರಂತೆ ನಡೆಸಿಕೊಂಡಿದ್ದಾರೆ. ಎರಡು ತಪ್ಪುಗಳಲ್ಲಿ ಒಂದನ್ನು ಸರಿ ಮಾಡಲು ಸಾಧ್ಯವಿಲ್ಲ. ನಾನು ಇದನ್ನು ಬಹಿರಂಗವಾಗಿ ಹೇಳುತ್ತೇನೆ, ನಮ್ಮ ಕ್ರಿಕೆಟಿಗರು ಮತ್ತು ತಂಡವನ್ನು ನಮ್ಮ ನಾಯಕ ನಾಶಪಡಿಸಿದ್ದರು," ಎಂದು ಯೋಗರಾಜ್ ಸಿಂಗ್ ಆರೋಪ ಮಾಡಿದ್ದಾರೆ.