ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Darling Krishna-Milana Nagaraj: ಫ್ಯಾಮಿಲಿ ಕೋರ್ಟ್‌ನಲ್ಲಿ ನಟ ಡಾರ್ಲಿಂಗ್ ಕೃಷ್ಣ- ಮಿಲನಾ ನಾಗರಾಜ್; ಕಾರಣವೇನು?

ಸದ್ಯ ನಟ ಡಾರ್ಲಿಂಗ್ ಕೃಷ್ಣ 'ಲವ್ ಮಾಕ್ಟೇಲ್ 3' ಸಿನಿಮಾದ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಇತ್ತೀಚೆಗಷ್ಟೆ ಅವರು ಫ್ಯಾಮಿಲಿ ಕೋರ್ಟ್‌ನಲ್ಲಿ ಕಾಣಿಸಿಕೊಂಡಿದ್ದು ಈ ಬಗ್ಗೆ ನಾನಾ ರೀತಿಯ ಗಾಸಿಪ್‌ಗಳು ಸೋಶಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿವೆ. ಬೆಂಗಳೂರಿನ ಫ್ಯಾಮಿಲಿ ಕೋರ್ಟ್‌ನಲ್ಲಿರುವ ಅವರ ಫೋಟೊ ಕಂಡು ಅಭಿಮಾನಿಗಳು ಶಾಕ್‌ ಆಗಿದ್ದಾರೆ.

ಫ್ಯಾಮಿಲಿ ಕೋರ್ಟ್‌ನಲ್ಲಿ ಕಾಣಿಸಿಕೊಂಡ ಡಾರ್ಲಿಂಗ್ ಕೃಷ್ಣ- ಮಿಲನಾ

Darling Krishna and Milana Nagaraj -

Profile Pushpa Kumari Sep 4, 2025 7:13 PM

ಬೆಂಗಳೂರು: ʼಲವ್ ಮಾಕ್ಟೆಲ್ʼ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಗಮನ ಸೆಳೆದ ಡಾರ್ಲಿಂಗ್‌ ಕೃಷ್ಣ (Darling Krishna) ಸದ್ಯ ನಿರ್ದೇಶಕರಾಗಿಯೂ ಗುರುತಿಸಿಕೊಂಡಿದ್ದಾರೆ. ಅವರು ನಟಿ ಮಿಲನಾ (Milana Nagaraj) ಅವರನ್ನು ವಿವಾಹವಾಗಿದ್ದು, ಇವರಿಬ್ಬರಿಗೂ ಕಳೆದ ವರ್ಷ ಹೆಣ್ಣು ಮಗು ಜನಿಸಿದೆ. ʼಲವ್ ಮಾಕ್ಟೆಲ್ʼ ಸಿನಿಮಾ ಸಂದರ್ಭದಲ್ಲಿ ಇವರಿಬ್ಬರ ನಡುವೆ ಲವ್ ಆಗಿದ್ದು ಬಳಿಕ ಈ ಹಿಟ್ ಪೇರ್ ಮದುವೆಯಾಗುವ ಮೂಲಕ ಒಂದಾಗಿದ್ದರು. ಈಗ ಸಿನಿಮಾ ಹಾಗೂ ಸಿಸಿಎಲ್ ಕ್ರಿಕೆಟ್‌ನಲ್ಲಿ ಕೃಷ್ಣ ಸಕ್ರಿಯವಾಗಿದ್ದಾರೆ. ಯಾವುದೇ ವಿವಾದಕ್ಕೆ ಸಿಲುಕದೆ ತಮ್ಮಷ್ಟಕ್ಕೆ ನಟನೆ, ನಿರ್ದೇಶನದ ಜತೆಗೆ ಕುಟುಂಬಕ್ಕೆ ಒತ್ತು ನೀಡುತ್ತಿದ್ದಾರೆ. ಅದರೊಂದಿಗೆ ಇತ್ತೀಚೆಗಷ್ಟೆ ಅವರು ಫ್ಯಾಮಿಲಿ ಕೋರ್ಟ್‌ನಲ್ಲಿ ಕಾಣಿಸಿಕೊಂಡಿದ್ದು, ಈ ಬಗ್ಗೆ ನಾನಾ ರೀತಿಯ ಗಾಸಿಪ್ ಸೋಶಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿದೆ.

ಸದ್ಯ ನಟ ಡಾರ್ಲಿಂಗ್ ಕೃಷ್ಣ 'ಲವ್ ಮಾಕ್ಟೇಲ್ 3' (Love Mocktail 3) ಸಿನಿಮಾದ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಇತ್ತೀಚೆಗಷ್ಟೆ ಅವರು ಫ್ಯಾಮಿಲಿ ಕೋರ್ಟ್‌ನಲ್ಲಿ ಕಾಣಿಸಿಕೊಂಡಿದ್ದು ಈ ಬಗ್ಗೆ ನಾನಾ ರೀತಿಯ ಗಾಸಿಪ್ ಸೋಶಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿವೆ. ಬೆಂಗಳೂರಿನ ಫ್ಯಾಮಿಲಿ ಕೋರ್ಟ್‌ನಲ್ಲಿರುವ ಅವರ ಫೋಟೊ ಕಂಡು ಅಭಿಮಾನಿಗಳು ಶಾಕ್‌ ಆಗಿದ್ದಾರೆ. ಮಿಲನಾ ಹಾಗೂ ಡಾರ್ಲಿಂಗ್ ಕೃಷ್ಣ ಪ್ರೀತಿಸಿ ವಿವಾಹವಾಗಿದ್ದು ಅವರ ನಡುವೆ ವೈಮನಸ್ಸು ಮೂಡಿದೆಯಾ ಎಂದು ಅಭಿಮಾನಿಗಳು ಆತಂಕಗೊಂಡಿದ್ದಾರೆ. ಹೀಗಾಗಿ ಈ ಸುದ್ದಿ ಚರ್ಚೆಗೆ ಎಡೆ ಮಾಡಿಕೊಟ್ಟಿದ್ದು, ಈ ಫೋಟೊ ನೋಟಿ ನೆಟ್ಟಿಗರು ಗೊಂದಲಕ್ಕೆ ಒಳಗಾಗಿದ್ದಾರೆ.

ಇದನ್ನು ಓದಿ:Life Today Movie: ಲೈಫ್‌ ಟುಡೇ ಸಿನಿಮಾದ ಹಾಡಿಗೆ ದನಿಯಾದ ಜೋಗಿ ಪ್ರೇಮ್‌- ಭಗ್ನ ಪ್ರೇಮಿಗಳಿಗೆ ಪಕ್ಕಾ ಸೂಟ್‌ ಆಗೋ ಸಾಂಗ್‌ ಇದಂತೆ!

ನಟ ಡಾರ್ಲಿಂಗ್ ಕೃಷ್ಣ ಪರ್ಪಲ್ ಕಲರ್ ಟೀ-ಶರ್ಟ್ ಹಾಗೂ ಜೀನ್ಸ್ ಧರಿಸಿ ಬೆಂಗಳೂರಿನ ಕುಟುಂಬ ನ್ಯಾಯಾಲಯಕ್ಕೆ ತೆರಳಿದ್ದಾರೆ. ಅವರು ತಮ್ಮ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಹೋಗಿದ್ದಾರೆ. ಅಪರಿಚಿತನಂತೆ ಕೋರ್ಟ್ ಒಳಗೆ ಬಂದ ಇವರನ್ನು ವ್ಯಕ್ತಿಯೊಬ್ಬ ಡಾರ್ಲಿಂಗ್ ಕೃಷ್ಣ ಎಂದು ಗುರುತಿಸಿ ಫೋಟೊ ತೆಗೆದಿದ್ದಾರೆ. ಕೃಷ್ಣ ಜತೆಗೆ ಮಿಲನಾ ನಾಗರಾಜ್ ಕೂಡ ಇದ್ದರು. ಅವರಿಬ್ಬರು ಕ್ಯಾಮರಾ ಕಣ್ಣಿಗೆ ಬೀಳದಂತೆ ಕದ್ದು ಮುಚ್ಚಿ ಕೋರ್ಟ್ ಗೆ ಬಂದಿದ್ದು ಅನುಮಾನಕ್ಕೆ ಎಡೆ ಮಾಡಿ ಕೊಟ್ಟಿದೆ. ಅವರಿಬ್ಬರು ಡಿವೊರ್ಸ್ ನೀಡುತ್ತಿದ್ದಾರಾ ಅಥವಾ ಕುಟುಂಬದಲ್ಲಿ ಏನಾದರು ಸಮಸ್ಯೆ ಇದೆಯಾ? ಎಂಬ ಪ್ರಶ್ನೆ ಎದುರಾಗಿದ್ದು ಅಭಿಮಾನಿಗಳಿಗೆ ಹೊಸ ಗೊಂದಲವನ್ನು ಉಂಟು ಮಾಡಿದೆ. ಈ ಬಗ್ಗೆ ದಂಪತಿ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ.